ಕೃಷಿಸರಕಾರಿ ಯೋಜನೆ

ರೈತರೇ ನಿಮ್ಮ ಜಮೀನಿಗೆ ದಾರಿ ಪಡೆಯುವ ಸುಲಭ ದಾರಿ ಇಲ್ಲಿದೆ | ಕಠಿಣ ಸಮಸ್ಯೆಗೆ ಸುಲಭ ಪರಿಹಾರ | Land way tahasildar legal solution

WhatsApp Group Join Now
Telegram Group Join Now

ರೈತರು ತಮ್ಮ ಜಮೀನಿಗೆ ದಾರಿ ಪಡೆಯಲು ಏನು ಮಾಡಬೇಕು? ಇದಕ್ಕಿರುವ ಕಾನೂನು ಪರಿಹಾರವೇನು? ಕಂದಾಯ ನಿಯಮಗಳೇನು? ದಾರಿಗಾಗಿ ಯಾರಿಗೆ ಮನವಿ ನೀಡಬೇಕು? ಸಮಗ್ರ ವಿವರ ಇಲ್ಲಿದೆ…

Land way tahasildar legal solution : ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ಜಮೀನು ಕಾಲುದಾರಿ, ಬಂಡಿದಾರಿ ವ್ಯಾಜ್ಯ ಕೂಡ ಒಂದು. ಹಾಗೇ ನೋಡಿದರೆ ಭೂಕಂದಾಯ ಅಧಿನಿಯಮ ಕಾಯ್ದೆ ಪ್ರಕಾರ ಯಾವುದೇ ಜಮೀನಿಗೆ ಹೋಗಿ ಬರಲು ಅದರದೇ ಆದ ದಾರಿ ಇರುತ್ತದೆ. ಆದರೆ ಅನೇಕ ತಿಕ್ಕಾಟಗಳಿಂದ ಇಂದು ಜಮೀನು ಕಾಲುದಾರಿ, ಬಂಡಿದಾರಿಯ ವ್ಯಾಜ್ಯ ತಲೆ ಎತ್ತಿದೆ. ಇಂತಹ ವ್ಯಾಜ್ಯ ಪರಿಹಾರಕ್ಕೆ ಈ ಮೊದಲು ಕಾನೂನು ಅವಕಾಶ ಇತ್ತಾದರೂ ಅದಕ್ಕೆ ಸಾಕಷ್ಟು ತೊಡಕುಗಳಿದ್ದವು. ಮತ್ತದು ಸಾಮಾನ್ಯ ರೈತರಿಗೆ ಬಹಳಷ್ಟು ಕಷ್ಟದಾಯಕವೂ ಆಗಿತ್ತು.

ಇದನ್ನೂ ಓದಿ: Bagar hukum Government land legal : ರೈತರು ಉಳುಮೆ ಮಾಡುತ್ತಿರುವ ಸರಕಾರಿ ಜಮೀನು ಸಕ್ರಮ | ಸಣ್ಣ ರೈತರಿಗೆ ಬಂಪರ್ ಗಿಫ್ಟ್

ಮೊದಲು ಏನು ಮಾಡಬೇಕಿತ್ತು? : ಮೊದಲೆಲ್ಲ ಆಯಾ ಜಿಲ್ಲೆಯ DDLR (Deputy Director Land Records) ಅಂದರೆ ಭೂ ದಾಖಲೆಗಳು ಕಚೇರಿಯ ಉಪ ನಿರ್ದೇಶಕರಿಗೆ ಜಮೀನು ದಾರಿ ವ್ಯಾಜ್ಯ ಬಗೆಹರಿಸುವಂತೆ ರೈತರು ಅರ್ಜಿ ಸಲ್ಲಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೀಗ ಸರಕಾರ ಅಧಿಕೃತ ಸುತ್ತೋಲೆಯನ್ನೇ ಹೊರಡಿಸಿದ್ದು; ಸ್ಥಳೀಯ ತಹಸೀಲ್ದಾರರ ಮೂಲಕವೇ ಅತಿ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಸರಕಾರದ ಸುತ್ತೋಲೆ ಆದೇಶವೇನು? : ಈಚೆಗೆ ರಾಜ್ಯ ಸರಕಾರ ರೈತರು ಖಾಸಗಿ ಜಮೀನುಗಳಲ್ಲಿ ಕೃಷಿ ಉದ್ದೇಶಕ್ಕೆ ಬಳಸುವ ಕಾಲುದಾರಿ, ಬಂಡಿದಾರಿಗಳಲ್ಲಿ ಓಡಾಡಲು ಅನ್ಯ ಭೂಮಾಲೀಕರು ಅಡ್ಡಿಪಡಿಸಿದರೆ ಅಥವಾ ದಾರಿಯನ್ನೇ ಮುಚ್ಚಿ ಹಾಕಿದ್ದರೆ ಅಂತಹ ದಾರಿಗಳನ್ನು ತೆರವುಗೊಳಿಸಿ ಸುಗಮ ಓಡಾಟಕ್ಕೆ ಅವಕಾಶ ಕಲ್ಪಿಸುವ ಕುರಿತಂತೆ ಮಹತ್ವದ ಆದೇಶ ಹೊರಡಿಸಿರುವುದು ಎಲ್ಲರಿಗೂ ಗೊತ್ತಿದೆ. ನಕಾಶೆಯಲ್ಲಿ ದಾರಿ ಇದ್ದು ಅದು ಒತ್ತುವರಿಯಾಗಿದ್ದರೆ ಸ್ಥಳೀಯ ತಹಶೀಲ್ದಾರ್‌ರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲು ಸರ್ಕಾರ ಸುತ್ತೋಲೆ ಮೂಲಕ ಇತ್ತೀಚೆಗೆ ಸೂಚನೆ ನೀಡಿದೆ.

