ಸರಕಾರಿ ಯೋಜನೆ

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು | Horticulture schemes in karnataka

WhatsApp Group Join Now
Telegram Group Join Now

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಏನೆಲ್ಲ ಯೋಜನೆಗಳಿವೆ? ಅವುಗಳಿಂದ ರೈತರಿಗಾಗುವ ಅನುಕೂಲಗಳೇನು? ಯೋಜನೆಯ ಲಾಭ ಪಡೆಯುವುದು ಹೇಗೆ? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…

ತೋಟಗಾರಿಕೆ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ರೈತರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಹನಿ ನೀರಾವರಿ, ನರ್ಸರಿ ಸ್ಥಾಪನೆ, ಕೃಷಿಯಂತ್ರಗಳ ಖರೀದಿ, ಅಡಿಕೆ ಒಣಗಿಸುವ ಸೋಲಾರ್ ಘಟಕ, ಶೀತಲೀಕೃತ ಘಟಕಗಳು, ಪ್ಯಾಕ್ ಹೌಸ್ ಸ್ಥಾಪನೆ, ಅಣಬೆ ಬೆಳೆಯಲು ನೆರವು, ಪಾಲಿಹೌಸ್ ನಿರ್ಮಾಣ, ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು, ಜೇನು ಕೃಷಿಗೆ ಸಹಾಯ, ಅಡಕೆ ಸಸಿ ನೆಡಲು ಗುಂಡಿ ರಚನೆ, ರಬ್ಬರ್ ಪ್ಲ್ಲಾಂಟ್ ತಯಾರಿ, ತೆಂಗು ನಾಟಿ, ಔಷಧ ಸಿಂಪಡಿಸುವ ಸಂಪ್, ನೀರಾವರಿಗೆ ಬಳಸುವ ಪಂಪ್, ಟಾರ್ಪಲ್, ಕಟಾವು ಯಂತ್ರ ಖರೀದಿಗೆ ಸಹಾಯಧನ ಲಭ್ಯವಿರುತ್ತವೆ.

ಹನಿ ನೀರಾವರಿ 

ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ. ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ಇತರೆ ವರ್ಗದ ರೈತರಿಗೆ ಶೇ.75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡ ರೈತರಿಗೆ ಶೇ.90ರಷ್ಟು ಮತ್ತು ನಂತರದ ೩ ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ.45ರ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: ರೈತರ ಆದಾಯ ಹೆಚ್ಚಿಸುವ ತ್ರಿಮೂರ್ತಿ ಟಾನಿಕ್: ರೈತರೇ ತಯಾರಿಕೊಳ್ಳಬಲ್ಲ ಪವರ್‌ಫುಲ್ ಔಷಧಿ

ನರ್ಸರಿ ಸ್ಥಾಪನೆ

ನರ್ಸರಿಗಳನ್ನು ಯಾರೂ ಬೇಕಾದರು ಮಾಡಬಹುದಾಗಿದೆ. ಗುಣಮಟ್ಟದ ಪ್ರಮಾಣೀಕೃತ ಸಸಿಗಳನ್ನು ಪೂರೈಸುವ ನರ್ಸರಿಗಳಿಗೆ ಸದಾ ಬೇಡಿಕೆ ಇದ್ದೇ ಇದೆ. ನರ್ಸರಿಗಳ ನಿರ್ಮಾಣಕ್ಕೆ ಅಗತ್ಯವಾದ ಸೌಕರ್ಯಗಳಿಗಾಗಿ ಮೂಲ ಶೇ.50ರಷ್ಟು ಪ್ರೋತ್ಸಾಹಧನವನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸರಕಾರ ಅನುದಾನ ಒದಗಿಸುತ್ತಿದೆ. ಈ ಸೌಲಭ್ಯ ಪಡೆಯಲು ರೈತರು ಕನಿಷ್ಠ 2.5 ಎಕರೆ ಜಮೀನನ್ನು ಹೊಂದಿರಬೇಕು.

