ಸರಕಾರಿ ಯೋಜನೆ

Horticulture Subsidy: ತೋಟಗಾರಿಕೆ ಇಲಾಖೆ ಸಹಾಯಧನ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

ವಿವಿಧ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಹಾಗೂ ಹೊಸ ತೋಟ ನಿರ್ಮಾಣಕ್ಕೆ ಸಹಾಯಧನ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ…

ಪ್ರದೇಶ ವಿಸ್ತರಣೆ, ಹಳೆ ತೋಟಗಳ ಪುನಶ್ವೇತನ ಹಾಗೂ ಪೌಷ್ಟಿಕ ತೋಟಗಳ ನಿರ್ಮಾಣಕ್ಕೆ ಮಹಾತ್ಮಾಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಂದ ಅರ್ಜಿ ಕರೆಯಲಾಗಿದೆ. ಆಸಕ್ತ ರೈತರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಯಾವ್ಯಾವ ಬೆಳೆಗಳಿಗೆ ಸಹಾಯಧನ?

ತೆಂಗು, ಮಾವು, ಸಪೋಟ ದಾಳಿಂಬೆ, ನಿಂಬೆ, ಮೊಸಂಬಿ, ಕಿತ್ತಳೆ, ಹುಣಸೆ, ನೇರಳೆ, ಸೀತಾಫಲ, ಬಾರೆಹಣು, ನಲಿ, ಬಾಳೆ (ಅಂಗಾAಶ), ಪಪ್ಪಾಯ, ದ್ರಾಕ್ಷಿ, ಗುಲಾಬಿ, ಮಲ್ಲಿಗೆ, ಡ್ರ‍್ಯಾಗನ್ ಪ್ರೋಟ್, ಬೆಣ್ಣೆ ಹಣ್ಣು, ಗೋಡಂಬಿ ಬೆಳೆಗಳ ಪುನಶ್ಚೇತನಕ್ಕೆ ಸಹಾಯಧನ ನೀಡಲಾಗುತ್ತದೆ.

ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಅನುದಾನದ ಲಭ್ಯತೆಯ ಆಧಾರದಲ್ಲಿ ಈ ಸಹಾಯಧನ ಲಭ್ಯವಿದ್ದು; ಅರ್ಹ ರೈತರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ತಮ್ಮ ತೋಟಗಳ ವ್ಯಾಪ್ತಿಗೆ ಒಳಪಡುವ ಹತ್ತಿರದ ಗ್ರಾಮ ಪಂಚಾಯಿತಿ, ತಾಲ್ಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ.

ಯಾರೆಲ್ಲ ಸಹಾಯಧನ ಪಡೆಯಬಹುದು?

ಉದ್ಯೋಗ ಚೀಟಿ ಹೊಂದಿರುವ ಸಣ್ಣ, ಅತಿ ಸಣ್ಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡತನ ರೇಖೆಗಿಂತ ಕೆಳಗಿರುವ ರೈತರು ಈ ಸಹಾಯಧನದ ಪ್ರಯೋಜನ ಪಡೆಯಬಹುದು.

ಈ ಸೌಲಭ್ಯ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಲಭ್ಯವಿದ್ದು ಆಯಾಯ ಪ್ರದೇಶದ ರೈತರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಹೊಸದಾಗಿ ತೋಟಗಾರಿಗೆ ಬೆಳೆ ಮಾಡಲು ಇಚ್ಛಿಸುವವರು ಹಾಗೂ ಈಗಾಗಲೇ ಹಳೆಯ ತೋಟಗಳಲ್ಲಿ ಅಂತರ್ ಬೆಳೆ ಮಾಡಲು ಬಯಸುವವರು ಈ ಸಹಾಯಧನ ಪಡೆಯಬಹುದು.

ಕೃಷಿ, ತೋಟಗಾರಿಕೆ, ಸರಕಾರಿ ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!