ಪಶುಪಾಲನೆ

ಹೈನುಗಾರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಾಲಿನ ಪ್ರೋತ್ಸಾಹ ಧನ ರೈತರ ಖಾತೆಗೆ ಜಮಾ | ಹಾಲಿನ ಖರೀದಿ ಬೆಲೆ ಕೂಡ ಹೆಚ್ಚಳ

WhatsApp Group Join Now
Telegram Group Join Now

ಶೀಘ್ರದಲ್ಲಿಯೇ ರೈತರಿಂದ ಖರೀದಿಸುವ ಹಾಲಿನ ಬೆಲೆ ಹೆಚ್ಚಿಸಲಾಗುವುದು. ಮಾತ್ರವಲ್ಲದೇ ಬಾಕಿ ಉಳಿದಿರುವ ಹಾಲಿನ ಪ್ರೋತ್ಸಾಹ ಧನವನ್ನು ರೈತರ ಖಾತೆ ಜಮೆ ಮಾಡುವ ಭರವಸೆಯನ್ನು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೀಡಿದ್ದಾರೆ.

ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಎಸ್.ಎಲ್.ಭೋಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು ₹28 ನೀಡಿದರೆ, ಸರ್ಕಾರ ₹5 ಪ್ರೋತ್ಸಾಹ ಧನ ನೀಡುತ್ತಿದೆ. ಹಾಲಿನ ಕೊರತೆ ಇರುವ ಭಾಗಗಳಲ್ಲಿ ಖಾಸಗಿಯವರು ರೈತರಿಂದ ಅಧಿಕ ದರ ನೀಡಿ ಹಾಲು ಖರೀದಿಸುತ್ತಿದ್ದಾರೆ. ಹಾಲು ಒಕ್ಕೂಟಗಳು ಹೆಚ್ಚಿನ ದರ ನೀಡಿ ಹಾಲು ಖರೀದಿಸಿದರೆ ಖಾಸಗಿ ಪೈಪೋಟಿ ಎದುರಿಸಬಹುದು. ಅಲ್ಲದೇ, ಬೆಲೆ ಏರಿಕೆಯ ಈ ದಿನಗಳಲ್ಲಿ ಹಸು, ಎಮ್ಮೆ ಸಾಕಲು ಸಾಕಷ್ಟು ಖರ್ಚು ಬರುತ್ತದೆ. ಹಾಗಾಗಿ, ದರ ಹೆಚ್ಚಳ ಖಚಿತ’ ಎಂದರು.

ಕುರಿ ಮೇಕೆಗಳ ಆಕಸ್ಮಿಕ ಸಾವಿಗೆ 5,000 ರೂಪಾಯಿ ಪರಿಹಾರ ಗ್ಯಾರಂಟಿ | ಅರ್ಜಿ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ ಕುರಿ ನಿಗಮ | Sheep and Goat Farming

ಫೆಬ್ರುವರಿ ವರೆಗೆ ಪ್ರೋತ್ಸಾಹ ಧನ ಬಾಕಿ ಇತ್ಯರ್ಥವಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಹಾಲು ಉತ್ಪಾದಕರಿಗೆ ಏಪ್ರಿಲ್ ವರೆಗೆ ನೀಡಲಾಗಿದೆ. ಉಳಿದ ಬಾಕಿ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.

‘ಏಪ್ರಿಲ್ ವರೆಗಿನ ಬಾಕಿ ಪರಿಶಿಷ್ಟರಿಗೆ ಮಾತ್ರ ಕೊಟ್ಟಿದ್ದು ಏಕೆ? ಉಳಿದವರು ಏನು ಮಾಡಿದ್ದಾರೆ’ ಎಂಬ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಕಾಂಗ್ರೆಸ್ ಸದಸ್ಯರು ಕೆರಳಿದರು. ಪದವನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಆದರೆ, ತೆಗೆಯಲು ಸಭಾಪತಿ ಸಮ್ಮತಿ ನೀಡಲಿಲ್ಲ.

ಇದನ್ನೂ ಓದಿ:

ಹಾಲು ಖರೀದಿ ಬೆಲೆ ಹೆಚ್ಚಳ: ಗ್ರಾಹಕರಿಗೆ ಹೊರೆ ಇಲ್ಲ | ರೈತರಿಗೆ ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಳ

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಸೌರವಿದ್ಯುತ್ ಸೌಲಭ್ಯ | ಫಲಾನುಭವಿ ರೈತರಿಗೆ 3.5 ಲಕ್ಷ ರೂಪಾಯಿ ಸಬ್ಸಿಡಿ

ಜುಲೈ 15ರ ನಂತರ ಬರಪೀಡಿತ ಜಿಲ್ಲೆಗಳ ಘೋಷಣೆ: ಯಾವೆಲ್ಲ ಜಿಲ್ಲೆಗಳು ಈ ಪಟ್ಟಿಯಲ್ಲಿವೆ? ಇಲ್ಲಿದೆ ಮಾಹಿತಿ…

43 ಲಕ್ಷ ರೈತರಿಗೆ ಬೆಳೆಸಾಲ ಮಂಜೂರು: ಯಾರಿಗೆಲ್ಲ ಸಿಗಲಿದೆ ಸೊಸೈಟಿ ಲೋನ್?

ಅಡಿಕೆ ಬೆಳೆಗಾರರ ಸಬ್ಸಿಡಿಗೆ ಕಡಿವಾಣ: ಸ್ಥಗಿತವಾದ ಮೈಲು ತುತ್ತ ಅನುದಾನ

ಸಬ್ಸಿಡಿ ಕೃಷಿ ಯಂತ್ರೋಪಕರಣ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ | 3 ಲಕ್ಷ ರೂಪಾಯಿ ಸಹಾಯಧನ

 

ರೈತರೇ ಬೆಳೆ ಸಮೀಕ್ಷೆ ಮಾಡದಿದ್ದರೆ ನಿಮಗೆ ಕೃಷಿ ಸಾಲ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಸಿಗೊಲ್ಲ

WhatsApp Group Join Now
Telegram Group Join Now

Related Posts

error: Content is protected !!