ಸರಕಾರಿ ಯೋಜನೆ

Karnataka Mangalya Bhagya Vivah Yojana : ಮಾಂಗಲ್ಯ ಭಾಗ್ಯ ಯೋಜನೆ | ಮದುವೆಗೆ 60,000 ರೂಪಾಯಿ ಸಹಾಯಧನ | ಈಗಲೇ ಹೆಸರು ನೋಂದಾಯಿಸಿ

WhatsApp Group Join Now
Telegram Group Join Now

ಮಾಂಗಲ್ಯಭಾಗ್ಯ ಯೋಜನೆಯಡಿ ರಾಜ್ಯ ಸರಕಾರವೇ ವಿವಾಹವಾಗುವ ಎಲ್ಲಾ ವರ್ಗದ ವಧು-ವರರಿಗೆ 60,000 ನಗದು ಸಹಾಯಧನ ನೀಡುತ್ತದೆ. ಹೆಸರು ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

Karnataka Mangalya Bhagya Vivah Yojana : ಪ್ರಾಪ್ತವಯಸ್ಕ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಅನ್ನಭಾಗ್ಯದಂತೆ ‘ಮಾಂಗಲ್ಯ ಭಾಗ್ಯ’ ಹೆಸರಿನಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ರಾಜ್ಯ ಸರಕಾರ ಆಯೋಜಿಸಿದೆ. ಮದುವೆಗಾಗುವ ದುಂದು ವೆಚ್ಚವನ್ನು ತಪ್ಪಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗಗಳನ್ನು ಸಾಲಮುಕ್ತರನ್ನಾಗಿಸಲು ಮುಜರಾಯಿ ಇಲಾಖೆ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಇದನ್ನೂ ಓದಿ: Application for Morarji Desai Residential School 2024-25 : ಮುರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗೆ ಅರ್ಜಿ ಅಹ್ವಾನ | ಹಲವಾರು ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗೆ ಅರ್ಜಿ ಅಹ್ವಾನ |

ಏನಿದು ಮಾಂಗಲ್ಯಭಾಗ್ಯ ಯೋಜನೆ?:
ಇದೊಂದು ಸರಕಾರವೇ ನಡೆಸಿಕೊಡುವ ಸರಳ ಸಾಮೂಹಿಕ ವಿವಾಹ ಯೋಜನೆಯಾಗಿದೆ. 2020ರ ಜನವರಿ 10ರಂದು ‘ಸಪ್ತಪದಿ’ ಹೆಸರಿನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದೀಗ ಹಾಲಿ ಕಾಂಗ್ರೆಸ್ ಸರಕಾರ ‘ಸಪ್ತಪದಿ’ ಬದಲು ‘ಮಾಂಗಲ್ಯ ಭಾಗ್ಯ’ ಎಂದು ಹೆಸರು ಬದಲಿಸಿ, ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಯೋಜನೆಯನ್ನು ರಾಜ್ಯದ ಎಲ್ಲಾ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಡಿ ರಾಜ್ಯದಲ್ಲಿ 34,563 ದೇವಾಲಯಗಳಿದ್ದು; ಇವುಗಳಲ್ಲಿ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಮಾಂಗಲ್ಯಭಾಗ್ಯ ವಿವಾಹ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ.

ವಿವಾಹಗಳು ಯಾವ ದಿನಾಂಕದ೦ದು ನಡೆಯಲಿವೆ?:
2023ರ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಗಳು ನೆರವೇರುತ್ತಿವೆ. ಈಗಾಗಲೇ ನವೆಂಬರ್ 16, 19 ಮತ್ತು 29ರಂದು ಹಾಗೂ ಡಿಸೆಂಬರ್ 7, 10ರಂದು ವಿವಿಧ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳು ನೆರವೇರಿವೆ. ಅದೇ ರೀತಿ ಬರಲಿರುವ 2024ರ ಜನವರಿ 28 ಮತ್ತು 31ರಂದು ಮತ್ತೊಂದು ಸುತ್ತಿನ ವಿವಾಹ ಮಹೋತ್ಸವಕ್ಕೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ನಡೆಯಲಿರುವ ಸಮೂಹಿಕ ವಿವಾಹಕ್ಕೆ ವಧು-ವರರ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಇದನ್ನೂ ಓದಿ: Bhu Odetana Yojane : ಈ ಯೋಜನೆಯಡಿ ಜಮೀನು ಖರೀದಿಗೆ ರಾಜ್ಯ ಸರಕಾರವೇ ಕೊಡುತ್ತೆ ಸಹಾಯಧನ ಮತ್ತು ಸಾಲ | ಡಿಸೆಂಬರ್ 15ರೊಳಗೆ ಅರ್ಜಿ ಹಾಕಿ

