ಸುದ್ದಿಗಳು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ…

WhatsApp Group Join Now
Telegram Group Join Now

ಇಷ್ಟರಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿಲ್ಲಿ ನಮ್ಮ ಹೆಸರು ಇದೆಯಾ? ಅಥವಾ ತೆಗೆದು ಹಾಕಲಾಗಿದೆಯಾ? ಎಂಬ ಅನುಮಾನ ಅನೇಕರನ್ನು ಕಾಡತೊಡಗಿದೆ. ಹಾಗಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ…

ಇನ್ನೇನು ವಿಧಾನಸಭೆ ಚುನಾವಣೆ ಘೊಷಣೆಯಾಗಲಿದೆ. ರಾಜಕೀಯ ಪಕ್ಷಗಳು ಆಗಲೇ ಗದ್ದಲ ಶುರುವಿಟ್ಟುಕೊಂಡಿವೆ. ಮತದಾರರನ್ನು ಸೆಳೆಯಲು ನಾನಾ ತಂತ್ರ, ಆಮೀಷಗಳ ಬಲೆ ಹೆಣೆಯುತ್ತಿವೆ. ಇನ್ನೊಂದೆಡೆ ಮತದಾರರ ಪಟ್ಟಿಗೆ ಅಕ್ರಮ ಹೆಸರು ಸೇರಿಸುವ ಮತ್ತು ಅಸಲಿ ಮತದಾರರನ್ನೇ ಪಟ್ಟಿಯಿಂದ ತೆಗೆದು ಹಾಕುವ ಮನೆಹಾಳು ಕೆಲಸಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಈಚೆಗೆ ಬೆಂಗಳೂರಿನ ಚಿಲುಮೆ ಸಂಸ್ಥೆ ಮತದಾರರ ಪಟ್ಟಿ ಭಾನಗಡಿ ನಡೆಸಿ ತಗಲ್ಹಾಕಿಕೊಂಡಿದೆ. ಹಾಗಿದ್ದರೆ ನಮ್ಮ ಹೆಸರು ಮತದಾರರ ಪಟ್ಟಯಲ್ಲಿದೆಯಾ? ಇಲ್ಲವಾ? ಎಂಬ ಗೊಂದಲ ಎಲ್ಲರಲ್ಲೂ ಇದ್ದೇ ಇದೆ.

ಇದನ್ನೂ ಓದಿ:ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಈ ಎಲ್ಲ ಹಿನ್ನಲೆಯಲ್ಲಿ ನಿಜವಾದ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ನಮ್ಮ ಹೆಸರು ಮತದಾರರ ಪಟ್ಟಿಲ್ಲಿ ಇದೆಯಾ? ಅಥವಾ ತೆಗೆದು ಹಾಕಲಾಗಿದೆಯಾ? ಎಂಬ ಅನುಮಾನ ಅನೇಕರಲ್ಲಿ ತಲೆ ಎತ್ತಿಕೊಂಡಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದರೆ ನೀವು ಅತ್ಯಮೂಲ್ಯ ಹಕ್ಕಿನಿಂದ ವಂಚಿತರಾದಂತೆಯೇ. ಮತದಾರರ ಪಟ್ಟಿಯಲ್ಲಿ ಹೆಸರು ಇರದಿದ್ದರೆ ಯಾವುದೇ ಚುನಾವಣೆಯಲ್ಲೂ ನೀವು ವೋಟು ಹಾಕಲು ಸಾಧ್ಯವಿಲ್ಲ.

ನಿಮ್ಮಲ್ಲಿ ಭಾರತೀಯ ಚುನಾವಣಾ ಆಯೋಗ (ECI) ನೀಡಿದ ಮತದಾರರ ಗುರುತಿನ ಚೀಟಿ ಇದ್ದರೂ ಕೂಡ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ದರೆ ಮತ ಚಲಾಯಿಸಲು ಆಗುವುದಿಲ್ಲ. ಹಾಗಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ಇದನ್ನೂ ಓದಿ: ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಮೊದಲಿಗೆ ರಾಷ್ಟ್ರೀಯ ಮತದಾರರ ಸೇವಾ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ (https://electoralsearch.in/) ರಾಷ್ಟ್ರೀಯ ಮತದಾರರ ಸೇವಾ ವೆಬ್‌ಸೈಟ್‌ನ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಎರಡು ಆಯ್ಕೆಗಳನ್ನು ನೋಡುತ್ತೀರಿ, ಮೊದಲಿಗೆ ಕಾಣುವ Search by Details ಆಯ್ಕೆಯಲ್ಲಿ ಕೇಳಲಾದ ನಿಮ್ಮ ಹೆಸರು, ವಯಸ್ಸು, ಪತಿ ಅಥವಾ ತಂದೆಯ ಹೆಸರು, ಲಿಂಗ ಆಯ್ಕೆಗಳನ್ನು ಭರ್ತಿ ಮಾಡಬೇಕು. ಬಳಿಕ ಕೆಳಗೆ ರಾಜ್ಯ, ಜಿಲ್ಲೆ ಹಾಗೂ ಯಾವ ವಿಧಾನಸಭಾ ಕ್ಷೇತ್ರ ಎಂಬುವುದನ್ನು ಆಯ್ಕೆ ಮಾಡಿ Captcha code ನಮೂದಿಸಿ Search ಕ್ಲಿಕ್ ಮಾಡಿದರೆ ನಿಮ್ಮ ವಿವರ ಸಿಗುತ್ತದೆ. ಮತದಾರರ ನೋಂದಣಿ ವಿವರಗಳನ್ನು ಸಂಪೂರ್ಣವಾಗಿ ನೀವು ಅಲ್ಲಿ ಪರಿಶೀಲಿಸಬಹುದು.

ಎಸ್‌ಎಂಎಸ್ ಮೂಲಕವೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ

ಇದಕ್ಕಾಗಿ ನೀವು ಮೊಬೈಲ್ ಸಂದೇಶ ವಿಭಾಗದಲ್ಲಿ EPIC ಎಂದು ಟೈಪ್ ಮಾಡಬೇಕು. ನಂತರ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ. ಈ ಸಂದೇಶವನ್ನು 9211728082  ಅಥವಾ 1950 ಕಳುಹಿಸಿ. ನಿಮ್ಮ ಪೋಲಿಂಗ್ ಸ್ಟೇಷನ್ ಸಂಖ್ಯೆ ಮತ್ತು ಹೆಸರನ್ನು ನಿಮ್ಮ ಫೋನ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಿಮಗೆ No records found ಎಂಬ ಬರುತ್ತದೆ.

ಸರಕಾರಿ ಯೋಜನೆಗಳ ನಿಖರ ಮಾಹಿತಿಗಾಗಿ ಇಲ್ಲಿ ಕ್ಲಿಕ್  ಮಾಡಿ

ಇದನ್ನೂ ಓದಿ: 

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ *
WhatsApp Group Join Now
Telegram Group Join Now

Related Posts

error: Content is protected !!