ಸರಕಾರಿ ಯೋಜನೆ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ | MGNREGA Agriculture Programmes

WhatsApp Group Join Now
Telegram Group Join Now

ನರೇಗಾ ಯೋಜನೆಯ ಧನ ಸಹಾಯ ಪಡೆದು ರೈತರು ತಮ್ಮದೇ ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಪ್ರತಿ ಫಲಾನುಭವಿಗೆ ಗರಿಷ್ಠ 2.5 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ರೈತರಿಗೆ ಯಾವ್ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ ಸಿಗುತ್ತದೆ? ಯಾವೆಲ್ಲ ರೈತರು ಈ ಸೌಲಭ್ಯಕ್ಕೆ ಅರ್ಹರು? ಮತ್ತು ನರೇಗಾ ಸಹಾಯಧನ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಗ್ರಾಮೀಣ ಪ್ರದೇಶಕ್ಕೆ ವರದಾನವಾಗಿದೆ. ಈ ಯೋಜನೆಯ ಧನ ಸಹಾಯ ಪಡೆದು ರೈತರು ತಮ್ಮದೇ ಹೊಲ, ಗದ್ದೆ, ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಸಾಲದ ಹಂಗಿಲ್ಲದೇ ಹೊಸ ಆದಾಯ ಗಳಿಸಬಹುದು. ಹೀಗೆ ನರೇಗಾ ಕೂಲಿ ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಲು ನರೇಗಾ ವೈಯಕ್ತಿಕ ಕಾಮಗಾರಿಗಳ ದೊಡ್ಡ ಪಟ್ಟಿಯೇ ಇದೆ. ಈ ಯೋಜನೆಯಲ್ಲಿ ಪ್ರತಿ ಫಲಾನುಭವಿ 2.5 (ಒಂದೇ ಸಾರಿ) ಲಕ್ಷ ರೂಪಾಯಿ ವರೆಗೂ ಸಹಾಯಧನ ಪಡೆದು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.

ಇದನ್ನೂ ಓದಿ: ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 15,000 ಪ್ರೋತ್ಸಾಹಧನ

ಯಾವ್ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ? 

ಸಮುದಾಯ ಕಾಮಗಾರಿ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಸಣ್ಣ-ಅತಿ ಸಣ್ಣ ರೈತರಿಗೆ, ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ವೈಯಕ್ತಿಕ ಕಾಮಗಾರಿಗಳ ವಿವರ ಹಾಗೂ ಲಭ್ಯವಿರುವ ಸಹಾಯಧ ಈ ಕೆಳಗಿನಂತಿವೆ:

 • ದನದ ಕೊಟ್ಟಿಗೆ: 32,000 ರೂಪಾಯಿ
 • ಕೊಳವೆಬಾವಿ ಮರುಪೂರಣ ಘಟಕ: 20,00 ರೂಪಾಯಿ
 • ಹಂದಿ ಸಾಕಾಣೆ/ಆಡು ಸಾಕಾಣೆ: 19,000 ರೂಪಾಯಿ
 • ಕೋಳಿ ಸಾಕಾಣೆ: 50,000 ರೂಪಾಯಿ
 • ಬಾವಿ ರಚನೆ: 1,28,000 ರೂಪಾಯಿ
 • ಕೃಷಿ ಭೂ ಸಮತಟ್ಟು/ ಒಂದು ಎಕರೆಗೆ: 13,000 ರೂಪಾಯಿ
 • ಇಂಗು ಗುಂಡಿ: 33,000-50,000 ರೂಪಾಯಿ
 • ವಸತಿ ಯೋಜನೆ ಫಲಾನುಭವಿ/ ಒಂದು ಮನೆಗೆ: 24,750 ರೂಪಾಯಿ
 • ಎರೆಹುಳು ಗೊಬ್ಬರದ ತೊಟ್ಟಿ: 23,000 ರೂಪಾಯಿ
 • ಕುರಿ ಶೆಡ್: 68,000 ರೂಪಾಯಿ
 • ಬಚ್ಚಲು ಗುಂಡಿ- ಪೌಷ್ಟಿಕ ತೋಟ: 14,000 ರೂಪಾಯಿ
 • ಬದು ನಿರ್ಮಾಣ: 15,000 ರೂಪಾಯಿ
 • ಸಸಿ ನೆಡುವಿಕೆ (ಅರಣ್ಯ ಇಲಾಖೆ) ಒಂದು ಹೆಕ್ಟೇರ್‌ಗೆ: 41,000 ರೂಪಾಯಿ
 • ಸಸಿ ನೆಡುವಿಕೆ (ತೋಟಗಾರಿಕೆ ಇಲಾಖೆ) ಒಂದು ಎಕರೆಗೆ: 53,000 ರೂಪಾಯಿ
 • ಶೌಚಾಲಯ (ವಸತಿ ಫಲಾನುಭವಿ): 12,000 ರೂಪಾಯಿ
 • ಕ್ಷೇತ್ರ ಬದು ನಿರ್ಮಾಣೆ ಒಂದು ಎಕರೆಗೆ: 10,000 ರೂಪಾಯಿ
 • ದ್ರವ ಜೈವಿಕ ಗೊಬ್ಬರ ಗುಂಡಿ: 16,500 ರೂಪಾಯಿ
 • ಈರುಳ್ಳಿ ಶೇಖರಣಾ ಘಟಕ: 1,00,000  ರೂಪಾಯಿ
 • ಹೊಸ ಹಿಪ್ಪುನೇರಳೆ ತೋಟ ಸ್ಥಾಪನೆ ಒಂದು ಎಕರೆಗೆ: 70,870 ರೂಪಾಯಿ
 • ೨ ಮತ್ತು ೩ನೇ ವರ್ಷದ ಹಿಪ್ಪು ನೇರಳೆ ತೋಟದ ನಿರ್ವಹಣೆ: 43,456 ರೂಪಾಯಿ
 • ಕಾಂಪೊಸ್ಟ್ ಗುಂಡಿ: 3,640 ರೂಪಾಯಿ
 • ಕೆರೆ ರಚನೆ (ಹೊಸ): 40,000-70,000 ರೂಪಾಯಿ

