ಸರಕಾರಿ ಯೋಜನೆಸಾಲ ಯೋಜನೆ

Loan and subsidy schemes for women : ಮಹಿಳೆಯರಿಗಾಗಿಯೇ ಇರುವ ಸಾಲ ಮತ್ತು ಸಬ್ಸಿಡಿ ಯೋಜನೆಗಳು: ಕೂಡಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

ಈ ಯೋಜನೆಗಳ ಅಡಿಯಲ್ಲಿ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಲಕ್ಷಾಂತರ ರೂಪಾಯಿ ಸಾಲ ಮತ್ತು ಸಹಾಯಧನ ಸಿಗಲಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Loan and subsidy schemes for women | kswdc karnataka Schemes : ಮಹಿಳೆಯರನ್ನು ಔದ್ಯೋಗಿಕವಾಗಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2023-24ನೇ ಸಾಲಿನ ವಿವಿಧ ಸಾಲ, ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮಹಿಳೆಯರು ಈ ಕೆಳಗಿನ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಬಹುದಾಗಿದೆ.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಉದ್ಯೋಗಿನಿ ಯೋಜನೆ : ಈ ಯೋಜನೆಯಡಿ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಹಾಗೂ ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

  • ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕ ವೆಚ್ಚ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು; ಶೇ.30ರಷ್ಟು ಸಹಾಯಧನ ಸಿಗಲಿದೆ. ಅರ್ಜಿ ಸಲ್ಲಿಸುವ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಮಿತಿಯಲ್ಲಿರಬೇಕು. 18 ವರ್ಷ ಮೇಲ್ಪಟ್ಟ ವಯಸ್ಸಿನವರಾಗಿರಬೇಕು.
  • ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ಕನಿಷ್ಟ 1 ಲಕ್ಷದಿಂದ ಗರಿಷ್ಟ 3 ಲಕ್ಷ ರೂಪಾಯಿಗಳಾಗಿದ್ದು ಶೇ.50ರಷ್ಟು ಸಹಾಯಧನ ಸಿಗಲಿದೆ. ವಾರ್ಷಿಕ 2 ಲಕ್ಷ ರೂಪಾಯಿ ಆದಾಯ ಮಿತಿ ಹೊಂದಿರುವ, 18 ವರ್ಷ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

ಚೇತನ ಯೋಜನೆ : ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಬಹುದಾಗಿದೆ.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

ಧನಶ್ರೀ ಯೋಜನೆ : ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 30,000 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಯೋಜನೆಯಡಿ ವಯೋಮಿತಿ 18 ರಿಂದ 60 ವರ್ಷ ವಯೋಮಿತಿಯ ಮಹಿಳೆಯರು ಪ್ರೋತ್ಸಾಹಧನ ಪಡೆಯಬಹುದಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ : ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಮಂಗಳಮುಖಿಯರ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಪಾಯಿ ಉಚಿತ ಪ್ರೋತ್ಸಾಹಧನ ನೀಡಲಾಗುತ್ತದೆ.

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ : 1993-94 ಮತ್ತು 2007-08ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಕೂಡ ಉಚಿತ 30,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಅರ್ಜಿ ಸಲ್ಲಿಕೆ ಹೇಗೆ? : ಈ ಎಲ್ಲ ಯೋಜನೆಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ‘ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ’ದ ಈ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಕೆ 22-11-2023ರ ರಿಂದ ಆರಂಭವಾಗಿದ್ದು; 22-12-2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ 3 ಲಕ್ಷ ರೂಪಾಯಿ ಸಾಲ ಗ್ಯಾರಂಟಿ | Kisan Credit Card Loan Scheme

ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ : ಇಲ್ಲಿ ಕ್ಲಿಕ್ ಮಾಡಿ
ದೂರವಾಣಿ : 080-26632973 / 26542307

Loan and subsidy schemes for women | kswdc karnataka Schemes

WhatsApp Group Join Now
Telegram Group Join Now

Related Posts

error: Content is protected !!