ಉದ್ಯೋಗಶಿಕ್ಷಣ ಸುದ್ದಿ

ಕರ್ನಾಟಕ ಆಹಾರ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕ: SSLC, PUC, ಪದವೀಧರರಿಗೆ ಭರ್ಜರಿ ಅವಕಾಶ | Karnataka Food Department Recruitment 2023

WhatsApp Group Join Now
Telegram Group Join Now

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ತಯಾರಿ ನಡೆದಿದ್ದು; ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಖಾಲಿ ಹುದ್ದೆಗಳ ವಿವರ, ವಿದ್ಯಾರ್ಹತೆ, ನೇಮಕ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

Food and Civil Supplies Department Recruitment 2023 : ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಭರವಸೆ ನೀಡಲಾಗಿತ್ತು. ಈ ಬಗ್ಗೆ ಸರಕಾರ ಅಧಿಕಾರ ಹಿಡಿದ ಆರಂಭದಲ್ಲಿ ಭರವಸೆ ವ್ಯಕ್ತವಾಗಿತ್ತಾದರೂ; ಗ್ಯಾರಂಟಿ ಯೋಜನೆಗಳ ಗೊಂದಲದಲ್ಲಿ ಖಾಲಿ ಹುದ್ದೆಗಳ ಭರ್ತಿ ಭರವಸೆಯನ್ನೇ ಸರಕಾರ ತಾತ್ಕಾಲಿಕ ಮರೆತಂತಿತ್ತು. ಈ ಬಗ್ಗೆ ವಿವಿಧ ಸಂಘ-ಸAಸ್ಥೆಗಳು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ತಯಾರಿ ನಡೆದಿದೆ. ಈ ಇಲಾಖೆಗಳ ಗ್ರೂಪ್ ಎ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿಗೆ ನೇಮಕ ನಡೆಯಲಿದ್ದು; ಕರ್ನಾಟಕ ಲೋಕಸೇವಾ ಆಯೋಗವು (KPSC) ಈ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲು ಸನ್ನದ್ಧವಾಗಿದೆ.

ಇದನ್ನೂ ಓದಿ: Free IAS, KAS Coaching: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸರ್ಕಾರದಿಂದ ಉಚಿತ ತರಬೇತಿ ನೀಡಲು ಅರ್ಜಿ ಅಹ್ವಾನ | Online Applications For Free Upsc Kpsc Banking Exam Coaching

ಆಹಾರ ಇಲಾಖೆ 1000+ ಹುದ್ದೆಗಳು

ಈ ಪೈಕಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಕ್ಕೆ ಜೋರು ತಯಾರಿ ನಡೆದಿರುವುದು ವಿಶೇಷವಾಗಿದೆ. ಸದರಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು; ಈ ಹುದ್ದೆಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅನುಮತಿ ನೀಡಿದ ಕೂಡಲೇ ಅಧಿಸೂಚನೆ ಪ್ರಕಟವಾಗಲಿದೆ. ಆಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸ ಬಯಸುವ ಉದ್ಯೋಗಾಕಾಂಕ್ಷಿಗಳು ನೇಮಕ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಬೇಕಾದ ಸಕಲ ಸಿದ್ಧತೆ ನಡೆಸಲು ಇದು ಒಳ್ಳೆಯ ಸಮಯವಾಗಿದೆ.

ಯಾವೆಲ್ಲ ಹುದ್ದೆಗಳ ನೇಮಕ ನಡೆಯಲಿದೆ?

 • ಸಹಾಯಕ ನಿರ್ದೇಶಕರು
 • ದ್ವಿತೀಯ ದರ್ಜೆ ಸಹಾಯಕರು
 • ಪ್ರಥಮ ದರ್ಜೆ ಸಹಾಯಕರು
 • ಡಾಟಾ ಎಂಟ್ರಿ ಆಪರೇಟರ್
 • ಗ್ರೂಪ್ ಡಿ ಹುದ್ದೆಗಳು
 • ಡ್ರೈವರ್ ಹುದ್ದೆಗಳು

