ಪಶುಪಾಲನೆ

ಕುರಿ-ಮೇಕೆಗಳಿಗೆ ಕಡ್ಡಾಯವಾಗಿ ಹಾಕಿಸಬೇಕಾದ ಲಸಿಕೆಗಳು | Sheep and Goat Vaccine

WhatsApp Group Join Now
Telegram Group Join Now

ಕುರಿ ಮೇಕೆಗಳಿಗೆ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಯಾವ್ಯಾವ ಲಸಿಕೆ ಹಾಕಿಸಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ…

ಕುರಿ ಮೇಕೆಗಳು ಸದಾ ಗುಂಪಿನಲ್ಲಿ ಇರುವುದರಿಂದ ಹಾಗೂ ನೆಲಕ್ಕೆ ತೀರಾ ಹತ್ತಿರವಾಗಿ ಮೇಯುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಜಂತುಹುಳುಗಳ ಹಾವಳಿ ಬಹಳ ಸುಲಭವಾಗಿ ಮತ್ತು ಶೀಘ್ರವಾಗಿ ಅಂಟಿಕೊಳ್ಳುತ್ತದೆ. ಹೀಗಾಗಿ ರೋಗಗಳ ಚಿಕಿತ್ಸೆಗಿಂತ ರೋಗಗಳು ಹರಡದಂತೆ ಎಚ್ಚರವಹಿಸುವುದು ಬಹಳ ಮುಖ್ಯ. ರೋಗಗಳ ನಿಯಂತ್ರಣಕ್ಕೆ ಲಸಿಕೆ ಹಾಕಿಸುವುದೊಂದೇ ಪ್ರಮುಖ ಪರಿಹಾರ. ಇವತ್ತು ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಕಾಲು ಮತ್ತು ಬಾಯಿ ರೋಗ, ರೇಬಿಸ್ ರೋಗ, ಕುರಿ ಸಿಡುಬು ರೋಗ ಸೇರಿದಂತೆ ಹಲವಾರು ರೋಗಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇಂತಹ ಮಹಾಮಾರಿ ರೋಗಗಳ ನಿಯಂತ್ರಣಕ್ಕೆ ಲಸಿಕೆ ಒಂದೇ ಸೂಕ್ತ ಪರಿಹಾರವಾಗಬಲ್ಲದು.

ಇಷ್ಟಕ್ಕೂ ಲಸಿಕೆ ಎಂದರೆ ರೋಗ ಬರದಂತೆ ಮುಂಜಾಗ್ರತ ಕ್ರಮವಾಗಿ ಹಾಕುವ ಔಷಧಿ. ಲಸಿಕೆ, ಆಂಟಿ ಬಯೋಟಿಕ್ಸ್ ಮತ್ತು ಜಂತು ನಾಶಕ ಔಷಧಿ ಈ ಮೂರು ಔಷಧಿಗಳು ಭಿನ್ನವಾದ ಹಿನ್ನಲೆಯಲ್ಲಿ ನೀಡುವಂಥವು. ಇವುಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ವಿವೇಚನಾರಹಿತ ಆಂಟಿ ಬಯೋಟಿಕ್ಸ್ ಬಳಕೆಯಿಂದ ಕುರಿ ಮೇಕೆಗಳಲ್ಲಿ ರೋಗ ನಿರೋಧಕ ಶಕ್ತಿ, ಔಷಧಿ ನಿರೋಧಕ ಶಕ್ತಿ ಕುಗ್ಗುತ್ತದೆ.

