ಉದ್ಯೋಗಸರಕಾರಿ ಯೋಜನೆ

Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

WhatsApp Group Join Now
Telegram Group Join Now

Janamitra recruitment 2024

ಜನಸಾಮಾನ್ಯರಿಗೆ ಸರ್ಕಾರದ ಯೋಜನೆ ಮತ್ತು ಸೇವೆಗಳ ಲಾಭವನ್ನು ಪಡೆಯಲು ಸಹಾಯವಾಗುವಂತೆ ಇನ್ನು ಮುಂದೆ ಮನೆ ಬಾಗಿಲಿಗೆ ‘ಜನಮಿತ್ರ’ರು ಬರಲಿದ್ದಾರೆ. ಈ ಮೂಲಕ ರಾಜ್ಯದ 25,000 ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…

ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಸರ್ಕಾರಿ ಸೇವೆಯನ್ನು ಸುಲಭವಾಗಿ ಒದಗಿಸಲು ‘ಜನಮಿತ್ರ’ರು ಇನ್ನು ಮುಂದೆ ಮನೆ ಬಾಗಿಲಿಗೇ ಬಂದು ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸಲಿದ್ದಾರೆ. ಇದರ ಮೂಲಕ ರಾಜ್ಯದ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲು ಸರ್ಕಾರ ಮುಂದಾಗಿದೆ.

ರಾಜ್ಯ ಸರಕಾರದ (Karnataka Govt) ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಯಾವುದೇ ಸೇವೆಯನ್ನು ಪಡೆಯಲು ಹಳ್ಳಿ ಜನರು ಶ್ರಮ, ಹಣ ಮತ್ತು ತಮ್ಮ ಕೆಲಸದ ಸಮಯವನ್ನು ಹಾಳು ಮಾಡಿಕೊಂಡು ಕಚೇರಿಗಳಿಗೆ ಅಲೆದಾಡುತ್ತಾರೆ. ಈ ಸಮಸ್ಯೆಯನ್ನು ತಪ್ಪಿಸಲು ಸರ್ಕಾರವು ಇ-ಆಡಳಿತ ಇಲಾಖೆಯ (Department of e-Governance) ಮೂಲಕ ಜನಮಿತ್ರರ (Janamitra) ನೇಮಕಾತಿಗೆ ಹೊಸ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: State Level Big Job Fair 2024 : ಸರಕಾರಿ ಉದ್ಯೋಗ ಮೇಳ ನೋಂದಣಿಗೆ ಅರ್ಜಿ | ಇಲ್ಲಿ ನೋಂದಣಿಯಾದರೆ ಉದ್ಯೋಗ ಖಚಿತ | ಎಲ್ಲಾ ರೀತಿ ವಿದ್ಯಾರ್ಹತೆಯವರಿಗೂ ಅವಕಾಶ

ಇದರಿಂದ ಸಾಮಾನ್ಯ ಜನರಿಗೆ ಆಗುವ ಲಾಭಗಳೇನು?

ಜನಮಿತ್ರರ ನೇಮಕಾತಿಯಿಂದ (Janamitra recruitment) ತಾಲೂಕು ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಮೂಲ ಆಗಿರುವ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ. ಜನಮಿತ್ರರ (Janamitra) ಮುಖಾಂತರ ಜನರು ಕರ್ನಾಟಕ ಸರ್ಕಾರದಿಂದ ಲಭ್ಯವಿರುವ 5 ಗ್ಯಾರಂಟಿ ಯೋಜನೆಗಳ ಸೇವೆಯನ್ನು ಕೂಡ ಪಡೆಯಬಹುದಾಗಿದೆ.