ಕೃಷಿಯಂತ್ರಗಳ ಖರೀದಿ

ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಉಪಯೋಗಿಸುವ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ. ಖರೀದಿಸುವ ಯಂತ್ರಗಳಿಗೆ ಅನುಗುಣವಾಗಿ ಶೇ. 40 ರಿಂದ 50 ರಷ್ಟು ಸಹಾಯಧನ ತೋಟಗಾರಿಕಾ ಇಲಾಖೆಯಡಿ ದೊರೆಯುತ್ತದೆ. ಒಂದು ಕುಟುಂಬದಲ್ಲಿ ಓರ್ವರಿಗೆ ಮಾತ್ರ ಈ ಸೌಲಭ್ಯ ಲಭ್ಯ.

ಅಡಿಕೆ ಒಣಗಿಸುವ ಸೋಲಾರ್ ಘಟಕ

ಪ್ರಕೃತಿದತ್ತವಾಗಿ ದೊರೆಯುವ ಸೂರ್ಯನ ಶಾಖವನ್ನು ಬಳಸಿಕೊಳ್ಳುವ ತಂತ್ರಜ್ಞಾನವಿದು. ಮಳೆಗಾಲದಲ್ಲಿ ಸೂಕ್ತ ತಾಪಮಾನದಲ್ಲಿ ಅಡಿಕೆ ಒಣಗಿಸಲು ಇದು ಸಹಕಾರಿಯಾಗಿದೆ. ದೊಡ್ಡ ಸೋಲಾರ್ ಘಟಕ (Solar Tunnel Dryer) ನಿರ್ಮಿಸುವುದಾದರೆ ಅದಕ್ಕೆ ದೊಡ್ಡ ಮೊತ್ತವು ಬೇಕಾಗುತ್ತದೆ. ಅದರಿಂದಾಗಿ ಒಂದಷ್ಟು ರೈತರು ತಯಾರಿಗೆ ಹಿಂದೇಟು ಹಾಕುತ್ತಾರೆ. ಈ ಘಟಕ ತಯಾರಿಗೆ ತೋಟಗಾರಿಕಾ ಇಲಾಖೆ ಅನುದಾನವನ್ನು ನೀಡುತ್ತಿದೆ. ಸರಕಾರವು ಕೃಷಿಕರನ್ನು ಪ್ರೋತ್ಸಾಹಿಸಲು 1000 ಕೆ.ಜಿ. ಸಾಮರ್ಥ್ಯದ ಘಟಕ ಅಳವಡಿಕೆಗೆ ಶೇ. 40ರಷ್ಟು, ಗರಿಷ್ಠ 2.28 ಲಕ್ಷ ರೂಪಾಯಿ ಸಹಾಯಧನವನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನೀಡುತ್ತಿದೆ. ಸರಕಾರದ ಅನುದಾನ ದೊರೆಯಬೇಕಾದರೆ ಕೃಷಿಕರು ಕನಿಷ್ಠ 2.5 ಎಕರೆ ಜಮೀನು ಹೊಂದಿರಬೇಕು.

ಇದನ್ನೂ ಓದಿ: ಅಕಾಲಿಕ ಮಳೆ: ಬೆಳೆ ಹಾನಿಗೆ ಪರಿಹಾರವೇನು?

ಶೀತಲೀಕೃತ ಘಟಕಗಳು

ಕೊಲ್ಲೋತ್ತರ ನಿರ್ವಹಣೆ ತೋಟಗಾರಿಕಾ ಬೆಳೆಗಳಲ್ಲಿ ದೊಡ್ಡ ಸವಾಲಿನ ಕೆಲಸ. ಇದಕ್ಕೆ ಶೀತಲೀಕೃತ ಘಟಕಗಳಿದ್ದರೆ ಉತ್ತಮ. ತೋಟಗಾರಿಕಾ ಬೆಳೆಗಳು ಬಹುಬೇಗ ಹಾಳಾಗುವ ಕಾರಣ ತೀತಲೀಕೃತ ಘಟಕಗಳಲ್ಲಿ ಬೆಳೆಗಳನ್ನು ಸಂಗ್ರಹಿಸಿಟ್ಟು ಮಾರುಟ್ಟೆಯಲ್ಲಿ ಉತ್ತಮ ದರ ಇರುವಾಗ ಮಾರಾಟ ಮಾಡಬಹುದಾಗಿದೆ. ಶೀತಲೀಕೃತ ಘಟಕ ನಿರ್ಮಾಣಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. 25 ರಿಂದ 50 ರಷ್ಟು ಸಹಾಯಧನ ಲಭ್ಯವಿದೆ.

