ಸರಕಾರಿ ಯೋಜನೆ

₹3,624 ಕೋಟಿ ಮನೆಹಾನಿ ಪರಿಹಾರ ಬಿಡುಗಡೆ: ಸಂತ್ರಸ್ತರ ಖಾತೆಗೆ ತಲಾ ₹5 ಲಕ್ಷ ಪರಿಹಾರ

WhatsApp Group Join Now
Telegram Group Join Now

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೆ 2019ರಿಂದ 2022ರ ವರೆಗೆ ಸಂಭವಿಸಿದ ಅತಿವೃಷ್ಟಿ, ಪ್ರವಾಹದಿಂದ ಲಕ್ಷಾಂತರ ಮನೆಗಳು ಹಾನಿಗೀಡಾಗಿದ್ದು; ಮನೆಗಳ ಮರು ನಿರ್ಮಾಣಕ್ಕೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 3,624 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೆ 2019ರಿಂದ 2022ರ ವರೆಗೆ ಸಂಭವಿಸಿದ ಅತಿವೃಷ್ಟಿ, ಪ್ರವಾಹದಿಂದ ಲಕ್ಷಾಂತರ ಮನೆಗಳು ಹಾನಿಗೀಡಾಗಿವೆ. ಹೀಗೆ ಮಳೆಗೆ ಬಿದ್ದು ಹೋದ ಮನೆಗಳ ಮರು ನಿರ್ಮಾಣಕ್ಕೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 3,624 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಡಿ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ವಿಪತ್ತು ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರದಿಂದ ಈ ಮೊತ್ತ ಲಭಿಸಿದ್ದು, ಈಗಾಗಲೆ 2.30 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಮುಗಿದಿದೆ. ಹೆಚ್ಚುವರಿಯಾಗಿ 708.48 ಕೋಟಿ ರೂಪಾಯಿಗಳನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.

ಹೌದು, ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ಲಕ್ಷಾಂತರ ಮನೆಗಳು ಹಾನಿಯಾಗಿದ್ದು; ಮನೆಹಾನಿ ಪರಿಹಾರಕ್ಕಾಗಿ ನಾಡಿನ ಲಕ್ಷಾಂತರ ಸಂತ್ರಸ್ತರು ನೆರವಿನ ನಿರೀಕ್ಷೆಯಲ್ಲಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಈ ಸಂಬಂಧ ಕೇಂದ್ರಕ್ಕೆ ಮನವಿ ನೀಡಲಾಗಿದ್ದು; ಅಲ್ಲಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಪೂರ್ಣ ಹಾನಿಯಾದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು ಒಟ್ಟು 3,624 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೈತರ ಬ್ಯಾಂಕ್ ಖಾತೆಗೆ ₹339 ಕೋಟಿ ಹಾಲಿನ ಪ್ರೋತ್ಸಾಹಧನ ಜಮೆ

ಹಾನಿಯಾದ ಮನೆಗಳೆಷ್ಟು?

ರಾಜ್ಯದಲ್ಲಿ 2019ರಿಂದ ಸತತವಾಗಿ ಮಳೆ ಸುರಿಯುತ್ತಿದ್ದು; ರಾಜ್ಯ ಸರ್ಕಾರವೇ ಕೇಂದ್ರದ ನೆರವಿಗಾಗಿ ಕಾಲಕಾಲಕ್ಕೆ ಸಲ್ಲಿಸಿರುವ ಮನವಿಗಳ ಪ್ರಕಾರ 3.03 ಲಕ್ಷ ಮನೆಗಳು ತೀವ್ರ ಹಾನಿಗೊಳಗಾಗಿವೆ. ಸರ್ಕಾರದ ಲೆಕ್ಕದ ಪ್ರಕಾರವೇ ಜನರಿಗೆ ಆಗಿರುವ ಹಾನಿಯ ಪ್ರಮಾಣ 17 ಸಾವಿರ ಕೋಟಿ ರೂಪಾಯಿಗಳನ್ನು ಮೀರುತ್ತದೆ. ಸರ್ಕಾರವೇ ಕೇಂದ್ರಕ್ಕೆ ನೀಡಿರುವ ಮನವಿಯಲ್ಲಿ ಈ ವಿಷಯ ತಿಳಿಸಿದೆ.

