ಸರಕಾರಿ ಯೋಜನೆ

LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ನಿಮ್ಮ ಮೊಬೈಲ್‌ನಲ್ಲಿಯೇ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡಿ, ಉಚಿತವಾಗಿ ಕೆವೈಸಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ…

LPG Gas e-KYC Updates : ಎಲ್‌ಪಿಜಿ ಗ್ಯಾಸ್ (LPG Gas) ಸಬ್ಸಿಡಿ ಹಣ ಪಡೆಯಲು ಇ-ಕೆವೈಸಿ (e-KYC) ಕಡ್ಡಾಯವಾಗಿ ಮಾಡಬೇಕು ಮತ್ತು ಇದೇ ಡಿಸೆಂಬರ್ 31, 2023ರ ಒಳಗೇ ಮಾಡಬೇಕು ಎಂಬ ವದಂತಿ ಇತ್ತೀಚೆಗೆ ಅನೇಕರನ್ನು ಗೊಂದಲಕ್ಕೀಡು ಮಾಡಿದೆ. ಈ ಊಹಾಪೋಹದ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಇದರ ಬಗ್ಗೆ ಸ್ಪಷ್ಟನೆ ನೀಡಿಯಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮೊಬೈಲ್’ನಲ್ಲಿಯೇ ಇ-ಕೆವೈಸಿ ಚೆಕ್ ಮಾಡುವ ವಿಧಾನದ ಬಗ್ಗೆ ತಿಳಿಸಲಾಗಿದೆ.

ಇದನ್ನೂ ಓದಿ: BMTC free driving training : ಉಚಿತ ಡ್ರೈವಿಂಗ್ ತರಬೇತಿಗೆ ಅರ್ಜಿ ಆಹ್ವಾನ | ವಸತಿ, ಉಟೋಪಚಾರ ಕೂಡ ಪ್ರೀ | ಈಗಲೇ ಅರ್ಜಿ ಸಲ್ಲಿಸಿ…

ಹರಿದಾಡಿದ ವದಂತಿ ಏನು?

ಅಡಿಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳು ದಿನಾಂಕ: 31-12-2023 ರೊಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಹೋಗಿ ತಮ್ಮ ಇ-ಕೆವೈಸಿ (ಬೆರಳಚ್ಚು ದೃಢೀಕರಣ- Fingerprint authentication) ನೀಡಿದವರಿಗೆ ಮಾತ್ರ ಸಬ್ಸಿಡಿ ಹಣ ದೊರೆಯುತ್ತದೆ ಮತ್ತು ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ ಹಾಗೂ ಇ-ಕೆವೈಸಿ ದೃಢೀಕರಣ ಮಾಡಲು ಗ್ಯಾಸ್ ಏಜೆನ್ಸಿಯವರಿಗೆ ಹಣ ನೀಡಬೇಕು ಎಂಬ ವದಂತಿಯು ಕುರಿತು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿತ್ತು.

ಗ್ಯಾಸ್ ದುರ್ಬಳಕೆ ತಪ್ಪಿಸುವ ಹಿನ್ನಲೆಯಲ್ಲಿ ಇ-ಕೆವೈಸಿ ಅಂದರೆ ಬೆರಳಚ್ಚು ದೃಢೀಕರಣ ನೀಡುವುದನ್ನು ಭಾರತ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು (Ministry of Petroleum and Natural Gas Government of India) ಈಚೆಗೆ ಕಡ್ಡಾಯಗೊಳಿಸಿದೆ. ಈ ಸಂಬ೦ಧ ದಿನಾಂಕ: 18-10-2023ರಡಿ ಇ-ಕೆವೈಸಿ ಕಾರ್ಯವನ್ನು ಕೂಡಲೇ ನಿರ್ವಹಿಸುವಂತೆ ನಿರ್ದೇಶಿಸಿದೆ ಕೂಡ. ಆದರೆ, ಇದಕ್ಕಾಗಿ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ!

ಇದನ್ನೂ ಓದಿ: ಇನ್ಮುಂದೆ ಬಸ್ ಅಪಘಾತದಲ್ಲಿ ಮೃತಪಟ್ಟರೆ ಸಿಗಲಿದೆ ₹10 ಲಕ್ಷ ಪರಿಹಾರ | ಅಧಿಕೃತ ಆದೇಶ ಪ್ರಕಟ | KSRTC Bus Passenger Accident Fund Compensation Increase

ಇಲಾಖೆಯ ಸ್ಪಷ್ಟನೆ ಏನು?

