ಉದ್ಯೋಗ

SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಸಾರಿಗೆ ಸಂಸ್ಥೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 4000ಕ್ಕೂ ಹೆಚ್ಚು ಬಸ್ ಕಂಡಕ್ಟರ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

BMTC And KKRTC Bus Conductor Recruitment 2024 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ 5,000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಪಟ್ಟಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Home Guards Karnataka : 247 ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಅರ್ಜಿ ಸಲ್ಲಿಸಿ…

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯ ವಿವರವಾದ ಅಧಿಕೃತ ಅಧಿಸೂಚನೆಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಿ, ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಸದ್ಯದಲ್ಲೇ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಒಂದು ಪಟ್ಟಿಯಲ್ಲಿ ಒಟ್ಟಾರೆ 4,237 ಬಸ್ ಕಂಡಕ್ಟರ್ ಹುದ್ದೆಗಳಿದ್ದು, ಸಂಸ್ಥೆಯವಾರು ಕಂಡಕ್ಟರ್ ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:

  • ಕರ್ನಾಟಕ ಕಲ್ಯಾಣ ರಸ್ತೆ ಸಾರಿಗೆ ಸಂಸ್ಥೆಯಲ್ಲಿ – 1,737 ಹುದ್ದೆಗಳು
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ – 2,500 ಹುದ್ದೆಗಳು

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ₹50 ಸಾವಿರಕ್ಕೂ ಹೆಚ್ಚು ಸಂಬಳದ ಸರ್ಕಾರಿ ನೌಕರಿ | ಈಗಲೇ ಅರ್ಜಿ ಸಲ್ಲಿಸಿ | Yadgiri district court recruitment 2024

ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ

Bus Conductor (ನಿರ್ವಾಹಕ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಹತ್ತನೇ ತರಗತಿ / 10th / SSLC ನಲ್ಲಿ ಪಾಸಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು ಮತ್ತು ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಕಂಡಕ್ಟರ್ ಮಾಸಿಕ ಸಂಬಳ ಎಷ್ಟು ಇರುತ್ತದೆ?

ಆರಂಭದಲ್ಲಿ ನಿರ್ವಾಹಕರ ಮಾಸಿಕ ಸಂಬಳ ಮತ್ತು ಭತ್ಯೆ ಸೇರಿ 30,000 ರೂಪಾಯಿ ಆಸುಪಾಸಿನಲ್ಲಿ ಇರುತ್ತದೆ. ನಿಖರವಾದ ಮಾಹಿತಿಯನ್ನು ಇಲಾಖೆಯು ವಿವರವಾದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ ನಮ್ಮ ಈ ವೆಬ್‌ಸೈಟ್‌ನಲ್ಲಿ ನಿಮಗೆ ತಿಳಿಸುತ್ತೇವೆ.

ಇದನ್ನೂ ಓದಿ: 2,000+ ಕಾನ್’ಸ್ಟೇಬಲ್ ಮತ್ತು ಸಬ್’ಇನ್‌ಸ್ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ | ಪಿಯುಸಿ, ಪದವೀಧರರಿಗೆ ಸುವರ್ಣಾವಕಾಶ | RPF Constable & SI recruitment 2024

ಕಂಡಕ್ಟರ್ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?

ಕಂಡಕ್ಟರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರದಲ್ಲಿ ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಹುದ್ದೆಗಳ ನೇಮಕಾತಿಗೆ ಇಲಾಖೆಯು ಸದ್ಯದಲ್ಲಿಯೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಲಿದ್ದು, ವಿವರವಾದ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ ನಂತರ ನಮ್ಮ ಈ ಜಾಲತಾಣದಲ್ಲಿ ನಾವು ನಿಮಗೆ ನೀಡುತ್ತೇವೆ. ಮುಂದಿನ ಅಪ್ ಡೇಟ್ ಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಖಾಲಿ ಹುದ್ದೆಗಳ ಸಂಕ್ಷಿಪ್ತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

BMTC And KKRTC Bus Conductor Recruitment 2024

ಇದನ್ನೂ ಓದಿ: Indian post office Staff Car Drivers Recruitment 2023 | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅಂಚೆ ಇಲಾಖೆ ಸ್ಟಾಫ್‌ಕಾರ್ ಡ್ರೈವರ್ ಹುದ್ದೆಗಳು

ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ… WCD Karnataka Anganwadi Recruitment 2024

WhatsApp Group Join Now
Telegram Group Join Now

Related Posts

error: Content is protected !!