ಸರಕಾರಿ ಯೋಜನೆ

ಖರಾಬು ಜಮೀನನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವುದು ಹೇಗೆ? ಇಲ್ಲಿದೆ ಕಂದಾಯ ಪರಿಣಿತರ ಸಲಹೆ | How to convert kharab land into agricultural land

WhatsApp Group Join Now
Telegram Group Join Now

ಸಾಮಾನ್ಯವಾಗಿ ಬಹುತೇಕ ರೈತರು ಸ್ವಲ್ಪವಾದರೂ ಖರಾಬು ಭೂಮಿ ಹೊಂದಿರುತ್ತಾರೆ. ಕೃಷಿ ಯೋಗ್ಯವಲ್ಲದ ಇಂತಹ ಭೂಮಿಯನ್ನು ಖಾನೂನುರಿತ್ಯಾ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದು ಹೇಗೆ? ಅದಕ್ಕಿರುವ ನಿಯಮಗಳೇನು? ಇಷ್ಟಕ್ಕೂ ಖರಾಬು ಭೂಮಿ ಎಂದರೇನು? ಎಂಬ ಸಮಗ್ರ ಮಾಹಿತಿ ಇಲ್ಲಿದೆ…

ಖರಾಬು ಭೂಮಿ ಎಂದರೆ ತ್ಯಾಜ್ಯ ಭೂಮಿ ಅಥವಾ ಬಂಜರು ಭೂಮಿ ಎಂದರ್ಥ. ಭಾರತ, ಪಾಕಿಸ್ತಾನ ಮತ್ತು ಇತರ ಕೆಲವು ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೃಷಿಗೆ ಸೂಕ್ತವಲ್ಲದ ಭೂಮಿಯನ್ನು ಉಲ್ಲೇಖಿಸಲು ಈ ಪದ ಬಳಸಲಾಗುತ್ತದೆ. ಇಂತಹ ಖರಾಬು ಭೂಮಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ನಗರ ಪ್ರದೇಶಗಳಲ್ಲಿ ಇದು ತುಂಬಾ ಕಡಿದಾದ ಅಥವಾ ಅಭಿವೃದ್ಧಿಗೆ ಪೂರಕವಾಗಿರದ ಭೂಮಿಯಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ತುಂಬಾ ಕಲ್ಲು-ಮರಳಿನ, ಹಳ್ಳ ಕೊಳ್ಳ ದಿಣ್ಣೆ, ನೀರಿನ ಮೂಲ ಹರಿದು ಹೋಗುವ ಅಥವಾ ಕೃಷಿಗೆ ಯೋಗ್ಯವಲ್ಲದ ಜವುಗು ಭೂಮಿಯಾಗಿರುತ್ತದೆ.

ಇದನ್ನೂ ಓದಿ: ತೆಂಗಿಗೆ ನೀರು, ಗೊಬ್ಬರ ಹೀಗೆ ನೀಡಿದರೆ ಹಠಾತ್ ಹೆಚ್ಚಲಿದೆ ಇಳುವರಿ | ಇಲ್ಲಿದೆ ತೆಂಗಿನ ಇಳುವರಿ ಹೆಚ್ಚಿಸುವ ರಹಸ್ಯ

ಭಾರತ ಸರ್ಕಾರವು ಖರಾಬು ಭೂಮಿಯನ್ನು ಕೃಷಿಯೋಗ್ಯವಲ್ಲದ ಮತ್ತು ಯಾವುದೇ ಕೃಷಿ ಉದ್ದೇಶಕ್ಕಾಗಿ ಬಳಸಲಾಗದ ಭೂಮಿ ಎಂದು ವ್ಯಾಖ್ಯಾನಿಸಿದೆ. ಭಾರತೀಯ ಕಾನೂನಿನ ಪ್ರಕಾರ ಖರಾಬು ಭೂಮಿಯನ್ನು ಯಾರಿಗೂ ಮಾರುವಂತಿಲ್ಲ ಅಥವಾ ವರ್ಗಾಯಿಸುವಂತಿಲ್ಲ. ಇದನ್ನು ಸಾಮಾನ್ಯವಾಗಿ ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ಬಳಕೆಯನ್ನು ಸರ್ಕಾರವು ನಿಯಂತ್ರಿಸುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಗಣಿಗಾರಿಕೆ ಅಥವಾ ಕೈಗಾರಿಕಾ ಅಭಿವೃದ್ಧಿಯಂತಹ ಕೃಷಿಯೇತರ ಉದ್ದೇಶಗಳಿಗಾಗಿ ಇದನ್ನು ಬಳಸಬಹುದು. ಜತೆಗೆ ಭೂಸುಧಾರಣಾ ಯೋಜನೆಗಳು ಅಥವಾ ಇತರ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೃಷಿಯೋಗ್ಯ ಭೂಮಿಯಾಗಿಯೂ ಪರಿವರ್ತಿಸಬಹುದು. ಇಲ್ಲಿ ಖರಾಬು ಭೂಮಿಯನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವ ಕ್ರಮಗಳ ಬಗ್ಗೆ ನೋಡೋಣ…

ಇದನ್ನೂ ಓದಿ: 570 ಪಿಡಿಒ ಹುದ್ದೆಗಳ ನೇಮಕಾತಿ: ಪರೀಕ್ಷೆ ತಯಾರಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಏನಿದು ಖರಾಬು ಭೂಮಿ?

