ಉದ್ಯೋಗ

₹21,000-₹69,000 ಸಂಬಳದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ITBP Recruitment Karnataka 2022

WhatsApp Group Join Now
Telegram Group Join Now

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಫೋರ್ಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ 2022ರ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ, ಐಟಿಐ, ಡಿಪ್ಲೋಮಾ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಹೇಗೆ? ವೇತನ, ವಯೋಮಿತಿ, ಹುದ್ದೆಗಳ ವಿವರ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶಸೇವೆ ಮತ್ತು ತ್ಯಾಗದಲ್ಲಿ ತನ್ನದೇ ಆದ ಹೆಗ್ಗುರುತು ಹೊಂದಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಫೋರ್ಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ 2022ರ ಅಧಿಸೂಚನೆ ಹೊರಡಿಸಿದೆ. ಇವು ಕೇಂದ್ರ ಸರ್ಕಾರದ ಉದ್ಯೋಗಗಳಾಗಿದ್ದು; ಒಟ್ಟು 287 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

1962ರಲ್ಲಿ ಪ್ರಾರಂಭಿಸಲಾದ ಸದರಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಫೋರ್ಸ್ ಕಳೆದ ಆರು ದಶಕಗಳ ಭವ್ಯವಾದ ಇತಿಹಾಸವನ್ನು ಫೋರ್ಸ್ ಹೊಂದಿದ್ದು; ಇಲ್ಲಿ ಸೇವೆ ಸಲ್ಲಿಸಲು 10ನೇ ತರಗತಿ, ಐಟಿಐ, ಡಿಪ್ಲೋಮಾ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಖಾಲಿ ಹುದ್ದೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೂಂಡು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರ:

  1. ಕಾನ್ಸ್‌ಟೇಬಲ್ ಕಾಬ್ಲರ್: 31 ಹುದ್ದೆಗಳು
  2. ಕಾನ್ಸ್‌ಟೇಬಲ್ ಟೈಲರ್: 18 ಹುದ್ದೆಗಳು
  3. ಕಾನ್ಸ್‌ಟೇಬಲ್ ಬಾರ್ಬರ್: 55 ಹುದ್ದೆಗಳು
  4. ಕಾನ್ಸ್‌ಟೇಬಲ್ ವಾಷರ್‌ಮನ್: 89 ಹುದ್ದೆಗಳು
  5. ಕಾನ್ಸ್‌ಟೇಬಲ್ ಸಫಾಯಿ ಕರ್ಮಾಚಾರಿ: 78 ಹುದ್ದೆಗಳು
  6. ಕಾನ್ಸ್‌ಟೇಬಲ್ ಗಾರ್ಡನರ್: 16 ಹುದ್ದೆಗಳು

ಶೈಕ್ಷಣಿಕ ಅರ್ಹತೆ :

ಕಾನ್ಸ್‌ಟೇಬಲ್ ಸಫಾಯಿ ಕರ್ಮಾಚಾರಿ, ವಾಷರ್‌ಮನ್, ಬಾರ್ಬರ್ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ೧೦ನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

ಕಾನ್ಸ್‌ಟೇಬಲ್ ಟೈಲರ್, ಗಾರ್ಡನರ್ ಮತ್ತು ಚಮ್ಮಾರ ಈ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ITI ಯಿಂದ ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ಉತ್ತೀರ್ಣರಾಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷಗಳು, ಗರಿಷ್ಠ 25 ವರ್ಷಗಳು

ವೇತನ: ರೂ. 21,700  ರಿಂದ 69,100/- ರೂಪಾಯಿಗಳು

ನೇಮಕಾತಿ ವಿಧಾನ ಹೇಗೆ?

ಆಯ್ಕೆ ಪ್ರಕ್ರಿಯೆಯಲ್ಲಿ ಶಾರೀರಿಕ ದಕ್ಷತೆ (ಪಿಎಸ್‌ಟಿ), ದೈಹಿಕ ಗುಣಮಟ್ಟದ ಪರೀಕ್ಷೆ, ಲಿಖಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ದಾಖಲೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆಗಳು ಇರುತ್ತವೆ.

ಅರ್ಜಿ ಶುಲ್ಕ: ಇತರೆ ಅಭ್ಯರ್ಥಿಗಳಿಗೆ ರೂ.100/-, SC/ ST/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ: 23-11-2022

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 22-12-2022 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಈ ಎಲ್ಲ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಫೋರ್ಸ್ ಬಗ್ಗೆ ಒಂದಷ್ಟು ಮಾಹಿತಿ

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ಫೋರ್ಸ್ ಅನ್ನು 24 ಅಕ್ಟೋಬರ್, 1962ರಂದು ಪ್ರಾರಂಭಿಸಲಾಯಿತು. ಕಳೆದ ಆರು ದಶಕಗಳ ಭವ್ಯವಾದ ಇತಿಹಾಸವನ್ನು ಫೋರ್ಸ್ ಹೊಂದಿದೆ.

ಪ್ರಸ್ತುತ ಐಟಿಬಿಪಿ ಲಡಾಖ್‌ನ ಕಾರಕೋರಂ ಪಾಸ್‌ನಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗಿನ 3,488 ಕಿ.ಮೀ ಉದ್ದದ ಭಾರತ-ಚೀನಾ ಗಡಿಯನ್ನು ಇದು ಕಾಪಾಡುತ್ತದೆ. ಇದರ ಹೊರತಾಗಿ, ಛತ್ತೀಸ್‌ಗಢ ರಾಜ್ಯದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧ ಅನೇಕ ಆಂತರಿಕ ಭದ್ರತಾ ಕರ್ತವ್ಯಗಳು ಮತ್ತು ಕಾರ್ಯಾಚರಣೆಗಳಲ್ಲಿ ಫೋರ್ಸ್ ಪ್ರಮುಖ ಪಾತ್ರ ವಹಿಸಿದೆ.

ಐಟಿಬಿಪಿ ರಾಷ್ಟ್ರದ ವಿಶೇಷವಾದ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ತೀವ್ರವಾದ ಯುದ್ಧತಂತ್ರದ ತರಬೇತಿಯ ಹೊರತಾಗಿ ಪರ್ವತಾರೋಹಣ ಮತ್ತು ಸ್ಕೀಯಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತನ್ನ ಸಿಬ್ಬಂದಿಗೆ ತರಬೇತಿ ನೀಡುತ್ತದೆ. ಇದರಿಂದಾಗಿ ಪಡೆಗಳ ವಿಶಿಷ್ಟ ಚಿತ್ರಣವನ್ನು ಸೃಷ್ಟಿಸುತ್ತದೆ.

ಐಟಿಬಿಪಿ ಹಿಮಾಲಯ ಪ್ರದೇಶದಲ್ಲಿನ ನೈಸರ್ಗಿಕ ವಿಪತ್ತುಗಳಿಗೆ ಪ್ರಥಮ ಪ್ರತಿಸ್ಪಂದಕರು ಎಂದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತದೆ. ವಿವಿಧ ವಿಪತ್ತುಗಳಿಂದ ಸಂಕಷ್ಟದಲ್ಲಿರುವ ಸಾವಿರಾರು ನಾಗರಿಕರಿಗೆ ನೆರವು ನೀಡಲು ಫೋರ್ಸ್ ವರ್ಷಗಳಿಂದ ನೂರಾರು ಹುಡುಕಾಟ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಪ್ರತಿಕ್ರಿಯಿಸಿದೆ.

ಮತ್ತಷ್ಟು ಉದ್ಯೋಗ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!