ಪಶುಪಾಲನೆ

ಎಮ್ಮೆ ಸಾಕಣೆಯಲ್ಲಿ ಅಧಿಕ ಆದಾಯಕ್ಕೆ ಈ ಕ್ರಮ ಅನುಸರಿಸಿ | buffalo farming

WhatsApp Group Join Now
Telegram Group Join Now

ಎಮ್ಮೆ ಸಾಕಣೆಯಲ್ಲಿ ಅಧಿಕ ಲಾಭ ಗಳಿಕೆ ಹೇಗೆ? ಎಮ್ಮೆ ಕರುಗಳ ಪಾಲನೆ, ಲಸಿಕೆ, ಔಷಧೋಪಚಾರ, ಪೌಷ್ಟಿಕ ಮೇವು-ಆಹಾರ, ಕೃತಕ ಗರ್ಭಧಾರಣೆ, ಅಧಿಕ ಹಾಲಿನ ಇಳುವರಿಗೆ ಅನುಸರಿಸಬೇಕಾದ ಆಹಾರ ಕ್ರಮ ಇತ್ಯಾದಿ ಮಾಹಿತಿ ಇಲ್ಲಿದೆ…  

ದಿನದಿಂದ ದಿನಕ್ಕೆ ಎಮ್ಮೆಗಳ ಸಂತತಿ ಕ್ಷಿಣಿಸುತ್ತಿದೆ. ಆದರೆ ಎಮ್ಮೆಗಳ ಬೆಲೆ ಹಾಗೂ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಎಮ್ಮೆ ಕರುಗಳೇ ನಾಳಿನ ಎಮ್ಮೆಗಳು. ಹೆಚ್ಚಿನ ಕೊಬ್ಬಿನ ಅಂಶವುಳ್ಳ ಗಟ್ಟಿಯಾದ ಎಮ್ಮೆ ಹಾಲನ್ನು ರುಚಿ ತಿನಿಸುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ತುಪ್ಪ, ಖೋವಾ, ಪನ್ನೀರು ಸೇರಿದಂತೆ ಹಲವಾರು ತಿನಿಸುಗಳ ತಯಾರಿಕೆಯಲ್ಲಿ ಎಮ್ಮೆ ಹಾಲು ಬೇಕು. ಹೈನುಗಾರಿಕೆಯಲ್ಲಿ ಎಮ್ಮೆ ಕರುಗಳ ಪಾಲನೆ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಕರುಗಳು ರೈತರಿಗೆ ಬೋನಸ್ ಇದ್ದಂತೆ.

ಇದನ್ನೂ ಓದಿ: ಜನವರಿಯಿಂದ ಹಳ್ಳಿಗಳ ಮನೆ ಬಾಗಿಲಿಗೇ ಬರಲಿದ್ದಾರೆ ಸಂಪೂರ್ಣ ಉಚಿತ ಡಾಕ್ಟರ್

ಎಮ್ಮೆಯು ಕರು ಹಾಕಿದ ನಂತರ ಕೂಡಲೆ ಕರುವಿನ ಮೈಮೇಲೆ ಇರುವ ಮಾಸನ್ನು ಒಣ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಬೇಕು. ನಂತರ ಮೂಗನ್ನು ಸ್ವಚ್ಛಗೊಳಿಸಿ ಉಸಿರಾಡಲು ಅವಕಾಶ ಮಾಡಿಕೊಡಬೇಕು. ನಂತರ ಹೊಕ್ಕಳು ಬಳ್ಳಿಯನ್ನು ತಾಯಿ ಎಮ್ಮೆಯಿಂದ ಬೇರ್ಪಡಿಸಿ 5 ಸೆಂಟಿ ಮೀಟರ್ ಕೆಳಗಡೆ ಶುದ್ಧವಾದ ದಾರದಿಂದ ಕಟ್ಟಿ ಕೆಳಗಿನ ಭಾಗದಲ್ಲಿ ಹೊಸ ಬ್ಲೆಡಿನಿಂದ ಕತ್ತರಿಸಬೇಕು. ನಂತರ ತಡಮಾಡದೆ ಗಿಣ್ಣದ ಹಾಲನ್ನು ಕುಡಿಸಬೇಕು. ಕರು ಹಾಕಿದ 15 ನಿಮಿಷದಲ್ಲಿ ಆದಷ್ಟು ಬೇಗನೆ ಗಿಣ್ಣದ ಹಾಲನ್ನು ಕುಡಿಸಬೇಕು. ಇದರಿಂದಾಗಿ ಕರುಗಳು ಬೇಗನೆ ಹಳದಿ ಬಣ್ಣದ ಸೆಗಣಿಯನ್ನು ಹಾಕುತ್ತವೆ.

