ಉದ್ಯೋಗ

KSHD Recruitment 2023: ತೋಟಗಾರಿಕಾ ಇಲಾಖೆ ನೇಮಕಾತಿ | ಬರೋಬ್ಬರಿ 5,465 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ| ಸಂಬಳ 52,650-97,100 ರೂಪಾಯಿ

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯ  ಬರೋಬ್ಬರಿ 5,465 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, ಪಿಯುಸಿ, ಡಿಪ್ಲೋಮಾ, ಬಿ.ಎಸ್ಸಿ, ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಸಮಗ್ರ ಮಾಹಿತಿ ಇಲ್ಲಿದೆ…

ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯಲ್ಲಿ (Karnataka State Horticulture Department) ಖಾಲಿ ಇರುವ ಒಟ್ಟು 5,465 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬAಧ ರಾಜ್ಯಪಾಲರ ಆಜ್ಞಾನುಸಾರ ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ, ತೋಟಗಾರಿಕೆ ಮತ್ತು ರೇಷ್ಟೆ ಇಲಾಖೆ ಆಯುಕ್ತ ರಾಜೇಂದ್ರಕುಮಾರ್ ಅಟಾರಿಯಾ ಅವರು ಕಳೆದ ಮೇ 16, 2023ರಂದು ಅಧಿಸೂಚನೆ ಹೊರಡಿಸಿದ್ದಾರೆ.

ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್, ಗಾರ್ಡೆನರ್, ಪಿಯೋನ್, ವಾಚ್‌ಮ್ಯಾನ್ ಸೇರಿ 14 ವಿವಿಧ ಶ್ರೇಣಿಯ ಹುದ್ದೆಗಳಿದ್ದು; 10ನೇ ತರಗತಿ, ಪಿಯುಸಿ, ಡಿಪ್ಲೋಮಾ, ಬಿ.ಎಸ್ಸಿ, ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜೂನ್ 17, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು; ಅಭ್ಯರ್ಥಿಗಳಿ ಅಷ್ಟರೊಳಗೆ ಕೆಳಗಿನ ಲಿಂಕ್ ಬಳಸಿ ಆನ್​ಲೈನ್​ ಮೂಲಕ ಅರ್ಜಿ ಹಾಕಬೇಕು.

Gruha Jyoti Scheme: ಯಾರಿಗೆಲ್ಲ ಸಿಗಲಿದೆ 200 ಯುನಿಟ್ ಉಚಿತ ವಿದ್ಯುತ್? ಹೊಸ ಸರಕಾರದ ಶರತ್ತುಗಳೇನು?

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್: ಒಟ್ಟು 256 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಬಿ.ಎಸ್ಸಿ, ಸ್ನಾತಕೋತ್ತರ ಪದವಿ ಆದವರು ಅರ್ಜಿ ಸಲ್ಲಸಬಹುದು.

ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್: ಒಟ್ಟು 475 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೂ ಕೂಡ ಬಿ.ಎಸ್ಸಿ, ಸ್ನಾತಕೋತ್ತರ ಪದವಿ ಆದವರು ಅರ್ಜಿ ಸಲ್ಲಸಬಹುದು.

ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್: ಒಟ್ಟು 1136 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಬಿ.ಎಸ್ಸಿ ಪದವೀಧರರು ಅರ್ಜಿ ಸಲ್ಲಸಬಹುದು.

ಹಾರ್ಟಿಕಲ್ಚರ್ ಅಸಿಸ್ಟೆಂಟ್: ಒಟ್ಟು 926 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೂ ಕೂಡ ಬಿ.ಎಸ್ಸಿ ಪದವೀಧರರು ಅರ್ಜಿ ಸಲ್ಲಸಬಹುದು.

ಫಸ್ಟ್​ ಕ್ಲಾಸ್ ಅಸಿಸ್ಟೆಂಟ್: ಒಟ್ಟು 311 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಸಬಹುದು.

ಸ್ಟೆನೋಗ್ರಾಫರ್: ಒಟ್ಟು 11 ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೆಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಸಬಹುದು.

ಸೆಕೆಂಡ್ ಗ್ರೇಡ್ ಅಸಿಸ್ಟೆಂಟ್ (SDA): ಒಟ್ಟು 271 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ, ಪಿಯುಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಡೇಟಾ ಎಂಟ್ರಿ ಅಸಿಸ್ಟೆಂಟ್: ಒಟ್ಟು 58 ಡೇಟಾ ಎಂಟ್ರಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು; ಈ ಹುದ್ದೆಗಳಿಗೆ ಪಿಯುಸಿ, ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದು.

