ಪಶುಪಾಲನೆ

ನಿಮ್ಮ ಹಸುವಿನ ಹಾಲಿನ ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿ | ಹಾಲಿನ ಡಿಗ್ರಿ ಹೆಚ್ಚಿಸುವ ಸರಳ ವಿಧಾನ | increase in milk degree

WhatsApp Group Join Now
Telegram Group Join Now

ಹೈನುಗಾರಿಕೆಯಲ್ಲಿ ಅಧಿಕ ಹಾಲಿನ ಇಳುವರಿಯ ಜೊತೆಗೆ ಗುಣಮಟ್ಟದ ಹಾಲು ಪಡೆಯುವುದು ರೈತರಿಗೆ ದೊಡ್ಡ ಸವಾಲಾಗಿದೆ. ಆದರೆ ಕೆಲವು ಉಪಾಯಗಳನ್ನು ಅನುಸರಿಸಿದರೆ ಈ ಸವಾಲನ್ನು ಸರಳವಾಗಿ ಗೆಲ್ಲಬಹುದು. ಹಾಗಿದ್ದರೆ ಹಾಲಿನ ಡಿಗ್ರಿ ಹೆಚ್ಚಳಕ್ಕೆ ಹಿಂಡುವ ದನಗಳ ಆಹಾರ, ನೀರು, ಔಷಧೋಪಚಾರ, ಆರೈಕೆ ಹೇಗಿರಬೇಕು? ಎಂಬ ಮಾಹಿತಿ ಇಲ್ಲಿದೆ…

ಹೈನುಗಾರಿಕೆಯಲ್ಲಿ ಅಧಿಕ ಆದಾಯ ಗಳಿಕೆಗೆ ಹಾಲಿನ ಗುಣಮಟ್ಟ ಅತೀ ಮುಖ್ಯ. ನಾಟಿ ಹಸು, ಎಮ್ಮೆಗಳ ಹಾಲಿನ ಗುಣಮಟ್ಟ ಉತ್ತಮವಾಗಿರುತ್ತದೇನೋ ನಿಜ. ಆದರೆ ಹಾಲಿನ ಇಳುವರಿ ಕಡಿಮೆ. ಅದೇ ರೀತಿ ಮಿಶ್ರತಳಿ ಹಸುಗಳಾದ ಜರ್ಸಿ, ಎಚ್‌ಎಫ್ ಹಸುವಿನ ಹಾಲಿನ ಇಳುವರಿ ಹೆಚ್ಚಾಗಿರುತ್ತದೆ; ಆದರೆ ಹಾಲಿನ ಡಿಗ್ರಿ ಕಳಪೆಯಾಗಿರುವುದುಂಟು. ಹಾಗಿದ್ದರೇ ಮಿಶ್ರತಳಿ ಹಸುಗಳಿಂದ ಹೆಚ್ಚಿನ ಇಳುವರಿಯ ಜೊತೆಗೆ ಗುಣಮಟ್ಟದ ಹಾಲು ಪಡೆಯುವುದು ಇಂದು ರೈತರಿಗೆ ಸವಾಲಾಗಿದೆ. ರೈತರು ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ಹಾಲಿನ ಡಿಗ್ರಿ ಹೆಚ್ಚಿಸಬಹುದು. ಆ ಮೂಲಕ ಹೈನುಗಾರಿಕೆಯಲ್ಲಿ ನಷ್ಟ ತಡೆದು ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಇದನ್ನೂ ಓದಿ: ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ ₹3.50 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರೈತರಿಂದ ಪಡೆಯುವ ಹಾಲು ಕನಿಷ್ಠ 3.5ರಷ್ಟು ಕೊಬ್ಬಿನ ಅಂಶ ಹಾಗೂ 8.5ರಷ್ಟು ಕೊಬ್ಬು, ಅಲ್ಲದೇ ಘನ ಪದಾರ್ಥಗಳನ್ನು ಹೊಂದಿರಬೇಕು. ನಾಟಿ ತಳಿಯ ಹಸುಗಳು ಹಾಗೂ ಎಮ್ಮೆಯ ಹಾಲು ಅಧಿಕ ಕೊಬ್ಬಿನ ಅಂಶ, ಕೊಬ್ಬು ಅಲ್ಲದ ಘನ ಪದಾರ್ಥಗಳನ್ನು ಹೊಂದಿರುತ್ತವೆ. ಆದರೆ ಇವುಗಳ ಹಾಲಿನ ಇಳುವರಿ ಕಡಿಮೆ. ಅವುಗಳಿಂದ ಹೈನುಗಾರಿಕೆಯಲ್ಲಿ ಲಾಭವೂ ಕಡಿಮೆ.

ಅಧಿಕ ಹಾಲು ಕೊಡುವ ಎಚ್‌ಎಫ್ ಮಿಶ್ರ ತಳಿಯ ರಾಸುಗಳಲ್ಲಿ ಹಾಲಿನ ಇಳುವರಿ ಜಾಸ್ತಿ ಇರುತ್ತದೆಯಾದರೂ ಅವುಗಳ ಹಾಲಿನ ಗುಣಮಟ್ಟ ಕಡಿಮೆ. ಕಡಿಮೆ ಹಾಲಿನ ಗುಣಮಟ್ಟಕ್ಕೆ ಬೆಲೆ ಇಲ್ಲ. ಇದರಿಂದಾಗಿ ಇಂದು ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ರೈತರು ಈ ಕೆಳಕಂಡ ಉಪಾಯಗಳನ್ನು ಪಶುಪಾಲನೆಯಲ್ಲಿ ಬಳುಸುವ ಮೂಲಕ ಹೈನುಗಾರಿಕೆಯಲ್ಲಿ ನಷ್ಟ ತಡೆಯಬಹುದಾಗಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಏನು ಮಾಡಬೇಕು?