ಇದನ್ನೂ ಓದಿ: ಜೇನು ಸಾಕಣೆಗೆ ಸರ್ಕಾರದ ಸವಲತ್ತುಗಳು: ಸಣ್ಣ ರೈತರಿಗೆ ಶೇ.90ರಷ್ಟು ಸಹಾಯಧನ

1. ಗಳಲೆ ರೋಗ ಲಸಿಕೆ

ಲಸಿಕೆಯನ್ನು ಕಾಲ ಕಾಲಕ್ಕೆ ಹಾಕಿಸಬೇಕು. ಮಳೆಗಾಲಕ್ಕೆ ಮುಂಚೆ ಗಳಲೆ ರೋಗ ಅಥವಾ ಗಂಟಲು ಬೇನೆ ಲಸಿಕೆ ಹಾಕಿಸಬೇಕು. ಈ ರೋಗವು ಪಾಶ್ಚುರೆಲ್ಲಾ ಮಲ್ಟೋಸಿಡಾ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಕಲುಷಿತ ಮೇವು, ನೀರು ಮತ್ತು ಗಾಳಿಯ ಸೇವನೆಯಿಂದ ಇದು ಹರಡುತ್ತದೆ. ಗಳಲೆ ರೋಗ ಪೀಡಿತ ಕುರಿ ಮೇಕೆಗಳು ಸ್ವಲ್ಪ ಸಮಯದಲ್ಲಿಯೇ ಅಸ್ವಸ್ಥಗೊಂಡು ಜ್ವರದಿಂದ ನರಳುತ್ತವೆ. ಮಂಕಾಗಿ ಮೇವು ಬಿಡುತ್ತವೆ.

ಗುರುಗುಟ್ಟುವ ಉಸಿರಾಟ, ಗಂಟಲ ಊತ, ಮೂಗಿನಿಂದ ಅಂಟಿನಂತಹ ದ್ರವ ಸೋರುತ್ತದೆ. ರೋಗ ಲಕ್ಷಣಗಳು ಕಾಣಿಸಿದ ಕೂಡಲೇ ಚಿಕಿತ್ಸೆ ಕೊಡಿಸಬೇಕು. ಆದರೆ ರೋಗ ಬರುವುದಕ್ಕಿಂತ ಮುನ್ನ ಮುಂಜಾಗ್ರತಾ ಕ್ರಮವಾಗಿ ಪ್ರತೀ ಆರು ತಿಂಗಳಿಗೊಮ್ಮೆ ಅಂದರೆ ಮೇ-ಜೂನ್ ಮತ್ತು ನವೆಂಬರ್-ಡಿಸೆಂಬರ್‌ನಲ್ಲಿ ಗಂಟಲು ಬೇನೆ ರೋಗದ ಲಸಿಕೆ ಹಾಕಿಸಿದರೆ ಖಂಡಿತವಾಗಿಯೂ ಈ ರೋಗದಿಂದ ಕುರಿ ಮೇಕೆಗಳನ್ನು ರಕ್ಷಿಸಬಹುದು.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ ಸಿಗಲಿದೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ 3 ಲಕ್ಷ ಸಾಲ | ಈ ಕಾರ್ಡ್ ಪಡೆಯುವುದು ಹೇಗೆ?

2. ಕರುಳು ಬೇನೆ ಅಥವಾ ಇ.ಟಿ ಲಸಿಕೆ 

ಅದೇ ರೀತಿ ಮಳೆ ಬಂದು ಅಧಿಕವಾಗಿ ಹಸುರು ಚಿಗುರುವ ಮುನ್ನ ಕರುಳು ಬೇನೆ ಅಥವಾ ಇ.ಟಿ ಲಸಿಕೆ ಹಾಕಿಸಬೇಕು. ಈ ರೋಗವು ಕ್ಲಾಸ್ಟ್ರೀಡಿಯಂ ಸೇರಿದ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಅವಶ್ಯಕತೆಗಿಂತ ಹೆಚ್ಚು ಹಸಿರು ಮೇವು ತಿಂದಾಗ ಕರುಳಿನಲ್ಲಿ ಸತ್ವಯುತ ಆಹಾರ ಅಧಿಕವಾಗಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಈ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತದೆ. ಇವುಗಳು ಉತ್ಪಾದಿಸುವ ವಿಷರಸಗಳಿಂದ ಕುರಿಗಳು ಸಾಯುತ್ತವೆ.