ಪ್ಯಾಕ್ ಹೌಸ್ ಸ್ಥಾಪನೆ

ಹಲವಾರು ಹೋಟಗಾರಿಕಾ ಬೆಳೆಗಳನ್ನು ಬೆಳೆಯುವ ಜೊತೆಗೆ ಅವುಗಳ ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡುವ ಕುರಿತು ಹೆಚ್ಚಿನ ಗಮನಹರಿಸಬೇಕಾಗಿದೆ. ತೋಟಗಾರಿಕಾ ಬೆಳೆಗಳಾದ ಹಣ್ಣು-ಹಂಪಲು, ತರಕಾರಿಗಳ ಪ್ಯಾಕಿಂಗ್ ಸೌಕರ್ಯಗಳಿಗಾಗಿ, ಸಾಗಾಣಿಕೆ ಪೂರ್ವ ಯೋಗ್ಯ ವಾತಾವರಣ ನಿರ್ಮಿಸಿಕೊಂಡು 9 ಮೀಟರ್ ಹಾಗೂ 6 ಮೀಟರ್ ಉದ್ದ, ಅಗಲವನ್ನು ಹೊಂದಿರುವ ಕಟ್ಟಡವನ್ನು ನೀರಿನ ಲಭ್ಯತೆ ಹಾಗೂ ಸಾಗಾಟ ಯೋಗ್ಯ ಸಾಮಗ್ರಿಗಳೊಂದಿಗೆ ನಿರ್ಮಿಸಿದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ೨ ಲಕ್ಷ ರೂಪಾಯಿವರೆಗೆ ಸಹಾಯಧನ ದೊರೆಯುತ್ತದೆ. ಘಟಕ ರಚಿಸಲು ಆಸಕ್ತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು.

ಇದನ್ನೂ ಓದಿ: ನಿಮ್ಮ ಹಸುವಿನ ಹಾಲಿನ ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿ | ಹಾಲಿನ ಡಿಗ್ರಿ ಹೆಚ್ಚಿಸುವ ಸರಳ ವಿಧಾನ

ಅಣಬೆ ಬೆಳೆಯಲು ನೆರವು

ಅಣಬೆ ಬೆಳೆಯುವ ಘಟಕ, ಅಣಬೆ ಬೀಜ ಉತ್ಪಾದನೆ ಘಟಕ ತಯಾರಿಗೆ ಶೇ. 40 ರಷ್ಟು ಸಹಾಯಧನ ಲಭ್ಯವಿದೆ. ಬೆಳೆಗಾರರು ಅಣಬೆ ಬೆಳೆಯುವ ಘಟಕ, ಅಣಬೆ ಬೀಜ ಉತ್ಪಾದನಾ ಘಟಕ, ಅಣಬೆ ಕಾಂಪೋಸ್ಟ್ ತಯಾರಿ ಘಟಕ ಹೀಗೆ ಈ ಮೂರು ಘಟಕಗಳನ್ನು ನಿರ್ಮಿಸಿಕೊಳ್ಳಲು ಆಸಕ್ತರಿದ್ದಲ್ಲಿ ಅವುಗಳಿಗೆ ಪ್ರತ್ಯೇಕವಾಗಿ ಸಹಾಯಧನ ಲಭ್ಯವಿದೆ. ಅಣಬೆ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಹಾಗೂ ಅಣಬೆಯನ್ನು ಪೌಷ್ಟಿಕಾಂಶ ಕೊಡುವ ಆಹಾರವಾಗಿ ಉತ್ತೇಜಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ.

