ಸಾಲ ಯೋಜನೆಹಣಕಾಸು

Low interest rate on personal loans : ಕಮ್ಮಿ ಬಡ್ಡಿಯಲ್ಲಿ ಪರ್ಸನಲ್ ಲೋನ್ ನೀಡುವ ಬ್ಯಾಂಕುಗಳು | ಟಾಪ್ ಫೈವ್ ಬ್ಯಾಂಕುಗಳ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Low interest rate on personal loans

ಕಡಿಮೆ ಬಡ್ಡಿ ದರದಲ್ಲಿ ಲಕ್ಷಾಂತರ ರೂಪಾಯಿ ವೈಯಕ್ತಿಕ ಸಾಲವನ್ನು (Personal loan) ನೀಡುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಹಠಾತ್ ಎದುರಾಗುವ ಆರ್ಥಿಕ ಸಮಸ್ಯೆಗಳಿಗೆ ವೈಯಕ್ತಿಕ ಸಾಲ (Personal loan) ಯೋಜನೆಗಳು ಬಹಳ ಸಹಾಯ ಮಾಡುತ್ತವೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಹಲವಾರು ರೀತಿಯ ವೈಯಕ್ತಿಕ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು; ಹೆಚ್ಚಿನ ದಾಖಲೆಗಳಿಲ್ಲದೇ ಲಕ್ಷಾಂತರ ರೂಪಾಯಿ ತನಕ ಸುಲಭ ಕಂತುಗಳ ಸಾಲ ಪಡೆಯಬಹುದು. ಈ ಹಿನ್ನಲೆಯಲ್ಲಿ ಪರ್ಸನಲ್ ಲೋನ್ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿದರದಲ್ಲಿ (interest rate) ಸಿಗುತ್ತದೆ ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ.

ಯಾವುದೇ ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ಸಾಲಗಳ ಮೇಲೆ ನಿಗದಿಪಡಿಸುವ ಬಡ್ಡಿ ದರವು ಅವರ ವೈಯಕ್ತಿಕ ಕ್ರೆಡಿಟ್ ಸ್ಕೋರ್ (Credit score) ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಅತಿ ಮುಖ್ಯವಾಗಿ ನಾವು ನಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳುವುದು ಅವಶ್ಯಕ. ಈ ಲೇಖನದಲ್ಲಿ ಯಾವ ಬ್ಯಾಂಕುಗಳು ಎಷ್ಟು ಬಡ್ಡಿ ದರದಲ್ಲಿ ವೈಯಕ್ತಿಕ ಸಾಲಗಳನ್ನು ನೀಡುತ್ತಿವೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

1. ಐಸಿಐಸಿಐ ಬ್ಯಾಂಕ್ (ICICI Bank)

ಐಸಿಐಸಿಐ ಬ್ಯಾಂಕ್ ಭಾರತದ ಟಾಪ್ 5 ಬ್ಯಾಂಕುಗಳಲ್ಲಿ ಒಂದಾದೆ. ಅಮೇರಿಕಾ, ಸಿಂಗಾಪುರ್, ಬಹ್ರೇನ್, ಹಾಂಗ್ ಕಾಂಗ್, ಕತಾರ್, ಓಮನ್, ದುಬೈ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಅರಬ್, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಪ್ರತಿನಿಧಿ ಕಚೇರಿಗಳು.

ಈ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು 5 ವರ್ಷಗಳ ಅವಧಿಗೆ ನೀಡುತ್ತದೆ. ವೈಯಕ್ತಿಕ ಸಾಲಕ್ಕೆ 10.75% ರಿಂದ 19%ರ ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ. ಈ ಬಡ್ಡಿ ದರವು ಮೊದಲೇ ತಿಳಿಸಿದ ಹಾಗೆ ಪ್ರತಿಯೊಬ್ಬರ ವೈಯಕ್ತಿಕ ಸಿಬಿಲ್ ಸ್ಕೋರ್ ಆಧಾರಿತವಾಗಿರುತ್ತದೆ. ಐಸಿಐಸಿಐ ಬ್ಯಾಂಕಿನಿ೦ದ ಪಡೆದ ವೈಯಕ್ತಿಕ ಸಾಲವನ್ನು ನೀವು ಮರುಪಾವತಿಸಲು ಹಲವಾರು ಆಯ್ಕೆಗಳಿವೆ.

