ವಿದ್ಯಾರ್ಥಿವೇತನಶಿಕ್ಷಣ ಸುದ್ದಿ

HDFC Parivartan scholarship 2023-24 : 75,000 ರೂಪಾಯಿ ವರೆಗೆ ಉಚಿತ ವಿದ್ಯಾರ್ಥಿವೇತನ | 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಅವಕಾಶ

WhatsApp Group Join Now
Telegram Group Join Now

HDFC ಬ್ಯಾಂಕ್ ವತಿಯಿಂದ 1ನೇ ತರಗತಿಯಿಂದ ಪದವಿ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ 75 ಸಾವಿರ ರೂಪಾಯಿ ವರೆಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ…

HDFC Bank Parivartan ECSS Programme 2023-24 : ಈ ವಿದ್ಯಾರ್ಥಿವೇತನವು HDFC ಬ್ಯಾಂಕ್‌ನ ಒಂದು ಉಪಕ್ರಮವಾಗಿದ್ದು, ದೇಶದ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಆರ್ಥಿಕವಾಗಿ ಬೆಂಬಲಿಸುವ ಗುರಿಯನ್ನು ಹೊಂದಿದೆ.

ECSS ಕಾರ್ಯಕ್ರಮದ ಅಡಿಯಲ್ಲಿ, ವೈಯಕ್ತಿಕ/ಕುಟುಂಬದ ಬಿಕ್ಕಟ್ಟುಗಳು ಅಥವಾ ಯಾವುದೇ ಇತರ ಹಣಕಾಸಿನ ಸಮಸ್ಯೆಗಳಿಂದಾಗಿ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಾಗದ ಮತ್ತು ಶಾಲೆಯಿಂದ ಹೊರಗುಳಿಯುವ ಅಪಾಯದಲ್ಲಿರುವ ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕಾಗಿ 75,000 ರೂಪಾಯಿ ವರೆಗೆ ಹಣದ ಸಹಾಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ: PhonePe, GooglePay, Paytm ಬಳಸುವವರಿಗೆ ತಿಳಿದಿರಲೇ ಬೇಕಾದ ಮಹತ್ವದ ಮಾಹಿತಿ… | ಈ ಕ್ರಮ ಅನುಸರಿಸಿದರೆ ಫುಲ್‌ಸೇಪ್ How can I block UPI accounts when my mobile is lost?

ಯಾರಿಗೆ ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ?

HDFC Bank scholarship ಈ ಒಂದು ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಪಡೆಯುತ್ತಿರುವ ಶಿಕ್ಷಣದ ಹಂತ ಅಥವಾ ಕೋರ್ಸ್’ನ ವಿಧದ ಮೇಲೆ ನೀಡಲಾಗುತ್ತಿದ್ದು, ಯರ‍್ಯಾರಿಗೆ ಎಷ್ಟೆಷ್ಟು ಪ್ರೋತ್ಸಾಹಧನ ಸಿಗಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ…

 • 1ರಿಂದ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ : 15,000 ರೂಪಾಯಿ
 • 7ನೇ ತರಗತಿಯಿಂದ 12ನೇ ತರಗತಿ, ಡಿಪ್ಲೋಮಾ ಐಟಿಐ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ : 18,000 ರೂಪಾಯಿ
 • ಸಾಮಾನ್ಯ ಪದವಿ ಕೋರ್ಸ್’ಗಳಿಗೆ : 30,000 ರೂಪಾಯಿ
 • ವೃತ್ತಿಪರ ಪದವಿ ಕೋರ್ಸ್’ಗಳಿಗೆ : 50,000 ರೂಪಾಯಿ
 • ಸಾಮಾನ್ಯ ಸ್ನಾತಕೋತ್ತರ ಪದವಿ ಕೋರ್ಸ್’ಗಳಿಗೆ : 35,000 ರೂಪಾಯಿ
 • ವೃತ್ತಿಪರ ಸ್ನಾತಕೋತ್ತರ ಪದವಿ ಕೋರ್ಸ್’ಗಳಿಗೆ : 75,000 ರೂಪಾಯಿ

ಇದನ್ನೂ ಓದಿ: ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ | Ministry of defence recruitment 2024

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?

 • ಭಾರತದ ಯಾವುದೇ ರಾಜ್ಯದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ, ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ) ಕಾರ್ಯಕ್ರಮಗಳಲ್ಲಿ ಶಿಕ್ಷಣ ಪಡೆಯುತ್ತಿರಬೇಕು.
 • ಅರ್ಜಿದಾರರು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳೊ೦ದಿಗೆ ಉತ್ತೀರ್ಣರಾಗಿರಬೇಕು.
 • ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷ ರೂಪಾಯಿಗಿಂತ ಕಡಿಮೆ ಅಥವಾ ಸಮನಾಗಿರಬೇಕು.
 • ಹಿಂದಿನ ಮೂರು ವರ್ಷಗಳಲ್ಲಿ ಸಂಭವಿಸಿದ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳೇನು?

 • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
 • ಹಿಂದಿನ ವರ್ಷದ ಅಂಕಪಟ್ಟಿಗಳು (2022-23)
 • ಗುರುತಿನ ಪುರಾವೆ
 • ಪ್ರಸ್ತುತ ಶೈಕ್ಷಣಿಕ ವರ್ಷದ (2023-24) ಪ್ರವೇಶ ಪುರಾವೆ (ಶುಲ್ಕ ರಸೀದಿ / ಪ್ರವೇಶ ಪತ್ರ / ಸಂಸ್ಥೆಯ ಗುರುತಿನ ಚೀಟಿ / ಬೊನಾಫೈಡ್ ಪ್ರಮಾಣಪತ್ರ)
 • ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ / ರದ್ದಾದ ಚೆಕ್
 • ಆದಾಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

HDFC Bank scholarship ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಆ ವೆಬ್ ಪುಟದಲ್ಲಿ ನೀವು ಯಾವ ಶಿಕ್ಷಣ ಪಡೆಯುತ್ತಿರುವಿರೋ ಅದರ ಕೆಳಗೆ ನೀಡಿರುವ Apply Now ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Sakhi Niwas Vasati Yojane : ಮಹಿಳೆಯರಿಗಾಗಿ ಕೇಂದ್ರ ಸರಕಾರದ ‘ಸಖಿ ನಿವಾಸ’ ಹೊಸ ವಸತಿ ಯೋಜನೆ | ಯಾರಿಗೆಲ್ಲ ಸಿಗಲಿದೆ ಈ ಯೋಜನೆ ಸೌಲಭ್ಯ?

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, 31-01-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹರಿರುವ ಎಲ್ಲಾ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೆ ಈ ಕೂಡಲೇ ಅರ್ಜಿ ಸಲ್ಲಿಸಿ ಈ ಅವಕಶವನ್ನು ಸದ್ಭಳಕೆ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ಲಿಂಕ್ : Click here

HDFC Parivartan scholarship 2023-24

Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!