ಸರಕಾರಿ ಯೋಜನೆ

ಲೇಬರ್ ಕಾರ್ಡ್ ಅರ್ಜಿ ಆರಂಭ | ಈ ಕಾರ್ಡ್ ಇದ್ದರೆ ಸಿಗಲಿವೆ ಹಲವು ಸೌಲಭ್ಯ Karnataka Labour card application online 2024

WhatsApp Group Join Now
Telegram Group Join Now

ಸರಕಾರದ ವಿವಿಧ ಸೌಲಭ್ಯ ಪಡೆಯಲು ಲೇಬರ್ ಕಾರ್ಡ್ ಕಡ್ಡಾಯವಾಗಿದೆ. ಲೇಬರ್ ಕಾರ್ಡ್ ಪಡೆಯಲು, ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

Karnataka Labour card application online 2024 : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕರ್ನಾಟಕ ಸರಕಾರವು ಹಲವಾರು ರೀತಿಯ ಯೋಜನೆಗಳನ್ನು ನೀಡುತ್ತಿದ್ದು ಈ ಎಲ್ಲಾ ಯೋಜನೆಗಳ ಲಾಭ ಪಡೆಯಲು ಮುಖ್ಯವಾಗಿ ಲೇಬರ್ ಕಾರ್ಡ್ (Labour card) ಬೇಕೇ ಬೇಕು. ಲೇಬರ್ ಕಾರ್ಡ್ ನೋಂದಣಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಮಿಕ ಇಲಾಖೆಯು ಅರ್ಹ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: Labor Board Facilities : ಇವರಿಗೆ ಸಿಗಲಿದೆ ಮದುವೆ, ಹೆರಿಗೆ, ಆರೋಗ್ಯ, ಶಿಕ್ಷಣ, ಅಂತ್ಯ ಸಂಸ್ಕಾರಕ್ಕೂ ಸರಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ…

ಕಾರ್ಡ್ ಪಡೆಯಲು ಅರ್ಹತೆಗಳೇನು? : Eligibility for labour card application

ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಅರ್ಜಿ ಸಲ್ಲಿಸುವ ದಿನಾಂಕಕ್ಕೆ 12 ತಿಂಗಳ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿರಬೇಕು. ಅರ್ಜಿದಾರನ ವಯೋಮಿತಿ 18 ರಿಂದ 60 ವರ್ಷದ ಒಳಗಿರಬೇಕು.

ಬೇಕಾಗುವ ದಾಖಲಾತಿಗಳು : Required documents for Labour card

  • ಕನಿಷ್ಠ 90 ದಿನಗಳು ಕೆಲಸ ಮಾಡಿದ ಉದ್ಯೋಗ ದೃಢೀಕರಣ ಪತ್ರ
  • ಅರ್ಜಿದಾರನ ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡ್
  • ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ
  • ಅರ್ಜಿದಾರನ ಆಧಾರ್ ಕಾರ್ಡ್’ಗೆ ಲಿಂಕ್ ಇರುವ ಮೊಬೈಲ್ ನಂಬರ್

ಇದನ್ನೂ ಓದಿ: Pension Schemes New Rules : ಇನ್ಮುಂದೆ ಇವರಿಗೆ ವೃದ್ದಾಪ್ಯ ವೇತನ ಸೇರಿ ಎಲ್ಲ ಪಿಂಚಣಿ ಬಂದ್ | ಹೊಸ ರೂಲ್ಸ್

ಅರ್ಜಿ ಸಲ್ಲಿಸುವುದು ಹೇಗೆ?

ಲೇಬರ್ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಹತ್ತಿರದ ಗ್ರಾಮ ಒನ್ ಅಥವಾ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಮ್ಮ ತಾಲೂಕಿನ ಕಾರ್ಮಿಕ ಇಲಾಖೆಗೆ (Labour Department) ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಏನೆಲ್ಲ ಸೌಲಭ್ಯಗಳಿವೆ? Schemes and Facilities for Labour Card Holders

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಮದುವೆ, ಹೆರಿಗೆ, ವೈದ್ಯಕೀಯ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಅಂತ್ಯ ಸಂಸ್ಕಾರಕ್ಕೆ ಸಹಾಯಧನ ಸೇರಿ ಒಟ್ಟು 19 ರೀತಿಯ ಸೌಲಭ್ಯಗಳು ಸಿಗುತ್ತದೆ.

ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ವೇತನ : 8 ರಿಂದ 10ನೇ ತರಗತಿವರೆಗೆ – ರೂ. 6,000, ಪಿಯುಸಿ/ ಡಿಪ್ಲೊಮಾ/ ಐಟಿಐ/ ಟಿಸಿಹೆಚ್ – ರೂ. 8,000, ಪದವಿ ಶಿಕ್ಷಣಕ್ಕಾಗಿ ರೂ. 10,000, ಸ್ನಾತಕೋತ್ತರ ಶಿಕ್ಷಣಕ್ಕಾಗಿ ರೂ. 12,000 ಹಾಗೂ ಇಂಜಿನೀಯರಿ೦ಗ್/ ವೈದ್ಯಕೀಯ ಶಿಕ್ಷಣಕ್ಕಾಗಿ ರೂ.20,000 ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುವುದು.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ವೈದ್ಯಕೀಯ ನೆರವು : ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೋಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ಕನಿಷ್ಠ ರೂ. 1,000/-ದಿಂದ ಗರಿಷ್ಠ ರೂ.25,000/-ವರೆಗೆ ಮತ್ತು ಆರೋಗ್ಯ ತಪಾಸಣೆಗೆ ರೂ. 500/-ರಿಂದ ರೂ. 1000/-ವರೆಗೆ ಧನ ಸಹಾಯ ನೀಡಲಾಗುವುದು.

ಅಪಘಾತ ಧನ ಸಹಾಯ : ಕಾರ್ಮಿಕರಿಗೆ ಕೆಲಸದ ಅಥವಾ ಕರ್ತವ್ಯದ ಸಮಯದಲ್ಲಿ ಸ್ಥಳದಲ್ಲಿ ಅಪಘಾತವಾಗಿದ್ದಲ್ಲಿ ಕನಿಷ್ಠ ರೂ. 1,000 ಯಿಂದ ಗರಿಷ್ಟ ರೂ. 10,000 ವರೆಗೆ ಹಣ ನೀಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಪಘಾತವಾದ ಮೂರು ತಿಂಗಳ ಒಳಗಾಗಿ ಮಾತ್ರ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

ಮದುವೆ ಸಹಾಯಧನ : ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಕಟ್ಟಡ ಕಾರ್ಮಿಕ ಮಂಡಳಿಯು 60,000 ರೂಪಾಯಿ ಧನಸಹಾಯ ನೀಡುತ್ತದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ವತಿಯಿಂದ ತಮ್ಮ ಅಥವಾ ಅವರ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು.

ಹೆರಿಗೆ ಭತ್ಯೆ ಸೌಲಭ್ಯ : ಮಹಿಳಾ ಕಾರ್ಮಿಕರಿಗೆ ಮೊದಲ 2 ಮಕ್ಕಳ ಹೆರಿಗೆಗೆ ಹೆರಿಗೆ ಭತ್ಯೆ ಸೌಲಭ್ಯ ನೀಡಲಾಗುವುದು. ಹೆರಿಗೆ ಸೌಲಭ್ಯವು ತಲಾ ಒಂದು ಮಗುವಿಗೆ ರೂ. 10,000 ನೀಡಲಾಗುವುದು. ಈ ಸೌಲಭ್ಯ ಪಡೆಯಲು ಮಗು ಜನಿಸಿದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ಇದೆ ರೀತಿ ಸುಮಾರು 19 ಸೌಲಭ್ಯಗಳು ಲಭ್ಯವಿದ್ದು; ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಕಡ್ಡಾಯವಾಗಿರುತ್ತದೆ. ಆದ್ದರಿಂದ ಈ ಲೇಬರ್ ಕಾರ್ಡ್ ಪಡೆಯಲು ನೋಂದಣಿ ಈಗಾಗಲೇ ಆರಂಭವಾಗಿದ್ದು 31ನೇ ಮಾರ್ಚ್ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

WhatsApp Group Join Now
Telegram Group Join Now

Related Posts

error: Content is protected !!