ಈ ರೋಗವು ಸಾಧಾರಣವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕರುಳು ಬೇನೆಗೆ ಮುಂಜಾಗ್ರತಾ ಕ್ರಮವಾಗಿ ವರ್ಷಕ್ಕೆ ಎರಡು ಬಾರಿ ಮಳೆಗಾಲಕ್ಕೆ ಮುಂಚೆ ಏಪ್ರಿಲ್-ಮೇ ತಿಂಗಳಲ್ಲಿ ಮತ್ತು ನವೆಂಬರ್-ಡಿಸೆಂಬರ್‌ನಲ್ಲಿ ಲಸಿಕೆ ಹಾಕಿಸಬೇಕು. ಮರಿಗಳಿಗೆ ಮೂರು ತಿಂಗಳ ವಯಸ್ಸಿನಲ್ಲಿ ಲಸಿಕೆ ಹಾಕಿಸಬೇಕು. ನಂತರ ಬೂಸ್ಟರ್ ಡೋಸ್ ಲಸಿಕೆಯನ್ನು, ಹದಿನಾಲ್ಕು ದಿನಗಳ ನಂತರ ಹಾಕಿಸಬೇಕಿಸಿದರೆ ಕುರಿ ಮೇಕೆಗಳು ಕರುಳು ಬೇನೆಯಿಂದ ನರಳುವುದು ತಪ್ಪುತ್ತದೆ.

ಇದನ್ನೂ ಓದಿ: SBI ₹10 ಲಕ್ಷ ಮುದ್ರಾ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ವಿಧಾನ

3. ಹಿರೇಬೇನೆ  ಅಥವಾ ಪಿ.ಪಿ.ಆರ್ ಲಸಿಕೆ

ಹಿರೇಬೇನೆ ಎಂದೇ ಕರೆಯುವ ಪಿ.ಪಿ.ಆರ್ ರೋಗಕ್ಕೆ ಮುಂಜಾಗ್ರವಾಗಿ ಜೂನ್-ಜುಲೈ ತಿಂಗಳುಗಳಲ್ಲಿ ಲಸಿಕೆ ಮಾಡಿಸಿದರೆ ಒಳಿತು. ಪ್ರತಿವರ್ಷ ಹುಟ್ಟುವ ಹೊಸ ಮರಿಗಳಿಗೆ ಗುರುತಿಟ್ಟುಕೊಂಡು ಪಿ.ಪಿ.ಆರ್ ಲಸಿಕೆ ಮಾಡಿಸಬೇಕು. ಪ್ಯಾರಾಮಿಕ್ಸೊ ಗುಂಪಿಗೆ ಸೇರಿದ ಮರ‍್ಬಿಲಿ ಎಂಬ ವೈರಾಣುವಿನಿಂದ ಈ ರೋಗ ಉಂಟಾಗುತ್ತದೆ. ರೋಗಗ್ರಸ್ಥ ಕುರಿ/ಮೇಕೆಗಳ ಮೂಗಿನಿಂದ ಹೊರ ಬರುವ ಗೀಜು, ಕೆಮ್ಮಿದಾಗ ಸುರಿಯುವ ಸಿಂಬಳ ಹಾಗೂ ಮಲ-ಮೂತ್ರಗಳಲ್ಲಿನ ರೋಗಾಣುವಿನ ಸಂಪರ್ಕದಿಂದ ಈ ರೋಗವು ಇತರೆ ಕುರಿ ಮೇಕೆಗಳಿಗೆ ಹರಡುತ್ತದೆ.

ರೋಗಾಣು ದೇಹ ಪ್ರವೇಶ ಮಾಡಿದ 3ರಿಂದ 10 ದಿನಗಳಲ್ಲಿ ರೋಗ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಮೊದಲು 5ರಿಂದ 8 ದಿನಗಳ ವರೆಗೆ ವಿಪರೀತ ಜ್ವರ ಇದ್ದು, ನಂತರ ಮೈ ಶಾಖಕ್ಕಿಂತಲೂ ಕಡಿಮೆ ಉಷ್ಣತೆ, ಕಣ್ಣು ಮತ್ತು ಮೂಗಿನಿಂದ ಹಳದಿ ಮಿಶ್ರಿತ ಗೀಜು ಬರಲಾರಂಭಿಸಿ, ಕ್ರಮೇಣ ಕೀವು ಮಿಶ್ರಿತವಾಗಿ ಮಾರ್ಪಟ್ಟು, ದಿನ ಕಳೆದಂತೆ ಕಣ್ಣಿನ ರೆಪ್ಪೆಗಳು ಮೆತ್ತಿಕೊಳ್ಳುತ್ತವೆ. ಜ್ವರ ಕಡಿಮೆಯಾಗುತ್ತಿದ್ದಂತೆ ರಕ್ತ ಮಿಶ್ರಿತ ಬೇಧಿ ಮತ್ತು ಕೆಮ್ಮು ಮೇಲುಗೈ ಸಾಧಿಸಿ ಉಸಿರಾಟಕ್ಕೆ ತೀವ್ರ ತೊಂದರೆಯಾಗಿ, ಕುರಿಗಳು ನಿತ್ರಾಣಗೊಂಡು ಸಾವನ್ನಪ್ಪುತ್ತವೆ. ಮಂಜಾಗ್ರತಾ ಕ್ರಮವಾಗಿ ಸಾಮೂಹಿಕವಾಗಿ ಲಸಿಕೆ ಹಾಕಲು ಪಶುಪಾಲನಾ ಇಲಾಖೆಯು ಸೂಕ್ತ ಕ್ರಮಕೈಗೊಂಡಿದ್ದು, ಪ್ರತಿ ವರ್ಷಕ್ಕೊಮ್ಮೆ ಅಂದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪಿ.ಪಿ.ಆರ್ ಲಸಿಕೆ ಹಾಕಿಸುವುದರಿಂದ ಈ ರೋಗವನ್ನು ಸಶಕ್ತವಾಗಿ ತಡೆಗಟ್ಟಬಹುದು.