ಇದನ್ನೂ ಓದಿ: ಈ ರೈತರಿಗೆ ಗಂಗಾಕಲ್ಯಾಣ ಬೋರ್‌ವೆಲ್ ಕೊರೆಸಲು 2 ಲಕ್ಷ ರೂಪಾಯಿ ಸಹಾಯಧನ | ಮಾರ್ಚ್ 2ರೊಳಗೆ ಅರ್ಜಿ ಸಲ್ಲಿಸಿ

ಇನ್ನು ತೋಟಗಾರಿಕೆ ಬೆಳೆಗಳಿಗೂ ಕೂಟ ತಲಾ ಒಂದೊಂದು ಸಸಿ ನೆಡುವ ಗುಂಡಿ ತೋಡಲು ಪ್ರತ್ಯೇಕ ಸಹಾಯಧನ ಲಭ್ಯವಿದೆ:

 • ಅಡಿಕೆ – 150 ರೂಪಾಯಿ
 • ತೆಂಗು ಕೃಷಿ – 340 ರೂಪಾಯಿ
 • ಗೇರು ಕೃಷಿ – 80 ರೂಪಾಯಿ
 • ಕೋಕೋ ಕೃಷಿ – 80 ರೂಪಾಯಿ
 • ಕಾಳು ಮೆಣಸು ಕೃಷಿ – 50 ರೂಪಾಯಿ
 • ವೀಳ್ಯದೆಲೆ ಕೃಷಿ – 40 ರೂಪಾಯಿ
 • ಬಾಳೆ (ಅಂಗಾಂಶ) ಕೃಷಿ – 40 ರೂಪಾಯಿ

ರೈತರು ಕೇವಲ ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಅನುಭವನಿಸುವ ಬದಲು, ನರೇಗಾದಡಿ ಧನಸಹಾಯ ಪಡೆದು ಮಿಶ್ರ ಬೆಳೆಗಳನ್ನು ಬೆಳೆಯಲು ಕೂಡ ಸಾಕಷ್ಟು ಅವಕಾಶವಿದ್ದು; ಇದರಿಂದ ಆರ್ಥಿಕವಾಗಿ ಸದೃಢರಾಗಬಹುದು. ವಿಶೇಷವೆಂದರೆ ಈಚೆಗೆ 2022-23ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಮೇಲಿನ ವೈಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ನೀಡುತ್ತಿದ್ದ ಘಟಕ ವೆಚ್ಚವನ್ನು ಕೂಡ ಹೆಚ್ಚಿಸಿದೆ.

ಇದನ್ನೂ ಓದಿ: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳ | ಕ್ವಿಂಟಾಲ್ ಕೊಬ್ಬಿಗೆ 11,750 ರೂಪಾಯಿ

ಸಹಾಯಧನ ಪಡೆಯುವುದು ಹೇಗೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಸದ್ಭಳಕೆ ಮಾಡಿಕೊಳ್ಳಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.

ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-೬ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಅಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಆಸಕ್ತ ರೈತರು ನರೇಗಾ ಯೋಜನೆಯ ಸಹಾಯವಾಣಿ: 1800 425 8666 ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ನರೇಗಾ ಯೋಜನೆ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!