ಉದ್ಯೋಗ

Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

WhatsApp Group Join Now
Telegram Group Join Now

Karnataka Village Accountant Recruitment 2024

ರಾಜ್ಯದಲ್ಲಿ ಖಾಲಿ ಇರುವ 1820 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮಹತ್ವದ ಮಾಹಿತಿ ನೀಡಿದೆ.ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಕಂದಾಯ ಇಲಾಖೆಯು ಕಳೆದ ಹಲವು ತಿಂಗಳ ಹಿಂದೆ ರಾಜ್ಯದಲ್ಲಿ ಖಾಲಿ ಇರುವ ‘ಗ್ರಾಮ ಆಡಳಿತ ಅಧಿಕಾರಿ’ (Village Administrator) ಹುದ್ದೆಗಳ ನೇಮಕಾತಿ ಶೀಘ್ರದಲ್ಲಿಯೇ ನಡೆಯಲಿದೆ ಎಂಬ ಮಾಹಿತಿಯನ್ನು ಹಂಚಿಕೊ೦ಡಿತ್ತು.

ಈ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾರ್ಥಿಗಳು ಹಲವು ವರ್ಷಗಳಿಂದ ತಯಾರಿ ನಡೆಸಿ, ನೇಮಕಾತಿ ಯಾವಾಗ ನಡೆಯಲಿದೆ ಎಂದು ಕಾಯ್ದು ಕುಳಿತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಇದೀಗ ಮಹತ್ವದ ಮಾಹಿತಿಯನ್ನು ಹಂಚಿಕೊ೦ಡಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿಯಿರಿ.

 

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಪ್ರತೀ ವರ್ಷವೂ 500 ಹುದ್ದೆಗಳ ನೇಮಕಾತಿಗೆ ಸಹಮತಿ

ರಾಜ್ಯದಲ್ಲಿ ಖಾಲಿ ಇರುವ 1,820 ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬ೦ಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ‘ಅತೀ ಜರೂರ್’ ಮಾಹಿತಿ ನೀಡುವಂತೆ ದಿನಾಂಕ: 25-01-2024ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪ್ರಕಟಣೆಯ ಪ್ರಕಾರ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ ಸಂಬAಧ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26ನೇ ಸಾಲಿಗೆ ಪ್ರತಿ ವರ್ಷ 500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.

ಇದನ್ನೂ ಓದಿ: NIACL Assistant Recruitment 2024 : ಭಾರತೀಯ ವಿಮಾ ಕಂಪನಿಯಲ್ಲಿ 300 ಸಹಾಯಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಪ್ರಸಕ್ತ ಖಾಲಿಯಿರುವ 1,820 ಹುದ್ದೆಗಳ ಪೈಕಿ 1,000 ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಜಿಲ್ಲಾವಾರು ಒಟ್ಟು ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು, ಖಾಲಿ ಹುದ್ದೆಗಳ ಮತ್ತು ಆರ್ಥಿಕ ಇಲಾಖೆಯಿಂದ ಸದ್ಯಕ್ಕೆ ನೇಮಕಾತಿ ನಡೆಯಲು ಮಂಜೂರಾದ ಹುದ್ದೆಗಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ…

 

ಇದನ್ನೂ ಓದಿ: ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ | Ministry of defence recruitment 2024

ನೇಮಕಾತಿ ಪ್ರಕ್ರಿಯೆ ಹೇಗೆ?

ಕರ್ನಾಟಕ ಸರ್ಕಾರವು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಹೆಸರನ್ನು ಅಧಿಕೃತವಾಗಿ ಬದಲಾವಣೆ ಮಾಡಿ ‘ಗ್ರಾಮ ಆಡಳಿತಾಧಿಕಾರಿ’ ಎಂದು ಮರುನಾಮಕರಣ ಮಾಡಿದೆ. ಅದೇ ರೀತಿ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಿದೆ. ಈ ಮೊದಲು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

ಇದೀಗ ಹೊಸ ಬದಲಾವಣೆಯ ಪ್ರಕಾರ ಕೋವಿಡ್ ನಂತರ ಪಿಯುಸಿಯಲ್ಲಿ ಅನೇಕ ವಿದ್ಯಾರ್ಥಿಗಳ ಫಲಿತಾಂಶ 100ಕ್ಕೆ 100 ಬಂದಿರುವುದರಿ೦ದ ಮತ್ತು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದು ಸರಿಯಾದ ಮಾರ್ಗವಲ್ಲವೆಂದು, ಹೊಸ ಆಯ್ಕೆ ಪ್ರಕ್ರಿಯೆ ಮುಂದಾಗಿದೆ. ಪಿಯುಸಿ ವಿದ್ಯಾರ್ಹತೆ ಆಧರಿಸಿ ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುಲಾಗುವುದು.

 

ಇದನ್ನೂ ಓದಿ: BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

ಮಾಸಿಕ ಸಂಬಳ ಮತ್ತು ವಯೋಮಿತಿ ವಿವರ

ಗ್ರಾಮ ಆಡಳಿತ ಅಧಿಕಾರಿಯಾಗಿ ಆಯ್ಕೆಯಾದವರಿಗೆ ಮಾಸಿಕ ₹21,000 ರಿಂದ ₹42,000 ವರೆಗೆ ಸಂಬಳ ಇರುತ್ತದೆ. ಜತೆಗೆ ಸರಕಾರದ ಸಕಲ ಸವಲತ್ತುಗಳು ಅನ್ವಯವಾಗುತ್ತವೆ.

ಇನ್ನು ವಯೋಮಿತಿ ವಿವರ ನೋಡುವುದಾದರೆ, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷದವರಾಗಿರಬೇಕು ಮತ್ತು ಗರಿಷ್ಟ ವಯಸ್ಸು 35 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯು ಶೀಘ್ರದಲ್ಲೇ ಆರಂಭವಾಗಲಿದ್ದು; ಫೆಬ್ರವರಿ ತಿಂಗಳ ಅಂತ್ಯದೊಳಗೆ ಅಧಿಸೂಚನೆ ಹೊರಬೀಳುವ ಸಂಪೂರ್ಣ ಸಾಧ್ಯತೆಗಳಿವೆ. ಆದ್ದರಿಂದ ಸ್ಪರ್ಧಾರ್ಥಿಗಳು ಈಗಿನಿಂದಲೇ ಪರೀಕ್ಷೆಗಾಗಿ ಸಿದ್ಧತೆಯನ್ನು ಆರಂಭಿಸಿ. ಈ ನೇಮಕಾತಿಗೆ ಸಂಬಂಧಿಸಿದ ಮುಂದಿನ ಹಂತದ ಪ್ರತಿಯೊಂದು ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ…

Karnataka Village Accountant Recruitment 2024

ಇದನ್ನೂ ಓದಿ: ಹೈನುಗಾರಿಕೆ 10 ಲಕ್ಷದ ವರೆಗೂ ಮೇಲಾದಾರ ಮುಕ್ತ ಸಾಲ 

WhatsApp Group Join Now
Telegram Group Join Now

Related Posts

error: Content is protected !!