ಉದ್ಯೋಗ

KMF ಹುದ್ದೆಗಳಿಗೆ SSLC, ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಸಂಬಳ: 42,000-97,100 | KMF VIMUL Recruitment 2023

WhatsApp Group Join Now
Telegram Group Join Now

ಕೆಎಂಎಫ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಎಸ್​ಎಸ್​ಎಲ್​ಸಿ, ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…

ಕೆಎಂಎಫ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಸೇವೆ ಸಲ್ಲಿಸಲು ಇಚ್ಛೆಯುಳ್ಳ ಎಸ್​ಎಸ್​ಎಲ್​ಸಿ, ಪದವಿ ಅಭ್ಯರ್ಥಿಗಳು ಈ ಸದಾವಕಾಶ ಬಳಸಿಕೊಳ್ಳಬಹುದು. ಇದೇ ಏಪ್ರಿಲ್ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು; ಅಷ್ಟರೊಳಗೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ: ಆಧಾರ್-ಪ್ಯಾನ್ ಜೋಡಣೆಗೆ ಜೂನ್ 30ರ ವರೆಗೂ ಅವಕಾಶ | ಅಷ್ಟರೊಳಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್-ಪ್ಯಾನ್ ಲಿಂಕ್

ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ವೇತನ

ಒಟ್ಟು 40 ಜೂನಿಯರ್ ಟೆಕ್ನಿಷಿಯನ್, ಎಕ್ಸ್ಟೆನ್ಶನ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

 1. ಅಸಿಸ್ಟೆಂಟ್ ಮ್ಯಾನೇಜರ್: ಒಟ್ಟು 06 ಹುದ್ದೆಗಳು ಖಾಲಿ ಇದ್ದು; ಬಿ.ವಿ.ಎಸ್ಸಿ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 52,650-97,100 ರೂಪಾಯಿ. 
 2. ಟೆಕ್ನಿಕಲ್ ಆಫೀಸರ್: ಒಟ್ಟು 02 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು; ಬಿ.ಎಸ್ಸಿ, ಬಿ.ಟೆಕ್ (DT) ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 43,100-83,900 ರೂಪಾಯಿ.
 3. ಎಕ್ಸ್ಟೆನ್ಶನ್ ಆಫೀಸರ್ (ಗ್ರೇಡ್ 3): ಒಟ್ಟು 08 ಹುದ್ದೆಗಳಿದ್ದು; ಈ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 33,450- 62,600 ರೂಪಾಯಿ.
 4. ಕೆಮಿಸ್ಟ್​ (ಗ್ರೇಡ್ 2):  ಒಟ್ಟು 03 ಹುದ್ದೆಗಳಿದ್ದು; ಬಿ.ಎಸ್ಸಿ ಪದವಿಧರರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ವೇತನ: ಮಾಸಿಕ 27,650-52,650 ರೂಪಾಯಿ.
 5. ಜೂನಿಯರ್ ಸಿಸ್ಟಂ ಆಪರೇಟರ್: 03 ಹುದ್ದೆಗಳು ಖಾಲಿ ಇದ್ದು; ಬಿ.ಎಸ್ಸಿ, ಬಿಸಿಎ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 27,650-52,650 ರೂಪಾಯಿ.
 6. ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2):  02 ಹುದ್ದೆಗಳಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೇತನ: ಮಾಸಿಕ 27,650-52,650 ರೂಪಾಯಿ.
 7. ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2): 02 ಹುದ್ದೆಗಳ ಭರ್ತಿಗೆ ಅವಕಾಶವಿದ್ದು; ಬಿ.ಕಾಂ, ಬಿಬಿಎ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದು. ವೇತನ: ಮಾಸಿಕ 27,650-52,650 ರೂಪಾಯಿ.
 8. ಜೂನಿಯರ್ ಟೆಕ್ನಿಷಿಯನ್: 08 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಐಟಿಐ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 21,400-42,000 ರೂಪಾಯಿ.
 9. ಮಿಲ್ಕ್ ಕೊರಿಯರ್ಸ್​: ಒಟ್ಟು 06 ಹಾಲು ರವಾನೆಗಾರರ ಹುದ್ದೆಗಳಿದ್ದು; ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ವೇತನ: ಮಾಸಿಕ 21,400-42,000 ರೂಪಾಯಿ.

