ಕೃಷಿಸರಕಾರಿ ಯೋಜನೆ

ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ: ಯಾವ ಬೆಳೆ ಎಷ್ಟು ಹಣ? ಅರ್ಜಿ ಸಲ್ಲಿಕೆ ಹೇಗೆ? Mnarega Subsidy for Horticulture Crops

WhatsApp Group Join Now
Telegram Group Join Now

2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು; ಈ ಪೈಕಿ ತೋಟಗಾರಿಕೆ ಬೆಳೆಗಳಿಗೆ ಗ್ರಾಮ ಪಂಚಾಯತಿಯಿಂದಲೇ ಅನುದಾನ ಪಡೆಯಬಹುದಾಗಿದೆ. ಯಾವೆಲ್ಲ ಬೆಳೆಗಳಿಗೆ ಎಷ್ಟೆಷ್ಟು ಸಹಾಯಧನ ಪಡೆಯಬಹುದು? ಇಲ್ಲಿದೆ ಸಮಗ್ರ ಮಾಹಿತಿ…

Mnarega Subsidy for Horticulture Crops : 2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸಲಾದ ಯೋಜನೆಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಇಚ್ಛಿಸುವ ರೈತರು, ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದ ಒಂದು ಅರ್ಹ ಕುಟುಂಬವು ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿಗಳ ವರಗೆ ವೈಯಕ್ತಿಕ ಕಾಮಗಾರಿ ಪಡೆಯಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಯಾವೆಲ್ಲ ವೈಯಕ್ತಿಕ ಕಾಮಗಾರಿಗಳು ಸಿಗಲಿವೆ?

ತೋಟಗಾರಿಕೆ ಇಲಾಖೆಯಿಂದ ತೆಂಗು, ಮಾವು, ದಾಳಿಂಬೆ, ಪೇರಲೆ, ನುಗ್ಗಿ, ಗುಲಾಬಿ, ವೀಳ್ಯದೆಲೆ, ಮಲ್ಲಿಗೆ, ಲಿಂಬೆ, ಬಾಳೆ, ಪಪ್ಪಾಯ, ಡ್ರ‍್ಯಾಗನ್ ಫ್ರೂಟ್, ಕಾಳುಮೆಣಸು, ಹಲಸು ಸೇರಿದಂತೆ ಅನೇಕ ತೋಟಗಾರಿಕೆ ಪ್ರದೇಶಾಭಿವೃದ್ಧಿಗೆ ಅರ್ಥಿಗೆ ನೆರವು ಸಿಗಲಿದೆ.

ರೇಷ್ಮೆ ಇಲಾಖೆಯಿಂದ ಹಿಪ್ಪುನೆರಳೆ ನಾಟಿ ಪದ್ಧತಿ ಸಹಾಯಧನ ಲಭ್ಯವಿದೆ.ಜಾನುವಾರುಗಳನ್ನು ಬಿಸಿಲು, ಮಳೆಯಿಂದ ರಕ್ಷಿಸಲು ಕುರಿ-ಮೇಕೆ, ದನ, ಕೋಳಿ, ಹಂದಿ ಶೆಡ್ ನಿರ್ಮಾಣ ಹಾಗೂ ಅಜೋರಾ ಫಿಟ್ ನಿರ್ಮಾಣಕ್ಕೂ ಸಹಾಯಧನ ಸಿಗಲಿದೆ.

ಕೃಷಿ ಇಲಾಖೆಯಿಂದ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿಹೊಂಡ, ಕೊಳವೆ ಬಾವಿ ಮರುಪೂರಣ ಘಟಕ ಹಾಗೂ ಉತ್ತಮ ಆರೋಗ್ಯಕ್ಕಾಗಿ ಬಚ್ಚಲುಗುಂಡಿ (ಜೋನ್ ಫಿಟ್) ಮತ್ತು ಪೌಷ್ಟಿಕ ತೋಟ ನಿರ್ಮಾಣಕ್ಕೂ ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ.

