ಉದ್ಯೋಗ

SSLC, PUC, ITI ಅಭ್ಯರ್ಥಿಗಳಿಂದ ಭಾರತೀಯ ತೈಲ ನಿಗಮದಲ್ಲಿ 1,760 ಹುದ್ದೆಗಳಿಗೆ ಅರ್ಜಿ ಆಹ್ವಾನ | IOCL Recruitment 2022

WhatsApp Group Join Now
Telegram Group Join Now

ಭಾರತೀಯ ತೈಲ ನಿಗಮ ನಿಯಮಿತವು (Indian Oil Corporation Limited-IOCL) ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವೀಧರ ಅಭ್ಯರ್ಥಿಗಳಿಂದ ಖಾಲಿ ಇರುವ 1,760 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಯ ವಿವರ, ವಿದ್ಯಾರ್ಹತೆ, ವಯೋಮಿತಿ, ಆನ್‌ಲೈನ್ ಅರ್ಜಿ ಲಿಂಕ್, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ…

ಭಾರತೀಯ ತೈಲ ನಿಗಮ ನಿಯಮಿತವು (Indian Oil Corporation Limited) ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವೀಧರ ಅಭ್ಯರ್ಥಿಗಳಿಂದ ಟೆಕ್ನಿಷಿಯನ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1,760 ಹುದ್ದೆಗಳಿದ್ದು; ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವ ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಹಾಕಿ, ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಕೇಂದ್ರ ಸರಕಾರದ ನಿಯಮಾನುಸಾರ ವೇತನ ನಿಗಧಿಯಾಗಿದ್ದು; ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಜನವರಿ 3, 2023ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:

 1. ಟೆಕ್ನಿಷಿಯನ್ ಅಪ್ರೆಂಟಿಸ್: 775 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಡಿಪ್ಲೋಮಾ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಈ ಹುದ್ದಗಳಿಗೆ ಅರ್ಜಿ ಸಲ್ಲಿಸಬಹುದು.
 2. ಟ್ರೇಡ್ ಅಪ್ರೆಂಟಿಸ್: 437 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; 10ನೇ ತರಗತಿ, ITI ವಿದ್ಯಾರ್ಹತೆಯುಳ್ಳವರು ಈ ಹುದ್ದೆಗೆ ಪ್ರಯತ್ನಿಸಬಹುದು.
 3. ಗ್ರಾಜುಯೇಟ್ ಅಪ್ರೆಂಟಿಸ್: 283 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು; ಬಿಕಾಂ, ಬಿಎಸ್ಸಿ, ಬಿಎ ಪದವಿಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
 4. ಟ್ರೇಡ್ ಅಪ್ರೆಂಟಿಸ್ (DEO ಫ್ರೆಶರ್): 56 ಹುದ್ದೆಗಳಿದ್ದು; ಈ ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 5. ಟ್ರೇಡ್ ಅಪ್ರೆಂಟಿಸ್ (DEO ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್): 18 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೂ ಕೂಡ ಪಿಯುಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 6. ಟ್ರೇಡ್ ಅಪ್ರೆಂಟಿಸ್ (RSA ಫ್ರೆಶರ್): 74 ಹುದ್ದೆಗಳು ಖಾಲಿ ಇದ್ದು; ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಯತ್ನಿಸಬಹುದು.
 7. ಟ್ರೇಡ್ ಅಪ್ರೆಂಟಿಸ್ (RSA- ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್):  51 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೂ ಕೂಡ ಪಿಯುಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 8. ಟ್ರೇಡ್ ಅಪ್ರೆಂಟಿಸ್ ಫಿಟ್ಟರ್- 50 ಖಾಲಿ ಹುದ್ದೆಗಳಿದ್ದು; 10ನೇ ತರಗತಿ ಹಾಗೂ ITI ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಂದ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಕೇಂದ್ರ ರೈಲ್ವೆಯಲ್ಲಿ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯವಾರು ಹುದ್ದೆಗಳ ಸಂಖ್ಯೆ

ಪಶ್ಚಿಮ ಬಂಗಾಳ- 161, ಬಿಹಾರ- 43, ಒಡಿಶಾ- 63, ಜಾರ್ಖಂಡ್- 27, ಅಸ್ಸಾಂ- 85, ಸಿಕ್ಕಿಂ- 6, ತಮಿಳುನಾಡು & ಪಾಂಡಿಚೇರಿ- 24, ಕರ್ನಾಟಕ- 43, ಕೇರಳ- 42, ಆಂಧ್ರ ಪ್ರದೇಶ- 53, ತೆಲಂಗಾಣ- 53, ದೆಹಲಿ- 136, ಹರಿಯಾಣ- 67, ಹಿಮಾಚಲ ಪ್ರದೇಶ- 13, ಜಮ್ಮು-ಕಾಶ್ಮೀರ- 16, ಪಂಜಾಬ್- 76, ಚಂಡೀಗಡ- 1, ರಾಜಸ್ಥಾನ- 80, ಉತ್ತರ ಪ್ರದೇಶ- 221, ಉತ್ತರಾಖಂಡ- 21, ಮಹಾರಾಷ್ಟ್ರ- 256, ಗುಜರಾತ್- 74, ಮಧ್ಯಪ್ರದೇಶ- 77, ಗೋವಾ- 8, ಛತ್ತೀಸ್‌ಗಢ- 36, ದಾದ್ರ ನಗರ & ಹವೇಲಿ- 4, ದಮನ್ ಮತ್ತು ದಿಯು- 8, ಎಲ್ಲಾ ರಾಜ್ಯಗಳು- 50

ವಯೋಮಿತಿ: ಭಾರತೀಯ ತೈಲ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 31, 2011ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.

ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್: ರೈತರಿಂದ ಅರ್ಜಿ ಆಹ್ವಾನ

ವಯೋಮಿತಿ ಸಡಿಲಿಕೆ:

 • ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
 • SC/ST ಅಭ್ಯರ್ಥಿಗಳು- 5 ವರ್ಷ
 • PWD (ಜನರಲ್) ಅಭ್ಯರ್ಥಿಗಳು- 10 ವರ್ಷ
 • PWD (OBC/NCL) ಅಭ್ಯರ್ಥಿಗಳು- 13 ವರ್ಷ
 • PWD(SC/SಖT) ಅಭ್ಯರ್ಥಿಗಳು-15 ವರ್ಷ

ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆಯ ದಿನಾಂಕ: ಇದೇ ಡಿಸೆಂಬರ್ 14, 2022ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಜನವರಿ 3, 2023 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದೆ.

ಭಾರತೀಯ ತೈಲ ನಿಗಮ ನಿಯಮಿತದ (IOCL) ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಭಾರತೀಯ ತೈಲ ನಿಗಮ ನಿಯಮಿತದ (IOCL) ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!