ಪಾಲಿಹೌಸ್ ನಿರ್ಮಾಣ

ಪಾಲಿಮನೆಯ ಮೂಲಕ ಯಾವುದೇ ಋತುಗಳಲ್ಲೂ ತರಕಾರಿ, ಪುಷ್ಪ ಕೃಷಿ, ಹಣ್ಣುಗಳನ್ನು ಬೆಳೆಯಬಹುದಾಗಿದೆ. ಆದರೆ ಪಾಲಿಮನೆ ತಯಾರಿಗೆ ಸಾಕಷ್ಟು ಖರ್ಚು ತಗಲುತ್ತದೆ. ಪಾಲಿಮನೆ ಕೃಷಿಯ ಅನುಕೂಲತೆಗಳನ್ನು ಗಮನಿಸಿದ ಇಲಾಖೆ ಘಟಕ ನಿರ್ಮಿಸಲು ಆಸಕ್ತಿ ತೋರುವ ಕೃಷಿಕರಿಗೆ ಶೇ. 50ರ ದರದಲ್ಲಿ ಅವರು ಬಳಸುವ ವಸ್ತುಗಳ ಆಧಾರದಲ್ಲಿ ವಿಸ್ತೀರ್ಣಕ್ಕನುಗುಣವಾಗಿ ಸಹಾಯಧನವನ್ನು ನೀಡುತ್ತಿದೆ. ಇದಲ್ಲದೇ ಸದರಿ ಘಟಕದೊಳಗೆ ಬೆಳೆಯುವ ತರಕಾರಿ ಮತ್ತು ಹೂವಿನ ಬೆಳೆಗಳಿಗೂ ಕೂಡಾ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡುತ್ತಿದೆ.

ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು

ಬೀಜ ಖರೀದಿ, ಗೊಬ್ಬರ ಖರೀದಿ, ಮಾರುಕಟ್ಟೆ, ಸಂಸ್ಕರಣೆ ಮುಂತಾದ ಸಮಸ್ಯೆಗಳನ್ನು ಕೃಷಿಕರು ಸದಾ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಸರಕಾರ ಸಹಾಯ ಮಾಡುತ್ತಿದೆ. ಸಮಾನ ಮನಸ್ಕ ಕೃಷಿಕರನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಯನ್ನು ಆರಂಭಿಸಬೇಕು. ಅವುಗಳನ್ನು ಸ್ಥಾಪಿಸಲು ಮತ್ತು ಅವುಗಳ ಬಲವರ್ಧನೆಗೆ ರಾಜ್ಯ ಸರಕಾರ ತನ್ನ ಅಮೃತ ರೈತ ಉತ್ಪಾದಕ ಸಂಸ್ಥೆ ರಚನೆ ಯೋಜನೆಯಡಿ ಹಾಗೂ ಕೇಂದ್ರ ಸರಕಾರದ ರೈತ ಉತ್ಪಾದಕ ಸಂಸ್ಥೆ ರಚನೆ ಯೋಜನೆಯಡಿ ಅರ್ಥಿಕ ನೆರವನ್ನು ನೀಡುತ್ತದೆ.

ಇದನ್ನೂ ಓದಿ: ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು…

ಜೇನು ಕೃಷಿಗೆ ಸಹಾಯ

ಜೇನು ಕೃಷಿಯನ್ನು ಕಸುಬಾಗಿಸಿಕೊಂಡು ಅದರಿಂದಲೂ ಆದಾಯ ಪಡೆಯುವ ಸಲುವಾಗಿ ಕೃಷಿಕರಿಗೆ ಜೇನು ಕೃಷಿಯಲ್ಲಿ ತರಬೇತಿಯನ್ನು ನೀಡುತ್ತಿದೆ. ಮತ್ತು ಜೇನು ಪೆಟ್ಟಿಗೆಯನ್ನು ತನ್ನ ಜಮೀನಿನಲ್ಲಿ ಸ್ಥಾಪಿಸಲು ಜಿಲ್ಲಾ ವಲಯ ಹಾಗೂ ರಾಜ್ಯ ವಲಯ ಯೋಜನೆಗಳಡಿ ಶೇ. 75ರಷ್ಟು ಸಹಾಯಧನವನ್ನು ನೀಡುತ್ತದೆ. ಕೇಂದ್ರ ಸರಕಾರ ಕೂಡಾ ಶೇ. 40ರ ಸಹಾಯಧನವನ್ನು ಒದಗಿಸುತ್ತದೆ.

