ಸರಕಾರಿ ಯೋಜನೆ

‘ಗೃಹಲಕ್ಷ್ಮಿ’ ಯೋಜನೆ : ಜೂನ್ 27 ರಿಂದ ಅರ್ಜಿ ಆಹ್ವಾನ | ಆಗಸ್ಟ್ 18ಕ್ಕೆ ಖಾತೆಗೆ ಹಣ ಜಮಾ

WhatsApp Group Join Now
Telegram Group Join Now

ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ನಂತರ ಹೆಚ್ಚು ಕುತೂಹಲ ಮೂಡಿಸಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಆಹ್ವಾನದ ಪ್ರಾರಂಭ ದಿನಾಂಕವನ್ನು ಸರಕಾರ ಕಡೆಗೂ ಘೋಷಿಸಿದೆ. ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ ಪ್ರೋತ್ಸಾಹಧನ ನೀಡುವ ಸದರಿ ಯೋಜನೆ ಕಳೆದ ಜೂನ್ 16ರಂದೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಬೇಕಿತ್ತು.

ಆದರೆ ಉಚಿತ ವಿದ್ಯುತ್ ಯೋಜನೆಯಲ್ಲಾದ ತಾಂತ್ರಿಕ ಗೊಂದಲಗಳು ‘ಗೃಹಲಕ್ಷ್ಮಿ’ ಯೋಜನೆಗೂ ಆಗಬಾರದೆಂಬ ಕಾರಣಕ್ಕೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ  ಜೂನ್ 27 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಹೊಸ APL, BPL ರೇಷನ್ ಕಾರ್ಡ್ ಅರ್ಜಿ ಸ್ಥಗಿತ | New Ration Card Application Stop

ಆಗಸ್ಟ್ 18ಕ್ಕೆ ಹಣ ಜಮಾ

ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೂನ್ 27ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 17 ಅಥವಾ 18ರಂದು ಮನೆ ಒಡತಿಯರ ಬ್ಯಾಂಕ್ ಖಾತೆಗೆ 2,000 ಸಾವಿರ ರೂಪಾಯಿ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಅಪ್ಲಿಕೇಷನ್ ಲಾಂಚ್ ಆಗಲಿದ್ದು; ಆ್ಯಪ್ ಮೂಲಕ ಹಾಗೂ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು.

ಉಚಿತ ಕರೆಂಟ್ ಪಡೆಯಲು ಯಾವುದೇ ಡೆಡ್‌ಲೈನ್ ಇಲ್ಲ | ಈ ಹೊಸ ಲಿಂಕ್ ಬಳಸಿ ಮನೆಯಲ್ಲೇ ಅರ್ಜಿ ಸಲ್ಲಿಸಿ… | Gruha Jyoti Scheme No De

non

lin… 

 

ಯಾವೆಲ್ಲಾ ದಾಖಲೆಗಳು ಬೇಕು?

  1. ರೇಷನ್ ಕಾರ್ಡ್
  2. ಬ್ಯಾಂಕ್ ಪಾಸ್‌ಬುಕ್
  3. ಆಧಾರ್ ಕಾರ್ಡ್
  4. ಆದಾಯ ಪ್ರಮಾಣ ಪತ್ರ
  5. ಯಾವುದಾದರೂ ಗುರುತಿನ ಚೀಟಿ

ಗೃಹಲಕ್ಷ್ಮೀ ಯೋಜನೆಯಡಿ 2,000 ರೂಪಾಯಿ ಪಡೆಯಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಇರಲೇಬೇಕು. ಲಾಭ ಪಡೆಯಲು ಮನೆಯೊಡತಿಯ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಿರಲೇಬೇಕು. ಯೋಜನೆಯ ಲಾಭ ಪಡೆಯಲು ತಪ್ಪು ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ಮನೆ ಬಾಗಿಲಲ್ಲೇ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ | ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೆರವು 

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

WhatsApp Group Join Now
Telegram Group Join Now

Related Posts

error: Content is protected !!