ಇದನ್ನೂ ಓದಿ: ರೈತರೇ ಕೀಟ ಹತೋಟಿಗೆ ನೀವೇ ತಯಾರಿಸಿ ನಾಟಿ ಕೀಟನಾಶಕ : ಇದು ಖರ್ಚಿಲ್ಲದ, ಹೆಚ್ಚು ಪರಿಣಾಮಕಾರಿ ಔಷಧಿ

4. ಕುರಿ ಸಿಡುಬು ಲಸಿಕೆ 

ಇನ್ನು ಬೇಸಿಗೆ ಕಾಲಕ್ಕೆ ಮುಂಚೆಯೇ ಕುರಿ ಮೈಲಿ, ದೇವಿ, ಅಮ್ಮ ಅಂತೆಲ್ಲ ಕರೆಯುವ ಕುರಿ ಸಿಡುಬು ರೋಗಕ್ಕೆ ಲಸಿಕೆ ಮಾಡಿಸಿಕೊಳ್ಳಬೇಕು. ಈ ರೋಗವು ಪಾಕ್ಸ್ ಎಂಬ ವೈರಾಣುವಿನಿಂದ ಉಂಟಾಗಬಲ್ಲ ಸಾಂಕ್ರಾಮಿಕ ರೋಗವಾಗಿದ್ದು,  ವೈರಾಣುವು ಗಾಳಿ, ಸಿಂಬಳ, ಚರ್ಮದ ಹೊಟ್ಟು, ಜೊಲ್ಲು ಹಾಗೂ ರೋಗಗ್ರಸ್ಥ ಕುರಿಗಳ ಸಂರ್ಪಕದ ವಸ್ತುಗಳಿಂದ ಹರಡುತ್ತದೆ. ರೋಗಗ್ರಸ್ಥ ಕುರಿ ಮೇಕೆಗಳಲ್ಲಿ ವಿಪರೀತ ಜ್ವರ, ಕಣ್ಣಲ್ಲಿ ನೀರು ಸೋರುವಿಕೆ, ಮೂಗಲ್ಲಿ ಸಿಂಬಳ ಹಾಗೂ ಬಾಯಲ್ಲಿ ಜೊಲ್ಲು ಸೋರುವಿಕೆ ಕಂಡುಬರುತ್ತದೆ.

ನಂತರ ಬಾಲದ ಬುಡ, ಕಣ್ಣಿನ ಸುತ್ತ, ಕೆಚ್ಚಲು, ತುಟಿಗಳ ಮೇಲೆ ತೊಡೆಗಳ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸುತ್ತವೆ. ಈ ಬೊಕ್ಕೆಗಳು ಕ್ರಮೇಣ ಹುಣ್ಣಾಗಿ ಮಾರ್ಪಾಡಾಗುತ್ತವೆ. ಶ್ವಾಸನಾಳಗಳಲ್ಲಿ ಬೊಕ್ಕೆಗಳು ಕಂಡು ಬಂದಲ್ಲಿ, ಕೆಮ್ಮು ಕಾಣಿಸಿಕೊಳ್ಳಬಹುದು. ಕುರಿ ಮರಿಗಳಲ್ಲಿ ರೋಗ ಉಲ್ಪಣ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭದ ಕುರಿಗಳು ಕಂದು ಹಾಕಬಹುದು. ಮುಂಜಾಗ್ರತಾ ಕ್ರಮವಾಗಿ ರೋಗ ತಡೆಗಟ್ಟಲು ಕುರಿಗಳಿಗೆ ಜೂನ್‌ನಿಂದ ಅಕ್ಟೋಬರ್ ತಿಂಗಳೊಳಗೆ ಸಿಡುಬು ರೋಗದ ಲಸಿಕೆ ಹಾಕಿಸಬೇಕು.