ಒಂದು ವೇಳೆ ಕರು ಹುಟ್ಟಿದ 2 ಗಂಟೆಗಳ ನಂತರ ಸಗಣಿ ಹಾಕದಿದ್ದರೆ 100 ಮೀಲಿ ಲೀಟರ್ ಔಡಲ (ಹರಳು) ಎಣ್ಣೆಯನ್ನು ಕುಡಿಸಬೇಕು. ಗಿಣ್ಣದ ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕರು ಬೆಳವಣಿಗೆಗೆ ಪೂರಕವಾಗಿದೆ. ನಂತರ ಪ್ರತಿದಿನ ಕರುವಿಗೆ ಅದರ ದೇಹದ ತೂಕದ ಪ್ರತಿಶತ 10ರಷ್ಟು ಅಂದರೆ 20 ಕಿಲೊ ಗ್ರಾಂ ಕರುವಿನ ತೂಕವಾದರೆ 2 ಕಿಲೋ ಗ್ರಾಂ ಹಾಲನ್ನು ಕುಡಿಸಬೇಕು. ಹೆಚ್ಚು ಹಾಲು ಕುಡಿಸಿದರೆ ಅತಿಸಾರ ಬೇಧಿ ಉಂಟಾಗುತ್ತದೆ. ಕಡಿಮೆ ಹಾಲು ಕುಡಿಸಿದರೆ ಕರುಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಇದನ್ನೂ ಓದಿ: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ SSLC ಅಭ್ಯರ್ಥಿಗಳಿಂದ ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಮ್ಮೆ ಕರುಗಳ ಅಕಾಲಿಕ ಮರಣಕ್ಕೆ ಜಂತುಗಳ ತೊಂದರೆಯು ಒಂದು ಪ್ರಮುಖ ಕಾರಣವಾಗಿದೆ. ಎಮ್ಮೆ ಕರು ಹುಟ್ಟಿದ ನಂತರ 10, 20, 30ನೇ ದಿನ ಜಂತುನಾಶಕ ಔಷಧಿಯನ್ನು ಕುಡಿಸಬೇಕು. ನಂತರ ತಿಂಗಳಿಗೊಮ್ಮೆ ಮೂರು ತಿಂಗಳವರೆಗೆ, ಬಳಿಕ ಮೂರು ತಿಂಗಳಿಗೊಮ್ಮೆ ಒಂದು ವರ್ಷದ ವರೆಗೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು.

ಜಂತುನಾಶಕ ಔಷಧಿ ಕುಡಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಎಮ್ಮೆ ಕರುಗಳ ಮರಣ ಖಚಿತ. ಒಂದು ತಿಂಗಳ ನಂತರ ಹಸಿ ಹಾಗೂ ಒಣ ಮೇವು ತಿನ್ನುವುದನ್ನು ಅಭ್ಯಾಸ ಮಾಡಿಸಬೇಕು. ೩ ತಿಂಗಳ ನಂತರ ತಜ್ಞ ಪಶು ವೈದ್ಯರಿಂದ ಗಂಟಲು ಬೇನೆ, ಛಪ್ಪೆ ರೋಗ, ಕಾಲು ಮತ್ತು ಬಾಯಿ ರೋಗದ ವಿರುದ್ಧ ಲಸಿಕೆಗಳನ್ನು ಹಾಕಿಸಬೇಕು. ರೋಗೋದ್ರೇಕವಿರುವ ಭಾಗದಲ್ಲಿ ನರಡಿ ರೋಗದ ವಿರುದ್ಧ ಲಸಿಕೆಯನ್ನು ಹಾಕಿಸಬೇಕು.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಒಂದು ತಿಂಗಳ ನಂತರ ಕರುವಿಗೆ ದಾಣಿ ಮಿಶ್ರಣ ಪುಡಿಯನ್ನು ಹಾಕಬೇಕು. 20 ಗ್ರಾಂ ನಿಂದ ಆರಂಭಿಸಿ ನಂತರ ಪ್ರಮಾಣವನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗಬೇಕು. ಹೆಣ್ಣು ಕರುಗಳಿಗೆ 6 ತಿಂಗಳ ನಂತರ ಕಂದು ರೋಗದ ವಿರುದ್ಧ ಲಸಿಕೆಯನ್ನು ಹಾಕಿಸಬೇಕು. ಒಂದು ವರ್ಷದ ನಂತರ ತಜ್ಞ ಪಶು ವೈದ್ಯರ ಸಲಹೆ ಮೇರೆಗೆ ಜಂತುನಾಶಕ ಔಷಧಿಯನ್ನು ಮತ್ತು ಲಸಿಕೆಗಳನ್ನು ಹಾಕಿಸಬೇಕು. ಹೊರ ಪರೋಪ ಜೀವಿಗಳಾದ ಹೇನು, ಉಣ್ಣೆ, ಕಡಿಯುವ ನೊಣಗಳನ್ನು ನಿಯಂತ್ರಿಸಬೇಕು. ಇವುಗಳಿಂದ ರಕ್ತಹೀನತೆ, ಪೀಡೆ, ಅಲರ್ಜಿಯಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಸರಿಯಾಗಿ ಪಾಲನೆ ಮತ್ತು ಪೋಷಣೆ ಮಾಡಿದರೆ ಹೆಣ್ಣು ಎಮ್ಮೆ ಕರುಗಳು 24 ರಿಂದ 30 ತಿಂಗಳಲ್ಲಿ ಮೊದಲ ಬಾರಿಗೆ ಬೇದೆಗೆ ಬರುತ್ತವೆ. ಮೊದಲ 2 ಬೇದೆಗಳನ್ನು ತಪ್ಪಿಸಿ 3 ಬೇದೆಗೆ ಕೃತಕ ಗರ್ಭಧಾರಣೆ ಮಾಡಿಸಬೇಕು. ಮೊದಲ ಬಾರಿಗೆ ಕೃತಕ ಗರ್ಭಧಾರಣೆ ಮಾಡಿಸುವಾಗ ದೇಹದ ತೂಕ 350 ಕೀಲೊ ಗ್ರಾಂ ಗಿಂತಲೂ ಹೆಚ್ಚಾಗಿರಬೇಕು.