ವೆಹಿಕಲ್ ಡ್ರೈವರ್ಸ್​: 87 ವೆಹಿಕಲ್ ಡ್ರೆöÊವರ್ಸ್ ಹುದ್ದೆಗಳು ಖಾಲಿ ಇದ್ದು; 10ನೇ ತರಗತಿ ತರಗತಿ ಪಾಸಾದವರು ಈ ಅವಕಾಶ ಬಳಸಿಕೊಳ್ಳಬಹುದು.

ಲ್ಯಾಬ್ ಅಸಿಸ್ಟೆಂಟ್: ಒಟ್ಟು 13 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಪಿಯುಸಿ, ಡಿಪ್ಲೊಮಾ ಆದವರು ಪ್ರಯತ್ನಿಸಬಹುದು.

ಬೀಕೀಪಿಂಗ್ ಅಸಿಸ್ಟೆಂಟ್: ಒಟ್ಟು 20 ಬೀಕೀಪಿಂಗ್ ಅಸಿಸ್ಟೆಂಟ್ ಹುದ್ದೆಗಳಿದ್ದು; ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ಪಿಯೋನ್: 98 ಪಿಯೋನ್ ಹುದ್ದೆಗಳಿದ್ದು; ಈ ಹುದ್ದೆಗಳಿಗೂ ಕೂಡ 10ನೇ ತರಗತಿ ಪಾಸಾದವರು ಪ್ರಯತ್ನಿಸಬಹುದು.

ಗಾರ್ಡೆನರ್: ತೋಟಗಾರಿಕೆ ಇಲಾಖೆಯಲ್ಲಿ ಬರೋಬ್ಬರಿ 1,774 ಗಾರ್ಡೆನರ್ ಹುದ್ದೆಗಳ ಭರ್ತಿಗೆ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ 10ನೇ ತರಗತಿ ಸಾಸಾದವರಿಂದ ಅರ್ಜಿ ಕರೆಯಲಾಗಿದೆ.

ವಾಚ್​ಮ್ಯಾನ್: ಒಟ್ಟು 2 ವಾಚ್‌ಮ್ಯಾನ್ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೂ ಕೂಡ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಸಬಹುದು.

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಸಂಬಳ?

 • ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್: ಮಾಸಿಕ ₹52,650-97,100
 • ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿಕಲ್ಚರ್: ಮಾಸಿಕ ₹43,100- 83,900
 • ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್: ಮಾಸಿಕ ₹40,900-78,200
 • ಹಾರ್ಟಿಕಲ್ಚರ್ ಅಸಿಸ್ಟೆಂಟ್: ಮಾಸಿಕ ₹23,500-47,650
 • ಫಸ್ಟ್​ ಕ್ಲಾಸ್ ಅಸಿಸ್ಟೆಂಟ್: ಮಾಸಿಕ ₹27,650-52,650
 • ಸ್ಟೆನೋಗ್ರಾಫರ್: ಮಾಸಿಕ ₹27,650-52,650
 • ಸೆಕೆಂಡ್ ಗ್ರೇಡ್ ಅಸಿಸ್ಟೆಂಟ್ (SDA): ಮಾಸಿಕ ₹21,400-42,000
 • ಡೇಟಾ ಎಂಟ್ರಿ ಅಸಿಸ್ಟೆಂಟ್: ಮಾಸಿಕ ₹21,400-42,000
 • ವೆಹಿಕಲ್ ಡ್ರೈವರ್ಸ್​: ಮಾಸಿಕ ₹21,400-42,000
 • ಲ್ಯಾಬ್ ಅಸಿಸ್ಟೆಂಟ್: ಮಾಸಿಕ ₹18,600-32,600
 • ಬೀಕೀಪಿಂಗ್ ಅಸಿಸ್ಟೆಂಟ್: ಮಾಸಿಕ ₹18,600-32,600
 • ಪಿಯೋನ್: ಮಾಸಿಕ ₹17,000-28,950
 • ಗಾರ್ಡೆನರ್: ಮಾಸಿಕ ₹17,000-28,950
 • ವಾಚ್​ಮ್ಯಾನ್: ಮಾಸಿಕ ₹17,000-28,950

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಪ್ರಮುಖ ದಿನಾಂಕಗಳು: ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಜೂನ್ 17, 2023 ಕೊನೆಯ ದಿನವಾಗಿದೆ

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳ ಭರ್ತಿ ಕುರಿತ ಸಂಪೂರ್ಣ ಮಾಹಿತಿಯುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

ಪ್ರಮುಖ ಲಿಂಕ್‌ಗಳು

 

ಉದ್ಯೋಗ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ಸರಕಾರಿ ಯೋಜನೆಇಲ್ಲಿ ಕ್ಲಿಕ್ ಮಾಡಿ
ಕೃಷಿ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರುಪ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರುಪ್ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Related Posts

error: Content is protected !!