ಸರಕಾರಿ ಯೋಜನೆ

ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ

WhatsApp Group Join Now
Telegram Group Join Now

ರೈತರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಲ್ಲಿ ಜಮೀನು ಕಾಲುದಾರಿ, ಬಂಡಿದಾರಿ ವ್ಯಾಜ್ಯ ಕೂಡ ಪ್ರಮುಖವಾಗಿದೆ. ಈ ಸಮಸ್ಯೆಗೆ ಪರಿಹಾರವೇನು? ಜಮೀನು ಕಾಲುದಾರಿ ಅಥವಾ ಬಂಡಿದಾರಿ ಹಕ್ಕು ಪಡೆಯುವುದು ಹೇಗೆ? ಈ ಸಂಬಂಧ ಉದ್ಭವವಾಗುವ ತಕರಾರುಗಳಿಗೆ ಕಾನೂನು ಸಲಹೆಗಳೇನು? ಯಾರಲ್ಲಿ ನ್ಯಾಯ ಕೇಳಬೇಕು? ನಿಜಕ್ಕೂ ಈ ಸಮಸ್ಯೆಗೆ ಸೂಕ್ತ ಪರಿಹಾರವಿದೆಯಾ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ರಾಜ್ಯದ ಹಲವು ಕಡೆಗೆ ಜಮೀನು ಕಾಲುದಾರಿ ವ್ಯಾಜ್ಯ ರೈತರ ನಡುವಿನ ಸಾಮರಸ್ಯ ಕದಡುತ್ತಿದೆ. ಪರಸ್ಪರ ಜಗಳ, ಹೊಡೆದಾಟಗಳಾಗಿ ರೈತರು ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತುವ ದುಃಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಬಾಯಿ ಮಾತಿನ ಮೇಲೆ ಜಮೀನು ಕಾಲುದಾರಿಗಳು ಬಳಕೆಯಲ್ಲಿರುತ್ತವೆ. ಇದಕ್ಕೆ ಯಾವುದೇ ರೀತಿಯ ಲಿಖಿತ, ಅಧಿಕೃತ ದಾಖಲೆಗಳಿರುವುದಿಲ್ಲ. ಗೊಬ್ಬರ, ಮೇವು, ಬೆಳೆದ ಫಸಲು ಸಾಗಾಟಕ್ಕೆ ಒಬ್ಬರ ಜಮೀನಿನಲ್ಲಿ ಮತ್ತೊಬ್ಬರು ಓಡಾಡುವುದು ಸಹಜ.

ಇದನ್ನೂ ಓದಿ: ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು…

ಹಿಂದೆಲ್ಲ ಜಮೀನಿನ ಕಾಲುದಾರಿ, ಬಂಡಿದಾರಿ ವಿಚಾರವಾಗಿ ಈಗಿನಷ್ಟು ತಕರಾರುಗಳಿರಲಿಲ್ಲ. ಮಳೆಯಾಶ್ರಿತ ಜಮೀನುಗಳಾದರೆ ರೈತರ ಎಲ್ಲಾ ಜಮೀನುಗಳಲ್ಲೂ ಒಟ್ಟಿಗೆ ಫಸಲು ಬರುವುದರಿಂದ ಒಬ್ಬರ ಜಮೀನಿನ ಮೂಲಕ ಮತ್ತೊಬ್ಬರು ಸಹಜವಾಗಿ ಬಂಡಿದಾರಿ ಬಳಸಿಕೊಳ್ಳುತ್ತಾರೆ. ಆದರೆ ತೋಟ, ಫಾರಂ ಹೌಸ್‌ನಂತಹ ಬಹುವಾರ್ಷಿಕ ಜಮೀನುಗಳಲ್ಲಿ ಇದು ಸಾಧ್ಯವಿಲ್ಲ. ಈಗೀಗ ರೈತರಲ್ಲಿ ಮೊದಲಿದ್ದ ಬಾಂಧವ್ಯ ಇಲ್ಲವಾದ್ದರಿಂದ ಮಳೆಯಾಶ್ರಿತ ಜಮೀನುಗಳಲ್ಲೂ ಕೆಲವೊಮ್ಮೆ ಓಡಾಟಕ್ಕೆ ವಿನಾಃಕಾರಣ ತಕರಾರು, ಜಗಳಗಳು ಏರ್ಪಡುವುದಿದೆ. ತತ್ಪರಿಣಾಮ ರೈತರು ತಮ್ಮದೇ ಜಮೀನಿಗೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು? ಜಮೀನು ಕಾಲುದಾರಿ ಅಥವಾ ಬಂಡಿದಾರಿ ಹಕ್ಕು ಪಡೆಯುವುದು ಹೇಗೆ? ಈ ಸಂಬಂಧ ಉದ್ಭವವಾಗುವ ತಕರಾರುಗಳಿಗೆ ಕಾನೂನು ಸಲಹೆಗಳೇನು? ಯಾರಲ್ಲಿ ನ್ಯಾಯ ಕೇಳಬೇಕು? ನಿಜಕ್ಕೂ ಈ ಸಮಸ್ಯೆಗೆ ಸೂಕ್ತ ಪರಿಹಾರವಿದೆಯಾ? ಇತ್ಯಾದಿ ಸಾಲು ಸಾಲು ಪ್ರಶ್ನೆಗಳು ಉದ್ಭವವಾಗುವುದು ಸಹಜ. ನಿಜ, ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಅಂತೆಯೇ ಜಮೀನು ಕಾಲುದಾರಿ ಸಮಸ್ಯೆಗೂ ಸೂಕ್ತ ಪರಿಹಾರವಿದ್ದು; ರೈತರು ಪರಸ್ಪರ ಜಗಳ ಮಾಡದೇ ಕಾನೂನು ಪ್ರಕಾರ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಕಾಡು ಪ್ರಾಣಿಗಳಿಂದಾಗುವ ಹಾನಿ: ರೈತರಿಗೆ ಸಿಗಲಿದೆ ದುಪ್ಪಟ್ಟು ಪರಿಹಾರ

