ಸರಕಾರಿ ಯೋಜನೆ

ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್‌ನ್ಯೂಸ್: ಶೀಘ್ರದಲ್ಲಿಯೇ 60,000 ಕುಟುಂಬಗಳಿಗೆ ಸಿಗಲಿದೆ ಹಕ್ಕುಪತ್ರ | Karnataka Govt circular for issue of revenue village rights

WhatsApp Group Join Now
Telegram Group Join Now

ಶೀಘ್ರದಲ್ಲಿಯೇ ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅಧಿಕೃತ ಹಕ್ಕು ಪತ್ರಗಳನ್ನು ನೀಡಲು ಸರಕಾರ ಮುಂದಾಗಿದೆ. ಈ ಪಟ್ಟಿಯಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆ, ತಾಲ್ಲೂಕುಗಳು ಮೊದಲ ಸಾಲಿನಲ್ಲಿವೆ? ಈ ಜಿಲ್ಲೆಯ ದಾಖಲೆರಹಿತ ವಸತಿ ಹೊಂದಿರುವ ಜನ ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ…

ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದರೂ ಕೂಡ ಸರಕಾರಿ ಸೌಲಭ್ಯಗಳಿಂದ ವಂಚಿತರಾದವರಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್ ನೀಡಿದೆ. ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲೇ ಕಂದಾಯ ಗ್ರಾಮಗಳ ಪರಿವರ್ತನೆ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಿ ಮಾರ್ಗಸೂಚಿ ರಚಿಸಲಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯದ ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, 60,000 ಕುಟುಂಬಗಳಿಗೆ ವಾಸ್ತವ್ಯದ ಹಕ್ಕುಪತ್ರಗಳನ್ನು ನವೆಂಬರ್ ತಿಂಗಳಲ್ಲಿ ವಿತರಿಸಲಾಗುವುದು ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಿತ್ತು.

ಅಂತೆಯೇ ಇದನ್ನು ಈಡೇರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ಶೀಘ್ರದಲ್ಲಿಯೇ ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅಧಿಕೃತ ಹಕ್ಕು ಪತ್ರಗಳು ಲಭಿಸಲಿದ್ದು; ಈ ಕುಟುಂಬಗಳು ಇನ್ಮುಂದೆ ಸರಕಾರದ ಎಲ್ಲ ಯೋಜನೆಗಳ ಫಲಾನುಭವಿಗಳಾಗಲಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ 13ನೇ ಕಂತು ಡಿಸೆಂಬರ್‌ಗೆ ಬಿಡುಗಡೆ: ಈ ನಿಯಮ ಪಾಲಿಸಿದ ರೈತರಿಗೆ ಮಾತ್ರ ₹2,000 ಜಮೆ

ಸರಕಾರಿ ಸೌಲಭ್ಯ ವಂಚಿತರು

ಲಂಬಾಣಿ ತಾಂಡಾ, ವಡ್ಡರಹಟ್ಟಿ, ಗೊಲ್ಲರಹಟ್ಟಿ, ನಾಯಕರ ಹಟ್ಟಿ, ಕುರುಬರ ಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೊನಿಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ವಾಸದ ದೃಢೀಕರಣ ಪತ್ರಗಳಿರುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಇರುವ ಈ ಗ್ರಾಮಗಳು ಕಂದಾಯ ಗ್ರಾಮದ ವ್ಯಾಪ್ತಿಗೆ ಬರುವುದಿಲ್ಲ. ಯಾರ ಆಸ್ತಿ ಎಷ್ಟಿದೆ ಎಂಬ ಬಗೆಗೆ ಸ್ಪಷ್ಟತೆ ಇಲ್ಲದೆ ಗೊಂದಲಗಳು ಹಾಗೆಯೇ ಉಳಿದುಕೊಂಡು ತಂಟೆ-ತಕರಾರಿಗೂ ಆಸ್ಪದ ನೀಡುತ್ತವೆ.

ಇದರಿಂದಾಗಿ ಇವರೆಲ್ಲ ಸರ್ಕಾರಿ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮಾತ್ರವಲ್ಲ, ಆಸ್ತಿ ಮೇಲೆ ಯಾವುದೇ ರೀತಿಯ ಅಡಮಾನ ಸಾಲ ಕೂಡ ದೊರೆಯುವುದಿಲ್ಲ. ಕಂದಾಯ ಗ್ರಾಮವಾಗಿ ಪರಿವರ್ತಿತವಾದರೆ ಅಧಿಕೃತವಾಗಿ ಅದಕ್ಕೊಂದು ಮಾನ್ಯತೆ ಸಿಗುತ್ತದೆ. ವಾಸದ ಹಕ್ಕುಪತ್ರ ದೊರೆಯುತ್ತದೆ. ವಸತಿ ಯೋಜನೆ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳು ಜನರಿಗೆ ಲಭಿಸುತ್ತವೆ.

