ಉದ್ಯೋಗಶಿಕ್ಷಣ ಸುದ್ದಿ

KPSC One Time Registration Procedure : ಕೆಪಿಎಸ್‌ಸಿ ಉದ್ಯೋಗ ನೋಂದಣಿಗೆ ಹೊಸ ನಿಯಮ | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಈಗಲೇ ಈ ಕೆಲಸ ಮಾಡಿ…

WhatsApp Group Join Now
Telegram Group Join Now

KPSC ಉದ್ಯೋಗ ನೋಂದಣಿ ವಿಧಾನದಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದು; ಈ ಹೊಸ ನೋಂದಣಿ ವ್ಯವಸ್ಥೆಯಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಏನು ಅನುಕೂಲ? ನೋಂದಣಿ ಮಾಡಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

KPSC One Time Registration Procedure : ಕರ್ನಾಟಕ ಲೋಕ ಸೇವಾ ಆಯೋಗವು (Karnataka Public Service Commission) ಸರ್ಕಾರದ ಅನೇಕ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದಾಗ, ಅಭ್ಯರ್ಥಿಗಳು ಪ್ರತಿ ಬಾರಿಯೂ ಶೈಕ್ಷಣಿಕ ದಾಖಲೆಗಳು ಮತ್ತು ನೋಂದಣಿ (Registration) ಮಾಡಿಕೊಳ್ಳಬೇಕಾಗಿತ್ತು. ಈ ವ್ಯವಸ್ಥೆಯು ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಿಗೆ ಪ್ರತಿ ಬಾರಿಯೂ ದಾಖಲೆಗಳನ್ನು ಸಲ್ಲಿಸುವುದು ತಲೆನೋವು ಉಂಟು ಮಾಡುತ್ತಿತ್ತು. ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಕರ್ನಾಟಕ ಲೋಕಸೇವಾ ಆಯೋಗವು ಹೊಸ ನಿಯಮವನ್ನು (KPSC Udyoga) ಜಾರಿಗೆ ತಂದಿದೆ. ಅದೇ ‘ಒಂದು ಬಾರಿ ನೋಂದಣಿ’ ವ್ಯವಸ್ಥೆ (one time registration).

ಇದನ್ನೂ ಓದಿ: Service Security for Gram Panchayat staff : ಗ್ರಾಮ ಪಂಚಾಯತಿ ಜವಾನರು, ಸ್ವಚ್ಛತಾಗಾರರು, ಕರವಸೂಲಿಗಾರರು, ನೀರುಗಂಟಿಗಳಿಗೆ ರಾಜ್ಯ ಸರಕಾರದ ಬಂಪರ್ ಗಿಫ್ಟ್ | ಇನ್ಮುಂದೆ ಸಂಬಳಕ್ಕಿಲ್ಲ ಪರದಾಟ

KPSC One Time Registration Procedure ಅನ್ನು ‘ಸೆಂಟರ್ ಆಫ್ ಇ ಗವರ್ನೆನ್ಸ್’ ಅಭಿವೃದ್ಧಿಪಡಿಸಿದ್ದು, ಈ ತಂತ್ರಾ೦ಶದ ಹೆಸರು ‘ಕೆಪಿಎಸ್ ಸಿ ಉದ್ಯೋಗ’ (KPSC Udyoga) ಎಂದು. ಈ ತಂತ್ರಾ೦ಶದ ಅಡಿಯಲ್ಲಿ ಅಭ್ಯರ್ಥಿಗಳು ಒಂದು ಬಾರಿ ನೋಂದಣಿ ಮಾಡಿಕೊಳ್ಳಲು ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಅಗತ್ಯವಿರುವ ನಿಖರವಾದ ಮಾಹಿತಿಗಳನ್ನು ಭರ್ತಿ ಮಾಡಿ ನೋದಣಿ ಮಾಡಿಕೊಂಡ ಮೇಲೆ, ಒಟಿಆರ್ ಸಂಖ್ಯೆ (OTR Number) ನೀಡಲಾಗುತ್ತದೆ. ಮುಂದೆ ಕೆಪಿಎಸ್‌ಸಿ ವತಿಯಿಂದ ಯಾವುದೇ ಇಲಾಖೆಯ ಹುದ್ದೆಗಳಿಗೆ ಅರ್ಜಿ ಕರೆದಾಗ, ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

ವಿ. ಸೂಚನೆ : ಅಭ್ಯರ್ಥಿಗಳು ಒಂದು ವೇಳೆ 23ನೇ ಮಾರ್ಚ್ 2022ರ ಮುಂಚೆ ನೋಂದಣಿ ಮಾಡಿಕೊಂಡಿದ್ದರೆ, ಅಭ್ಯರ್ಥಿಗಳು ಪುನಃ ಮತ್ತೊಂದು ಬಾರಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಲೋಕ ಸೇವಾ ಆಯೋಗವು ಸೂಚಿಸಿದೆ. ಈ ಒಂದು ಹೊಸ ವ್ಯವಸ್ಥೆಗೆ ನೊಂದಣಿ ಮಾಡಿಕೊಳ್ಳಲು ಕೆಳಗೆ ನೀಡಿರುವ ಪಿಡಿಎಫ್ (PDF) ಅನ್ನು ಡೌನ್ಲೋಡ್ ಮಾಡಿಕೊಂಡು ನೋಂದಣಿ ವಿಧಾನವನ್ನು ಸಚ್ಚಿತ್ರವಾಗಿ ಸಂಪೂರ್ಣ ಪರಿಶೀಲಿಸಬಹುದು.