ಈ ಮೇಲಿನ ಯೋಜನೆಗಳಲ್ಲದೆ ಅಡಕೆ ಸಸಿ ನೆಡಲು ಗುಂಡಿ ರಚನೆ, ರಬ್ಬರ್ ಪ್ಲ್ಲಾಂಟ್ ತಯಾರಿ, ತೆಂಗು ನಾಟಿ ಮುಂತಾದ ಕೆಲಸಗಳನ್ನು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯೂ ಮಾಡಬಹುದಾಗಿದೆ. ಇದರಿಂದ ಕೃಷಿ ಭೂಮಿ ಅಭಿವೃದ್ಧಿಯೊಂದಿಗೆ ಆದಾಯವು ಕೈ ಸೇರುತ್ತದೆ. ಔಷಧ ಸಿಂಪಡಿಸುವ ಸಂಪ್, ನೀರಾವರಿಗೆ ಬಳಸುವ ಪಂಪ್, ಟಾರ್ಪಲ್, ಕಟಾವು ಯಂತ್ರ ಖರೀದಿಗೆ ಸಹಾಯಧನ ಲಭ್ಯವಿರುತ್ತವೆ.

ತೆಂಗಿನಲ್ಲಿ ಪಕ್ಷಿ / ಕೀಟ / ಆಲಿಕಲ್ಲು ನಿರೋಧಕ ಬಲೆ, ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ, ಸಮುದಾಯ ನೀರು ಸಂಗ್ರಹಣಾ ಘಟಕ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಸಸ್ಯಾಗಾರಗಳ ಸ್ಥಾಪನೆ, ಈರುಳ್ಳಿ ಶೇಖರಣಾ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ, ಶೀತಲ ವಾಹನ, ಹಣ್ಣು ಮಾಗಿಸುವ ಘಟಕ, ಬೀಜ ಸಂಸ್ಕರಣೆಯ ಮೂಲಸೌಕರ್ಯ ಅಭಿವೃದ್ಧಿ, ಅಂಗಾಂಶ ಕೃಷಿ ಪ್ರಯೋಗ ಶಾಲೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಅನೇಕ ರೀತಿಯ ಸಹಾಯಧನ ತೋಟಗಾರಿಕೆ ಇಲಾಖೆಯಿಂದ ಲಭ್ಯವಿದೆ.

ಋತುಮಾನಕ್ಕೆ ಅನುಗುಣವಾಗಿ, ಕಾಲಕಾಲಕ್ಕೆ ಪ್ರತಿಯೊಂದು ಯೋಜನೆಗೆ ಸಂಬಂಧಿಸಿದಂತೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ರೈತರು ಅಗತ್ಯ ಆರ್ಥಿಕ ಸೌಲಭ್ಯ ಪಡೆಯಲು ಹತ್ತಿರದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ. ಈ ಸಹಾಯಧನ ರಾಜ್ಯದ ಎಲ್ಲ ವರ್ಗದ ರೈತರಿಗೂ ಲಭ್ಯವಿದೆ.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ SSLC ಅಭ್ಯರ್ಥಿಗಳಿಂದ ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಅಂಚೆ ಕಚೇರಿಯಲ್ಲಿ ಕೇವಲ ₹399ಕ್ಕೆ ಈ ಪಾಲಸಿ ಮಾಡಿದರೆ ಸಿಗಲಿದೆ ₹10 ಲಕ್ಷ ಆರ್ಥಿಕ ನೆರವು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!