ಇದನ್ನೂ ಓದಿ: PM KISAN 15th Installment : ಸಣ್ಣ ರೈತರ ಬ್ಯಾಂಕ್ ಖಾತೆಗೆ ₹2,000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಯಾವ ಬೆಳೆಗೆ ಎಷ್ಟೆಷ್ಟು ಸಹಾಯಧನ?

ತೋಟಗಾರಿಕೆ ಬೆಳೆಗಳಿಗೆ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಸಣ್ಣ ಮತ್ತು ಅತೀ ಸಣ್ಣ ರೈತರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ತೋಟಗಾರಿಕೆ ಅಭಿವೃದ್ಧಿಪಡಿಸಿಕೊಳ್ಳಲು ಈ ಎಲ್ಲ ಸಹಾಯಧನ ಸೌಲಭ್ಯವಿರುತ್ತದೆ. ಪ್ರತಿ ಹೆಕ್ಟೇರ್‌ಗೆ ಫಲಾನುಭವಿಗಳಿಗೆ ನೀಡುವ ಸಹಾಯಧನ ಸೌಲಭ್ಯದ ಮೊತ್ತದ ವಿವರ ಈ ಕೆಳಗಿನಂತಿದೆ:

 • ತೆಂಗು ₹65,565
 • ಗೇರು ₹63,086
 • ಮಾವು / ಸಪೋಟ (10×10 ಮೀಟರ್) ₹56,279
 • ದಾಳಿಂಬೆ ₹68,834
 • ಸೀಬೆ (6ಘಿ6 ಮೀಟರ್) ₹131,431
 • ದಾಲ್ಚಿನ್ನಿ ₹173,595
 • ಕಾಳುಮೆಣಸು (ಅಡಿಕೆ ತೋಟದ ಅಂತರ ಬೆಳೆ) ₹108,922
 • ನುಗ್ಗೆ ₹70,362
 • ಬಾಳೆ (ಅಂಗಾAಶ) ₹205,195
 • ಪಪಾಯ (2.4×2.4 ಮೀಟರ್) ₹117,965
 • ಪಪಾಯ (1.8×1.8 ಮೀಟರ್) ₹205,411
 • ತೆಂಗು ಪುನಶ್ಚೇತನ (ಎತ್ತರ ತಳಿ) ₹61,999
 • ಅಡಿಕೆ ಪುನಶ್ಚೇತನ (25% ಮರುನಾಟಿ) ₹60,381
 • ಅಡಿಕೆ ಹೊಸ ಪ್ರದೇಶ ವಿಸ್ತರಣೆ ₹167,682
 • ವೀಳೆದೆಲೆ (2×2.5 ಮೀಟರ್) ಅರ್ಧ ಎಕರೆ ₹57,701
 • ತಾಳೆಬೆಳೆ ₹34,456

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ಈ ಸಹಾಯಧನ ಪಡೆಯುವುದು ಹೇಗೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಇವುಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.

ಉದ್ಯೋಗ ಚೀಟಿ ಪಡೆಯಲು ಕುಟುಂಬದ ಪ್ರತಿಯೊಬ್ಬ ವಯಸ್ಕ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಗತ್ಯ. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯುವ ಮೂಲಕ ತೋಟಗಾರಿಕೆ ಬೆಳೆಗಳಿಗೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಸಹಾಯಧನ ಪಡೆಯಬಹುದಾಗಿದೆ.

ಉಚಿತ ಸಹಾಯವಾಣಿ : 1800-425-2203

Bagarhukum Land Issue : ಈ ರೈತರಿಗೆ ಸರಕಾರಿ ಜಮೀನು ಮಂಜೂರು : ಶೀಘ್ರವೇ ಹಕ್ಕುಪತ್ರ ವಿತರಣೆ | ಸರಕಾರದ ಮಹತ್ವದ ತೀರ್ಮಾನ

WhatsApp Group Join Now
Telegram Group Join Now

Related Posts

error: Content is protected !!