ಇದನ್ನೂ ಓದಿ: ತುಮಕೂರು ಹಾಲು ಒಕ್ಕೂಟದ 219 ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 21,400 ರಿಂದ 97,100 ರೂಪಾಯಿ

ವಯೋಮಿತಿ: ಕೆಎಂಎಫ್​ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 25, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. SC/SಖT/ ಪ್ರವರ್ಗ-1 ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಪ್ರವರ್ಗ- 2ಎ/ 2ಬಿ/ 3ಎ/ ಮತ್ತು 3ಬಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: SC/ST/PH/ ಪ್ರವರ್ಗ-1 ಅಭ್ಯರ್ಥಿಗಳು- 500 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು; ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1000 ರೂಪಾಯಿ ಅರ್ಜಿ ಶುಲ್ಕವಿದೆ. ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಇದನ್ನೂ ಓದಿ: ಇಲ್ಲಿವೆ ಪಿಯುಸಿ ಪಾಸಾದವರಿಗೆ ಹೆಚ್ಚು ಸಂಬಳ ನೀಡುವ ಕೇಂದ್ರ ಸರ್ಕಾರಿ ಹುದ್ದೆಗಳು

ಆಯ್ಕೆ ವಿಧಾನ

ಅನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆ ಹಾಗೂ ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಮೆಲ್ನೋಟಕ್ಕೆ ಅರ್ಹರೆಂದು ಕಂಡುಬAದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಒಟ್ಟು 200 ಅಂಕಗಳ ಪರೀಕ್ಷೆ ಇದ್ದು, ಕನ್ನಡ ಭಾಷೆಗೆ -50 ಅಂಕಗಳು, ಸಾಮಾನ್ಯ ಇಂಗ್ಲೀಷ್ಗೆ -25 ಅಂಕಗಳು, ಸಾಮಾನ್ಯ ಜ್ಞಾನಕ್ಕೆ -25 ಅಂಕಗಳು ಸಹಕಾರ ವಿಷಯಗಳಿಗೆ -50 ಅಂಕಗಳು, ಭಾರತದ ಸಂವಿಧಾನಕ್ಕಾಗಿ -25 ಅಂಕಗಳು ಹಾಗೂ ಸಮಾಜದ ಯುಕ್ತವಾದ ಚಟುವಟಿಕೆಗಳು ಮತ್ತು ವಸ್ತುನಿಷ್ಠ ವಿಷಯಗಳಿಗೆ -25 ಅಂಕಗಳು ಒಳಗೊಂಡಿರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಒಟ್ಟುಗೂಡಿಸಿ ಪಡೆಯಲಾದ ಒಟ್ಟು ಅಂಕಗಳ ಅಧಾರದ ಮೇಲೆ ಯಶಸ್ವಿ ಅಭ್ಯರ್ಥಿಗಳ ಅರ್ಹತಾ (ಮೆರಿಟ್) ಪಟ್ಟಿಯನ್ನು ತಯಾರಿಸಿ ಅರ್ಹತೆಯ ಅಧಾರದಲ್ಲಿ ಮೀಸಲಾತಿ ನಿಯಮಗಳನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ 6,406 ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳ ನೇಮಕಾತಿ

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮಾರ್ಚ್ 24, 2023
 • ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 25, 2023
 • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಏಪ್ರಿಲ್ 26, 2023

ಕೆಎಂಎಫ್​ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇಮಕಾತಿಯ ವಿವರವಾದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ: 8867031693 ಮತ್ತು ಮೊಬೈಲ್ ನಂಬರ್ 8884441398/ 8884447318ಗೆ ಕರೆ ಮಾಡಿ

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here
WhatsApp Group Join Now
Telegram Group Join Now

Related Posts

error: Content is protected !!