ಮೊದಲೇ ಹೇಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಖರಾಬು ಜಮೀನು ಎಂದರೆ ಕೃಷಿ ಮಾಡಲು ಯೋಗ್ಯವಲ್ಲದ ಭೂಮಿ ಎಂದರ್ಥ. ಅಲ್ಲಿ ರಸ್ತೆ, ಹಳ್ಳ, ಕೆರೆ ಕಾಲುವೆ, ನದಿ ಇತ್ಯಾದಿ ಹಾಯ್ದು ಹೋಗಿರಬಹುದು. ಆ ಪ್ರದೇಶದಲ್ಲಿ ಕುರುಚಲು ಕಾಡು ಬೆಳೆದಿಬಹುದು. ಕಲ್ಲಿನಿಂದಾವೃತವಾದ ಕೊರಕಲು ಪ್ರದೇಶ ಸೃಷ್ಟಿಯಾಗಿರಬಹುದು. ಒಟ್ಟಿನಲ್ಲಿ ಸಾಗುವಳಿಗೆ ಯೋಗ್ಯವಲ್ಲದ, ಕೃಷಿಗೆ ಪೂರಕವಾದ ವಾತಾವರಣ ಹೊಂದಿರದ ಭೂಮಿಯೇ ಖರಾಬು ಭೂಮಿ.

ಗಮನಾರ್ಹವೆಂದರೆ ಕೆಲವು ಸಂದರ್ಭದಲ್ಲಿ ಕೃಷಿ ಮಾಡಲು ಪೂರಕವಾಗಿದ್ದರೂ ಕೂಡ ಕೆಲವು ಭೂಮಿಗಳನ್ನು ಖರಾಬ ಜಮೀನು ಎಂದೇ ಪರಿಗಣಿಸಲಾಗುತ್ತದೆ. ಅಂದರೆ ಸಮತಟ್ಟಾದ ಕಾಲುದಾರಿ, ಬಂಡಿದಾರಿ, ಗೋಮಾಳ ಪ್ರದೇಶದಂತಹ ಸಾರ್ವಜನಿಕ ಬಳಕೆಯ ಭೂಮಿಯನ್ನೂ ಕೂಡ ಖರಾಬು ಭೂಮಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಖರಾಬು ಭೂಮಿಯನ್ನು ಅ ಖರಾಬು (A kharab) ಮತ್ತು ಬ ಖರಾಬು (B kharab) ಎಂದು ವಿಂಗಡಿಸಲಾಗಿದೆ.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಅ ಖರಾಬು ಪರಿವರ್ತನೆ ಹೇಗೆ?

ಸಾಮಾನ್ಯವಾಗಿ ಅ ಖರಾಬು ಪ್ರದೇಶ ಸಾರ್ವಜನಿಕವಲ್ಲದ ರೈತರಿಗೆ ಮೀಸಲಾದ ಭೂಮಿಯಾಗಿರುತ್ತದೆ. ಆದರೆ ಕೃಷಿ ಮಾಡಲು ಯೋಗ್ಯವಾಗಿರುವುದಿಲ್ಲ. ಮೇಲೆ ಹೇಳಿದಂತೆ ಈ ಭಾಗದಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡದೇ ಕುರುಚಲು ಕಾಡು ಬೆಳೆದಿರಬಹುದು, ಕಣಕಟ್ಟೆಗೆಂದು ಬೀಳು ಬಿಟ್ಟಿರಬಹುದು, ಯಾವುದಾದರೂ ನೀರಿನ ಮೂಲ ಸೃಷ್ಟಿಯಾಗಿರಬಹುದು ಅಥವಾ ಸಾಗುವಳಿಗೆ ಇಕ್ಕಟ್ಟಾದ ವಿಸ್ತೀರ್ಣ ಹೊಂದಿರಬಹುದು. ಈ ರೀತಿಯ ಕೃಷಿ ಯೋಗ್ಯವಲ್ಲದ ಖಾಸಗಿ ಜಮೀನನ್ನು ಅ ಖರಾಬು ಎಂದು ಕರೆಯಲಾಗುತ್ತದೆ.

