ಸರಕಾರಿ ಯೋಜನೆ

ರೈತರೇ ನಿಮ್ಮ ಜಮೀನು ಮೇಲಿನ ಸಾಲ ತೀರಿಸಿಯೂ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಹೀಗೆ ಮಾಡಿ | ಮೊಬೈಲ್‌ನಲ್ಲೇ ನೋಡಿ ನಿಮ್ಮ ಜಮೀನು ಸಾಲ

WhatsApp Group Join Now
Telegram Group Join Now

ರೈತರು ಬ್ಯಾಂಕ್‌ಗೆ ಸಾಲ ಮರುಪಾವತಿಸಿದ್ದರೂ ಕೆಲವೊಮ್ಮೆ ಪಹಣಿಯಲ್ಲಿ ಸಾಲದ ವಿವರ ಹಾಗೆಯೇ ಉಳಿದಿರುತ್ತದೆ. ಹಾಗಾದರೆ ಪಹಣಿಯಲ್ಲಿ ದಾಖಲಾದ ಸಾಲವನ್ನು ತೆಗೆದು ಹಾಕುವುದು ಹೇಗೆ? ಋಣಮುಕ್ತ ಪಹಣಿ ಪಡೆಯುವುದು ಹೇಗೆ? ಮೊಬೈಲ್‌ನಲ್ಲೇ ರೈತರು ತಮ್ಮ ಜಮೀನು ಮೇಲೆ ಎಷ್ಟು ಸಾಲವಿದೆ ಎಂಬುವದನ್ನು ನೋಡುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಬಹುತೇಕ ರೈತರು ತಮ್ಮ ಜಮೀನು ಮೇಲೆ ಸಾಲ ಪಡೆಯುವುದು ಸರ್ವೇಸಾಮಾನ್ಯ. ಹೀಗೆ ಪಡೆದ ಸಾಲವನ್ನು ಬ್ಯಾಂಕ್ ನಿಯಮದಂತೆ ಮರುಪಾವತಿಸುವುದು ಕೂಡ ಕಡ್ಡಾಯ. ಅದೃಷ್ಟ ನೆಟ್ಟಗಿದ್ದರೆ ಕೆಲವೊಮ್ಮೆ ಜಮೀನು ಮೇಲೆ ಪಡೆದ ಸಾಧಾರಣ ಬೆಳೆಸಾಲಗಳು ಮನ್ನಾ ಆಗುವುದೂ ಉಂಟು. ಆದರೆ ಸಾಲ ಮನ್ನಾ ಆಗಿದ್ದರೂ, ಇಲ್ಲವೇ ಸಾಲ ಮರುಪಾವತಿಸಿದ್ದರೂ ಕೆಲವೊಮ್ಮೆ ರೈತರ ಪಹಣಿಯಲ್ಲಿ ನಮೂದಾದ ಸಾಲದ ವಿವರ ಹಾಗೆಯೇ ಉಳಿದಿರುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಅಂತಹ ಪಹಣಿಯನ್ನು ನೀಡಿ ಸರಕಾರದ ಇತರ ಸಾಲ ಯೋಜನೆಯ ಲಾಭ ಪಡೆಯುವುದಾಗಲಿ, ಅಥವಾ ಬೇರೆ ರೀತಿಯ ಖಾಸಗಿ ಸಾಲ ಪಡೆಯುವುದಾಗಲಿ ಅಸಾಧ್ಯ. ಅಂತಹ ಜಮೀನು ಮಾರಾಟ ಮಾಡುವುದೂ ಕೂಡ ಕಷ್ಟಕರವಾಗುತ್ತದೆ.

ಜಮೀನು ಮೇಲೆ ಪಡೆದ ಸಾಲವನ್ನು ಮರುಪಾವತಿ ಮಾಡಿಯೂ ಕೂಡ ಪಹಣಿಯ ಕಾಲಂ ನಂಬರ್ 11ರಲ್ಲಿ ಸಾಲ ಋಣ ದಾಖಲಾಗಿರುವುದರಿಂದ ಅಂತಹ ಪಹಣಿಯನ್ನು ನೀಡಿ ಇತರ ಪ್ರಯೋಜನ ಪಡೆಯಲಾಗದು. ಹಾಗಾದರೆ ಪಹಣಿಯಲ್ಲಿ ದಾಖಲಾದ ಋಣವನ್ನು ತೆಗೆದು ಹಾಕುವುದು ಹೇಗೆ? ಅಂದರೆ ಸಾಲ ಪಡೆದ ವಿವರವಿಲ್ಲ ಋಣಮುಕ್ತ ಪಹಣಿ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ.