ಹರಿದಾಡಿದ ವದಂತಿಯು ಅಪ್ಪಟ ಸುಳ್ಳು ಸುದ್ದಿಯಾಗಿದ್ದು; ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಸಂಪೂರ್ಣ ಉಚಿತವಾಗಿ ಇ-ಕೆವೈಸಿ ನೀಡಬಹುದಾಗಿದೆ. ಡೆಪ್ಯುಟಿ ಸೆಕ್ರೇಟರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಭಾರತ ಸರ್ಕಾರ ಇವರ ನಿರ್ದೇಶನದ ಅನ್ವಯ ಮೊದಲ ಆದ್ಯತೆಯಾಗಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿ ನೀಡಬೇಕಾಗಿದೆ.

ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆಯ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ದೃಢೀಕರಿಸಿಕೊಳ್ಳಬಹುದು. ಸಾರ್ವಜನಿಕರು ಸದರಿ ಕಾರ್ಯದ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯದ ವಿವಿಧ ಜಿಲ್ಲೆಗಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರುಗಳು ಈಗಾಗಲೇ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ: Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

ಮೊಬೈಲ್‌ನಲ್ಲಿ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಉಜ್ವಲ ಗ್ಯಾಸ್ ಯೋಜನೆಯ (PM Ujjwala Yojana free Gas) ಸಬ್ಸಿಡಿ ತಲುಪಿಸಲು ಹಾಗೂ ಇತರ ಗ್ಯಾಸ್ ಗ್ರಾಹಕರಿಗೆ ದುರ್ಬಳಕೆ ತಪ್ಪಿಸಲು ಆಹಾರ ಇಲಾಖೆಯು ಆಧಾರ್ ಇ-ಕೆವೈಸಿ ಕಡ್ಡಾಯವಾಗಿಸಿದೆ. ಈಗಾಗಲೇ ಅನೇಕರ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. ಕೆವೈಸಿ ಆಗದೇ ಇರುವವರು ತಮ್ಮ ಮೊಬೈಲ್‌ನಲ್ಲಿಯೇ ತಿಳಿದುಕೊಂಡು ಪೂರ್ಣಗೊಳಿಸಬಹುದಾಗಿದೆ.

ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ  mylpg.in  ಅಧಿಕೃತ ಜಾಲತಾಣದ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಹಾಗೂ ಇಂಡೆನ್ ಗ್ಯಾಸ್ ಮೂರು ಕಂಪನಿಗಳ ಹೆಸರಿರುವ ಸಿಲಿಂಡರ್ ಚಿತ್ರ ಕಾಣಿಸುತ್ತದೆ. ನೀವು ಯಾವ ಕಂಪನಿಯ ಗ್ಯಾಸ್ ಬಳಸುತ್ತಿರೋ ಆ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ನೀವು ಮೊದಲ ಬಾರಿಗೆ ಲಾಗಿನ್ ಆಗುತ್ತಿದ್ದರೆ, ಬಲತುದಿಯಲ್ಲಿರುವ New user ಎಂಬ ಮೇಲೆ ಕ್ಲಿಕ್ ಮಾಡಿ, ಗ್ಯಾಸ್ Consumer Number ಹಾಗೂ ಅದಕ್ಕೆ ನೀಡಿರುವ ಮೊಬೈಲ್ ನಂಬರ್ ಹಾಕಿ ಒಟಿಪಿ ಆಧಾರಿತ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕು. ಒಂದುವೇಳೆ ನೀವು ಮೊದಲೇ ಅಕೌಂಟ್ ಹೊಂದಿದ್ದರೆ ಲಾಗಿನ್ ಎಂಬ ಆಯ್ಕೆಯ ಮೇಲೆ ಒತ್ತಿ ಪಾಸ್’ವರ್ಡ್ ನಮೂದಿಸುವ ಮೂಲಕ ಲಾಗಿನ್ ಆಗಬಹುದು.

ಆಗ ನೀವು ಬಳಸುವ ಗ್ಯಾಸ್ ಕಂಪನಿಯ ವೆಬ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ (ಗ್ರಾಹಕರ) ವಿವರ ಕಾಣಿಸುತ್ತದೆ. ಅದರಲ್ಲಿ Aadhaar linked with LPG distributor: ‘Yes’ ಎಂದಿದ್ದರೆ ಇ-ಕೆವೈಸಿ ಆಗಿದೆ ಎಂದರ್ಥ. ‘No’ ಎಂದು ತೋರಿಸಿದರೆ ಇ-ಕೆವೈಸಿ ಆಗಿಲ್ಲವೆಂದು ಅರ್ಥ. ನಿಮಗೆ ಅನುಕೂಲವಾದಾಗ ಗ್ಯಾಸ್ ಏಜನ್ಸಿಗೆ ಹೋಗಿ ಬೆರಳಚ್ಚು ದೃಢೀಕರಣ ನೀಡಿ ಉಚಿತವಾಗಿ ಮತ್ತು ಅತೀ ಸುಲಭವಾಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

WhatsApp Group Join Now
Telegram Group Join Now

Related Posts

error: Content is protected !!