ಇದನ್ನೂ ಓದಿ: Free IAS, KAS Coaching scheme for OBC students : ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸರ್ಕಾರದಿಂದ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನ | Online Applications For Free Upsc Kpsc Banking Exam Coaching

ನೊಂದಣಿ ಮಾಡಿಕೊಳ್ಳುವುದು ಹೇಗೆ? (How to register for ‘One Time Registration’ procedure?)

 • ನಿಮ್ಮ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ KPSC Udyoga  ಎಂದು ಸರ್ಚ್ ಮಾಡಿ ಅಥವಾ ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
 • ಅಲ್ಲಿ ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ಭರ್ತಿ ಮಾಡಿ, ಓಟಿಪಿಯನ್ನು ನಮೂದಿಸಿ ಪಾಸ್‌ವರ್ಡನ್ನು ಕ್ರಿಯೇಟ್ ಮಾಡಿಕೊಳ್ಳಿ.
 • ಬಳಿಕ ನಿಮಗೆ unique registration ID ನಂಬರ್ ಜನರೇಟ್ ಆಗುತ್ತದೆ. ಈ ನಂಬರ್‌ನಿAದ ಲಾಗಿನ್ ಆಗಿ, ಅಗತ್ಯ ಇರುವ ಎಲ್ಲಾ ದಾಖಲೆ ಮತ್ತು ಮಾಹಿತಿಯನ್ನು ಭರ್ತಿ ಮಾಡಿ ನೊಂದಣಿ ಮಾಡಿಕೊಳ್ಳಿ.

ಇದನ್ನೂ ಓದಿ: SBI ಬೃಹತ್ ನೇಮಕಾತಿ | ಕನ್ನಡಿಗರಿಂದ 450 ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ಸಂಬಳ ₹47,920 | SBI Recruitment 2023

ನೊಂದಣಿ ಮಾಡಿಕೊಳ್ಳಲು ಬೇಕಾಗುವ ದಾಖಲಾತಿಗಳು (required documents for KPSC One Time Registration Procedure)

 • SSLC ಅಂಕಪಟ್ಟಿ
 • PUC ಅಂಕಪಟ್ಟಿ
 • ಜಾತಿ ಪ್ರಮಾಣ ಪತ್ರ
 • ಆದಾಯ ಪ್ರಮಾಣ ಪತ್ರ
 • ಭಾವಚಿತ್ರ
 • ಮೊಬೈಲ್ ನಂಬರ್
 • ಇಮೇಲ್ ಐಡಿ

ಕೆಪಿಎಸ್‌ಸಿ ಪ್ರತಿ ವರ್ಷ ಅನೇಕ ಹುದ್ದೆಗಳಿಗೆ ಆಹ್ವಾನಿಸುತ್ತದೆ. ಅಭ್ಯರ್ಥಿಗಳು ಪ್ರತಿ ಬಾರಿಯೂ ಅರ್ಜಿ ಸಲ್ಲಿಸುವಾಗ, ಪ್ರತಿಯೊಂದು ದಾಖಲೆಗಳನ್ನು (KPSC Udyoga) ಅಪ್ಲೋಡ್ ಮಾಡುವ ಅವಶ್ಯಕತೆ ಇರುತ್ತಿತ್ತು. ಆದರೆ ಸರ್ವರ್ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ, ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಲಾಗದೆ ಸರ್ಕಾರಿ ಉದ್ಯೋಗಗಳಿಂದ ವಂಚಿತರಾಗುತ್ತಿದ್ದರು. ಈ ಹೊಸ ವ್ಯವಸ್ಥೆಯು ಪ್ರತಿಯೊಂದು ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದೆ.

ಇದನ್ನೂ ಓದಿ: ಕರ್ನಾಟಕ ಆಹಾರ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕ: SSLC, PUC, ಪದವೀಧರರಿಗೆ ಭರ್ಜರಿ ಅವಕಾಶ | Karnataka Food Department Recruitment 2023

ಕಳೆದ ತಿಂಗಳಲ್ಲಿ ಕೆಪಿಎಸ್‌ಸಿ ಮೂಲಕ ವಾಣಿಜ್ಯ ತೆರಿಗೆ ವೀಕ್ಷಕರು (commercial tax inspector) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಒಟಿಆರ್ ವ್ಯವಸ್ಥೆ ಮೂಲಕವೇ 1.60 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ, ಹೊಸದಾಗಿ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಅವಶ್ಯಕತೆ ಬರುವುದಿಲ್ಲ.

KPSC Udyoga ನೋಂದಣಿ ಮಾಡಿಕೊಳ್ಳಲು ಪ್ರಮುಖ ಲಿಂಕುಗಳು

 • KPSC UDYOGA Applicant User Manual : Download
 • KPSC Udyoga ನೋಂದಣಿ ಡೈರೆಕ್ಟ್ ಲಿಂಕ್ : Click here
 • ಸಹಾಯವಾಣಿ ಸಂಖ್ಯೆ : 1800-572-8707

Karnataka Public Service Commission-KPSC One Time Registration Procedure

75,768 ಕಾನ್’ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC ಪಾಸಾದದವರಿಗೆ ಭರ್ಜರಿ ಅವಕಾಶ | SSC Constable recruitment 2023| apply @ssc.nic.in

WhatsApp Group Join Now
Telegram Group Join Now

Related Posts

error: Content is protected !!