ಸೇವಾ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ

ಗ್ರಾಮೀಣ ಜನರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ರಸಗೊಬ್ಬರಕ್ಕೆ ಅರ್ಜಿ, ವಿವಿಧ ಲೈಸನ್ಸ್ಗಳ ನವೀಕರಣ ಮಾಡುವುದು, ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವುದು, ಟ್ರೇಡರ್ ಲೈಸನ್ಸ್ ಪಡೆಯಲು, ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಅರ್ಜಿ ಸಲ್ಲಿಸಲು, ಮೀನು ಸಾಕಾಣಿಕೆ ಅರ್ಜಿ ಸಲ್ಲಿಸಲು, ಅಂಕಪಟ್ಟಿ ಪಡೆಯಲು, ಪೊಲೀಸರಿಗೆ ದೂರು ಸಲ್ಲಿಸಲು, ಮರಣ ಪ್ರಮಾಣಪತ್ರ ಪಡೆಯಲು, ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಅರ್ಜಿ ಸಲ್ಲಿಸಲು ಸೇರಿದಂತೆ ಇನ್ನು ಹತ್ತು ಹಲವಾರು ಯೋಜನೆಗಳ ಸೇವೆ ಸೌಲಭ್ಯವನ್ನು ಜನಮಿತ್ರರ (Janamitra) ಮೂಲಕ ಪಡೆಯಬಹುದಾಗಿದೆ.

ಇದನ್ನೂ ಓದಿ: Pradhan Mantri Suryoday Yojana 2024 : ಇನ್ಮುಂದೆ ಮನೆಮನೆಗೂ ಸೋಲಾರ್ ವಿದ್ಯುತ್ | ಕೇಂದ್ರ ಸರಕಾರದ ಹೊಸ ಯೋಜನೆ

ಈ ಹೊಸ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಇ-ಆಡಳಿತ ಇಲಾಖೆಯು ತೆಗೆದುಕೊಂಡಿದ್ದು ಈಗಾಗಲೇ ಸಚಿವರ ಅನುಮೋದನೆಯನ್ನು ಕೂಡ ಪಡೆದುಕೊಂಡಿದೆ. ಆಂಧ್ರಪ್ರದೇಶ ಸರ್ಕಾರವು ಇದೇ ಮಾದರಿಯಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿ, ಸರ್ಕಾರದಿಂದ ಗೌರವ ಸಂಭಾವನೆ ನೀಡುವ ವ್ಯವಸ್ಥೆಯನ್ನು ಮಾಡಿದೆ.

ಕರ್ನಾಟಕ ಸರ್ಕಾರವು ಸದ್ಯಕ್ಕೆ ಖಾಸಗಿ ಸಹಭಾಗಿತ್ವದಲ್ಲಿ 80 ಇಲಾಖೆಗಳ 736 ಸೇವೆಗಳನ್ನು ನಾಗರಿಕ ಸೇವಾ ಕೇಂದ್ರಗಳ ಮೂಲಕ ನೀಡುಲಾಗುತ್ತಿದ್ದು; ಇದನ್ನು ಸದ್ಯದಲ್ಲಿಯೇ ಇನ್ನಷ್ಟು ವಿಸ್ತರಿಸಲಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 146 ಬೆಂಗಳೂರು ಒನ್ ಸೇವಾ ಕೇಂದ್ರಗಳಿದ್ದು, 551 ಕರ್ನಾಟಕ ಒನ್ ಮತ್ತು 6,778 ಗ್ರಾಮ ಒನ್ ಕೇಂದ್ರಗಳಿವೆ.

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

25,000 ಜನಮಿತ್ರರ ನೇಮಕಾತಿ

ರಾಜ್ಯದಲ್ಲಿರುವ ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ 2 ರಿಂದ 4 ಜನಮಿತ್ರರನ್ನು ನೇಮಿಕ ಮಾಡಲಾಗುತ್ತದೆ. ಇದರ ಅಂದಾಜಿನಿ೦ದ ಒಟ್ಟಾರೆ ಕರ್ನಾಟಕ ರಾಜ್ಯಾದ್ಯಂತ ಸುಮಾರು 25,000 ಜನಮಿತ್ರರು (Janamitra) ನೇಮಕಗೊಳ್ಳಲಿದ್ದಾರೆ.

ಜನಮಿತ್ರರಾಗಲು ಯಾರು ಅರ್ಹರು?

  • ಸಂಬ೦ಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.
  • ಕನಿಷ್ಠ SSLC ಶಿಕ್ಷಣ ಪಡೆದು ಪಾಸಾಗಿರಬೇಕು.
  • ಕಂಪ್ಯೂಟರ್ ಕೌಶಲ್ಯ ಹೊಂದಿರಬೇಕು.
  • ದ್ವಿಚಕ್ರ ವಾಹನದ ಚಾಲನಾ ಪರವಾನಗಿ (Driving Licence) ಹೊಂದಿರಬೇಕು.
  • ಯಾವುದೇ ಪೊಲೀಸ್ ಪ್ರಕರಣಗಳನ್ನು ಹೊಂದಿರಬಾರದು.

