ಸಾಲ ಯೋಜನೆಹಣಕಾಸು

ಬ್ಯಾಂಕುಗಳಿ೦ದ ಕಡಿಮೆ ಬಡ್ಡಿ ಸಾಲ ಬೇಕೆ? ಇಲ್ಲಿದೆ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ How to Check CIBIL Score?

WhatsApp Group Join Now
Telegram Group Join Now

ಬ್ಯಾಂಕು ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಕಡಿಮೆ ಬಡ್ಡಿಯ ಸುಲಭ ಸಾಲ ಪಡೆಯಲು ಬೇಕಾಗುವ ಅರ್ಹತೆಗಳೇನು? ಲೋನ್ ಪಡೆಯಲು ಬೇಕಾಗುವ ಅರ್ಹತೆ ಪರೀಕ್ಷಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

How to get a loan? What is Cibil Score?

ಯಾವುದೇ ಬ್ಯಾಂಕಿನಲ್ಲಿ ಅಥವಾ ಫೈನಾನ್ಸ್ ಕಂಪನಿಯಲ್ಲಿ ಲೋನ್ ತೆಗೆದುಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಸಿಬಿಲ್ ಸ್ಕೋರ್. ಸಿಬಿಲ್ ಸ್ಕೋರ್ ಎಂಬುವುದು 300 ರಿಂದ 900ರ ನಡುವಣ ಒಂದು ಸಂಖ್ಯೆಯಾಗಿದ್ದು; ಬ್ಯಾಂಕುಗಳಿ೦ದ ಲೋನ್ ಪಡೆಯಲು ಪಾರದರ್ಶಕವಾದ ಪ್ರಮುಖ ಮಾಹಿತಿಯನ್ನು ಇದು ಒದಗಿಸುತ್ತದೆ.

ಕ್ರೆಡಿಟ್ ಇನ್ಫಾರ್ಮಶನ್ ಬ್ಯುರೋ ಇಂಡಿಯಾ ಲಿಮಿಟೆಡ್ ಎಂಬುವುದು ‘ಸಿಬಿಲ್’ನ ಪೂರ್ಣಾರ್ಥ. (Credit Information Bureau India Limited – CIBIL) ಇಸ್ವಿ 2000ರಲ್ಲಿ ಸ್ಥಾಪನೆಯಾ ಈ ಸಂಸ್ಥೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಎಲ್ಲಾ ಕ್ರೆಡಿಟ್ ಸಂಬ೦ಧಿತ ಚಟುವಟಿಕೆಗಳ ದಾಖಲೆಗಳ ನಿರ್ವಹಣೆಯಲ್ಲಿ ತೊಡಗಿದೆ.

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

ಭಾರತದ ಕ್ರೆಡಿಟ್ ಬ್ಯುರೋ ಆದ ಸಿಬಿಲ್ ಸಂಸ್ಥೆಯನ್ನು ಹೊರತುಪಡಿಸಿ ಇನ್ನು ಹಲವಾರು ಕ್ರೆಡಿಟ್ ಮಾಹಿತಿಯನ್ನು ಸಂಗ್ರಹಿಸುವ, ಒದಗಿಸುವ ಮತ್ತು ನಿರ್ವಹಣೆ ಮಾಡುವ ಅನೇಕ ಸಂಸ್ಥೆಗಳಿವೆ. ಅವುಗಳಲ್ಲಿ ಎಕ್ಸ್ ಫೆರಿಯನ್ (Experian), ಇಕ್ವಿಫ್ಯಾಕ್ಸ್ (Equifax) ಹಾಗೂ ಸಿಆರ್‌ಐಎಫ್ (CRIF) ಮುಖ್ಯ ಬ್ಯುರೋಗಳಾಗಿವೆ.

Uses of Cibil Score

ಸಿಬಿಲ್ ಸ್ಕೋರ್ ಎಂಬುವುದು ಒಬ್ಬ ವ್ಯಕ್ತಿಯ ವೈಯಕ್ತಿಕ ಸಾಲದ ಇತಿಹಾಸ, ಮರುಪಾವತಿಯ ನಡುವಳಿಕೆಯ ಮಾಹಿತಿಯನ್ನು ಪಾರದರ್ಶಕವಾಗಿ ತಿಳಿಸಿ ಕೊಡುತ್ತದೆ. ಸಿಬಿಲ್ ಸ್ಕೋರ್ ಆಧಾರದ ಮೇಲೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಸಾಲವನ್ನು ತೆಗೆದುಕೊಳ್ಳಲು ಅರ್ಹನೋ ಅಥವಾ ಅನರ್ಹನೋ ಎಂಬ ಮಾಹಿತಿ ತಿಳಿಸುತ್ತದೆ.

