ಉದ್ಯೋಗ

India Post Recruitment 2023 : SSLC ಪಾಸಾದವರಿಂದ ಅಂಚೆ ಇಲಾಖೆ 12,828 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಮಾಸಿಕ ಸಂಬಳ: ₹12,000-₹29,380

WhatsApp Group Join Now
Telegram Group Join Now

SSLC ಪಾಸಾದ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ….

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12,828 ಪೋಸ್ಟ್​ ಆಫೀಸ್​ ಹುದ್ದೆಗಳು ಖಾಲಿ ಇದ್ದು; 10ನೇ ತರಗತಿ ಅಥವಾ SSLC ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಸದಾವಕಾಶ ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಮುಂದಿನ ತಿಂಗಳು ಜೂನ್ 11, 2023 ಕೊನೆಯ ದಿನವಾಗಿದೆ.

Pre-Monsoon Rains Damage: ಪೂರ್ವ ಮುಂಗಾರು ಮಳೆ ಹಾನಿ: ಪರಿಹಾರ ಘೋಷಿಸಿದ ಹೊಸ ಸರಕಾರ

ಹುದ್ದೆಗಳ ವಿವರ:

ಒಟ್ಟು 12,828 ಗ್ರಾಮೀಣ ಡಾಕ್​ ಸೇವಕ್ (ಉಆS- ಃPಒ/ಂBPಒ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು; ಕರ್ನಾಟಕದಲ್ಲಿ (ಞಚಿಡಿಟಿಚಿಣಚಿಞಚಿ ಠಿosಣಚಿಟ ಛಿiಡಿಛಿಟe ಡಿeಛಿಡಿuiಣmeಟಿಣ 2023) 48 ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ದೇಶದ ಇತರ ರಾಜ್ಯಗಳ ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ.

 1. ಆ೦ಧ್ರ ಪ್ರದೇಶ- 118
 2. ಅಸ್ಸಾಂ- 151
 3. ಬಿಹಾರ್- 76
 4. ಛತ್ತೀಸ್​ಗಢ- 342
 5. ಗುಜರಾತ್- 110
 6. ಹರಿಯಾಣ-8
 7. ಹಿಮಾಚಲ ಪ್ರದೇಶ- 37
 8. ಜಮ್ಮು ಮತ್ತು ಕಾಶ್ಮೀರ-89
 9. ಜಾರ್ಖಂಡ್- 1,125
 10. ಕರ್ನಾಟಕ- 48
 11. ಮಧ್ಯ ಪ್ರದೇಶ- 2992
 12. ಮಹಾರಾಷ್ಟ್ರ- 620
 13. ನಾರ್ತ್​ ಈಸ್ಟರ್ನ್​- 4,384
 14. ಒಡಿಶಾ- 948
 15. ಪಂಜಾಬ್- 13
 16. ರಾಜಸ್ಥಾನ- 1,408
 17. ತಮಿಳುನಾಡು- 18
 18. ತೆಲಂಗಾಣ-96
 19. ಉತ್ತರ ಪ್ರದೇಶ- 160
 20. ಉತ್ತರಾಖಂಡ- 40
 21. ಪಶ್ಚಿಮ ಬಂಗಾಳ- 45

ವಿದ್ಯಾರ್ಹತೆ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿAದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಮತ್ತು ರಾಜ್ಯದ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಜತೆಗೆ ಕಂಪ್ಯೂಟರ್ ಕಾರ್ಯನಿರ್ವಹಿಸಲು ತಿಳಿದಿರಬೇಕು. ಸೈಕಲ್ ಹೊಡೆಯಲು ಬರುತ್ತಿರಬೇಕು.

KSHD Recruitment 2023: ತೋಟಗಾರಿಕಾ ಇಲಾಖೆ ನೇಮಕಾತಿ | ಬರೋಬ್ಬರಿ 5,465 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ| ಸಂಬಳ 52,650-97,100 ರೂಪಾಯಿ…

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು ಇದೇ ಜೂನ್ 11, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

 • OBC ಅಭ್ಯರ್ಥಿಗಳು: 3 ವರ್ಷ
 • SC / ST ಅಭ್ಯರ್ಥಿಗಳು:  5 ವರ್ಷ
 • PWD (ಜನರಲ್) ಅಭ್ಯರ್ಥಿಗಳು: 10 ವರ್ಷ
 • PWD (OBC) ಅಭ್ಯರ್ಥಿಗಳು: 13 ವರ್ಷ
 • PWD (SC / ST) ಅಭ್ಯರ್ಥಿಗಳು: 15 ವರ್ಷ

ಅರ್ಜಿ ಶುಲ್ಕ:

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳು ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ನೇಮಕ ಹೇಗೆ?:

ಮೆರಿಟ್ ಲಿಸ್ಟ್​, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಯು 10ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದಲ್ಲಿ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗಲೇ ತಾವು ಪಡೆದ ಅಂಕಗಳ ಮಾಹಿತಿಯನ್ನು ಒದಗಿಸಬೇಕಿರುತ್ತದೆ. ನಿಯಮಾನುಸಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ ನೇಮಕಾತಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ನೇಮಕ ಮಾಡಲಾಗುತ್ತದೆ.

ವೇತನ:

 1. ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್​ ಮಾಸ್ಟರ್): ಮಾಸಿಕ ₹12,000 – ₹29,380
 2. ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್​ ಮಾಸ್ಟರ್​​):  ಮಾಸಿಕ ₹10,000 – ₹24,470

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
22-05-2023
ಅರ್ಜಿ ಸಲ್ಲಿಸಲು ಕೊನೆಯ ದಿನ:
11-06-2023

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ…

ಭಾರತೀಯ ಅಂಚೆ ಇಲಾಖೆಯ ಹುದ್ದೆಗಳ ಭರ್ತಿ ಕುರಿತ ಸಂಪೂರ್ಣ ಮಾಹಿತಿಯುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ…

ಸಹಾಯವಾಣಿ ಸಂಖ್ಯೆ: 080-22850002

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

ಪ್ರಮುಖ ಲಿಂಕ್‌ಗಳು

 

 

ಉದ್ಯೋಗ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ಸರಕಾರಿ ಯೋಜನೆಇಲ್ಲಿ ಕ್ಲಿಕ್ ಮಾಡಿ
ಕೃಷಿ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರುಪ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರುಪ್ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Related Posts

error: Content is protected !!