ಇದನ್ನೂ ಓದಿ: 5.66 ಲಕ್ಷ ರೈತರಿಗೆ ಫಸಲ್ ಬೀಮಾ ಬಾಕಿ ಪರಿಹಾರ ಜಮಾ : ರೈತರೇ ನಿಮ್ಮ ಪರಿಹಾರ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

5. ಕಾಲು-ಬಾಯಿ ಬೇನೆ ಲಸಿಕೆ

ಅದೇ ರೀತಿ ಪಿಕೋನ್ರಾ ಎಂಬ ವೈರಸ್‌ನಿಂದ ವ್ಯಾಪಿಸುವ ಕಾಲು-ಬಾಯಿ ಬೇನೆ ಕಲುಷಿತ ನೀರು, ಆಹಾರ, ಜೊಲ್ಲು, ಮಲ-ಮೂತ್ರ, ಮಾನವನ ಮುಖಾಂತರ ಇತರೆ ಕುರಿ ಮೇಕೆಗಳಿಗೆ ಹರಡುತ್ತದೆ. ಜ್ವರ, ಬಾಯಿಯಲ್ಲಿನ ಲೋಳೆ ಪೊರೆ ಮೇಲೆ ಹುಣ್ಣು, ಜೊಲ್ಲು ಸೋರುವಿಕೆ, ಗೊರಸಿನ ಮಧ್ಯೆ ಗಾಯ ಕಾಣಿಸಿಕೊಂಡು ಮೇವು ಬಿಟ್ಟು ನಿತ್ರಾಣಗೊಳ್ಳುತ್ತವೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷಕ್ಕೊಮ್ಮೆ ಅಕ್ಟೋಬರ್ / ನವೆಂಬರ್‌ನಲ್ಲಿ ಲಸಿಕೆ ಹಾಕಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು.

