ಸರಕಾರಿ ಯೋಜನೆಸುದ್ದಿಗಳು

KSRTC PhonePe Ticket Booking : ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ಗೆ ಫೋನ್ ಪೇ ಮೂಲಕ ಹಣ ಪಾವತಿ ವ್ಯವಸ್ಥೆ ಜಾರಿ

WhatsApp Group Join Now
Telegram Group Join Now

ಸರಕಾರಿ ಬಸ್ಸುಗಳಲ್ಲಿ ಇನ್ನು ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೂಲಕ ಸುಲಭವಾಗಿ ಟಿಕೆಟ್ ಖರೀದಿಸಬಹುದು. ಈ ಹೊಸ ವ್ಯವಸ್ಥೆ ಯಾವೆಲ್ಲ ಬಸ್ಸುಗಳಲ್ಲಿ ಸಿಗಲಿದೆ? ಇಲ್ಲಿದೆ ಮಾಹಿತಿ…

KSRTC PhonePe Ticket Booking : ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಇತ್ಯಾದಿ ಡಿಜಿಟಲ್ ಪೇಮೆಂಟ್ (Digital payment) ವ್ಯವಸ್ಥೆ ಈಗ ಗಲ್ಲಿ ಗಲ್ಲಿಯ ಗೂಡಂಗಡಿಗಳಲ್ಲೂ ಶುರುವಾಗಿದೆ. 5-10 ರೂಪಾಯಿ ವ್ಯಾಪಾರಕ್ಕೂ ಸಹ ನಗದು ಬದಲು ಫೋನ್ ಮೂಲಕ ಹಣ ಪಾವತಿಸಲಾಗುತ್ತಿದೆ. ಆದರೆ ಈ ವ್ಯವಸ್ಥೆ ಇದೀಗ ವಾಯುವ್ಯ ಕರ್ನಾಟಕ ಸರಕಾರಿ ಬಸ್’ಗಳಲ್ಲಿಯೂ ಜಾರಿಯಾಗಿದೆ. ಇದರಿಂದ ಚಿಲ್ಲರೆಗಾಗಿ ಪರದಾಡುವ ಕಂಡಕ್ಟರ್ ತಲೆಬಿಸಿ ಕಮ್ಮಿಯಾಗುವುದರ ಜತೆಗೆ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗುತ್ತಿದೆ.

ಸದ್ಯಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಡಿಯಲ್ಲಿ ಬರುವ ಐದು ಡಿಪೋಗಳ 415 ಲಾಂಗ್ ರೂಟ್ ಬಸ್’ಗಳಲ್ಲಿ ಈಗಾಗಲೇ ಫೋನ್ ಪೇ, UPI ಮುಖಾಂತರ ಬಸ್ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜಯಪುರ ಜಿಲ್ಲೆಯೊಂದನ್ನು ಹೊರತುಪಡಿಸಿ ಕಿತ್ತೂರು ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳ ವ್ಯಾಪ್ತಿಯ 4,581 ಬಸ್’ಗಳಲ್ಲಿಯೂ ಸಹ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇಷ್ಟರಲ್ಲೇ ವಿಸ್ತರಣೆಯಾಗಲಿದೆ.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

BMTC ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್

ಇಷ್ಟಕ್ಕೂ ಮೊದಲ ಬಾರಿಗೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದ ಹೆಗ್ಗಳಿಕೆ ಬಿಎಂಟಿಸಿಗೆ (Bengaluru Metropolitan Transport Corporation) ಸಲ್ಲುತ್ತದೆ. ಈ ಹೊಸ ವ್ಯವಸ್ಥೆಯನ್ನು BMTC 2020ರಲ್ಲಿ ಆರಂಭಿಸಿದೆ. ಬಿಎಂಟಿಸಿಯ ವಹಿವಾಟು ಪ್ರತೀ ತಿಂಗಳು 20 ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಅದರಲ್ಲಿ ನಾಲ್ಕು ಕೋಟಿಗಿಂತ ಅಧಿಕ ಹಣ ಆನ್ಲೈನ್ ಮುಖಾಂತರವೇ ಆಗುತ್ತಿದೆ.

