ಸರಕಾರಿ ಯೋಜನೆ

ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 1,000 ರೂಪಾಯಿ ಸಹಾಯಧನ: ಯಾರಿಗೆಲ್ಲ ಸಿಗಲಿದೆ ಸಹಾಯಧನ? | Landless Female Farm Workers Pension

WhatsApp Group Join Now
Telegram Group Join Now

ವೃದ್ಧಾಪ್ಯವೇತನ, ಅಂಗವಿಕಲ ವೇತನ, ವಿಧವಾ ವೇತನ ಮಾದರಿಯಲ್ಲಿ ಕೃಷಿ ಕಾರ್ಮಿಕರಿಗೂ ಪ್ರತಿ ತಿಂಗಳು 1,000 ರೂಪಾಯಿ ಮಾಶಾಸನ ನೀಡಲು ಸರಕಾರ ಮುಂದಾಗಿದೆ. ಏನಿದು ಯೋಜನೆ? ಈ ಸಹಾಯಧನಕ್ಕೆ ಯಾರೆಲ್ಲ ಅರ್ಹರು? ಸಂಪೂರ್ಣ ಮಾಹಿತಿ ಇಲ್ಲಿದೆ…

ದುಡಿಯುವ ಕಾರ್ಮಿಕರಿಗೆ ಸರಕಾರ ಶುಭಸುದ್ದಿ ನೀಡಿದೆ. ಅದರಲ್ಲೂ ಭೂರಹಿತ ಮಹಿಳಾ ಕಾರ್ಮಿಕರಿಗೆ ಸರ್ಕಾರವೇ ಪ್ರತಿ ತಿಂಗಳು ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದೆ. ಅಂದರೆ ವೃದ್ಧಾಪ್ಯವೇತನ, ಅಂಗವಿಕಲ ವೇತನ, ವಿಧವಾ ವೇತನ ಮಾದರಿಯಲ್ಲಿ ಕೃಷಿ ಕಾರ್ಮಿಕರಿಗೂ ಮಾಶಾಸನ ನೀಡಲು ಮುಂದಾಗಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿಯೇ ಈ ವಿಶೇಷ ಯೋಜನೆ ಘೋಷಿಸಿದ್ದ ರಾಜ್ಯ ಸರಕಾರ ಇದೀಗ ಸದರಿ ಯೋಜನೆಯ ಸಹಾಯಧನವನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ: ತೆಂಗಿಗೆ ನೀರು, ಗೊಬ್ಬರ ಹೀಗೆ ನೀಡಿದರೆ ಹಠಾತ್ ಹೆಚ್ಚಲಿದೆ ಇಳುವರಿ | ಇಲ್ಲಿದೆ ತೆಂಗಿನ ಇಳುವರಿ ಹೆಚ್ಚಿಸುವ ರಹಸ್ಯ

ಸಾವಿರ ರೂಪಾಯಿ ಸಹಾಯಧನ?

ಈಚೆಗಷ್ಟೇ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂಪಾಯಿ ಸಹಾಯಧನ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆದರೆ ನಿನ್ನೆ ಫೆಬ್ರುವರಿ 23ರಂದು ಸದನದಲ್ಲಿ ಬೊಮ್ಮಾಯಿ ಸಹಾಯಧನವನ್ನು 1,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮೇಲಿನ ಉತ್ತರ ನೀಡುವ ವೇಳೆ ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ೧೦೦೦ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ ಬಜೆಟ್‌ನಲ್ಲಿ ಘೋಷಿಸಿದ್ದ 500 ರೂಪಾಯಿ 1,000 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: 570 ಪಿಡಿಒ ಹುದ್ದೆಗಳ ನೇಮಕಾತಿ: ಪರೀಕ್ಷೆ ತಯಾರಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರೈತನಿಗೆ ಶಕ್ತಿ ತುಂಬುವ ಪಾಲಿಸಿ 

ಕೃಷಿ ಕ್ಷೇತ್ರ ನಂಬಿಕೊಂಡು 60% ಜನ ಇದ್ದಾರೆ. 130 ಕೋಟಿ ಜನಸಂಖ್ಯೆಗೂ ಆಹಾರ ನೀಡುವ ಶಕ್ತಿ ಇದೆ. ಆಹಾರ ಕೊಡುವ ರೈತನಿಗೆ ಶಕ್ತಿ ತುಂಬುವ ಪಾಲಿಸಿ ಬರಬೇಕಿದೆ. ಆಗ ಮಾತ್ರ ಕೃಷಿ ಕ್ಷೇತ್ರ ಸದೃಢವಾಗಿರಲಿದೆ. ರೈತರ ಆರೋಗ್ಯ ದೃಷ್ಟಿಯಿಂದ ಯಶಸ್ವಿನಿ ಯೋಜನೆ ತರಲಾಗಿದೆ.

ಸಾಲದ ವ್ಯಾಪ್ತಿ ಮಿತಿ 3 ಲಕ್ಷದಿಂದ 5 ಲಕ್ಷದ ವರೆಗೆ ಹೆಚ್ಚಿಸಲಾಗಿದೆ. 5 ಲಕ್ಷದ ವರೆಗೂ 0% ಬಡ್ಡಿ ಸಾಲ ನೀಡಲಾಗುತ್ತಿದೆ. ಭೂಸಿರಿ ಯೋಜನೆಯಡಿ ಸರ್ಕಾರದಿಂದ 2,500 ಹಣ ವಿತರಣೆ ಹಾಗೂ ನಬಾರ್ಡ್‌ನಿಂದ 7,500 ರೂಪಾಯಿ ಕೊಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಇದೇ ವೇಳೆ ವಿದ್ಯಾವಾಹಿನಿ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಉಚಿತ ಶಿಕ್ಷಣವನ್ನು ಎಸ್‌ಎಸ್‌ಎಲ್‌ಸಿಯಿಂದ ಡಿಗ್ರಿವರೆಗೆ ವಿಸ್ತರಿಸಿದ್ದೇವೆ. ಇದು ಐತಿಹಾಸಿಕ ನಿರ್ಧಾರವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಸಮಸ್ಯೆ ಬಗೆಹರಿಸಲು ಶೆಡ್ಯೂಲ್ ಹೆಚ್ಚಿಸಲಾಗಿದೆ. 1,000 ಘೋಷಿಸಿದ್ದ ಬಸ್‌ಗಳ ಶೆಡ್ಯೂಲ್ 2,000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಬಜೆಟ್ ಮೇಲಿನ ಉತ್ತರ ವೇಳೆ ಸಿಎಂ ಬೊಮ್ಮಾಯಿ ಘೋಷಿಸಿದರು.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!