ಸರಕಾರಿ ಯೋಜನೆ

Labor Board Facilities : ಇವರಿಗೆ ಸಿಗಲಿದೆ ಮದುವೆ, ಹೆರಿಗೆ, ಆರೋಗ್ಯ, ಶಿಕ್ಷಣ, ಅಂತ್ಯ ಸಂಸ್ಕಾರಕ್ಕೂ ಸರಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ…

WhatsApp Group Join Now
Telegram Group Join Now

ಈ ಕಾರ್ಮಿಕರಿಗೆ 19 ಬಗೆಯ ಸಹಾಯಧನ ಸೌಲಭ್ಯವನ್ನು ಸರಕಾರ ನೀಡುತ್ತದೆ. ಈ ಸಹಾಯಧನ ಪಡೆಯಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು? ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಇಲ್ಲಿದೆ ಮಾಹಿತಿ…

Karnataka Building Construction Workers : ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಸುಧಾರಣೆಗಾಗಿ ಸರಕಾರ ಹಲವು ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸುವ ಮೂಲಕ ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಏನೆಲ್ಲ ಸೌಲಭ್ಯಗಳಿವೆ : ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಮದುವೆ, ಹೆರಿಗೆ, ವೈದ್ಯಕೀಯ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಅಂತ್ಯ ಸಂಸ್ಕಾರಕ್ಕೆ ಸಹಾಯಧನ ಸೇರಿ ಒಟ್ಟು 19 ರೀತಿಯ ಸೌಲಭ್ಯಗಳು ಸಿಗುತ್ತದೆ.

ಇದನ್ನೂ ಓದಿ: ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ: ಯಾವ ಬೆಳೆ ಎಷ್ಟು ಹಣ? ಅರ್ಜಿ ಸಲ್ಲಿಕೆ ಹೇಗೆ? Mnarega Subsidy for Horticulture Crops

ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ಈ ಸೌಲಭ್ಯಗಳನ್ನು ಪಡೆಯಲು ಸುಮಾರು 51 ಬಗೆಯ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಅರ್ಹರಾಗಿರುತ್ತಾರೆ. ವರ್ಷದ ಹನ್ನೆರಡು ತಿಂಗಳ ಅವಧಿಯಲ್ಲಿ ಕಟ್ಟಡ ಅಥವಾ ಇತರ ನಿರ್ಮಾಣ ಕೆಲಸಗಳಲ್ಲಿ ಕನಿಷ್ಠ 90 ದಿನ ತೊಡಗಿಸಿಕೊಂಡಿರುವ 18ರಿಂದ 60 ವಯೋಮಿತಿಯವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಹೇಗೆ? : ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೋಂದಣಿಗೆ ನಮೂನೆ 5-1ರಲ್ಲಿ ಅರ್ಜಿಯಲ್ಲಿ ಉದ್ಯೋಗ ದೃಢೀಕರಣ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರ, ಭಾವಚಿತ್ರ, ವಯಸ್ಸಿನ ದಾಖಲೆ, ತನ್ನ ಹಾಗೂ ಅವಲಂಬಿತ ಕುಟುಂಬದವರ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಸಲ್ಲಿಸಿದರೆ ನೋಂದಣಿಯಾಗಲಿದೆ. ಬಳಿಕ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಆಹ್ವಾನ : ಬಡಿಗಿ, ದೋಬಿ, ಗೌಂಡಿ, ಕಮ್ಮಾರ, ಕ್ಷೌರಿಕರಿಗೆ ಉಚಿತ ಉಪಕರಣಗಳು Free Tailoring Machine Scheme

ಮದುವೆ ಸಹಾಯಧನ ಸೌಲಭ್ಯ : ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಕಟ್ಟಡ ಕಾರ್ಮಿಕ ಮಂಡಳಿಯು 60,000 ರೂಪಾಯಿ ಧನಸಹಾಯ ನೀಡುತ್ತದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ವತಿಯಿಂದ ತಮ್ಮ ಅಥವಾ ಅವರ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು.

ಮದುವೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಹೇಗೆ? : ಮಂಡಳಿಯ ಸೌಲಭ್ಯಗಳಲ್ಲಿ ಕಾರ್ಮಿಕರು ಅಥವಾ ಅವರ ಇಬ್ಬರೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಹಾಯಧನವನ್ನು ಘೋಷಿಸಿದೆ. ಈ ಸಹಾಯಧನವನ್ನು ಸರಕಾರದಿಂದ ಪಡೆಯಲು ಕಾರ್ಮಿಕರು ಈ ಕೆಳಗಿನ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರಬೇಕು.

  • ನೋಂದಣಿ ದಿನಾಂಕದಿ೦ದ ಮದುವೆ ದಿನಾಂಕದ ವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿಸರಬೇಕು.
  • ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶವಿದೆ.
  • ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
  • ಮದುವೆಯ ದಿನಾಂಕದಿ೦ದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

ಹೆಚ್ಚಿನ ಮಾಹಿತಿಗೆ

ತಾಲ್ಲೂಕು ಕಾರ್ಮಿಕ ಇಲಾಖೆ ಕಚೇರಿ ವಿಳಾಸ ಮತ್ತು ಸಂಪರ್ಕ ಸಂಖ್ಯೆಗೆ ಇಲ್ಲಿ ಕ್ಲಿಕ್ ಮಾಡಿ

ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Related Posts

error: Content is protected !!