ಸರಕಾರಿ ಯೋಜನೆ

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ Fake App ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟೀ!

WhatsApp Group Join Now
Telegram Group Join Now

ಕಾಂಗ್ರೆಸ್ ಗ್ಯಾರಂಟಿಗಳ ಪೈಕಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ಪ್ರೋತ್ಸಾಹಧನ ನೀಡುವ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಮತ್ತೆ ಮತ್ತೆ ಮುಂದೋಡುತ್ತಿದೆ. ಅಳೆದ ಜೂನ್ 16, ಅನಂತರ 27 ಅಂತ ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆ ಇನ್ನೂ ಆರಂಭವಾಗಿಲ್ಲ.

ಆದರೆ ಆಗಲೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಸಂಬAಧಿಸಿದAತೆ ನಾನಾ ನಮೂನೆ ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಕಾಣಿಸಿಕೊಂಡಿವೆ. ಇವೆಲ್ಲವೂ ಫೇಕ್ ಆ್ಯಪ್‌ಗಳಾಗಿದ್ದು; ಯೋಜನೆಗೆ ಸಂಬAಧಿಸಿದAತೆ ಇನ್ನೂ ಯಾವುದೇ ಆ್ಯಪ್ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ… 

 

ಇಷ್ಟರಲ್ಲೇ ಆ್ಯಪ್ ಬಿಡುಗಡೆ 

ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಪ್ರತ್ಯೇಕ ಆ್ಯಪ್ ಸಿದ್ಧವಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಅದಿನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಕಳೆದ ಜೂನ್ 27ರಂದು ಸಚಿವ ಸಂಪುಟ ಸಭೆಯಲ್ಲಿ ಆ್ಯಪ್ ಬಗ್ಗೆ ಚರ್ಚೆಗಳಾಗಿದ್ದು; ಅರ್ಜಿ ಸಲ್ಲಿಕೆಗೆ ಇಷ್ಟರಲ್ಲೇ ಆ್ಯಪ್ ಬಿಡುಗಡೆ ಮಾಡಲಾಗುವುದು. ಆಗಸ್ಟ್ 17ರ ನಂತರ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ, ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಲಾಗಿದ್ದು, ಇದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ವೈಯಕ್ತಿಕ ಮಾಹಿತಿ ದುರ್ಬಳಕೆ

ಈಗ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕಾಣಿಸಿಕೊಂಡಿರುವ ನಕಲಿ ಮೊಬೈಲ್ ಅಪ್ಲಿಕೇಷನ್‌ಗಳಿಂದ ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ವಾಟ್ಸಪ್‌ನಲ್ಲಿ ಇಂತಹ ಆ್ಯಪ್‌ಗಳನ್ನು ಡೌನ್ ಮಾಡಿಕೊಳ್ಳಿ ಎಂಬ ಸಂದೇಶಗಳು ಬಂದಾಗ ಆ ಆ್ಯಪ್‌ಗಳು ಅಸಲಿಯೋ… ನಕಲಿಯೋ ಎಂಬುವುದನ್ನು ಮೊದಲು ತಿಳಿದುಕೊಳ್ಳಿ.

ಏಕೆಂದರೆ ಇಂತಹ ವಿವಿಧ ಯೋಜನೆಗಳ ಹೆಸರಿನಲ್ಲಿರುವ ಆಪ್‌ಗಳು ಜನರಿಂದ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ವೈಯಕ್ತಿಕ ಮಾಹಿತಿ, ಫೋನ್ ನಂಬರ್ ಇತ್ಯಾದಿ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸುವ ದುರುದ್ದೇಶ ಹೊಂದಿರುತ್ತವೆ. ಹೀಗೆ ಸಂಗ್ರಹಿಸಿದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯು ದುರ್ಬಳಕೆ ಆಗಬಹುದು.

ಹೊಸ APL, BPL ರೇಷನ್ ಕಾರ್ಡ್ ಅರ್ಜಿ ಸ್ಥಗಿತ | New Ration Card Application Stop

ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟೀ !

ಕೆಲವು ವಂಚಕ ಆ್ಯಪ್‌ಗಳು ಒಟಿಪಿ ಕಳುಹಿಸಿ ನಿಮ್ಮ ಮೊಬೈಲ್‌ನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಆ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಅವರೇ ನಿರ್ವಹಿಸಿ ಹಣ ಲಪಟಾಯಿಸಬಹುದು. ಅಷ್ಟೇ ಅಲ್ಲ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇತರರಿಗೆ ಮಾರಾಟ ಮಾಡಲೂಬಹುದು.

ರಾಜ್ಯ ಸರಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಮೊಬೈಲ್ ಅಪ್ಲಿಕೇಷನ್‌ಗಳನ್ನು ಈತನಕ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ಮಾರ್ಟ್ಫೋನ್ ಆಪ್ ಸ್ಟೋರ್‌ನಲ್ಲಿ ಇಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಿರುವುದು ಉತ್ತಮ.

ಇದನ್ನೂ ಓದಿ:

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!