ಮೊದಲನೆಯದಾಗಿ ಹಸುಗಳಿಗೆ ಶುದ್ಧವಾದ ನೀರನ್ನು ಕುಡಿಸಬೇಕು. ಕುಡಿಯುವ ನೀರಿನ ತೊಟ್ಟಿಗೆ ತಿಂಗಳಿಗೊಮ್ಮೆ ಸುಣ್ಣವನ್ನು ಹಚ್ಚಬೇಕು. ಜಂತುನಾಶಕ ಔಷಧಿ ಕುಡಿಸಬೇಕು. ಪ್ರತಿದಿನ 100-150 ಗ್ರಾಂ ಮಿನರಲ್ ಪುಡಿಯನ್ನು ದಿನಕ್ಕೆ 2 ಬಾರಿಯಂತೆ ಕೊಡಬೇಕು.

ಒಣ ಮತ್ತು ಹಸಿ ಮೇವನ್ನು ಕತ್ತರಿಸಿ ನೀಡಬೇಕು. ದಿನಾಲು ಹಸಿ ಮೇವು, ಒಣ ಮೇವು ಹಾಗೂ ಚುನ್ನಿ ಮಿಶ್ರಣವನ್ನು ನೀಡಬೇಕು. ಒಂದೇ ರೀತಿಯ ಆಹಾರ ನೀಡಬಾರದು. ಸಾಧ್ಯವಾದರೆ ನೆಕ್ಕು ಬಿಲ್ಲೆಗಳನ್ನು ಬಳಸಬೇಕು. ಒಂದು ಲೀಟರ್ ಹಾಲಿನ ಇಳುವರಿಗೆ 300 ಗ್ರಾಂ ನಂತೆ ಹಿಂಡಿ ಮಿಶ್ರಣ ನೀಡಬೇಕು. ಅಧಿಕ ಮತ್ತು ಕಡಿಮೆ ಮಿಶ್ರಣ ಹಾಲಿನ ಗುಣಮಟ್ಟ ಕಡಿಮೆ ಇರುತ್ತದೆ.

ಅಧಿಕ ಇಳುವರಿ ನೀಡುವ ಹಸುಗಳಿಗೆ ದಿನಕ್ಕೆ 300 ಗ್ರಾಂ. ಬೆಲ್ಲ ನೀಡಬೇಕು. ಗಮನಿಸಿ ಹೆಚ್ಚಿನ ಪ್ರಮಾಣದ ಬೆಲ್ಲ ಹೊಟ್ಟೆಯುಬ್ಬರ ಉಂಟು ಮಾಡುತ್ತದೆ. ಅತಿಯಾದ ಡಿಗ್ರಿ ಸಮಸ್ಯೆ ಇದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ಕ್ಯಾಲ್ಸಿಯಂ ದ್ರಾವಣಗಳನ್ನು ಪ್ರತಿದಿನ 2 ಸಲ 100 ಮಿಲಿ ಲೀಟರ್‌ನಂತೆ ಕುಡಿಸಬೇಕು.

ಇದನ್ನೂ ಓದಿ: ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು… 

ಹಾಲಿನಲ್ಲಿರುವ ಕೊಬ್ಬಿನ ಆಂಶವನ್ನು ಹೆಚ್ಚಿಸಲು ಶೇಂಗಾ ಹಿಂಡಿ ಹೊರತುಪಡಿಸಿ ಬೇರೆ ಎಲ್ಲ ಎಣ್ಣೆ ಕಾಳು ಹಿಂಡಿಗಳನ್ನು ಪ್ರತಿ ಲೀಟರ್ ಹಾಲಿನ ಇಳುವರಿಗೆ 200 ಗ್ರಾಂ.ನಂತೆ ಕೊಡಬೇಕು. ಹತ್ತಿ ಕಾಳು ಹಿಂಡಿ ಉತ್ತಮ ಫಲಿತಾಂಶ ನೀಡುತ್ತದೆ. ಹತ್ತಿ ಕಾಳು ಪುಡಿ ಮಾಡಿ ನೀರಿನಲ್ಲಿ ನೆನಸಿ ತೊಳೆದು ನಂತರ ಕೊಡುವುದರಿಂದ ಹಾಲಿನ ಜಿಡ್ಡಿನ ಅಂಶ ಹೆಚ್ಚಾಗುತ್ತದೆ.

ಕೆಎಂಎಫ್‌ನವರ ಪಶು ಆಹಾರಗಳು ಪ್ರತಿ ಲೀಟರಿಗೆ 300 ಗ್ರಾಂ ನಂತೆ ನೀಡುವುದರೊಂದಿಗೆ ನಂದಿನಿ ಮಿನರಲ್ ಪುಡಿಯನ್ನು ನಿಯಮಿತವಾಗಿ  ನೀಡಬೇಕು. Challenge feeding ವಿಧಾನದಿಂದಲೂ ಹಾಲಿನ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು.

ಬೆದೆಗೆ ಬಂದಾಗ, ಜ್ವರ ಬಂದಾಗ, ಗರ್ಭ ಧರಿಸಿದಾಗ ಹಾಲಿನ ಇಳುವರಿ ಹಾಗೂ ಗುಣಮಟ್ಟ ಬದಲಾಗುತ್ತದೆ. ಈ ಬಗ್ಗೆ ಆತಂಕ ಬೇಡ. ಹೆಚ್ಚಿನ ವಿವರಗಳಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ ಸಂಪರ್ಕಿಸಿ.

| ಡಾ. ತೃಪ್ತಿ ಸೂರ್ಯಕಾಂತ ಕಟ್ಟೀಮನಿ, ಪಶುವೈದ್ಯರು

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!