ಇದನ್ನೂ ಓದಿ: ಬೆಳೆಸಾಲದ ಪ್ರಮಾಣ ಶೇ.10ರಷ್ಟು ಹೆಚ್ಚಳ : ರೈತರು ತಿಳಿದುಕೊಳ್ಳಬೇಕಾದ ಬೆಳೆಸಾಲದ ನಿಯಮಗಳೇನು?

18 ತಿಂಗಳು ತುಂಬಿದ ನಂತರ ಮೊಳಕೆ ಕಾಳು, ಕರೀಬೇವು, ಖನಿಜ ಮಿಶ್ರಣ ಪುಡಿ ಮತ್ತು ಮಾತ್ರೆಗಳನ್ನು ತಜ್ಞ ಪಶು ವೈದ್ಯರ ಸಲಹೆ ಮೇರೆಗೆ ನೀಡಬೇಕು. ಮೊದಲ ಬಾರಿಗೆ ಕೃತಕ ಗರ್ಭಧಾರಣೆ ಫಲಕಾರಿಯಾಗದಿದ್ದರೆ 21 ದಿನಗಳ ನಂತರ ಮತ್ತೆ ಎಮ್ಮೆ ಪಡ್ಡೆ ಬೇದೆಗೆ ಬರುತ್ತದೆ. ನಂತರ ಕೃತಕ ಗರ್ಭಧಾರಣೆ ಮಾಡಿಸಬೇಕು.

ಹೆಣ್ಣು ಎಮ್ಮೆ ಕರುಗಳು 30 ತಿಂಗಳ ನಂತರ ಬೇದೆಗೆ ಬಾರದಿದ್ದರೆ ತಜ್ಞ ಪಶು ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಜಂತುನಾಶಕ ಔಷಧಿಯನ್ನು ಕುಡಿಸಬೇಕು. ನಂತರ ಮೊಳಕೆ ಕಾಳು, ಕರೀಬೇವು ಮತ್ತು ಖನಿಜ ಮಿಶ್ರಣ ಪುಡಿಯನ್ನು ತಿನ್ನಿಸಬೇಕು. ರಕ್ತಹೀನತೆ ಹಾಗೂ ಕುಂಠಿತ ಬೆಳವಣಿಗೆ ಇದ್ದರೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಎಮ್ಮೆಯ ಗಂಡು ಕರುಗಳಿಗೆ ಇತ್ತೀಚಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಎಮ್ಮೆ ಕರುಗಳು ಪಾಲನೆ ಮಾಡಿ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

| ಡಾ. ತೃಪ್ತಿ ಸೂರ್ಯಕಾಂತ ಕಟ್ಟಿಮನಿ, ಪಶುವೈದ್ಯರು

========================

ಇವುಗಳನ್ನೂ ಓದಿ:

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!