ಇದನ್ನೂ ಓದಿ: ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಋಣಮುಕ್ತ ಪಹಣಿ ಪಡೆಯಲು ಹೀಗೆ ಮಾಡಿ…

ಇದಕ್ಕೆ ಮಾಡಬೇಕಾದದು ಇಷ್ಟೇ; ರೈತರು ತಾವು ಪಡೆದ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿಸಿದ್ದರೆ ಅದರ ರಸೀದಿಯನ್ನು ಪಡೆದಿರಬೇಕು. ಒಂದುವೇಳೆ ರಸೀದಿ ಪಡೆದಿರದಿದ್ದರೆ ಸಾಲ ಪಡೆದ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಮ್ಯಾನೇಜರ್ ಬಳಿಯಲ್ಲಿ ತಮ್ಮ ಜಮೀನು ಮೇಲೆ ಯಾವುದೇ ರೀತಿಯ ಸಾಲವಿರುವುದಿಲ್ಲ ಅಥವಾ ತಾವು ಪಡೆದ ಸಾಲವನ್ನು ಸಂಪೂರ್ಣ ಮರುಪಾವತಿ ಮಾಡಿರುತ್ತೇವೆ, ಇಲ್ಲವೇ ತಮ್ಮ ಸಾಲ ಮನ್ನಾ ಆಗಿದ್ದು; ಯಾವ ಸಾಲವೂ ಬಾಕಿ ಉಳಿದಿರುವುದಿಲ್ಲ ಎಂಬರ್ಥದ ಪ್ರಮಾಣ ಪತ್ರ ಪಡೆಯಬೇಕು. ಅಂದರೆ ನೋ ಡ್ಯೂ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.

ನಂತರ ಪಡೆದ ಸಾಲವನ್ನು ಬ್ಯಾಂಕ್‌ಗೆ ಮರುಪಾವತಿಸಿರುವ ಬಗ್ಗೆ ಸರಳವಾದ ಅರ್ಜಿಯನ್ನು ಬರೆದು, ಅದರ ಜೊತೆಗೆ ಬ್ಯಾಂಕ್ ಮ್ಯಾನೇಜರ್‌ರಿಂದ ಪಡೆದ ನೋ ಡ್ಯೂ ಸರ್ಟಿಫಿಕೇಟ್, ಚಾಲ್ತಿ ವರ್ಷದ ಪಹಣಿ, ರೈತರ ಆಧಾರ್ ಕಾರ್ಡ್ ಪ್ರತಿ ಲಗತಿಸಿ ನಿಮ್ಮ ತಾಲ್ಲೂಕಿನ ಭೂಮಿ ಕೇಂದ್ರದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಪ್ರತಿಯಾಗಿ ರಸೀದಿ ಪಡೆಯಬೇಕು. ಇಷ್ಟು ಮಾಡಿದ 30 ದಿನಗಳ ನಂತರ ನಿಮ್ಮ ಪಹಣಿಯಲ್ಲಿ ನಮೂದಾಗಿರುವ ಋಣ (ಸಾಲ) ಹೋಗಿ, ಋಣಮುಕ್ತ ಪಹಣಿ ಲಭ್ಯವಾಗುತ್ತದೆ.

ಇದನ್ನೂ ಓದಿ: ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಋಣಮುಕ್ತ ಪಹಣಿ ನೋಡುವುದು ಹೇಗೆ?

ಅರ್ಜಿ ಸಲ್ಲಿಸಿ 30 ದಿನಗಳ ನಂತರ ರೈತರು ಋಣ(ಸಾಲ)ಮುಕ್ತ ಪಹಣಿ ಪಡೆಯಲು ಅಥವಾ ನೋಡಲು ಪುನಃ ಕಚೇರಿಗಳಿಗೆ ಅಲೆಯಬೇಕಿಲ್ಲ. ಮನೆಯಲ್ಲಿ ಕುಳಿತು ಯಾರ ಸಹಾಯವೂ ಇಲ್ಲದೇ ತಮ್ಮದೇ ಮೊಬೈಲ್‌ನಲ್ಲಿ ಖಚಿತಪಡಿಸಿಕೊಳ್ಳಬಹುದು.