1 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ನೀವು ತೆಗೆದುಕೊಂಡರೆ ಪ್ರತಿ ತಿಂಗಳ ನೀವು EMI ಮುಖಾಂತರ 2162 ರೂ. ಯಿಂದ 2594 ರೂ. ಮರುಪಾವತಿಯನ್ನು ಪಾವತಿಸಬೇಕಾಗುತ್ತದೆ. ICICI BANK ವೈಯಕ್ತಿಕ ಸಾಲವನ್ನು ನೀಡುವಾಗ ತನ್ನ ಗ್ರಾಹಕರಿಗೆ ಪ್ರಕ್ರಿಯೆ ಶುಲ್ಕವಾಗಿ (Processing fee) ಸಾಲದ 2.5% ಹಣವನ್ನು ವಿಧಿಸುತ್ತದೆ.

ಇದನ್ನೂ ಓದಿ: State Level Big Job Fair 2024 : ಸರಕಾರಿ ಉದ್ಯೋಗ ಮೇಳ ನೋಂದಣಿಗೆ ಅರ್ಜಿ | ಇಲ್ಲಿ ನೋಂದಣಿಯಾದರೆ ಉದ್ಯೋಗ ಖಚಿತ | ಎಲ್ಲಾ ರೀತಿ ವಿದ್ಯಾರ್ಹತೆಯವರಿಗೂ ಅವಕಾಶ

2. ಆಕ್ಸಿಸ್ ಬ್ಯಾಂಕ್ (Axis Bank)

ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ಖಾಸಗಿ ಬ್ಯಾಂಕುಗಳಲ್ಲಿ ಆಕ್ಸಿಸ್ ಬ್ಯಾಂಕ್ ಕೂಡ ಒಂದಾಗಿದ್ದು; ಈ ಬ್ಯಾಂಕ್ 1994ರಲ್ಲಿ ಪ್ರಾರಂಭವಾಗಿದ್ದು ಮುಂಬೈ ನಗರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.

ಈ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು 5 ವರ್ಷಗಳ ಅವಧಿಗೆ ವೈಯಕ್ತಿಕ ಸಾಲಕ್ಕೆ 10.49% ರಿಂದ 13.65% ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ. ಉದಾಹರಣೆಗೆ ಐದು ವರ್ಷದ ಅವಧಿಯ 1 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ನೀವು ತೆಗೆದುಕೊಂಡರೆ ಪ್ರತಿ ತಿಂಗಳು ನೀವು EMI ಮುಖಾಂತರ 2149 ರೂ. ಯಿಂದ 2309 ರೂ. ಮರುಪಾವತಿಯನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Post Office Gram suraksha yojane :1500 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂಪಾಯಿ ಪಡೆಯುವ ಪೋಸ್ಟಾಫೀಸ್ ಸ್ಕೀಮ್ | ಇದು ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಯೋಜನೆ

3. ಎಚ್’ಡಿಎಫ್’ಸಿ ಬ್ಯಾಂಕ್ (HDFC Bank)

ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಕಂಪನಿಯಾದ ಹೆಚ್’ಡಿಎಫ್’ಸಿ ಬ್ಯಾಂಕ್ ಬ್ಯಾಂಕಿ೦ಗ್ ಮತ್ತು ಹಣಕಾಸು ಸೇವೆಯನ್ನು ಒದಗಿಸುತ್ತದೆ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ 5 ವರ್ಷಗಳ ಅವಧಿಗೆ ವೈಯಕ್ತಿಕ ಸಾಲಕ್ಕೆ 10.35% ರಿಂದ 21% ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ.

