ಉದ್ಯೋಗ

SSLC-PUC ಆದವರಿಗೆ ಅಂಚೆ ಇಲಾಖೆಯಲ್ಲಿ ₹35,000 ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ | India Post Recruitment 2022

WhatsApp Group Join Now
Telegram Group Join Now

ಭಾರತೀಯ ಅಂಚೆ ಇಲಾಖೆ 2022ನೇ ಸಾಲಿನ ನೇಮಕಾತಿಗೆ ದೇಶಾದ್ಯಂತ ಎಲ್ಲ ವೃತ್ತದಲ್ಲಿ 98,083ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಭ್ಯರ್ಥಿಗಳಿಗೆ ವಯೋಮಿತಿ ಎಷ್ಟಿರಬೇಕು? ವೇತನಶ್ರೇಣಿ ಎಷ್ಟು? ಮುಂತಾದ ಮಾಹಿತಿ ಇಲ್ಲಿದೆ…

ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾಗಿ ಉದ್ಯೋಗಕ್ಕಾಗಿ ಹಂಬಲಿಸುವ ಉತ್ಸಾಹಿಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಭರ್ಜರಿ ಅವಕಾಶ ಕಲ್ಪಿಸಿದೆ. ಭಾರತೀಯ ಅಂಚೆ ಇಲಾಖೆ 2022ನೇ ಸಾಲಿನ ನೇಮಕಾತಿಯಲ್ಲಿ ಒಟ್ಟು 98,083ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: ಕಬ್ಬು ಬೆಳಗಾರರ ಸಮಸ್ಯೆಗೆ ಮೊಬೈಲ್ APP ಪರಿಹಾರ: ಕಬ್ಬಿನ FRP ದರ, ಕಟಾವು ಮಾಹಿತಿ ಮೊಬೈಲ್‌ನಲ್ಲೇ ತಿಳಿಯಲಿದೆ

ಈ ನೇಮಕಾತಿ ಪ್ರಕ್ರಿಯೆಯೂ ರಾಷ್ಟ್ರಾದ್ಯಂತ 23 ವೃತ್ತದ (ಸರ್ಕಲ್) ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಳಗೊಂಡಿದೆ. ಆದಷ್ಟು ಶೀಘ್ರವೇ ಅವುಗಳ ಭರ್ತಿ ಕಾರ್ಯ ನಡೆಯಲಿದೆ. ದೇಶಾದ್ಯಂತ ಪೋಸ್ಟ್ ಮನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ವಿವಿಧ ಖಾಲಿ ಹುದ್ದೆಗಳಿಗೆ ಅರ್ಹ ಆಸಕ್ತರು ಅರ್ಜಿ ಸಲ್ಲಿಬಹುದಾಗಿದೆ.

ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯೂ ಅಲ್ಲಿಯೇ ಲಭ್ಯವಾಗಲಿದೆ. ರಾಜ್ಯದಲ್ಲಿಯೇ 5,731  ಹುದ್ಡೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ 3,887  ಪೋಸ್ಟ್‌ಮನ್ ಹುದ್ದೆಗಳಾದರೆ, 90 ಮೈಲ್ ಗಾರ್ಡ್ ಹುದ್ದೆಗಳಾಗಿವೆ. 1,754 ಹುದ್ದೆಗಳು ಎಂಟಿಎಸ್ ಹುದ್ದೆಗಳಾಗಿವೆ.

ಇದನ್ನೂ ಓದಿ: ಸಣ್ಣ ವ್ಯಾಪಾರ ಹಾಗೂ ವಾಣಿಜ್ಯ ವಾಹನ ಖರೀದಿಗೆ ₹10 ಲಕ್ಷ ಸಾಲ ಸೌಲಭ್ಯ

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

1. ಪೋಸ್ಟಮನ್: ದೇಶಾದ್ಯಂತ ಒಟ್ಟು 59,099 ಪೋಸ್ಟಮನ್ ಹುದ್ದೆಗಳು ಖಾಲಿ ಇದ್ದು; ಈ ಪೈಕಿ ಕರ್ನಾಟಕ ವೃತ್ತದಲ್ಲಿ 3,887 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ/ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ 10 ಮತ್ತು 12ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು.

2. ಮೇಲ್‌ಗಾರ್ಡ್ ಹುದ್ದೆ: ದೇಶಾದ್ಯಂತ ಒಟ್ಟು 1,445 ಮೇಲ್ ಗಾರ್ಡ್ ಹುದ್ದೆಗಳು ಖಾಲಿ ಇದ್ದು; ಈ ಪೈಕಿ ಕರ್ನಾಟಕದಲ್ಲಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ/ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ 10 ಮತ್ತು 12ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯ ಹೊಂದಿರಬೇಕು.

3. ಮಲ್ಟಿ ಟಾಸ್ಕಿಂಗ್ (ಎಂಟಿಎಸ್) : ದೇಶಾದ್ಯಂತ ಒಟ್ಟು 37,539 ಮಲ್ಟಿ ಟಾಸ್ಕಿಂಗ್ (ಎಂಟಿಎಸ್) ಹುದ್ದೆಗಳು ಖಾಲಿ ಇದ್ದು; ಕರ್ನಾಟಕ ವೃತ್ತದಲ್ಲಿ ಬರೋಬ್ಬರಿ 1,754 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ/ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ 10/ 12ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯ ಹೊಂದಿರಬೇಕು.

ಇದನ್ನೂ ಓದಿ: SSC Recruitment 2022: SSLC ಪಾಸ್ ಆದವರಿಗೆ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ , 24,369 ಹುದ್ದೆಗಳು… 

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಟ ವಯೋಮಿತಿ 32 ವರ್ಷ ಎಂದು ನಿಗದಿಪಡಿಸಲಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನರಿಗೆ 10 ವರ್ಷ, ಇತರ ಹಿಂದುಳಿದ ವರ್ಗಗಳ ವಿಶೇಷ ಚೇತನರಿಗೆ 13 ವರ್ಷ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ವಿಶೇಷ ಚೇತನರಿಗೆ 15 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ವೇತನ: ಈ ಎಲ್ಲ ಹುದ್ದೆಗಳಿಗೆ ಮಾಸಿಕ 33,218 ರೂಪಾಯಿಗಳಿಂದ 35,370 ರೂಪಾಯಿಗಳ ವರಗೆ ವೇತನ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಭಾರತೀಯ ಅಂಚೆ ಇಲಾಖೆ ತಿಳಿಸಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್  ಮಾಡಿ

ಇದನ್ನೂ ಓದಿ: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ₹18,000- ₹81,000 ಸಾವಿರ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ… 

ಮತ್ತಷ್ಟು ಉದ್ಯೋಗ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!