ಉದ್ಯೋಗ

Indian Coast Guard Recruitment 2024 : ಪಿಯುಸಿ ಪಾಸಾದವರಿಂದ ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ | 260 ಹುದ್ದೆಗಳು

WhatsApp Group Join Now
Telegram Group Join Now

ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ (Indian Coast Guard-ICG) ಖಾಲಿ ಇರುವ ‘ನಾವಿಕ’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳ್ಳಬಹುದು…

Indian Coast Guard Navik Recruitment 2024 ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard-ICG)
 • ಖಾಲಿ ಹುದ್ದೆಗಳು : 260 ಹುದ್ದೆಗಳು
 • ಹುದ್ದೆಗಳ ಹೆಸರು : ನಾವಿಕ್ (ಜನರಲ್ ಡ್ಯೂಟಿ)
 • ವಿದ್ಯಾರ್ಹತೆ : 10+2
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಭಾರತದಾದ್ಯಂತ

ಇದನ್ನೂ ಓದಿ: Shivamogga Gram panchayat recruitment 2024: PUC ಮುಗಿಸಿದವರಿಗೆ ಗ್ರಾಮ ಪಂಚಾಯತಿ ಗ್ರಂಥಾಲಯ ಹುದ್ದೆಗಳು | ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ

ಏನಿದು ಭಾರತೀಯ ಕರಾವಳಿ ರಕ್ಷಣಾ ಪಡೆ?

1978ರಲ್ಲಿ ಸ್ಥಾಪಿಸಲ್ಪಟ್ಟ ಇಂಡಿಯನ್ ಕೋಸ್ಟ್ ಗಾರ್ಡ್ ಸಮುದ್ರ ರಕ್ಷಣಾ ಸೇನಾ ಪಡೆಯಾಗಿದೆ. ಭಾರತೀಯ ರಕ್ಷಣಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಇದು ಮೀನುಗಾರಿಕೆ, ಕಂದಾಯ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ರಾಜ್ಯ ಪೊಲೀಸ್ ಇಲಾಖೆಗಳ ಸಹಕಾರದಲ್ಲಿ ಕಡಲ ಸೇವೆ ಒದಗಿಸುತ್ತದೆ.

ಕಡಲ್ಗಳ್ಳತನ ತಡೆಯುವುದರ ಜೊತೆಗೆ ದ್ವೀಪಗಳು, ಮೀನುಗಾರರು ಮತ್ತು ನಾವಿಕರ ರಕ್ಷಣೆ ಮಾಡುತ್ತದೆ. ಸಮುದ್ರ ಪರಿಸರ ಸಂರಕ್ಷಣೆ ಹೊಣೆೆಯೂ ಕರಾವಳಿ ರಕ್ಷಣಾ ಪಡೆಯ ಮೇಲಿದೆ. ಇಲ್ಲಿ ಖಾಲಿ ಇರುವ 260 ನಾವಿಕ್ (ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: State Level Big Job Fair 2024 : ಸರಕಾರಿ ಉದ್ಯೋಗ ಮೇಳ ನೋಂದಣಿಗೆ ಅರ್ಜಿ | ಇಲ್ಲಿ ನೋಂದಣಿಯಾದರೆ ಉದ್ಯೋಗ ಖಚಿತ | ಎಲ್ಲಾ ರೀತಿ ವಿದ್ಯಾರ್ಹತೆಯವರಿಗೂ ಅವಕಾಶ

ವಿದ್ಯಾರ್ಹತೆ ಏನು?

10+2 ವಿದ್ಯಾರ್ಹತೆ ಹೊಂದಿರಬೇಕು. ಅಂದರೆ ಅಭ್ಯರ್ಥಿಗಳು ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಓದಿ ಪಾಸ್ ಮಾಡಿರಬೇಕು.

ವಯೋಮಿತಿ ವಿವರ

ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01-09-2002 ಮತ್ತು 31-08-2006ರ ನಡುವೆ ಜನಿಸಿರಬೇಕು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 22 ವರ್ಷ ವಯಸ್ಸು ಹೊಂದಿರಬೇಕು. ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

ಅರ್ಜಿ ಶುಲ್ಕವೆಷ್ಟು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇತರರಿಗೆ 300 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ನೆಟ್ ಬ್ಯಾಂಕಿ೦ಗ್, ಇತರೆ ಯುಪಿಐ ಪೇ ಮಾದರಿಯಲ್ಲಿ ಪಾವತಿ ಮಾಡಬಹುದು.