6. ನೀಲಿ ನಾಲಿಗೆ ರೋಗಕ್ಕೆ ಲಸಿಕೆ

ಕ್ಯೂಲಿಕಾಯಿಡ್ಸ್ ಎಂಬ ಕೀಟಗಳಿಂದ ಹರಡುವ ನೀಲಿನಾಲಿಗೆ ರೋಗಕ್ಕೆ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಲಸಿಕೆ ಹಾಕಿಸಬೇಕು. ಮಳೆಗಾಲದ ಮುಂಜಾನೆ ಮತ್ತು ಸಂಜೆಗಳಲ್ಲಿ ನೀರಿನ ಬಳಿ, ತಗ್ಗು ಮತ್ತು ಜೌಗು ಪ್ರದೇಶದಲ್ಲಿ ಕುರಿ ಮೇಕೆಗಳನ್ನು ಮೇಯಿಸಬಾರದು. ಕ್ಯೂಲಿಕಾಯಡ್ಸ್ ಕೀಟಗಳು ಸಾಮಾನ್ಯವಾಗಿ ಬೆಳಿಗ್ಗೆ 5ರಿಂದ 7 ಗಂಟೆ ಮತ್ತು ಸಂಜೆ 6ರಿಂದ 8 ಗಂಟೆಯ ಅವಧಿಯಲ್ಲಿ ಕುರಿಗಳ ರಕ್ತ ಹೀರುತ್ತವೆ. ಈ ಅವಧಿಯಲ್ಲಿ ಕುರಿ ಶೆಡ್ಡಿನ ಸುತ್ತ ಬೇವಿನ ಮರದ ಚಕ್ಕೆ ಹಾಕಿ ಹೊಗೆಯಾಡಿಸಿ ಇವುಗಳನ್ನು ನಿಯಂತ್ರಿಸಬಹುದು. ಕುರಿ ಹಿಕ್ಕೆ ಹಾಗೂ ಇತರೆ ಕಸವನ್ನು ಕುರಿ ಶೆಡ್ಡಿನಿಂದ ದೂರ ಹಾಕುವುದರಿಂದ ಕ್ಯೂಲಿಕಾಯಿಡ್ಸ್ ಕೀಟಗಳು ವೃದ್ಧಿಯಾಗುವುದನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: 4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಬ್ಯಾಕ್ಟಿರಿಯಾ, ವೈರಸ್ ಮೂಲದ ಜ್ವರಪೀಡಿತ ಖಾಯಿಲೆಗಳು ಬಂದಾಗ, ಕೇವಲ ಒಂದು ದಿನ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೆ ಸಾಲದು. ಕನಿಷ್ಠ 3ರಿಂದ 5 ದಿನಗಳ ವರೆಗೆ ಚಿಕಿತ್ಸೆ, ಆರೈಕೆ ಮುಂದುವರೆಸಬೇಕು. ಯಾವುದಾದರು ಕಾಯಿಲೆ ಬಂದಾಗಲೆಲ್ಲ ಜಂತು ಹುಳುವಿನ ಔಷಧಿ ನೀಡುವ ಅಗತ್ಯವಿಲ್ಲ. ಜಂತು ಹುಳುವಿನ ಔಷಧಿಯನ್ನು 3-4 ತಿಂಗಳಿಗೊಮ್ಮೆ ಕುಡಿಸಿದರೆ ಸಾಕು. ಅಗತ್ಯಕ್ಕೆ ಅನುಗುಣವಾಗಿ ಜಂತುನಾಶಕ ಔಷಧಿಯನ್ನು ಪ್ರತಿಬಾರಿ ಬದಲಾಯಿಸುತ್ತಿರಬೇಕು. ಹೀಗೆ ಕಾಲಕಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಆಯಾಯ ರೋಗಕ್ಕೆ ಆಯಾಯ ಲಸಿಕೆಗಳನ್ನು ನಿಯಮಿತವಾಗಿ ಹಾಕಿಸಿದರೆ ಕುರಿ ಮೇಕೆಗಳಿಗೆ ಮಾರಣಾಂತಿಕ ರೋಗಗಳೇ ಬಾರದು.

ಪಶುಕಲ್ಯಾಣ ಸಹಾಯವಾಣಿ ಬಳಸಿ

ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಪಶುಪಾಲಕರ ಅನುಕೂಲಕ್ಕಾಗಿ ಪ್ರಾಣಿ ಕಲ್ಯಾಣ ಸಹಾಯವಾಣಿ ಆರಂಭಿಸಿದೆ. ಇದು ದಿನದ 24 ಗಂಟೆ, ವಾರದ ಏಳು ದಿನವೂ ಕೆಲಸ ಮಾಡುವ ಹೆಲ್ಪಲೈನ್. ಲಸಿಕೆ ಕಾರ್ಯಕ್ರಮಗಳ ಬಗೆಗಿನ ಮಾಹಿತಿಯಲ್ಲದೇ ಕುರಿ-ಮೇಕೆ, ಹಸು, ಎಮ್ಮೆ ಸೇರಿದಂತೆ ಯಾವುದೇ ಸಾಕುಪ್ರಾಣಿಗೆ ರೋಗ ಬಂದರೂ ಸಲಹೆಗಾಗಿ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಿದರೆ ಸಹಾಯ ಸಿಗುತ್ತದೆ. ಈ ಹೆಲ್ಪಲೈನ್ ಅಲ್ಲದೇ ಟ್ವಿಟರ್, ಟೆಲಿಗ್ರಾಂ, ಫೇಸ್‌ಬುಕ್ ಮೂಲಕವೂ ನಾಗರಿಕರು ಸಂಪರ್ಕಿಸಬಹುದು.

ಸಹಾಯವಾಣಿ ಸಂಖ್ಯೆ: 8277100200

ಮೂಲ: ರೈತಾಪಿ ಜಗತ್ತು ಮಾಸ ಪತ್ರಿಕೆ

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಪ್ರಮುಖ ಲಿಂಕ್‌ಗಳು

 

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here
WhatsApp Group Join Now
Telegram Group Join Now

Related Posts

error: Content is protected !!