ಸರಕಾರಿ ಯೋಜನೆ

ಬಂತು ಭಾರೀ ಇಳುವರಿ ಕೊಡುವ, ಕೀಟ ನಿರೋಧಕ ಜೋಳದ ಹೊಸ ತಳಿ : ಭರ್ಜರಿ ಮೇವು-ಕಾಳು ಗ್ಯಾರಂಟಿ | High Yielding Javar

WhatsApp Group Join Now
Telegram Group Join Now

ರೈತ ಬಾಂಧವರೇ ಅಧಿಕ ಇಳುವರಿ ಕಾಳು ಹಾಗೂ ಮೇವು ನೀಡುವ ಹೊಸ ಜೋಳದ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಏನಿದರ ವಿಶೇಷತೆ? ಮೇವು-ಕಾಳಿನ ಇಳುವರಿ ಎಷ್ಟು? ಈ ತಳಿಯ ಜೋಳ ಎಲ್ಲಿ ಸಿಗುತ್ತದೆ? ಸಮಗ್ರ ಮಾಹಿತಿ ಇಲ್ಲಿದೆ…

ಕರ್ನಾಟಕದ ಆಹಾರ ಬೆಳೆಗಳಲ್ಲಿ ಜೋಳ ಅತೀ ಪ್ರಮುಖವಾದದ್ದು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿಯೇ ಪ್ರಧಾನ ಆಹಾರವಾಗಿರುವುದರಿಂದ ಜೋಳವನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಜೋಳ ಬೆಳೆಯುವ ರಾಜ್ಯ ಕರ್ನಾಟಕವೇ ಆಗಿದೆ. ದುರಂತವೆಂದರೆ ಈಚೆಗೆ ಉತ್ತರ ಕರ್ನಾಟಕ ಭಾಗದಲ್ಲೂ ಜೋಳದ ಉತ್ಪಾದನೆ ಕ್ಷೀಣಿಸುತ್ತಿದೆ. ಅದಕ್ಕೆ ಕಾರಣ ಹಲವಾರು.

ಈ ಕಾರ್ಡ್ ಇದ್ದರೆ ಸಿಗಲಿದೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ 3 ಲಕ್ಷ ಸಾಲ | ಈ ಕಾರ್ಡ್ ಪಡೆಯುವುದು ಹೇಗೆ?

ಜೋಳಕ್ಕೆ ತಗುಲುವ ರೋಗ, ಕೀಟಬಾಧೆ, ಹಳೇ ತಳಿಗಳ ನಾಶ, ಈಗಿರುವ ತಳಿಗಳಲ್ಲಿ ಇಳುವರಿ ಕುಂಠಿತ ಹಾಗೂ ರೈತರಲ್ಲಿ ಹೆಚ್ಚಾಗಿರುವ ವಾಣಿಜ್ಯ ಬೆಳೆಗಳ ಆಕರ್ಷಣೆ ಇತ್ಯಾದಿ ಕಾರಣಗಳಿಂದ ಜೋಳದ ಉತ್ಪಾದನೆ ದಿನೇ ದಿನೆ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಡೆಕ್ಕನ್ ಅಮೆರಿಕನ್, ಡಿಎಸ್‌ವಿ-2, ಲಿಎಸ್‌ವಿ-15, ಸಿಎಸ್‌ಎಚ್-14, ಸಿಎಸ್‌ಎಚ್-16, ಡಮ್ 35-1, ಮೂಗುತಿ, ಸಿಎಸ್‌ಎಚ್-53 ಸೇರಿದಂತೆ ಹಲವಾರು ತಳಿಗಳು ಚಾಲ್ತಿಯಲ್ಲಿದ್ದು; ಹೇಳಿಕೊಳ್ಳುವಷ್ಟು ಇಳುವರಿ ನೀಡುತ್ತಿಲ್ಲ ಎಂಬ ಕೊರಗು ರೈತರಲ್ಲಿದೆ.

ಈ ಹಿನ್ನಲೆಯಲ್ಲಿ ಹೆಚ್ಚು ಇಳುವರಿ ನೀಡುವ ಹಾಗೂ ರೋಗ ಕೀಟಬಾಧೆ ಕಮ್ಮಿ ಇರುವ ಜೋಳದ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈತರನ್ನು ಮತ್ತೆ ಜೋಳದತ್ತ ಎಳೆಯುವ ಪ್ರಯತ್ನ ನಡೆಯುತ್ತಿದೆ. ವಿಶೇಷವಾಗಿ ವಿಜಯಪುರದ ಹಿಟ್ಟಿನಹಳ್ಳಿ ಗ್ರಾಮದ ಬಳಿ ಇರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚಿನ ಇಳುವರಿ ನೀಡುವ ಜೋಳದ ಎರಡು ತಳಿಗಳನ್ನು ಅಭಿವೃದ್ಧಿಪಡಿಸಿದೆ. BGV-44 ಮತ್ತು CSV-29 ಎಂದು ಹೆಸರಿಸಲಾಗಿರುವ ಈ ಎರಡು ಜೋಳದ ಪ್ರಭೇದಗಳು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ

ಅಧಿಕ ಕಾಳು-ಮೇವು ಇಳುವರಿ

ಬಿಜಿವಿ-೪೪ ಮತ್ತು ಸಿಎಸ್‌ವಿ-೨೯ ಪ್ರಭೇದಗಳ ವಿಶೇಷತೆ ಎಂದರೆ ಈ ಹೊಸ ತಳಿಗಳು ಅಧಿಕ ಇಳುವರಿ ಧಾನ್ಯ ಹಾಗೂ ಮೇವು ನೀಡುತ್ತವೆ. ಕಪ್ಪು ಹತ್ತಿ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಸಾಮಾನ್ಯ ಸಸ್ಯಗಳಿಗೆ ಹೋಲಿಸಿದರೆ ಕನಿಷ್ಠ 25 ಪ್ರತಿಶತದಷ್ಟು ಹೆಚ್ಚು ಧಾನ್ಯವನ್ನು ನೀಡುತ್ತವೆ. ಹಿಂದಿನ ಎಂ-35-1  ತಳಿಗಿಂತ ಈ ತಳಿಗಳು ಉತ್ತಮವಾಗಿದ್ದು; ಈ ಎರಡೂ ಹೊಸ ತಳಿಯ ಜೋಳ 8-10 ಕ್ವಿಂಟಾಲ್ ಧಾನ್ಯ ಹಾಗೂ 22-25 ಕ್ವಿಂಟಾಲ್ ಮೇವನ್ನು ನೀಡಬಲ್ಲವು. ಮೇವಿನಲ್ಲಿ ಹೆಚ್ಚಿನ ತೇವಾಂಶವಿರುವುದರಿಂದ, ಇದು ಜಾನುವಾರುಗಳಿಗೆ ಹೆಚ್ಚಿನ ಪೌಷ್ಠಿಕಾಂಶವನ್ನು ಒದಗಿಸುತ್ತದೆ.

ಹೆಚ್ಚಿನ ಇಳುವರಿ ನೀಡುವುದರ ಜೊತೆಗೆ ಈ ಪ್ರಭೇದಗಳು ಕೀಟ ನಿರೋಧಕವಾಗಿವೆ. ಈಗಾಗಲೇ ಈ ತಳಿಯ ಬೀಜಗಳ ಬಿತ್ತನೆಯನ್ನು ಸೀಮಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಪೂರ್ಣಗೊಳಿಸಲಾಗಿದೆ. ಹವಾಮಾನ ಪರಿಸ್ಥಿತಿಗಳು ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಪರಿಗಣಿಸಿ, ರಾಬಿ ಬೆಳೆಗಳಿಗೆ ಸೂಕ್ತವಾದ ಪ್ರಭೇದಗಳನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಮುಖ್ಯ ವಿಜ್ಞಾನಿ ಮತ್ತು ಜೋಳ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥ ಎಸ್.ಎಸ್.ಕರ್ಭಂಟನಾಲ್.

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯದ ಎಲ್ಲಾ ಜೋಳ ಬೆಳೆಯುವ ಪ್ರದೇಶಗಳಲ್ಲಿ ಈ ತಳಿಗಳನ್ನು ಪರಿಚಯಿಸಲಾಗಿದೆ ಮತ್ತು ರೈತರು ಇದನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದಾಗಿದೆ. ಪ್ರಸ್ತುತ ವಿಜಯಪುರದ ಹಿಟ್ಟಿನಹಳ್ಳಿ ಗ್ರಾಮದ ಬಳಿ ಇರುವ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ (RARS) ಹೊಸ ಪ್ರಭೇದದ ಜೋಳದ ತಳಿಗಳು ಲಭ್ಯವಿದ್ದು; ಆಸಕ್ತ ರೈತರು ಖರೀದಿ ಕೇಂದ್ರಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ:

ಕುರಿ ಮೇಕೆ ಸಾಕಣೆ ಸಹಾಯಧನಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ | ಫೆಬ್ರವರಿ 24ರೊಳಗೆ ಅರ್ಜಿ ಸಲ್ಲಿಸಿ

ಕೋಳಿ ಸಾಕಣೆ ರೈತರಿಗೆ ಪ್ರತಿ ಕೋಳಿಗೆ 5 ರೂಪಾಯಿ ಪ್ರೋತ್ಸಾಹಧನ | ರಾಜ್ಯ ಬಜೆಟ್‌ನಲ್ಲಿ ಘೋಷಣೆ?

ಪಿಎಂ ಕಿಸಾನ್ 13ನೇ ಕಂತಿನ ಹಣ ಪಡೆಯಬಯಸುವ ರೈತರೇ ನಿಮ್ಮ eKYC ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ 

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…  

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Related Posts

error: Content is protected !!