ಸರಕಾರಿ ಯೋಜನೆ

ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ | Gruhalakshmi, Annabhagya Pension Money Deposit Date fix

WhatsApp Group Join Now
Telegram Group Join Now

ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ಹಣ ಜಮಾ ಆಗಲಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಪಕ್ಕಾ ಡೇಟ್ ಫಿಕ್ಸ್ ಮಾಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…

Gruhalakshmi, Annabhagya Pension Money Deposit Date fix : ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಸಹಿಸುದ್ದಿ ಹೊರಬಿದ್ದಿದೆ. ಪ್ರತಿ ತಿಂಗಳು ತಮ್ಮ ಹಣ ಪಾವತಿ ವಿಚಾರವಾಗಿ ಇನ್ಮುಂದೆ ತಡಕಾಡಬೇಕಿಲ್ಲ. ಹಣ ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಕಾಯುವ ಪ್ರಮೇಯವಿಲ್ಲ. ಅಂಚೆ ಕಚೇರಿ, ಬ್ಯಾಂಕ್‌ಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಹಣ ಜಮಾ ಕುರಿತು ವಿಚಾರಿಸಬೇಕಿಲ್ಲ. ಇನ್ಮುಂದೆ ಇದೇ ದಿನ ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಯೋಜನೆ ಫಲಾನುಭವಿಗಳ ಬ್ಯಾಕ್ ಖಾತೆಗೆ ತಪ್ಪದೇ ಹಣ ಜಮೆಯಾಗಲಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಪಕ್ಕಾ ಡೇಟ್ ಫಿಕ್ಸ್ ಮಾಡಿದೆ.

ಹೌದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈತನಕ ಇದೇ ದಿನ ಹಣ ಜಮಾ ಮಾಡುವ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಫಲಾನುಭವಿಗಳು ಹಣ ಜಮಾ ಕುರಿತು ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಇತ್ತು. ಪಿಂಚಣಿ ಹಣ, ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ನೆಚ್ಚಿ ಅವರಿವರ ಕೈಲಿ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿಗದಿತ ಸಮಯಕ್ಕೆ ಹಣ ಕೈಗೆ ಸಿಗದೇ, ಪಡೆದ ಕೈಸಾಲ ಮರುಪಾವತಿಸಲಾಗದೇ ಪರದಾಡುವ ಪಾಡು ನಿರ್ಮಾಣವಾಗುತ್ತಿತ್ತು.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಪಕ್ಕಾ ಡೇಟ್ ಫಿಕ್ಸ್

ಇದೀಗ ಈ ಎಲ್ಲ ಗೋಳಾಟಕ್ಕೆ ಆರ್ಥಿಕ ಇಲಾಖೆ ಕೊನೆ ಹಾಡಿದೆ. ಆರ್ಥಿಕ ಇಲಾಖೆಯಿಂದ ಪ್ರತಿ ತಿಂಗಳು ಈ ದಿನಾಂಕದ ಒಳಗಾಗಿ ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಪಿಂಚಣಿ ಯೋಜನೆ ಫಲಾನುಭವ ಖಾತೆಗೆ ಹಣ ಜಮಾ ಮಾಡುವಂತೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಖಜಾನೆ-2ರ ಮುಖಾಂತರ ನಿರ್ವಹಿಸಲಾಗುತ್ತಿರುವ ಪ್ರಮುಖ ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಪಿಂಚಣಿ ಯೋಜನೆ ಫಲಾನುಭವಿ ಯೋಜನೆಗಳ ಹಣ ಪಾವತಿಗಾಗಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ವೇಳಾಪಟ್ಟಿಯನ್ನು ರೂಪಿಸಲಾಗಿದೆ.

ಸರ್ಕಾರದ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಹಾಗೂ ಸಬ್ಸಿಡಿ ಯೋಜನೆಗಳ ಪಾವತಿಗಳ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆ ಮುಖಾಂತರ ಫಲಾನುಭವಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮತ್ತು ಖಜಾನೆ-2 ಮೂಲಕ ಹಣವನ್ನು ಯಾವುದೇ ಅಡೆ ತಡೆಗಳಿಲ್ಲದೇ ಪಾವತಿಸಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆರ್ಥಿಕ ಇಲಾಖೆ ಸುತ್ತೋಲೆ ಪ್ರತಿ
ಆರ್ಥಿಕ ಇಲಾಖೆ ಸುತ್ತೋಲೆ ಪ್ರತಿ

ಇದನ್ನೂ ಓದಿ: ಕೇಂದ್ರ ಸರಕಾರದ ಈ ಹೊಸ ಯೋಜನೆಯಡಿ ಕಡಿಮೆ ಬಡ್ಡಿಯಲ್ಲಿ 2 ಲಕ್ಷ ರೂಪಾಯಿ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಗೃಹಲಕ್ಷ್ಮಿ, ಅನ್ನಭಾಗ್ಯ ಹಣ 20ರೊಳಗೆ ಜಮಾ

  1. ಸುತ್ತೋಲೆಯಲ್ಲಿ ನಮೂದಿಸಿದ ಪ್ರಕಾರ ಅನ್ನಭಾಗ್ಯ ಯೋಜನೆಯಡಿ ಆಹಾರ ಇಲಾಖೆಗೆ ಪ್ರತಿ ತಿಂಗಳ ದಿನಾಂಕ 20ರ ಒಳಗಾಗಿ ಪಾವತಿಸಲು ಅನುವಾಗುವಂತೆ ಆ ತಿಂಗಳ ದಿನಾಂಕ 10 ರಿಂದ 15ರೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.
  2. ಗೃಹಲಕ್ಷ್ಮಿ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರತಿ ತಿಂಗಳ ದಿನಾಂಕ 20ರೊಳಗೆ ಪಾವತಿಸಲು ಅನುವಾಗುವಂತೆ ಆ ತಿಂಗಳ ದಿನಾಂಕ 15 ರಿಂದ 20ರೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಮಯ ನಿಗದಿಪಡಿಸಲಾಗಿದೆ.
  3. ಇನ್ನು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಸಾಮಾಜಿಕ ಭದ್ರತಾ ಪಿಂಚಣಿ ನಿರ್ದೇಶನಾಲಯಕ್ಕೆ ಪ್ರತಿ ತಿಂಗಳು ದಿನಾಂಕ 5ರೊಳಗೆ ಪಾವತಿಸಲು ಅನುವಾಗುವಂತೆ ಆ ತಿಂಗಳ ದಿನಾಂಕ 1ರಿಂದ 5 ರೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ನರೇಗಾ ಯೋಜನೆಯಡಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

WhatsApp Group Join Now
Telegram Group Join Now

Related Posts

error: Content is protected !!