ಇದನ್ನೂ ಓದಿ: Drought Relief : ರೈತರು ಸುಸೂತ್ರ ಬರ ಪರಿಹಾರ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ…

The Indian Easement Act-1882ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದು, ಇದಕ್ಕೆ ಅನ್ಯ ಭೂಮಾಲೀಕರಿಂದ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಹಾಗೊಂದು ವೇಳೆ ಹಸ್ತಕ್ಷೇಪ ವ್ಯಕ್ತವಾದರೆ ಸ್ಥಳೀಯ ತಹಶೀಲ್ದಾರರು ಈ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ತಹಸೀಲ್ದಾರ್‌ಗೆ ದೂರು ನೀಡಿ : ಸರಕಾರದ ಸುತ್ತೋಲೆ ಪ್ರಕಾರ ನೆರೆಹೊರೆಯ ಭೂಮಾಲೀಕರು ಜಮೀನಿಗೆ ದಾರಿ ಬಿಡಲು ನಿರಾಕರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮತ್ತು ಸಮಸ್ಯೆ ಬಗೆಹರಿಸುವ ಅಧಿಕಾರವನ್ನು ಆಯಾ ತಹಸೀಲ್ದಾರ್‌ಗೆ ವಹಿಸಲಾಗಿದೆ. ಅಪರಾಧ ಸಂಹಿತೆ 1973ರ ಕಲಂ 147ರ ಅನ್ವಯ ‘ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗ’ (Utilization of Land and Water Rights) ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ರೀತಿ ತಹಸೀಲ್ದಾರ್ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (Taluk Executive Magistrate) ಆಗಿ ಕ್ರಮ ವಹಿಸುವ ಅಧಿಕಾರ ಹೊಂದಿರುತ್ತಾರೆ.

ಇದನ್ನೂ ಓದಿ: ಹಸು ಖರೀದಿಗೆ ₹58,500 ರೂಪಾಯಿ ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ… subsidy for purchase of cow

ತಾಲ್ಲೂಕಿನ ತಹಸೀಲ್ದಾರ್‌ಗಳು ನಕಾಶೆ ಉಲ್ಲೇಖಿತ ಕಾಲುದಾರಿ, ಬಂಡಿದಾರಿ (Map reference Land way) ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ದಾರಿ ಮುಚ್ಚಿದ್ದರೇ ಅವುಗಳನ್ನು ತೆರವುಗೊಳಿಸಬೇಕು. ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಅಧಿಕಾರವನ್ನು ತಹಸೀಲ್ದಾರ್‌ಗೆ ಕಂದಾಯ ಇಲಾಖೆ ವಹಿಸಿದೆ. ಹೀಗಾಗಿ ರೈತರು ಇನ್ಮುಂದೆ ಜಮೀನು ದಾರಿಗೆ ಸಂಬ೦ಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಸ್ಥಳೀಯ ತಹಸೀಲ್ದಾರ್‌ರಿಗೆ ದೂರು ನೀಡುವ ಮೂಲಕ ಸೂಕ್ತ ಪರಿಹಾರ (suitable solution) ಕಂಡುಕೊಳ್ಳಬಹುದಾಗಿದೆ.

Land way tahasildar legal solution, Circular About Farmers Land Dispute

ಜಮೀನು ದಾರು ಕುರಿತು ಸರಕಾರದ ಸುತ್ತೋಲೆ ಓದಲು ಇಲ್ಲಿ ಕ್ಲಿಕ್ ಮಾಡಿ…

Bagarhukum land : ಈ ರೈತರಿಗೆ 8 ತಿಂಗಳೊಳಗೇ ಸರಕಾರಿ ಜಮೀನು ಮಂಜೂರು | ಅಧಿಕಾರಿಗಳಿಗೆ ಕಂದಾಯ ಸಚಿವರ ಗಡುವು | ಯಾರಿಗೆಲ್ಲ ಸಿಗಲಿದೆ ಹಕ್ಕುಪತ್ರ?

WhatsApp Group Join Now
Telegram Group Join Now

Related Posts

error: Content is protected !!