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

ಖಾಲಿ ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಒಟ್ಟು 1,150 ಖಾಲಿ ಹುದ್ದೆಗಳ ಭರ್ತಿಗೆ ನೇಮಕ ನಡೆಯಲಿದೆ. ಈ ಹುದ್ದೆಗಳಿಗೆ ಯಾವುದೇ ಪದವಿ / ಸ್ನಾತಕೋತ್ತರ ಪದವಿ, ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ಹುದ್ದೆಗಳಿಗೆ ಅನುಗುಣವಾಗಿ ನಿಗದಿಯಾಗಿರುವ ವಿದ್ಯಾರ್ಹತೆಯ ವಿವರ ಈ ಕೆಳಗಿನಂತಿದೆ:

 1. ಸಹಾಯಕ ನಿರ್ದೇಶಕರು : ಒಟ್ಟ 198 ಸಹಾಯಕ ನಿರ್ದೇಶಕರು ಹುದ್ದೆಗಳು ಖಾಲಿ ಇವೆ. ಪದವಿ / ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
 2. ದ್ವಿತೀಯ ದರ್ಜೆ ಸಹಾಯಕರು : ಒಟ್ಟು 50 ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
 3. ಪ್ರಥಮ ದರ್ಜೆ ಸಹಾಯಕರು : ಒಟ್ಟು 188 ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಿದ್ದು; ಈ ಹುದ್ದೆಗಳಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಪ್ರಯತ್ನಿಸಬಹುದು.
 4. ಡಾಟಾ ಎಂಟ್ರಿ ಆಪರೇಟರ್ : ಒಟ್ಟು 238 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೂ ಕೂಡ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 5. ಗ್ರೂಪ್ ಡಿ : ಇನ್ನು 238 ‘ಡಿ’ ಗ್ರೂಪ್ ಹುದ್ದೆಗಳ ಭರ್ತಿಗೆ ನೇಮಕವಾಗಬೇಕಿದ್ದು; ಈ ಹುದ್ದೆಗಳಿಗೆ 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ತಯಾರಿ ನಡೆಸಬಹುದು.
 6. ಡ್ರೈವರ್ : ಅದೇ ರೀತಿ ಬರೋಬ್ಬರಿ 238 ವಾಹನ ಚಾಲಕರ ಹುದ್ದೆಗಳು ಕೂಡ ಖಾಲಿ ಇದ್ದು; ಈ ಹುದ್ದೆಗಳ ನೇಮಕಾತಿಗೆ ವಾಹನ ಚಾಲನಾ ಪರಿಣಿತಿಯುಳ್ಳ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ಈಗಿಂದಲೇ ರೆಡಿಯಾಗಿ

ಈ ಎಲ್ಲ ಹುದ್ದೆಗಳಲ್ಲಿ ಹಲವು ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಲಿದ್ದು, ಕೆಲವು ಹುದ್ದೆಗಳನ್ನು ಮಾತ್ರ ಪದೋನ್ನತಿ ಮೂಲಕ ಭರ್ತಿ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ನೇರ ನೇಮಕಾತಿ ವಿಧಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಗಳಿಸಿದ ಅಂಕಗಳ ಆಧಾರದಲ್ಲಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ರೆಡಿಯಾಗಲಿದೆ. ಹೀಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗ ಪಡೆಯ ಬಯಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆ ಪಡೆಯಲು ಈಗಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವುದು ಉತ್ತಮ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖಾಲಿ ಹುದ್ದೆಗಳ ಭರ್ತಿ ಕುರಿತ ಅಧಿಕೃತ ಅಧಿಸೂಚನೆ ಹೊರ ಬಿದ್ದ ತಕ್ಷಣ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರವನ್ನು ನಿಮ್ಮ ಮುಂದಿಡಲಿದ್ದೇವೆ. ನಿರಂತರ ಮಾಹಿತಿಗಾಗಿ ‘ಸಮಗ್ರ ಕೃಷಿ’ ವಾಟ್ಸಾಪ್ ಗ್ರೂಪ್ Join ಆಗಿ…👇👇👇

WhatsApp Group Join Now
Telegram Group Join Now

Related Posts

error: Content is protected !!