ಉದಾಹರಣೆಗೆ ಐದು ವರ್ಷದ ಅವಧಿಯ 1 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ನೀವು ತೆಗೆದುಕೊಂಡರೆ ಪ್ರತಿ ತಿಂಗಳು ನೀವು EMI ಮುಖಾಂತರ 2142 ರೂ. ಯಿಂದ 2705 ರೂ. ವರೆಗಿನ ಮರುಪಾವತಿಯನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

4. ಬ್ಯಾಂಕ್ ಆಫ್ ಇಂಡಿಯಾ (Bank of India)

ಭಾರತದಲ್ಲಿ 5,100ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿರುವ೦ತಹ ಈ ಬ್ಯಾಂಕ್ ಬ್ಯಾಂಕಿ೦ಗ್ ಕ್ಷೇತ್ರದಲ್ಲಿ ಗ್ರಾಹಕರ ನಂಬಿಕೆ ಗಳಿಸಿದೆ. ನೀವು ಈ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆಯವುದಾದರೆ ಇದು ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು 5 ವರ್ಷಗಳ ಅವಧಿಗೆ ವೈಯಕ್ತಿಕ ಸಾಲಕ್ಕೆ 10.35% ರಿಂದ 14.85% ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ.

ಉದಾಹರಣೆಗೆ ಐದು ವರ್ಷದ ಅವಧಿಯ 1 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ನೀವು ತೆಗೆದುಕೊಂಡರೆ ಪ್ರತಿ ತಿಂಗಳು ನೀವು EMI ಮುಖಾಂತರ 2142 ರೂ. ಯಿಂದ 2371 ರೂ. ಮರುಪಾವತಿಯನ್ನು ಪಾವತಿಸಬೇಕಾಗುತ್ತದೆ. ವೈಯಕ್ತಿಕ ಸಾಲ ಪಡೆಯಲು ಇದು ನಿಮ್ಮ ಸಾಲದ ಮೊತ್ತದ 2% ನಷ್ಟು ಸಂಸ್ಕಾರಣ ಶುಲ್ಕವನ್ನು ವಿಧಿಸುತ್ತದೆ.

ಇದನ್ನೂ ಓದಿ: ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ ಗರಿಷ್ಠ ₹3 ಲಕ್ಷ ಸಾಲ | Pashu Kisan Credit Card Yojana (PKCC)

5. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India)

ಭಾರತದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದಾದ ಈ ಬ್ಯಾಂಕ್ 1919ರಲ್ಲಿ ಸ್ಥಾಪಿತವಾಗಿದೆ. ಇದರ ಮೊದಲ ಶಾಖೆಯನ್ನು ಮುಂಬಯಿಯಲ್ಲಿ ಮಹಾತ್ಮ ಗಾಂಧಿಯವರಿ೦ದ ಉದ್ಘಾಟಿಸಲ್ಪಟ್ಟ ಬ್ಯಾಂಕ್ ಎಂಬ ಹೆಗ್ಗಳಿಕೆ ಇದರದ್ದಾಗಿದೆ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು 5 ವರ್ಷಗಳ ಅವಧಿಗೆ ವೈಯಕ್ತಿಕ ಸಾಲಕ್ಕೆ 9.3% ರಿಂದ 13.4% ವರೆಗೆ ಬಡ್ಡಿ ದರವನ್ನು ವಿಧಿಸುತ್ತದೆ.

ಉದಾಹರಣೆಗೆ ಐದು ವರ್ಷದ ಅವಧಿಯ 1 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ನೀವು ತೆಗೆದುಕೊಂಡರೆ ಪ್ರತಿ ತಿಂಗಳು ನೀವು EMI ಮುಖಾಂತರ 2090 ರೂ. ಯಿಂದ 2296 ರೂ. ಮರುಪಾವತಿಯನ್ನು ಪಾವತಿಸಬೇಕಾಗುತ್ತದೆ. ಈ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ, ಸಾಲದ ಮೊತ್ತದ 0.5% ನಷ್ಟು ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

Low interest rate on personal loans

Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Posts

error: Content is protected !!