ಇದನ್ನೂ ಓದಿ:  Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು?

ಅರ್ಹರಿರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ಅರ್ಜಿಗಳನ್ನು ಆನ್‌ಲೈನ್ ಮುಲಕವೇ ಪರಿಶೀಲನೆ ಮಾಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಗೊಂಡ ವ್ಯಕ್ತಿಗಳಿಗೆ ಸರ್ಕಾರದಿಂದ ಆನ್‌ಲೈನ್ ಮುಖಾಂತರವೇ ತರಬೇತಿ ನೀಡಲಾಗುತ್ತದೆ. ಶೀಘ್ರದಲ್ಲಿಯೇ ಈ ನೇಮಕಾತಿಗೆ ಸರಕಾರ ಚಾಲನೆ ನೀಡಲಿದೆ ಎನ್ನಲಾಗುತ್ತಿದೆ.

ಪ್ರೋತ್ಸಾಹಧನ ಎಷ್ಟು ಸಿಗಲಿದೆ?

ಜನಮಿತ್ರರಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನಿಗದಿ ಪಡಿಸಲಾಗಿದೆ. ಅರ್ಜಿ ಸಲ್ಲಿಸುವುದನ್ನು ಹಾಗೂ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದರಿಂದ ಅರ್ಜಿ ಶುಲ್ಕವನ್ನು ಹೊರತುಪಡಿಸಿ 50 ರೂಪಾಯಿ ಹಾಗೂ ಪ್ರಮಾಣಪತ್ರ ವಿತರಣೆ ಮಾಡಲು ಶುಲ್ಕದ ಜೊತೆಗೆ 25 ರೂಪಾಯಿ ನಿಗದಿ ಮಾಡಲಾಗುತ್ತದೆ. ಜನ ಸಾಮಾನ್ಯರಿಂದ ಪಡೆದ ಶುಲ್ಕವು ಸರ್ಕಾರಕ್ಕೆ ಬಂದರೆ ಉಳಿದ ಮೊತ್ತವು ಜನಮಿತ್ರರಿಗೆ ಸಿಗಲಿದೆ. ಒಂದು ಹೊಸ ವ್ಯವಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಜನಮಿತ್ರರ ಸೇವೆ ಪಡೆಯುವುದು ಹೇಗೆ?

ಜನಮಿತ್ರರ (Janamitra) ಸೇವೆ ಬೇಕು ಎಂಬುವವರು ಮೊಬೈಲ್‌ಗೆ ಮಿಸ್ಟ್ ಕಾಲ್ ನೀಡಿದರೆ ಸಾಕು. ಜನಮಿತ್ರರು ನಿಮ್ಮ ಹೆಸರು ಹಾಗೂ ಪಿನ್‌ಕೋಡ್ ಪಡೆದು ನೋಂದಣಿ ಸಂಖ್ಯೆಯನ್ನು ಮೆಸೇಜ್ ಮೂಲಕ ನೀಡುತ್ತಾರೆ. ಜನಮಿತ್ರ ಆ್ಯಪ್ (Janamitra App) ಮೂಲಕ ಮಾಹಿತಿ ಸಿಕ್ಕ ಒಂದು ಗಂಟೆಯೊಳಗೆ ಮಿಸ್ ಕಾಲ್ ಕೊಟ್ಟ ನಾಗರಿಕರನ್ನು ಜನಮಿತ್ರರು ಭೇಟಿ ಮಾಡಿ ಅವಶ್ಯವಿರುವ ಸೇವೆಯನ್ನು ಒದಗಿಸುತ್ತಾನೆ. ನೋಂದಣಿ ಮಾಡಲು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ನಂತರದ ಅವಧಿಯನ್ನು ಮಾರನೇ ದಿನಕ್ಕೆ ಹಾಕಲಾಗುತ್ತದೆ.

Home Guards jobs : ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ

WhatsApp Group Join Now
Telegram Group Join Now

Related Posts

error: Content is protected !!