ಯಾವುದೇ ಒಂದು ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಸಿಬಿಲ್ ಸ್ಕೋರ್ (CIBIL SCORE) ಅಥವಾ ಕ್ರೆಡಿಟ್ ಸ್ಕೋರ್ (CREDIT SCORE). ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕುಗಳ ನಿಮ್ಮ ಸಾಲದ ಅರ್ಜಿಯನ್ನು ಸಂಪೂರ್ಣವಾಗಿ ನಿರಾಕರಿಸುತ್ತವೆ ಅಥವಾ ಇತರೆ ಹೆಚ್ಚಿನ ಮೇಲಾಧಾರವನ್ನು ಕೇಳುತ್ತವೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ಕಡಿಮೆ ಬಡ್ಡಿ ಲೋನ್ ಪಡೆಯಲು ಅತ್ಯುತ್ತಮ ಸಿಬಿಲ್ ಸ್ಕೋರ್ ಅಗತ್ಯ

ನಿಮ್ಮ ಸಿಬಿಲ್ ಸ್ಕೋರ್ 750 ಮತ್ತು 900ರ ನಡುವೆ ಇದ್ದರೆ, ನೀವು ‘ಅತ್ಯುತ್ತಮವಾದ ಕ್ರೆಡಿಟ್ ಸ್ಕೋರ್’ ಹೊಂದಿದ್ದೀರಿ ಎಂದರ್ಥ. ಈ ಸ್ಕೋರ್ ಅನ್ನು ನೀವು ಹೊಂದಿದ್ದರೆ, ಯಾವುದೇ ಬ್ಯಾಂಕಿನಲ್ಲಿ ನಿಮಗೆ ಲೋನ್ ಬಹಳ ಸುಲಭವಾಗಿ ಸಿಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 650 ರಿಂದ 750ರ ವರೆಗೆ ಇದ್ದರೆ ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿದ್ದಿರಿ ಅಂದರ್ಥ.

550 ರಿಂದ 650ರ ಸ್ಕೋರ್ ನೀವು ಹೊಂದಿದ್ದರೆ, ಸರಾಸರಿ ಇದೆ ಎಂಬರ್ಥ. ಒಂದು ವೇಳೆ ನಿಮ್ಮ ಸ್ಕೋರ್ 300 ರಿಂದ 500ರ ವರೆಗೆ ಇದ್ದರೆ ಕಳಪೆ ಸ್ಕೋರ್ ಹೊಂದಿದ್ದೀರಿ ಎಂದರ್ಥ. ಈ ಅಂತರದಲ್ಲಿ ನಿಮ್ಮ ಸ್ಕೋರ್ ಇದ್ದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯುವುದು ಕಷ್ಟ ಕಷ್ಟ!

ಇದನ್ನೂ ಓದಿ: Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣ ಮತ್ತು ಪರಿಹಾರ

ಕಾರಣ 1 : ನಿಮ್ಮ ಹಳೆಯ ಸಾಲದ ಮರುಪಾವತಿ ಮೊತ್ತವನ್ನು ಅಥವಾ EMI ಮೊತ್ತವನ್ನು ಕಾಲ ಕಾಲಕ್ಕೆ ಸರಿಯಾಗಿ ಪಾವತಿ ಮಾಡದಿರುವುದೇ ಸಿಬಿಲ್ ಸ್ಕೋರ್ ಕಡಿಮೆಯಾಗಲು ಮುಖ್ಯ ಕಾರಣವಾಗುತ್ತದೆ.

ಪರಿಹಾರ : ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿಟ್ಟುಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ನಿಮ್ಮ ಎಲ್ಲಾ EMIಗಳನ್ನು ಮತ್ತು ಕ್ರೆಡಿಟ್ ಕಾರ್ಡ್ ಬಿಲ್’ಗಳನ್ನು ಸರಿಯಾದ ಸಮಯಕ್ಕೆ ಅಥವಾ ನಿಗದಿತ ದಿನಾಂಕದ ಒಳಗಾಗಿಯೇ ಮರುಪಾವತಿ ಮಾಡಿ. ಸಾಧ್ಯವಾದರೆ ಒಮ್ಮೆಲೆ ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡಿದರೆ ಇನ್ನೂ ಒಳ್ಳೆಯದು.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ಕಾರಣ 2 : ನೀವು ವಿವಿಧ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವುಗಳ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡದೇ ಇದ್ದರೂ ಕೂಡ ಸಿಬಿಲ್ ಸ್ಕೋರ್ ಕಳಪೆ ಪಟ್ಟಿಗೆ ಇಳಿಯುತ್ತದೆ.

