ಸರಕಾರಿ ಯೋಜನೆ

ಈ ವರ್ಷ ಮಳೆ ದುರ್ಬಲ: ಬಿತ್ತನೆಗೂ ಮುನ್ನ ತಪ್ಪದೇ ಬೆಳೆ ವಿಮೆ ಮಾಡಿಸಿ | Khariff crop insurance 2023-24

WhatsApp Group Join Now
Telegram Group Join Now

ಈ ಬಾರಿ ರಾಜ್ಯಕ್ಕೆ ವಾಡಿಕೆಗಿಂತ ತಡವಾಗಿ ಆಗಮಿಸಿರುವ ಮುಂಗಾರು ಮಾರುತಗಳು ಆರಂಭದಲ್ಲೇ ದುರ್ಬಲಗೊಂಡ ಪರಿಣಾಮ ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯಾದ್ಯಂತ ಇದುವರೆಗೆ ಕೇವಲ ಶೇ.15ರಷ್ಟು ಬಿತ್ತನೆ ಕಾರ್ಯ ಮಾತ್ರ ನಡೆದಿದೆ.

ಮುಂಗಾರು ಪೂರ್ವದಲ್ಲಿ ಉಂಟಾಗಿದ್ದ ತೇವಾಂಶ ಕೊರತೆ, ಗಾಳಿ ವೇಗ ಇಲ್ಲದಿರುವುದು ಹಾಗೂ ‘ಬಿಪರ್ ಜೋಯ್’ ಚಂಡಮಾರುತವೂ ತೇವಾಂಶ ಭರಿತ ಮೋಡ ಸೆಳೆದಿರುವುದು ಸೇರಿ ಅನೇಕ ಕಾರಣಗಳಿಂದ ವಾಡಿಕೆಯಂತೆ ಆಗಮನವಾಗಬೇಕಿದ್ದ ಮುಂಗಾರಿನ ಮೇಲೆ ಪರಿಣಾಮ ಬೀರಿತ್ತು.

ರೈತರೇ ಬೆಳೆ ಸಮೀಕ್ಷೆ ಮಾಡದಿದ್ದರೆ ನಿಮಗೆ ಕೃಷಿ ಸಾಲ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಸಿಗೊಲ್ಲ | Monsoon Crop Survey 2023

ಮೂರು ವರ್ಷದಿಂದ ವಾಡಿಕೆಗಿಂತ ಕಡಿಮೆ ಮಳೆ

ಮೂಲ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೆ, ಮೂರು ವರ್ಷಗಳಿಂದಲೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ.

ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸೂಕ್ತ ಸಮಯಕ್ಕೆ ಮಳೆ ಬರುತ್ತಿಲ್ಲ. ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರದಲ್ಲಿ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುವಂತಾಗಿದೆ. ಇದಕ್ಕೆ ಹವಾಮಾನ ವೈಪರಿತ್ಯವೇ ಪ್ರಮುಖ ಕಾರಣ.

ರೈತರೇ ಈ ದಿನಾಂಕದೊಳಗೇ ಮುಂಗಾರು ಬೆಳೆಗಳ ವಿಮೆ ಮಾಡಿಸಿ | ಯಾವ ಬೆಳೆಗೆ ಎಷ್ಟು ವಿಮೆ? ಇಲ್ಲೇ ಚೆಕ್ ಮಾಡಿ…

ಕೈ ತಪ್ಪಿದ ಬೆಳೆವಿಮೆ

ಧಾರವಾಡ ಜಿಲ್ಲೆಯ ರೈತರು ಜೂನ್ ಆರಂಭದಲ್ಲಿ ಮಳೆ ಆಗಿದ್ದರಿಂದ ತಮ್ಮ ಬಳಿ ಇದ್ದ ಹಣ ವ್ಯಯಿಸಿ ಸೋಯಾಬೀನ್, ಹೆಸರು, ಗೋವಿನ ಜೋಳ, ಉದ್ದು, ಶೇಂಗಾ ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗುತ್ತಿವೆ.