ಕೆಲವು ಜಿಲ್ಲೆಗಳಲ್ಲಿ 2019 ಮತ್ತು 2020ರಲ್ಲೂ ಪರಿಹಾರ ಪಡೆದು ಮತ್ತೆ ಪರಿಹಾರ ಪಡೆದಿರುವ ದೂರುಗಳು ಸರ್ಕಾರಕ್ಕೆ ಬಂದಿವೆ. ಆದ್ದರಿಂದಲೇ ಸರ್ಕಾರ ಬಿಲ್ ಸಲ್ಲಿಕೆಯಲ್ಲಿ ನಕಲಿಯಾಗುವುದನ್ನು ತಪ್ಪಿಸಲು 2021ರಿಂದ ಕೆಲವೊಂದು ಕಠಿಣ ಷರತ್ತು ರೂಪಿಸಿದ್ದರಿಂದ ಬಿಲ್ ಪಾವತಿ ತಡವಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿದ್ದವು.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಘೋಷಣೆಯಾದ ಪರಿಹಾರವೆಷ್ಟು?

ಮನೆ ಹಾನಿಯಾಗಿರುವ ಪ್ರಮಾಣವನ್ನು ಎ, ಬಿ, ಸಿ ಎಂದು ವರ್ಗೀಕರಿಸಿ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಭಾಗಶಃ ಬಿದ್ದ ಮನೆಗಳಿಗೆ 3 ಲಕ್ಷ, ಸ್ವಲ್ಪ ಹಾನಿಯಾಗಿರುವ ಮನೆಗಳಿಗೆ 50,000 ರೂಪಾಯಿಗಳನ್ನು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಜತೆಗೆ ರಾಜ್ಯದ ಬೇರೆ ಬೇರೆ ಜಿಗಳಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ರೂ.10 ಸಾವಿರಗಳನ್ನು ನೀಡಲು ಆದೇಶ ಮಾಡಲಾಗಿದೆ.

ಮಳೆಹಾನಿ ಪರಿಹಾರ ನೀಡಲು ಕನಿಷ್ಠ ಶೇ.10 ಹಾನಿ ಸಂಭವಿಸಿರಬೇಕು. ಶೇ.10-25ರ ವರೆಗೆ ಹಾನಿಯಾಗಿದ್ದರೆ 50 ಸಾವಿರ ರೂಪಾಯಿ ನೀಡಬೇಕೆಂದು ನಿಯಮವಿದೆ. ಪೂರ್ಣ ಹಾನಿಯಾಗಿದ್ದರೆ ಮಾತ್ರ 5 ಲಕ್ಷ ರೂಪಾಯಿ ತನಕ ಪರಿಹಾರ ನೀಡಲಾಗುತ್ತದೆ. ಹಿಂದಿನ ಎರಡು ವರ್ಷಗಳಿಂದ 5 ಲಕ್ಷ ರೂಪಾಯಿ ತನಕ ಪರಿಹಾರ ನೀಡುತ್ತ ಬರಲಾಗುತ್ತಿದೆ. ಈಗ 5 ಲಕ್ಷ ರೂಪಾಯಿ ನೀಡುವುದಕ್ಕೆ ಷರತ್ತು ವಿಧಿಸಿದೆ.

ಇದನ್ನೂ ಓದಿ: 30 ಗುಂಟೆ ಬಾಡಿಗೆ ಜಾಗದಲ್ಲಿ ತಿಂಗಳಿಗೆ ₹50,000 ಗಳಿಸುವ ರೈತ

ನಿಯಮಗಳ ಪ್ರಕಾರ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಧಿಯ 5 ಲಕ್ಷ ರೂಪಾಯಿ ತನಕ ಪರಿಹಾರ ನೀಡುವಂತಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವ ಯೋಜನೆ ರೂಪಿಸಿ ಸಂತ್ರಸ್ಥರ ನೆರವಿಗೆ ಬಂದಿದ್ದರು. ಆದರೆ ಕಬ್ಬಿಣ, ಮರಳು, ಸಿಮೆಂಟ್, ಕೂಲಿಯ ದರ ದುಪ್ಪಟ್ಟು ಆಗಿರುವುದರಿಂದ 5 ಲಕ್ಷ ರೂಪಾಯಿಗಳಲ್ಲಿ ಮನೆ ನಿರ್ಮಾಣ ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದೆ. ಒಟ್ಟಾರೆ ಇದೀಗ ಕಂದಾಯ ಸಚಿವರು ಮನೆಹಾನಿ ಪರಿಹಾರವಾಗಿ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 3,624 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮನೆ, ಆಸ್ತಿ ಇತ್ಯಾದಿ ಪರಿಹಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ,  ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಿದ್ದರೆ, ಕಂದಾಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಹಾರ ನಮೂದು ಸಂಖ್ಯೆ ಅಥವಾ ಆಧಾರ್ ನಂಬರ್ ಹಾಕಿ ಅರ್ಜಿ ಸ್ಥಿತಿ ಮತ್ತು ಪರಿಹಾರದ ಮೊತ್ತವನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!