ಕೃಷಿ

ಕೇವಲ ಒಂದೇ ಒಂದು ಮಲ್ಲಿಗೆ ಬಳ್ಳಿಯಿಂದ ತಿಂಗಳಿಗೆ ಗಳಿಸಿ ₹1,800 ಆದಾಯ | Jasmine Cultivation

WhatsApp Group Join Now
Telegram Group Join Now

ರೈತರು ಸರಿಯಾಗಿ ಜಾಜಿ ಮಲ್ಲಿಗೆ ಕೃಷಿ ಕೈಗೊಂಡರೆ ಒಂದು ಎಕರೆ ಪ್ರದೇಶದಲ್ಲಿ ತಿಂಗಳಿಗೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸಬಹುದು. ಅದು ಕೇವಲ ಬೇಲಿ ಸಾಲಿನಲ್ಲಿ ಈ ಆದಾಯ ಗಳಿಸಬಹುದಾಗಿದ್ದು; ಈ ಬಗ್ಗೆ ಸ್ಪೂರ್ತಿದಾಯಕ ಮಾಹಿತಿ ಇಲ್ಲಿದೆ…

ಕೆಲವು ವರ್ಷದ ಹಿಂದೆ ವಿಭಿನ್ನ ಶೈಲಿಯ ರೈತರಾದ ಕೂಡ್ಲಿಗಿ ತಾಲೂಕು ಹುಲಿಕೆರೆಯ ವಿಶ್ವೇಶ್ವರ ಸಜ್ಜನ್‌ರವರ ನರ್ಸರಿಯಿಂದ ತಂದಾಗ ಈ ಜಾಜಿ ಮಲ್ಲಿಗೆ ಬಳ್ಳಿಯ ಉದ್ದ ಕೇವಲ ಕೇವಲ 10 ಸೆಂಟೀ ಮೀಟರ್. ಅದನ್ನು ನನ್ನ ಧರ್ಮಪತ್ನಿ ಮನೆಯ ಮುಂದಿನ ಕಾಂಪೌಡ್ ಒಳಗೆ ನೆಟ್ಟು ಬಚ್ಚಲು ನೀರು ಬಿಟ್ಟಿದ್ದಷ್ಟೇ. ಈಗ ಬೃಹದಾಕಾರವಾಗಿ ಬೆಳದಿದೆ; 25 ಅಡಿಗೂ ಮಿಗಿಲು.

ದಿನಕ್ಕೆ ಕಡಿಮೆ ಎಂದರೂ ಆರೇಳು ಮೊಳವಾಗುವಷ್ಟು ಹೂ ಬಿಟ್ಟೀತು. ಮೊಳಕ್ಕೆ ಕನಿಷ್ಟ 10 ರೂಪಾಯಿ ಬೆಲೆ ಕಟ್ಟಿದರೂ, ತಿಂಗಳಿಗೆ 1,800 ರೂಪಾಯಿಗಳು! ಮಾರುಕಟ್ಟೆಯಲ್ಲಿ ಬಲು ಬೇಡಿಕೆಯುಳ್ಳ ಈ ಹೂವಿನ ಬೆಲೆ ಮೊಳಕ್ಕೆ 30 ರೂಪಾಯಿಗಳಿಗಿಂತ ಕಡಿಮೆ ದೊರೆಯದು.

ಮನಸ್ಸು ಲೆಕ್ಕ ಹಾಕತೊಡಗಿತು. ಒಂದು ಎಕರೆ ಸುತ್ತಳತೆ (200 ಅಡಿ x 218 ಅಡಿಗಳು) = 836 ಅಡಿಗಳ ಸುತ್ತಳತೆಯಲ್ಲಿ 25 ಅಡಿಗಳ ಅಂತರದಲ್ಲಿ ಈ ಜಾಜಿ ಮಲ್ಲಿಗೆ ನೆಟ್ಟರೆ. ಅದೂ ಕೇವಲ ಬೇಲಿಯಲ್ಲಿ ಸುಮಾರು 33 ಬಳ್ಳಿಗಳನ್ನು ಬೆಳೆಸಬಹುದು.

ಬರುವ ಲಾಭದ ಬಗ್ಗೆ ಲೆಕ್ಕ ಹಾಕಿದರೆ ಗಾಭರಿಯಾದೀತು. ಬರೋಬ್ಬರಿ 60,000 ರೂಪಾಯಿಗಳು ತಿಂಗಳಿಗೆ! ಆಶ್ಚರ್ಯವಾಗುತ್ತದೆ, ಆದರೂ ಇದು ವಾಸ್ತವ. ಗೊಬ್ಬರವಿಲ್ಲ, ಔಷಧಿಯಿಲ್ಲ, ಶೂನ್ಯ ಬಂಡವಾಳ. ಈ ಕಲೆಗಾರಿಕೆಯನ್ನು ನಮ್ಮ ಅನ್ನದಾತರು ಕಲಿತರೆ ಬದುಕು ಎಷ್ಟು ಚಂದ ಅಲ್ಲವೇ..?!