ಎಲ್ಲ ಸಾರಿಗೆ ಸಂಸ್ಥೆಗಳಿಗಿAತ ಬಿಎಂಟಿಸಿ ಒಂದು ಹೆಜ್ಜೆ ಮುಂದಿದ್ದು, ಈಗಾಗಲೇ Tummoc app ಮುಖಾಂತರ ಪ್ರಯಾಣವನ್ನು ಸುಲಭಗೊಳಿಸಲು ದಿನ, ವಾರ ಮತ್ತು ಮಾಸಿಕ ಬಸ್ ಪಾಸಾಗಳನ್ನು ಕೂಡ ಆನ್ಲೈನ್ ಮುಖಾಂತರ ನೀಡುತ್ತಿದೆ. ಪ್ರತಿ ತಿಂಗಳು ವಿತರಣೆಯಾಗುವ ಒಂದು ಲಕ್ಷಕ್ಕಿಂತ ಅಧಿಕ ಪಾಸ್’ಗಳಲ್ಲಿ ಸುಮಾರು 25% ರಷ್ಟು ವಹಿವಾಟು ಆನ್ಲೈನ್ ಮುಖಾಂತರವೇ ನಡೆಯುತ್ತಿದೆ.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

NWKRTC ಬಸ್ಸುಗಳೂ ಸ್ಮಾರ್ಟ್

ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿಂದ ಆಗುವ ಲಾಭಗಳನ್ನು ತಿಳಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ ಈಗ ತನ್ನ ವ್ಯಾಪ್ತಿಯ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಟಿಕೆಟ್ ವಿತರಣೆ ಮಾಡುತ್ತಿದೆ. ಕಳೆದ ಸೆಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ಸೇವೆಯನ್ನು ಆರಂಭಿಸಿದ್ದು; ಇದಕ್ಕೆ ಸಿಕ್ಕ ಪ್ರಾಯಾಣಿಕರ ಸ್ಪಂದನೆಯನ್ನು ಗಮನಿಸಿ ಈ ವ್ಯವಸ್ಥೆಯನ್ನು ಐದು ಡಿಪೋಗಳಿಗೆ ಪ್ರಾಯೋಗಿಕವಾಗಿ ವಿಸ್ತರಿಸುತ್ತಿದೆ.

Online payment ಆರಂಭ ಮಾಡಿದ ನಂತರ ಇಲ್ಲಿಯ ವರೆಗೆ 415 ಬಸ್’ಗಳಲ್ಲಿ ನಿರ್ವಾಹಕರು 30,000 ವೈಯಕ್ತಿಕ ವೈವಾಟುಗಳನ್ನು ಮಾಡಿದ್ದು, ಸುಮಾರು 75 ಲಕ್ಷ ರೂಪಾಯಿ ಮೊತ್ತವನ್ನು ನೇರವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾತೆಗೆ ವರ್ಗಾಯಿಸಿದೆ. ಇದರಲ್ಲಿ ಸುಮಾರು 20% ನಷ್ಟು ಹಣ ಆನ್ಲೈನ್ ಮುಖಾಂತರವೇ ಆಗಿದ್ದು, ಡಿಜಿಟಲ್ ಪೇಮೆಂಟ್‌ಗೆ (Digital Payment) ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ.

ಇದನ್ನೂ ಓದಿ: Karnataka State Police Recruitment : 4,547 ಕಾನ್‌ಸ್ಟೇಬಲ್ ಮತ್ತು ಪಿಎಸ್‌ಐ ಹುದ್ದೆಗಳಿಗೆ ಪಿಯುಸಿ, ಪದವಿಧರರ ನೇಮಕ | ರಾಜ್ಯ ಪೊಲೀಸ್ ಇಲಾಖೆಯಲ್ಲಿ 17,828 ಹುದ್ದೆಗಳು ಖಾಲಿ

ಸಂಸ್ಥೆಯ ಉಳಿದ ಬಸ್ಸುಗಳಲ್ಲಿ ಡಿಜಿಟಲ್ ಪೇಮೆಂಟ್ ಆರಂಭಿಸಲು ಫೋನ್ ಪೇ ಖಾಸಗಿ ಸಂಸ್ಥೆಯನ್ನು ಈಗಾಗಲೇ ಸಂಪರ್ಕಿಸಿದ್ದು, ಕಂಪನಿಯು ನಿರ್ವಾಹಕರಿಗೆ ಪೇಮೆಂಟ್ ಮಾಡಿಸಿಕೊಳ್ಳಲು QR Code ನೀಡಿದೆ. ಪ್ರತಿದಿನ ಆನ್ಲೈನ್ ಮುಖಾಂತರ ಆಗುವ ವಹಿವಾಟುಗಳನ್ನು ನಿರ್ವಹಣೆ ಮಾಡಲು ಮುಖ್ಯ ಕಚೇರಿಯಲ್ಲಿ ಲೈವ್ ಡ್ಯಾಶ್ ಬೋರ್ಡ್ (Live dashboard) ಸ್ಥಾಪಿಸಲಾಗಿದ್ದು ಪ್ರತಿದಿನ ವ್ಯವಹಾರಗಳು ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಸಾಗುತ್ತಿವೆ ಎನ್ನುತ್ತಾರೆ NWKRTC ಅಧಿಕಾರಿಗಳು.

KSRTC PhonePe Ticket Booking

Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

WhatsApp Group Join Now
Telegram Group Join Now

Related Posts

error: Content is protected !!