ಕೃಷಿ

Mungaru Male: ಈ ವರ್ಷ ರಾಜ್ಯಕ್ಕೆ ‘ಬರ’ದ ಛಾಯೆ | ಹಿಂದಿನ 5 ವರ್ಷಗಳಲ್ಲಿ ಈ ವರ್ಷವೇ ಮುಂಗಾರು ವಿಳಂಬ

WhatsApp Group Join Now
Telegram Group Join Now

ಜೂನ್ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುವುದು ವಾಡಿಕೆ. ಮುಂಗಾರು ಮಳೆ ತಡವಾಗುತ್ತಿರುವುದು ಆತಂಕ ಮೂಡಿಸಿದ್ದು; ಈ ಬಾರಿ ‘ಬರ’ದ ಪರಿಸ್ಥಿತಿಯ ಭಯ ಹುಟ್ಟಿಸಿದೆ…

ಈ ವರ್ಷ ಮುಂಗಾರು ಮಳೆ ಚೆಲ್ಲಾಟಕ್ಕೆ ಅನ್ನದಾತ ತತ್ತರಿಸುವಂತಾಗಿದೆ. ಈ ಹೊತ್ತಿಗಾಗಲೇ ಥಂಡಿ ಗಾಳಿಯೊಂದಿಗೆ ದೋ ಅಂತ ಸುರಿಯಬೇಕಿದ್ದ ಮಾನ್ಸೂನ್ ಕಣ್ಮರೆಯಾಗಿ, ರಣಬಿಸಿಲು ಝಳಪಿಸತೊಡಗಿದೆ. ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ ಎನ್ನುವುದನ್ನು ಬಿಟ್ಟರೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಗಾಗಿ ಮುಗಿಲು ನೋಡುತ್ತ ಹಂಬಲಿಸುವAತಾಗಿದೆ.

ರೈತರು ಮತ್ತು ರೈತ ಮಹಿಳೆಯರಿಂದ ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ

ಭಾರತೀಯ ಹವಾಮಾನ ಇಲಾಖೆಯ (IMD) ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಹಿಂದಿನ 5 ವರ್ಷಗಳಲ್ಲಿ ಈ ವರ್ಷವೇ ಮುಂಗಾರು ವಿಳಂಬವಾಗಿ ಆಗಮಿಸುತ್ತಿದೆ. ಹಾಗೇ ನೋಡಿದರೆ ಜೂನ್ ಮೊದಲ ವಾರದಲ್ಲಿ ಮುಂಗಾರು ಸೋನೆ ಹನಿಯಬೇಕಿತ್ತು. ಆದರೆ ಜೂನ್ ಮೊದಲ ವಾರ ಮುಗಿಯುತ್ತ ಬಂದರೂ ಮಳೆಯ ಸುಳಿವಿಲ್ಲ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಹಿಂದಿನ ಐದು ವರ್ಷಗಳಲ್ಲಿ ಯಾವ್ಯಾವ ವರ್ಷ ಯಾವ ದಿನ ರಾಜ್ಯವನ್ನು ಮುಂಗಾರು ಪ್ರವೇಶಿಸಿತ್ತು ಎಂದು ನೋಡುವುದಾದರೆ…

  • 2016ರಲ್ಲಿ ಜೂನ್ 8
  • 2017 ಮೇ 30
  • 2018 ಮೇ 29
  • 2019 ಜೂನ್ 8
  • 2020 ಜೂನ್ 5
  • 2021 ಮೇ 5
  • 2022 ಮೇ 4

ಹೊಸ ರೇಷನ್ ಕಾರ್ಡ್ ವಿತರಣೆಗೆ ಆನ್‌ಲೈನ್ ಅರ್ಜಿ ಆಹ್ವಾನ | ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

ಮುಂಗಾರು ಪ್ರವೇಶವನ್ನು ಗುರುತಿಸುವುದು ಹೇಗೆ?