ಇಂತಹ ಅ ಖರಾಬು ಜಮೀನಿಗೆ ಸರಕಾರ ಕಂದಾಯ ವಸೂಲಿ ಮಾಡುವುದಿಲ್ಲ. ಆದರೆ ಈ ಭಾಗದ ವಿವರವನ್ನು ಪ್ರತ್ಯೇಕವಾಗಿ ಗುರುತಿಸಿ ಲೆಕ್ಕ ಹಾಕಿ ಅದರ ವಿಸ್ತೀರ್ಣವನ್ನು ಪಹಣಿಯ ಕಾಲಂ 3ರಲ್ಲಿ ದಾಖಲಿಸಲಾಗಿರುತ್ತದೆ. ಅದರ ಕೆಳ ಭಾಗದಲ್ಲಿ ಅ ಮತ್ತು ಬ ಖರಾಬಿನ ವಿಸ್ತೀರ್ಣ ನಮೂದಿಸಲಾಗಿರುತ್ತದೆ. ರೈತರು ಇದನ್ನು ತಮಗೆ ಬೇಕೆನಿಸಿದರೆ ಸಾಗುವಳಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಬಹುದು. ಅಥವಾ ಯೋಗ್ಯ ಪರಿಹಾರ ಪಡೆದು ಸಾರ್ವಜನಿಕ ಭೂಮಿಯನ್ನಾಗಿಯೂ ಬಿಟ್ಟು ಕೊಡಬಹುದು. ಹಾಗಾದರೆ ಅ ಖರಾಬು ಎಂದು ಪರಿಗಣಿಸಲ್ಪಟ್ಟಿರುವ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡುವುದು ಹೇಗೆ?

ಇದನ್ನೂ ಓದಿ: ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಸಂಬಂಧಿಸಿದ ಭೂ ದಾಖಲೆಗಳಾದ ಪಹಣಿ, ಆಕಾರಬಂದ, ಟಿಪ್ಪಣಿ ದೃಢೀಕರಣ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳೊಂದಿಗೆ ನಿಮ್ಮ ಅ ಖರಾಬು ಭೂಮಿಯ ವಿವರ ಹಾಗೂ ಅದನ್ನು ವ್ಯವಸಾಯ ಯೋಗ್ಯವಾಗಿ ಮರುಬಳಕೆ ಮಾಡಿಕೊಳ್ಳುವ ಮಾಹಿತಿವುಳ್ಳ ಅರ್ಜಿ ಬರೆದು ತಾಲೂಕಿನ ತಹಶೀಲ್ದಾರರಿಗೆ ಸಲ್ಲಿಸಬೇಕು. ನಂತರ ಭೂ ಕಂದಾಯ ನಿಯಮಗಳ ಪ್ರಕಾರ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಎಲ್ಲಾ ದಾಖಲಾತಿ ಸರಿ ಇದ್ದರೆ ಸಾಗುವಳಿ ಭೂಮಿಯನ್ನಾಗಿ ಪರಿವರ್ತನೆ ಮಾಡುತ್ತಾರೆ.

ಆದರೆ ಇದಕ್ಕೆ ಕೆಲವು ಶರತ್ತುಗಳಿವೆ. ಅವೆನೆಂದರೆ; ನೀವು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಇಚ್ಛಿಸಿರುವ ಭೂಮಿಯೂ ಹಳ್ಳಕೊಳ್ಳಗಳಿಲ್ಲದ ಕೊರಕಲು ಪ್ರದೇಶವಾಗಿರಬಾರದು. ಸರಕಾರದ ಅನುಮತಿಯೊಂದಿಗೆ ಸ್ವತಃ ನೀವೇ ಈ ಪ್ರದೇಶವನ್ನು ಹಲವು ವರ್ಷಗಳ ಕಾಲ ಬಳಸುತ್ತಿರಬೇಕು. ಬಹುಮುಖ್ಯವಾಗಿ ಈ ಖರಾಬು ಪ್ರದೇಶದ ಮೇಲೆ ನೆರೆಹೊರೆಯವರ ತಕರಾರು ಇರಲೇ ಬಾರದು. ಅಥವಾ ಸಾರ್ವಜನಿಕರ ತಗಾದೆ ಕೂಡ ಇರಕೂಡದು. ಹೀಗಿದ್ದು, ಭೂ ಕಂದಾಯ ನಿಯಮಗಳನ್ನು ಮೀರದಂತಿದ್ದರೆ ಸರ್ಕಾರ ನಿಗದಿತ ಕಂದಾಯ ಪಾವತಿಸಿ ಸದರಿ ಅ ಖರಾಬನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!