ಉದ್ಯೋಗ

SSLC ಅಭ್ಯರ್ಥಿಗಳಿಂದ ಅಂಚೆ ಇಲಾಖೆ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : 63,200 ರೂಪಾಯಿ ಸಂಬಳ | India Post Driver recruitment 2023

WhatsApp Group Join Now
Telegram Group Join Now

SSLC ಪಾಸಾದ ಅಭ್ಯರ್ಥಿಗಳಿಂದ ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ (ಸಾಮಾನ್ಯ ದರ್ಜೆ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಬಳ, ವಯೋಮಿತಿ, ಅರ್ಜಿ ಫಾರಂ, ಅರ್ಜಿ ಸಲ್ಲಿಕೆ ವಿಧಾನ ಕುರಿತ ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರಿ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುವ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯು ಉದ್ಯೋಗವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಂದ ಸ್ಟಾಫ್ ಕಾರ್ ಡ್ರೈವರ್‌ (ಸಾಮಾನ್ಯ ದರ್ಜೆ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ಸಂಬAಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಲೇಖನದ ಕೊನೆಯಲ್ಲಿ ನೀಡಲಾದ ವಿಳಾಸಕ್ಕೆ ಕಳುಹಿಸುವ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಇದನ್ನೂ ಓದಿ:  ರೈತರಿಗೆ ಪೋಸ್ಟ್ ಆಫೀಸ್‌ನಲ್ಲೇ ಸಾಲ ಸೌಲಭ್ಯ: ಯಾವುದಕ್ಕೆಲ್ಲ ಸಿಗಲಿದೆ ಈ ಸಾಲ

ಸಂಬಳ: ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ ಒಟ್ಟು 58 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು; ಈ ಹುದ್ದೆಗೆ ಕನಿಷ್ಠ 19,900 ರೂಪಾಯಿತಿಂದ ಗರಿಷ್ಠ 63,200 ರೂಪಾಯಿ ಮಾಸಿಕ ಸಂಬಳವನ್ನು ನಿಗಧಿಪಡಿಸಲಾಗಿದೆ.

ವಯೋಮಿತಿ: ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷಗಳು ಮೀರಿರಬಾರದು. SC ಮತ್ತು ST ಅಭ್ಯರ್ಥಿಗಳಿಗೆ 05 ವರ್ಷ, OBC ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆ ಮತ್ತು ಮಾಜಿ ಸೈನಿಕರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ:  ಡಿಸಿಸಿ ಬ್ಯಾಂಕ್ ನೇರ ನೇಮಕಾತಿ | SSLC, ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಸಂಬಳ 23,500-67,000 ರೂಪಾಯಿ

ವಿದ್ಯಾರ್ಹತೆ: ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. ಚಾಲನಾ ಪರವಾನಗಿ ಹೊಂದಿರಬೇಕು. ಜೊತೆಗೆ ಚಾಲಕ ವೃತ್ತಿಯಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆಯ ದಿನಾಂಕ: ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ ಹುದ್ದೆಗಳಿಗೆ ಕಳೆದ ಫೆಬ್ರವರಿ 27, 2023ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಮಾರ್ಚ್ 31, 2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಅರ್ಜಿಯನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು?

ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದ್ದು; ಅರ್ಜಿ ನಮೂನೆಗಾಗಿ ಅಂಚೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಥವಾ ಕೆಳಗೆ ನೀಡಿರುವ ನೇರ ಲಿಂಕ್ ಮೂಲಕವೂ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅನಂತರ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿ, ಇತ್ತೀಚಿನ ಎರಡು ಛಾಯಾಚಿತ್ರಗಳನ್ನು ಲಗತ್ತಿಸಬೇಕು. ಅವುಗಳಲ್ಲಿ ಒಂದು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವಾಗಿರಬೇಕು.

ಬಳಿಕ ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಚಾಲನಾ ಪರವಾನಗಿ ಪತ್ರ, ಜಾತಿ ಪ್ರಮಾಣ ಪತ್ರ, ಮೂರು ವರ್ಷದ ಅನುಭವ ದಾಖಲೆ ಸೇರಿದಂತೆ ಇತ್ಯಾದಿ ಮುಖ್ಯವಾದ ದಾಖಲೆಗಳನ್ನು ಜೋಡಣೆ ಮಾಡಬೇಕು. ಅರ್ಜಿ ನಮೂನೆಯೊಂದಿಗೆ ಪೋಸ್ಟ್ ಆಫೀಸ್‌ನಲ್ಲಿ ಭಾರತೀಯ ಅಂಚೆ 100 ರೂಪಾಯಿ ಬೆಲೆಯ UCR ರಸೀದಿಯನ್ನು ತೆಗೆದುಕೊಂಡು ಅರ್ಜಿ ಶುಲ್ಕಕ್ಕೆ ಲಗತ್ತಿಸಬೇಕು. SC/ST/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ. ನಿಗದಿತ ನಮೂನೆಯಲ್ಲಿ ಸಕ್ರಮ ಪ್ರಾಧಿಕಾರದಿಂದ ನೀಡಿದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ: The Senior Manager (JAG), Mail Motor Service, No. 37, Greams Road, Chennai- 600006

ಮೇಲ್ಕಾಣಿಸಿದ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ರಜಿಸ್ಟರ್ ಪೋಸ್ಟ್ ಮೂಲಕ ದಿನಾಂಕ 31-03-2023ರ ಮೊದಲು ಕಳುಹಿಸಬೇಕು.

ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಕಾರು ಚಾಲಕ ಹುದ್ದೆಗಳ ಅರ್ಜಿ ನಮೂನೆ ಹಾಗೂ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಅಂಚೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!