ಇದನ್ನೂ ಓದಿ: ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ | Ration Card Application… 

ಪ್ರಕ್ರಿಯೆ ಹೇಗೆ ನಡೆಯಲಿದೆ?

ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ಖಾಸಗಿ ಜಮೀನಿನಲ್ಲಿ ಜನವಸತಿಗಳು ಇದ್ದಲ್ಲಿ ಅಂತಹ ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಗುರುತಿಸಬೇಕು. ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗ ಬಡಾವಣೆ/ಉಪ ಗ್ರಾಮ ಆಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಕರ್ನಾಟಕ ಭೂಸುಧಾರಣಾ ಕಾಯ್ದೆಯಂತೆ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಅಧಿಸೂಚನೆಗೆ ಸಾರ್ವಜನಿಕರ ಸಲಹೆ/ಅಕ್ಷೇಪಣೆಗಳನ್ನು ಆಹ್ವಾನಿಸಬೇಕು. ದಾಖಲೆರಹಿತ ಜನವಸತಿಯು ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆಯಲ್ಲಿ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂ ಮಾಲೀಕರೇ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಆದರೆ, ಗ್ರಾಮಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು.

ತಹಶೀಲ್ದಾರ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿರುವ ವಿವರಗಳನ್ನು ಸ್ಥಳ ಪರಿಶೀಲನೆ ನಡೆಸಿ, ಸರ್ವೇ ನಂಬರ್, ವಿಸ್ತೀರ್ಣ ಮತ್ತು ಗಡಿಗಳನ್ನು ನಿರ್ದಿಷ್ಟಪಡಿಸಿ ಪಟ್ಟಿಮಾಡಬೇಕು ಎಂದು ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ ಬಳಿಕ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ಅರ್ಜಿ ಆಹ್ವಾನ, ಅರ್ಜಿ ಪರಿಶೀಲನೆ, ನೋಟಿಸ್ ಜಾರಿ ಮಾಡುವುದು, ವಿಚಾರಣೆ ಮಾಡುವುದು ಮತ್ತು ನೋಂದಣಿ ಪತ್ರ ವಿತರಣೆಗೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳಬೇಕು.

ಹಕ್ಕು ಪತ್ರ ವಿತರಣೆಯ ಕುರಿತು ಮತ್ತು ಹೊಸ ಕಂದಾಯ ಗ್ರಾಮ ಘೋಷಣೆ ಪ್ರಕ್ರಿಯೆಯನ್ನು ಜತೆ ಜತೆಯಾಗಿ ನಿಯಮಾನುಸಾರ ಕ್ರಮ ವಹಿಸಬೇಕು. ಹೊಸ ಕಂದಾಯ ಗ್ರಾಮ ಘೋಷಣೆ ಮಾಡುವವರೆಗೆ ಕಾಯುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ₹21,000-₹69,000 ಸಂಬಳದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಈ ಜಿಲ್ಲೆಗಳಿಗೆ ಮೊದಲ ಆದ್ಯತೆ

ರಾಜ್ಯದಲ್ಲಿಯೇ ಅತಿ ಹೆಚ್ಚು ದಾಖಲೆ ರಹಿತ ಲಂಬಾಣಿ ತಾಂಡಾಗಳು ವಿಜಯಪುರ ಜಿಲ್ಲೆಯಲ್ಲಿವೆ. ಈಗ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುತ್ತಿದೆ. ಹಕ್ಕುಪತ್ರ ವಿತರಿಸಲು ಮೊದಲ ಹಂತದಲ್ಲಿ ಯಾದಗಿರಿ, ರಾಯಚೂರು, ಬೀದರ, ವಿಜಯಪುರ, ದಾವಣಗೆರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಅವರು ಉಪನೋಂದಣಿ ಕಚೇರಿಯಲ್ಲಿಯೇ ನೋಂದಣಿ ಮಾಡಿಸುವ ಹಕ್ಕುಪತ್ರವನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದು, ಅದು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬರುವ ಅಗತ್ಯವಿದೆ.

ಸಚಿವರ ಭರವಸೆಯಂತೆಯೇ ಹಕ್ಕುಪತ್ರ ವಿತರಣೆಯಾದರೆ ಅದೊಂದು ದಾಖಲೆಯೇ ಆಗಲಿದೆ. ಏಕಕಾಲಕ್ಕೆ ಇದುವರೆಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಕ್ಕುಪತ್ರಗಳನ್ನು ವಿತರಿಸಿಲ್ಲ. ಇಂತಹ ಗ್ರಾಮಗಳಲ್ಲಿ ಬಹುತೇಕವಾಗಿ ಹಿಂದುಳಿದವರೇ ವಾಸಿಸುತ್ತಿದ್ದು, ವಾಸ್ತವ್ಯದ ಹಕ್ಕುದಾಖಲೆಗಳನ್ನು ಒದಗಿಸಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಅನುವಾಗುತ್ತದೆ.

ಇದನ್ನೂ ಓದಿ: ಕೆಎಂಎಫ್ 487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!