ಹುಲುಗಿಯಲ್ಲಿ ಉಚಿತ ವಿವಾಹ ಸಮಾರಂಭ:
ರಾಜ್ಯ ಸರ್ಕಾರದ ಆದೇಶದಂತೆ ಧಾರ್ಮಿಕ ದತ್ತಿ ಆಯುಕ್ತರು, ಬೆಂಗಳೂರು ಇವರ ಸುತ್ತೋಲೆ – ಡಿಎಎಂ ಸಿಆರ್/11/ಸಿಆರ್/136/2019-20 05: 20-10-2023ರ ಪ್ರಕಾರ ಕೊಪ್ಪಳ ಜಿಲ್ಲೆಯ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ದಿನಾಂಕ: 31-01-2024ರ ಬುಧವಾರದಂದು ಅಭಿಜಿನ್ ಲಗ್ನದ ಶುಭ ಮೂಹೂರ್ತದಲ್ಲಿ ‘ಮಾಂಗಲ್ಯ ಭಾಗ್ಯ’ ಸರಳ ವಿವಾಹ ಕಾರ್ಯವನ್ನು ಹಿಂದೂ ಧಾರ್ಮಿಕ ಸಂಪ್ರದಾಯ ವಿಧಿ ವಿಧಾನದಂತೆ ನೆರವೇರಿಸಲಾಗುತ್ತಿದೆ ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Loan and subsidy schemes for women : ಮಹಿಳೆಯರಿಗಾಗಿಯೇ ಇರುವ ಸಾಲ ಮತ್ತು ಸಬ್ಸಿಡಿ ಯೋಜನೆಗಳು: ಕೂಡಲೇ ಅರ್ಜಿ ಸಲ್ಲಿಸಿ

ಸಹಾಯಧನ ಮತ್ತು ಸೌಲಭ್ಯಗಳ ವಿವರ:
ಸರ್ಕಾರದ ಈ ಉಚಿತ ಸರಳ ವಿವಾಹ ಕಾರ್ಯಕ್ರಮದಲ್ಲಿ ಪ್ರತಿ ನವಜೋಡಿಗೆ ಅಗತ್ಯತೆಗೆ ಅನುಗುಣವಾಗಿ ಪ್ರೋತ್ಸಾಹಧನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು; ಆ ವಿವರ ಈ ಕೆಳಗಿನಂತಿದೆ:

  • ವರನಿಗೆ ಹೂವಿನ ಹಾರ ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5,000 ರೂಪಾಯಿ
  • ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10,000 ರೂಪಾಯಿ
  • ವಧುವಿಗೆ ಎರಡು ಚಿನ್ನದ ತಾಳಿ, ಒಂದು ಗುಂಡುಗಳಿಗೆ 45,000 ರೂಪಾಯಿ
  • ಉಚಿತ ಪ್ರೋತ್ಸಾಹಧನವನ್ನು ವಿವಾಹವಾಗುವ ಜೋಡಿಗಳಿಗೆ ಒಟ್ಟು 60,000 ರೂಪಾಯಿ ನೀಡಲಾಗುತ್ತದೆ.
  • ಈ ವಿವಾಹಕ್ಕೆ ಆಗಮಿಸುವ ವಧು-ವರರು, ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ವೆಚ್ಚವÀನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ.

ವಿವಾಹ ನೋಂದಣಿ ಹೇಗೆ?:
ಕೊಪ್ಪಳ ಜಿಲ್ಲೆಯ ಹುಲಿಗೆಮ್ಮದೇವಿ ದೇವಾಸ್ಥಾನದಲ್ಲಿ ನೆರವೇರಲಿರುವ ವಿವಾಹ ಮಹೋತ್ಸವದಲ್ಲಿ ದಂಪತಿಗಳಾಗಲು ಇಚ್ಛಸುವ ವಧುವರರು ಅರ್ಜಿಗಳನ್ನು ದೇವಾಲಯದ ಆಡಳಿತ ಕಛೇರಿಯಲ್ಲಿ ದಿನಾಂಕ: 15-12-2023ರೊಳಗೆ ಪಡೆದು, ಭರ್ತಿ ಮಾಡಿ ಅಧಿಕೃತ ದಾಖಲೆಗಳೊಂದಿಗೆ ದಿನಾಂಕ: 30-12-2023ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 9483761000, 9483391000

Karnataka Mangalya Bhagya Vivah Yojana

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!