ಸರಕಾರಿ ಯೋಜನೆ

ಡಿಸೆಂಬರ್ 31ರೊಳಗೆ ಬೆಳೆವಿಮೆ ಮಾಡಿಸಿ ಹೆಕ್ಟೇರ್‌ಗೆ ₹29,000 ರಿಂದ ₹86,000 ಬೆಳೆನಷ್ಟ ಪರಿಹಾರ ಪಡೆಯಿರಿ | Winter Crop Insurance

WhatsApp Group Join Now
Telegram Group Join Now

2022-23ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಡಿಸೆಂಬರ್ 31ರೊಳಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರ್‌ಗೆ ₹29,000 ರೂಪಾಯಿಯಿಂದ ₹86,000  ರೂಪಾಯಿ ವರೆಗೂ ಆಯಾ ಬೆಳೆಗೆ ತಕ್ಕಂತೆ ರೈತರು ಬೆಳೆನಷ್ಟ ಪರಿಹಾರ ಪಡೆದುಕೊಳ್ಳಬಹುದು. ಯಾವ ಬೆಳೆಗೆ ಎಷ್ಟು ನಷ್ಟ ಪರಹಾರ? ವಿಮಾ ಕಂತು ಪಾವತಿ ಹೇಗೆ? ಪರಿಹಾರಕ್ಕೆ ರೈತರು ಪಾಲಿಸಬೇಕಾದ ನಿಯಮಗಳೇನು? ಸಮಗ್ರ ಮಾಹಿತಿ ಇಲ್ಲಿದೆ…

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ 2022-23ನೇ ಸಾಲಿನ ಹಿಂಗಾರು ಹಂಗಾಮುನ ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ವಿಮೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಅಷ್ಟರೊಳಗೆ ವಿಮಾ ಕಂತು ಪಾವತಿಸಿದರೆ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ, ಜೋಳ, ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 29,000 ರೂಪಾಯಿಯಿಂದ 86,000 ರೂಪಾಯಿ ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಪಡೆದುಕೊಳ್ಳಬಹುದು.

ಹಿಂಗಾರು ಬೆಳೆಗಳಾದ ಮಳೆಯಾಶ್ರಿತ ಗೋಧಿ ಬೆಳೆಗೆ ವಿಮೆ ಮಾಡಿಸಲು ಡಿಸೆಂಬರ್ 16 ಮತ್ತು ಮಳೆಯಾಶ್ರಿತ ಕಡಲೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಇನ್ನು ನೀರಾವರಿ ಕಡಲೆ, ಜೋಳ, ಗೋಧಿ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಕೆಲವು ಜಿಲ್ಲೆಗಳಲ್ಲಿ ವಿಮೆ ಮಾಡಿಸುವ ಅವಧಿ ಮುಗಿದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಇತರ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ಹಾಗೂ 31 ಕೊನೆಯ ದಿನವಾಗಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ವಿಮಾ ಕಂತು ಪಾವತಿ ಹೇಗೆ?

ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ಸಾಲದ ಮೊತ್ತ ನೀಡಲಾಗುತ್ತದೆ. ಹೀಗಾಗಿ ಈ ರೈತರು ಬೆಳೆವಿಮೆ ಕಂತನ್ನು ಪ್ರತ್ಯೇಕವಾಗಿ ಪಾವತಿಸುವ ಅಗತ್ಯವಿಲ್ಲ.

ಇನ್ನು ಬೆಳೆ ಸಾಲ ಪಡೆಯದೇ ಇರುವ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳು, ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಿ, ಜಮೀನು ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ವಿಮಾ ಅರ್ಜಿಯೊಂದಿಗೆ ನೀವು ಯಾವ ಬೆಳೆಗೆ ವಿಮೆ ಮಾಡಿಸುತ್ತಿದ್ದೀರೋ ಆ ಬೆಳೆ ವಿಮೆಯ ಕಂತನ್ನು (ಪ್ರೀಮಿಯಂ) ಪಾವತಿಸಬೇಕು.

ಬೆಳೆಯನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ. ಬೆಳೆ ಬಿತ್ತಲೆಯಿಂದ ಫಸಲ ಕೈಯ್ಯುವ ವರೆಗಿನ ಅವಧಿಯಲ್ಲಿ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ತಮ್ಮ ಕೈ ಮೀರಿದ ಯಾವುದೇ ನೈಸರ್ಗಿಕ ಅವಘಡಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆದುಕೊಳ್ಳಬಹುದು.

ಇದನ್ನೂ ಓದಿ: ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಯಾವ ಬೆಳೆಗೆ ಎಷ್ಟು ಪರಿಹಾರ?

ಮಳೆಯಾಶ್ರಿತ ಗೋಧಿಗೆ ಪ್ರತಿ ಹೆಕ್ಟೇರಿಗೆ 29,000 ರೂಪಾಯಿ ನಷ್ಟ ಪರಿಹಾರ ಬರುತ್ತದೆ. ಇದಕ್ಕೆ ರೈತರು 435 ರೂಪಾಯಿ ವಿಮೆ ಹಣ ಪಾವತಿಸಬೇಕು. ಅದೇ ರೀತಿ ನೀರಾವರಿ ಗೋಧಿಗೆ ಪ್ರತಿ ಹೆಕ್ಟೇರಿಗೆ 40,000 ರೂಪಾಯಿ ಜಮೆಯಾಗುತ್ತದೆ. ಇದಕ್ಕೆ ರೈತರು ಕೇವಲ 600 ರೂಪಾಯಿ ಪಾವತಿಸಬೇಕು. ನೀರಾವರಿ ಭತ್ತಕ್ಕೆ ಪ್ರತಿ ಹೆಕ್ಟೇರಿಗೆ 86,000 ರೂಪಾಯಿ ಜಮೆಯಾಗುತ್ತದೆ. ಇದಕ್ಕೆ ರೈತರು 1,290 ರೂಪಾಯಿ ವಿಮಾ ಮೊತ್ತ ಪಾವತಿಸಬೇಕಾಗುತ್ತದೆ.

ನೆನಪಿಡಿ, ಪ್ರೀಮಿಯಂ ಪಾವತಿಸಿದ ಮಾತ್ರಕ್ಕೆ ಬೆಳೆ ವಿಮಾ ಪರಿಹಾರ ರೈತರ ಕೈಸೇರುವುದಿಲ್ಲ. ಕೆಲವು ನಿಯಮಗಳನ್ನು ಮರೆಯದೇ ಪಾಲಿಸಬೇಕು. ಅಸಲಿಗೆ ಬೆಳೆ ವಿಮೆ ಮಾಡಿಸಿದ ನಂತರ ನೈಸರ್ಗಿಕ ವಿಪತ್ತಿನಿಂದಾದ ಬೆಳೆ ನಷ್ಟಕ್ಕೆ ರೈತರು ವಿಮಾ ಹಕ್ಕು ಪಡೆಯುತ್ತಾರೆ. ಅಂದರೆ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಅಕಾಲಿಕ ಮಳೆ, ಆಲಿಕಲ್ಲು ಮಳೆ, ಭೂ ಕುಸಿತ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ವಿಮೆ ಮಾಡಿಸಿದ ಬೆಳೆ ಪ್ರಕೃತಿ ವಿಕೋಪದಿಂದಾಗಿ ಹಾಳಾದರೆ ರೈತರು ಕೂಡಲೇ ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ನೀವು ಮೊಬೈಲ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು.

ಬಳಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾಳಾಗಿದೆಯೋ ಅದನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಮೇಲಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಬೆಳೆ ವಿಮೆ ಪ್ರೀಮಿಯಂ ಅನ್ನು ಯಾವ ಕಂಪನಿಗೆ ಪಾವತಿಸಲಾಗಿದೆ ಎಂಬುವುದನ್ನು ಹಾಗೂ ಬೆಳೆವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ತಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

========================

ಇವುಗಳನ್ನೂ ಓದಿ:

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!