ಗಮನಾರ್ಹವೆಂದರೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರು ತಮ್ಮ ಕೃಷಿ ಜಮೀನಿಗೆ ಹೋಗಲು ಕಾಲು ಹಾದಿಯನ್ನು ಬಳಸುತ್ತಿದ್ದರೆ ಅದನ್ನೇ ಅಧಿಕೃತ ದಾರಿ ಎಂದು ಪರಿಗಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈತರು ಸುಮಾರು 30 ವರ್ಷಗಳಿಂದ ಒಂದೇ ಹಾದಿ ಬಳಸುತ್ತಿದ್ದ ಸಂದರ್ಭದಲ್ಲಿ ಮಾತ್ರ ಈ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ನಿರ್ದೇಶನ ನೀಡಿದ್ದಾರೆಂದು ಕಾನೂನು ಸಚಿವ ಟಿ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಬಗರ್ ಹುಕುಂನಲ್ಲಿ ಜಮೀನು ಮಂಜೂರು ಮಾಡುವಾಗ ರಸ್ತೆ ಸಂಪರ್ಕವನ್ನು ಕಡ್ಡಾಯವಾಗಿ ನಮೂದಿಸಬೇಕು, ಒಂದು ವೇಳೆ ದಾರಿಯನ್ನು ಒತ್ತುವರಿ ಮಾಡಿದ್ದರೆ, ಅದನ್ನು ಬಿಡಿಸಿಕೊಡಬೇಕೆಂದು ಸಭೆಯಲ್ಲಿ ಸೂಚಿಸಲಾಗಿದೆ.

ಏನು ಮಾಡಬೇಕು?

ಸಾಮಾನ್ಯವಾಗಿ ಕರ್ನಾಟಕ ಸರ್ಕಾರ ಭೂಕಂದಾಯ ಅಧಿನಿಯಮ ಕಾಯ್ದೆ ಪ್ರಕಾರ ಯಾವುದೇ ಜಮೀನಿಗೆ ಹೋಗಿ ಬರಲು ಅದರದೇ ಆದ ದಾರಿಯಿರುತ್ತದೆ. ಆದರೆ ಅನೇಕ ತಿಕ್ಕಾಟಗಳಿಂದ ಇಂದು ದಾರಿಯ ವ್ಯಾಜ್ಯ ಶುರುವಾಗಿವೆ. ಹಾಗೊಂದು ವೇಳೆ ನಿಮ್ಮ ಹೊಲಕ್ಕೆ ಅಧಿಕೃತ ದಾರಿ ಇಲ್ಲದಿದ್ದರೆ ಕಾನೂನು ಪ್ರಕಾರ ದಾರಿ ಪಡೆದುಕೊಳ್ಳಬಹುದು.