ವೇತನ ಶ್ರೇಣಿ

ನಾವಿಕ ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ಬೇಸಿಕ್ ಪೇ 21,700 ರೂಪಾಯಿ ಇರುತ್ತದೆ. ಜತೆಗೆ ಇತರೆ ಎಲ್ಲಾ ಭತ್ಯೆಗಳು ಅನ್ವಯವಾಗುತ್ತವೆ. ಮಾತ್ರವಲ್ಲ ಈ ಹುದ್ದೆಯಲ್ಲಿ ಅಭ್ಯರ್ಥಿಗಳ ಕಾಯದಕ್ಷತೆಯ ಆಧಾರದಲ್ಲಿ ಪ್ರಧಾನ ಅಧಿಕಾರಿ ವರೆಗೂ ಬಡ್ತಿ ನೀಡಲಾಗುತ್ತದೆ. ಪ್ರಮೋಷನ್’ಗೆ ಅನುಗುಣವಾಗಿ ವೇತನ ಕೂಡ ಏರಿಕೆಯಾಗುತ್ತ ಹೋಗುತ್ತದೆ.

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಆಯ್ಕೆ ವಿಧಾನ ಹೇಗೆ?

ಭಾರತೀಯ ಕರಾವಳಿ ರಕ್ಷಣಾ ಪಡೆಯ ನಾವಿಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಒಟ್ಟು ಮೂರು ಹಂತ ಪರೀಕ್ಷೆಗಳು ನಡೆಯುತ್ತವೆ.

 • 1ನೇ ಹಂತದ ಪರೀಕ್ಷೆ: ಏಪ್ರಿಲ್ 2024ರಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ.
 • 2ನೇ ಹಂತದ ಪರೀಕ್ಷೆ: ಮೇ 2024ರಂದು ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ ಪರೀಕ್ಷೆ ನಡೆಯಲಿದೆ.
 • 3ನೇ ಹಂತದ ಪರೀಕ್ಷೆ: ಅಕ್ಟೋಬರ್ 2024ರಂದು ಅಂತಿಮ ದಾಖಲಾತಿ ಪರಿಶೀಲನೆ, ಪೊಲೀಸ್ ತಪಾಸಣೆ ಇನ್ನಿತ ನೇಕಮಾತಿ ಪ್ರಕ್ರಿಯೆ ನಡೆಯುತ್ತದೆ.

ಐಎನ್‌ಎಸ್ ಚಿಲ್ಕಾದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು; ಆಯ್ಕೆಯಾದ ಅಭ್ಯರ್ಥಿಗಳಿಗೆ ಅಲ್ಲಿಯೇ ತರಬೇತಿ ಕೂಡ ನಡೆಯಲಿದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆಸಕ್ತ ಅಭ್ಯರ್ಥಿಗಳು ಭಾರತೀಯ ಕರಾವಳಿ ರಕ್ಷಣಾ ಪಡೆಯ ಜಾಲತಾಣಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ಫೆಬ್ರವರಿ 13ರಿಂದ ಅರ್ಜಿ ಸಲ್ಲಿಕೆಯ ಅಧಿಕೃತ ಲಿಂಕ್ ಓಪನ್ ಆಗಲಿದ್ದು; ನೋಂದಣಿ (Registration) ಮಾಡಿಕೊಳ್ಳುವ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ತಪ್ಪಿಲ್ಲದೆ, ವಿಷಯವಾರು ಅಂಕಗಳನ್ನು ಸರಿಯಾಗಿ ನಮೂದಿಸಿ, ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

 • ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 13-02-2024
 • ಅರ್ಜಿ ಸ್ವೀಕಾರ ಕೊನೆ ದಿನಾಂಕ: 27-02-2024

ಪ್ರಮುಖ ಲಿಂಕುಗಳು

ಅಧಿಸೂಚನೆ (Notification) : Download
ಅರ್ಜಿ ಸಲ್ಲಿಕೆ ಲಿಂಕ್: Click here
ಹೆಚ್ಚಿನ ಮಾಹಿತಿ : Click here

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

WhatsApp Group Join Now
Telegram Group Join Now

Related Posts

error: Content is protected !!