ಪರಿಹಾರ : ಒಂದು ವೇಳೆ ನಿಮ್ಮ ಬಳಿ ಒಂದಕ್ಕಿ೦ತ ಹೆಚ್ಚು ಕ್ರೆಡಿಟ್ ಕಾರ್ಡ್’ಗಳಿದ್ದರೆ, ಉಪಯೋಗಿಸದೇ ಇರುವ ಕ್ರೆಡಿಟ್ ಕಾರ್ಡು’ಗಳನ್ನು ರದ್ದುಗೊಳಿಸಿ ಮತ್ತು ಸಕ್ರಿಯವಾಗಿ ಬಳಸುವ ಒಂದು ಕಾರ್ಡನ್ನು ಮಾತ್ರ ಸರಿಯಾಗಿ ನಿರ್ವಹಿಸಿ.

ಇದನ್ನೂ ಓದಿ: Home Loan : ಮನೆಯ ಮೇಲೆ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ

ಸಿಬಿಲ್ ಸ್ಕೋರ್ ಚೆಕ್ ಮಾಡಿಯೇ ಸಾಲಕ್ಕೆ ಅರ್ಜಿ ಹಾಕಿ

ಹೌದು, ಯಾವುದೇ ಒಂದು ಸಾಲಕ್ಕೆ ಅಥವಾ ಲೋನ್’ಗೆ ಅರ್ಜಿ ಸಲ್ಲಿಸುವಾಗ, ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದು ಬಹಳ ಉತ್ತಮ.

ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಅಥವಾ ಕಳಪೆಯಾಗಿದ್ದರೆ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ಅರ್ಜಿಯನ್ನು ಸಾರಾಸಗಟು ನಿರಾಕರಿಸುತ್ತವೆ. ಈ ನಿರಾಕರಣೆ ಕೂಡ ನಿಮ್ಮ ಸಿಬಿಲ್ ಸ್ಕೋರ್‌ನ ಮೇಲೆ ಪರಿಣಾಮ ಬಿರುತ್ತದೆ.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ಭಾರತದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಿಬಿಲ್ ಸ್ಕೋರನ್ನು ಸಾರ್ವಜನಿಕರಿಗೆ ಉಚಿತವಾಗಿ ಪರಿಶೀಲಿಸಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿದೆ. ನಿಮ್ಮ ಮೊಬೈಲ್’ನಲ್ಲಿ ಅತಿ ಸುಲಭವಾಗಿ ಕೆಲವೇ ನಿಮಿಷದಲ್ಲಿ ಪರಿಶೀಲಿಸಿಕೊಳ್ಳಲು ಕೆಳಗಿನ ಕ್ರಮಗಳನ್ನು ಅನುಸರಿಸಿ.

ಸಿಬಿಲ್ ಸ್ಕೋರ್ ಅನ್ನು ಉಚಿತವಾಗಿ ಚೆಕ್ ಮಾಡಲು ಮೊದಲು  👉 ಇಲ್ಲಿ ಕ್ಲಿಕ್ ಮಾಡಿ 

ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಲಿಂಗ, ಜನ್ಮ ದಿನಾಂಕ ಸೇರಿದಂತೆ ನಿಮ್ಮ ಪ್ಯಾನ್ ಕಾರ್ಡ್ ನಂಬರ್, ನಿಮ್ಮ ಖಾಯಂ ವಿಳಾಸ ವಿವರಗಳನ್ನು ನಮೂದಿಸಿ. ಈ ಎಲ್ಲಾ ನಿಖರ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನಿಮ್ಮ ಮೊಬೈಲ್ ನಂಬರಿಗೆ OTP ಬರುತ್ತದೆ. OTPಯನ್ನು ನಮೂದಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್’ನ ಹಾಗೂ ನಿಮ್ಮ ಪ್ರಸ್ತುತ ಸಾಲದ ವಿವರಗಳು ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಒಳಗೊಂಡ PDF ಕಾಣಿಸುತ್ತದೆ.

ಈ PDF ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ PDF ಓಪನ್ ಮಾಡಲು ನಿಮ್ಮ ಮೊಬೈಲ್ ನಂಬರ್‌ಗೆ ಪಾಸ್ವರ್ಡ್ ಬರುತ್ತದೆ. ಆ ಪಾಸ್’ವರ್ಡ್ ಅನ್ನು ನಮೂದಿಸಿ ನಿಮ್ಮ ಪಿಡಿಎಫ್ ಅನ್ನು ಓಪನ್ ಮಾಡಿ ಸಂಪೂರ್ಣ ಮಾಹಿತಿ ಪರಿಶೀಲಿಸಿಕೊಳ್ಳಬಹುದು.

Cibil score check Direct link :
https://homeloans.sbi/getcibil

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!