ಇಂತಹ ಸಮಯದಲ್ಲಿ ವಿಮಾ ಕಂಪನಿಯೂ ಬೆಳೆ ವಿಮೆಗೆ ಈಗಷ್ಟೇ ಮುಂಗಾರು ಬೆಳೆಗಳನ್ನು ಗುರುತಿಸಿದೆ. ಬೆಳೆ ಒಣಗುತ್ತಿದೆ ಎಂಬ ನೋವು ಒಂದೆಡೆಯಾದರೆ, ವಿಮೆಯೂ ಸಿಗದಂತೆ ಆಯಿತಲ್ಲ ಎಂಬ ಸಂಕಷ್ಟ ರೈತರನ್ನು ಕಾಡತೊಡಗಿದೆ. ಆರಂಭದಲ್ಲಿಯೇ ಗುರುತಿಸಿದ್ದರೆ ನೆರವಾಗುತ್ತಿತ್ತು ಎಂಬ ಮಾತು ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ಬಿತ್ತನೆಗೂ ಮೊದಲು ವಿಮೆ ಮಾಡಿಸಿ…

ಈ ವರ್ಷ ಮಳೆ ದುರ್ಬಲವಾಗಿರುವುದರಿಂದ ರೈತರು ಬಿತ್ತನೆಗೆ ಮೊದಲು ಬೆಳೆ ವಿಮೆ ಮಾಡಿಸುವುದು ಕ್ಷೇಮಕರ. ಈಗಾಗಲೇ 2023-24ನೇ ಮುಂಗಾರು ಹಂಗಾಮು ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಮಾಡಿಸಲು ಅಂತಿಮ ದಿನಾಂಕ ಪ್ರಕಟಿಸಲಾಗಿದೆ.

ಆಸಕ್ತ ರೈತರು ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಲು ವಿನಂತಿಸಲಾಗಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಾಧ್ಯತೆ ಇದೆ. ಹೀಗಾಗಿ ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ರೈತರು ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚಿತವಾಗಿ ಯಾವ ವಿಮಾ ಕಂಪನಿಗೆ ವಿಮೆ ಹಣ ಕಟ್ಟುತ್ತಿದ್ದೀರಿ ಹಾಗೂ ನಿಮ್ಮ ತಾಲೂಕಿಗೆ ಸಂಬAಧಿಸಿದ ವಿಮಾ ಕಂಪನಿಯ ಸಿಬ್ಬಂದಿಗಳ ನಂಬರ್ ಪಡೆದುಕೊಳ್ಳಬೇಕು. ಏಕೆಂದರೆ ಬೆಳೆ ಹಾಳಾದಾಗ ವಿಮಾ ಕಂಪನಿಗೆ ತಿಳಿಸುವುದು ಅತೀ ಮುಖ್ಯವಾಗಿರುತ್ತದೆ.

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಬೆಳೆವಿಮೆ ಅಂತಿಮ ದಿನಾಂಕ ಚೆಕ್ ಮಾಡಿ…

ನಿಮ್ಮ ಜಿಲ್ಲೆಯ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ನಿಗದಿಯಾಗಿದೆ ಎಂಬುವುದನ್ನು ನೀವು ಮೊಬೈಲ್‌ನಲ್ಲೇ ಚೆಕ್ ಮಾಡಬಹುದು. ಅದಕ್ಕಾಗಿ ಮೊದಲಿಗೆ ‘ಸಂರಕ್ಷಣೆ’ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

(https://www.samrakshane.karnataka.gov.in/PublicView/FindCutOff.aspx)

ಆಗ ಸಂರಕ್ಷಣೆ ಜಾಲತಾಣದ »View Cut Off Dates ಪುಟ ನೇರವಾಗಿ ತೆರೆದುಕೊಳ್ಳುತ್ತದೆ. ಅಲ್ಲಿ ವರ್ಷ/Year ಎದುರು 2023-2024 ಸೆಲೆಕ್ಟ್ ಮಾಡಿ. ಋತು/Season ಎದುರು ಮುಂಗಾರು / Khariff ಸೆಲೆಕ್ಟ್ ಮಾಡಿ. ನಂತರ ಜಿಲ್ಲೆ/ District ಎದುರು ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿದರೆ ನಿಮ್ಮ ಜಿಲ್ಲೆಯ ಯಾವ ಬೆಳೆಗೆ ಯಾವುದು ಕೊನೆಯ ದಿನ ಹಾಗೂ ವಿಮೆ ಮಾಡಲು ಬಾಕಿ ಉಳಿದಿರುವ ದಿನಗಳೆಷ್ಟು ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

ಇವುಗಳನ್ನೂ ಓದಿ:

Crop Insurance: ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

ತೋಟಗಾರಿಕೆ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನ

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಸಣ್ಣ ರೈತರು ವರ್ಷಕ್ಕೆ 10,000 ರೂಪಾಯಿ ಪಡೆಯಲು ಜೂನ್ 30ರೊಳಗೆ ಇಕೆವೈಸಿ ಮಾಡಿ…

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!