ಡಾ. ಬಿ ಯಂ ನಾಗಭೂಷಣ, ಭೀಮಸಮುದ್ರ

——————————————————–

ಇವುಗಳನ್ನೂ ಓದಿ 👇

ಹಸುವಿನಿಂದ ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ವರ್ಗಾವಣೆ ಮಾಡಬಲ್ಲ ಏಕಮಾತ್ರ ಮಾಧ್ಯಮ ಗಿಣ್ಣದ ಹಾಲು. ಇಂತಹ ಗಿಣ್ಣದ ಹಾಲನ್ನು ಸದ್ಭಳಕೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಲಾಭ ಗಳಿಕೆ ಹೇಗೆ? ಕರುವಿನ ಬೆಳವಣಿಗೆಗೆ ಗಿಣ್ಣದ ಹಾಲಿನಂದಾಗುವ ಅನುಕೂಲಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸುವಂತೆ ಕೃಷಿ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಯಾವಾಗ ಬರಲಿದೆ? ಎಷ್ಟು ಬರಲಿದೆ? ದಾಖಲೆ ಪರಿಶೀಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಪಶು ಆಹಾರ ತಯಾರಿಕೆಗಾಗಿ ಕೆಎಂಎಫ್ ವಿವಿಧ ಜಿಲ್ಲೆಗಳಿಂದ ಬೆಂಬಲ ಬೆಲೆಯೊಂದಿಗೆ ಮೆಕ್ಕೆಜೋಳ ಖರೀದಿಸುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಈ ಅವಕಾಶವನ್ನು ಬಳಸಿಕೊಳ್ಳಿ. ಮೆಕ್ಕೆಜೋಳ ಖದೀರಿ ಎಲ್ಲೆಲ್ಲಿ ನಡೆಯಲಿದೆ? ಖರೀದಿ ಪ್ರಕ್ರಿಯೆ ಹೇಗೆ? ಎಷ್ಟು ಬೆಲೆ ಸಿಗಲಿದೆ? ರೈತರು ನೋಂದಣಿ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಶೀಘ್ರದಲ್ಲಿಯೇ ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅಧಿಕೃತ ಹಕ್ಕು ಪತ್ರಗಳನ್ನು ನೀಡಲು ಸರಕಾರ ಮುಂದಾಗಿದೆ. ಈ ಪಟ್ಟಿಯಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆ, ತಾಲ್ಲೂಕುಗಳು ಮೊದಲ ಸಾಲಿನಲ್ಲಿವೆ? ಈ ಜಿಲ್ಲೆಯ ದಾಖಲೆರಹಿತ ವಸತಿ ಹೊಂದಿರುವ ಜನ ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಕಳೆದ ಮೂರು ವರ್ಷಗಳಿಂದ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಗದೆ ಲಕ್ಷಾಂತರ ಜನ ಪರಿತಪಿಸುತ್ತಿದ್ದಾರೆ. ಹಾಗಾದರೆ ಇವರಿಗೆಲ್ಲ ಹೊಸ ರೇಷನ್ ಕಾರ್ಡ್ ಯಾವಾಗ ಸಿಗಲಿದೆ? ಈ ವಿಳಂಬಕ್ಕೆ ಕಾರಣವೇನು? ರೇಷನ್ ಕಾರ್ಡ್ ಸಿಗದೇ ಬಡ ಜನರಿಗೆ ಆಗುತ್ತಿರುವ ತೊಂದರೆಗಳೇನು? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಕೋಳಿ ಸಾಕಣೆ ರೈತರಿಗೆ ಏಕ ಕಾಲಕ್ಕೆ ಸರಕಾರ ಹಲವು ಶುಭ ಸುದ್ದಿಯನ್ನು ನೀಡಿದೆ. ಕೋಳಿ ಸಾಕಣೆಗೆ ಬಳಕೆಯಾಗುವ ಜಮೀನಿಗೆ ಭೂ ಪರಿವರ್ತನೆ ವಿನಾಯಿತಿ, ವಿಮಾ ಸೌಲಭ್ಯದ ಭರವಸೆ ಹಾಗೂ ಗ್ರಾಮೀಣ ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕೋಳಿ ಸಾಕಣೆ ರೈತರಿಗೆ ಸಿಗುವ ಸರಕಾರಿ ಸೌಲಭ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!