ರೈತರು ತಮ್ಮ ಜಮೀನಿನ ಮೇಲಿನ ಸಾಲ ತೆಗೆದ ಪಹಣಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿದರೆ ಭೂಮಿ ಆನ್‌ಲೈನ್ ಲ್ಯಾಂಡ್ ರಿಕಾರ್ಡ್ಸ್ ವೀವ್ / Bhoomi Online | Land Records | View ಪುಟ ತೆರೆದುಕೊಳ್ಳುತ್ತದೆ. ಬಲತುದಿಯಲ್ಲಿ ಕನ್ನಡ / ಇಂಗ್ಲೀಷ್ ಆಯ್ಕೆಗಳಿದ್ದು, ರೈತರು ಸುಲಭ ಬಳಕೆಗೆ ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮಗಳನ್ನು ಸೆಲೆಕ್ಟ್ ಮಾಡಿಕೊಂಡು, ಸಾಲ ಪಡೆದ ಜಮೀನಿನ ಸರ್ವೇ ನಂಬರ್ ದಾಖಲಿಸಿ Go ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಪಹಣಿ (ಉತಾರ) ಪತ್ರಿಕೆಯನ್ನು ಮೊಬೈಲ್‌ನಲ್ಲೇ ಪಡೆಯಿರಿ

ಮುಂದೆ ಸರ್‌ನಾಕ್ (Surnoc), ಹಿಸ್ಸಾ ನಂಬರ್ (Hissa Number) ನಮೂದಿಸಬೇಕು. ನಂತರ ಅವಧಿಯಲ್ಲಿ (Period) 2022-2023 ಆಯ್ಕೆ ಮಾಡಿಕೊಂಡು ವರ್ಷದಲ್ಲೂ (Year) 2022-2023 ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು.

ಆಗ ರೈತರ ಹೆಸರು, ಖಾತಾ ನಂಬರ್, ಎಷ್ಟು ಎಕರೆ ಜಮೀನು ಎಂಬ ಇತ್ಯಾದಿ ವಿವರಗಳು ಕಾಣಿಸುತ್ತದೆ. ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಿದರೆ ರೈತರ ಪಹಣಿ (RTC) ಪತ್ರಿಕೆ ತೆರೆದುಕೊಳ್ಳುತ್ತದೆ. ಪಹಣಿಯ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಮೊದಲು ತೋರಿಸುತ್ತಿದ್ದ ಸಾಲ (ಋಣ) ಮಾಹಿತಿ ಹಾಗೆಯೇ ಇದ್ದರೇ, ನಿಮ್ಮ ಅರ್ಜಿ ಊರ್ಜಿತವಾಗಿಲ್ಲ ಎಂದರ್ಥ. ಈ ಬಗ್ಗೆ ನಿಮ್ಮ ತಾಲ್ಲೂಕಿನ ಭೂಮಿ ಕೇಂದ್ರದಲ್ಲಿ ವಿಚಾರಿಸಬಹುದು. ಅಥವಾ ಪಹಣಿಯ 11ನೇ ಕಾಲಂನ ವಿವರಗಳು ಬದಲಾಗಿದ್ದರೆ ನಿಮ್ಮ ಪಹಣಿ ಋಣ(ಸಾಲ)ಮುಕ್ತವಾಗಿದೆ ಎಂದು ತಿಳಿಯಬೇಕು.

ಜಮೀನಿನ ಮೇಲಿನ ಸಾಲ ತೆಗೆದ ಪಹಣಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈತರಲ್ಲಿ ಈ ಕಾರ್ಡ್ ಇದ್ದರೆ ಸುಲಭದಲ್ಲಿ ಸಿಗಲಿದೆ ಸರಕಾರಿ ಸೌಲಭ್ಯ | ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ನೋಂದಾಯಿಸಿ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!