ನಿಮ್ಮ ಜಿಲ್ಲೆಯ ಡಿಡಿಎಲ್‌ಆರ್ (Deputy Director Land Records) ಅಂದರೆ ಭೂ ದಾಖಲೆಗಳು ಕಚೇರಿಯ ಉಪ ನಿರ್ದೇಶಕರಿಗೆ ನಮ್ಮ ಜಮೀನು ಕಾಲುದಾರಿ ವ್ಯಾಜ್ಯ ಬಗೆಹರಿಸುವಂತೆ ಅರ್ಜಿ ಸಲ್ಲಿಸುವ ಮೂಲಕ ಈ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಬೇಕಾಗುವ ದಾಖಲೆಗಳು

ಕಾಲುದಾರಿ ಅಥವಾ ಬಂಡಿದಾರಿ ವ್ಯಾಜ್ಯ ಹೊಂದಿರುವ ಜಮೀನಿಗೆ ಹೋಗಿ ಬರಲು ಅಧಿಕೃತ ದಾರಿ ಮಾಡಿಕೊಳ್ಳಲು ಈ ಕೆಳಕಂಡ ದಾಖಲೆಗಳು ಬೇಕಾಗುತ್ತವೆ.

  1. ಜಮೀನಿನ ಪೂರ್ಣ ಸರ್ವೆಯ ನಕ್ಷೆ
  2. ಸರ್ವೆ ನಂಬರಿನ ಅಕ್ಕಪಕ್ಕದ ನಾಲ್ಕು ದಿಕ್ಕಿನ ಸರ್ವೆ ಸ್ಕೆಚ್
  3. ಸರ್ವೇ ನಂಬರಿನ ಟಿಪ್ಪಣಿಗಳು
  4. ಪಹಣಿ ಮತ್ತು ಆಧಾರ್ ಕಾರ್ಡ್
  5. ಜಮೀನಿನ ಎದುರುಗಡೆ ಇರುವವರ ಪಹಣಿ ಮತ್ತು ವಿಳಾಸ
  6. ದಾರಿಯಿಲ್ಲದಿರುವ ಕುರಿತು ಪ್ರಮಾಣ ಪತ್ರ

ಈ ದಾಖಲೆಗಳೊಂದಿಗೆ ನಿಮ್ಮ ಜಮೀನು ಕಾಲುದಾರಿ ಅಥವಾ ಬಂಡಿದಾರಿ ಸಮಸ್ಯೆ ಕುರಿತ ವಿವರವಾದ ಅರ್ಜಿ ನಮೂನೆ ಪತ್ರ ಬರೆದು ಭೂ ದಾಖಲೆಗಳ ಕಚೇರಿಯ ಉಪ ನಿರ್ದೇಶಕರಿಗೆ (DDLR) ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಯ ಅನಂತರ ಡಿಡಿಎಲ್‌ಆರ್ ಅವರು ರೈತರ ಜಮೀನಿಗೆ ದಾರಿ ಮಾಡಿಕೊಡಲು ಪುನಃ ಸರ್ವೆ ಮಾಡಲು ಆದೇಶಿಸಬಹುದು ಅಥವಾ ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ವಿಲೇಜ್ ಅಕೌಂಟೆಂಟ್ ಮೂಲಕ ವರದಿ ಕೇಳಬಹುದು. ಅವರು ವರದಿ ಒಪ್ಪಿಸಿದ ಬಳಿಕ ಅದನ್ನು ಆಧರಿಸಿ ಎದುರುದಾರರಿಗೆ ನೋಟಿಸ್ ಕಳಿಸಲಾಗುತ್ತದೆ. ಇವರೆಲ್ಲರ ಹೇಳಿಕೆ ಆಧರಿಸಿ ಕಾಲುದಾರಿ, ಬಂಡಿದಾರಿ ಸೃಷ್ಟಿಸಬಹುದು. ಸಮಸ್ಯೆ ಇನ್ನೂ ಜಟೀಲವಾಗಿದ್ದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರೈತರ ಕಾಲುದಾರಿ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಅಂಚೆ ಕಚೇರಿಯಲ್ಲಿ ಕೇವಲ ₹399ಕ್ಕೆ ಈ ಪಾಲಸಿ ಮಾಡಿದರೆ ಸಿಗಲಿದೆ ₹10 ಲಕ್ಷ ಆರ್ಥಿಕ ನೆರವು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!