ಹವಾಮಾನ ಇಲಾಖೆಯ (IMD) ಪ್ರಕಾರ ಕೇರಳದಲ್ಲಿ ಸತತ ಎರಡು ದಿನಗಳ ಕಾಲ 2.5 ಮಿಲಿ ಮೀಟರ್ ಮಳೆಯಾಗಬೇಕು. ಮುಖ್ಯವಾಗಿ ಲಕ್ಷದ್ವೀಪ, ಕೇರಳ ಹಾಗೂ ಮಂಗಳೂರಿನ 14 ಮಳೆ ನಿಲ್ದಾಣಗಳ ಪೈಕಿ 9 ನಿಲ್ದಾಣಗಳಲ್ಲಿ 2.5 ಮಿಲಿ ಮೀಟರ್ ಮಳೆ ಸತತ ಎರಡು ದಿನ ಬಂದರೆ 3ನೇ ದಿನದಂದು ಮುಂಗಾರು ಪ್ರವೇಶವಾಗಿದೆ ಎನ್ನುವ ಮಾಹಿತಿಯನ್ನು ಹವಮಾನ ಇಲಾಖೆ ಬಿಡುಗಡೆ ಮಾಡುತ್ತದೆ. ಕೇರಳದ ಮುಂಗಾರಿನ ಆರಂಭದ ವೇಗವನ್ನು ನಿರ್ಧಾರ ಮಾಡಿಕೊಂಡು ಕರ್ನಾಟಕದಲ್ಲಿ ಮುಂಗಾರು ಯಾವ ರೀತಿ ಆಟ ಮುಂದುವರಿಸುತ್ತದೆ ಎನ್ನುವ ಲೆಕ್ಕವನ್ನು ಐಎಂಡಿ ಮುಂದೆ ಇಡುತ್ತದೆ.

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ರಾಜ್ಯಕ್ಕೆ ಮುಂಗಾರು ಎಂಟ್ರಿ ಯಾವಾಗ?

ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಧಾರಣ ಮಳೆಯಾಗಿದೆ. ಜೂನ್ 4 ರಾತ್ರಿ ಅಥವಾ ಜೂನ್ 5ರಂದು ಮುಂಗಾರು ಕೇರಳಕ್ಕೆ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಅಂಡಮಾನ್‌ನಿAದ ಮುಂಗಾರು ಲಕ್ಷದ್ವೀಪದ ವರೆಗೂ ಸಾಗಿದೆ. ಆದರೆ ಕೇರಳದಲ್ಲಿ ಇನ್ನು ಕೂಡ ಇದರ ಲಕ್ಷಣಗಳು ಕಾಣಿಸಿಕೊಂಡಿಲ್ಲ ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ವರದಿ ನೀಡಿತ್ತು.

ಆನಂತರ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳಿವೆ ಎಂಬ ಅಂದಾಜು ವರದಿಯನ್ನು ನೀಡಿತು. ಈಗ ಜೂನ್ 5ರಿಂದ ಕೇರಳದ ಮುಂಗಾರು ಪ್ರವೇಶದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿಯಲು ಪ್ರಯತ್ನ ಸಾಗುತ್ತಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 8ಕ್ಕೆ ಆದರೆ ಈ ಬಳಿಕ ರಾಜ್ಯದ ಕರಾವಳಿಗೆ ಜೂನ್ 10ರಿಂದ 12ರೊಳಗೆ ಪ್ರವೇಶ ಪಡೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಲೆಕ್ಕಚಾರ.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ವಿತರಣೆ: ಇಲ್ಲಿದೆ ರೈತ ಸಂಪರ್ಕ ಕೇಂದ್ರಗಳ ಸಂಪರ್ಕ ಮಾಹಿತಿ

ಈ ವರ್ಷ ‘ಬರ’ದ ಛಾಯೆ?

ದಕ್ಷಿಣ ಭಾರತದ ಕೇರಳ ಕರಾವಳಿ ಮೂಲಕ ಎಂಟ್ರಿ ಕೊಡುವ ಮುಂಗಾರು ಮಾರುತಗಳು ಜೀವಕಳೆ ನೀಡುತ್ತವೆ. ಅದರಲ್ಲೂ ಕರ್ನಾಟಕಕ್ಕೆ ಈ ಮಾರುತಗಳೇ ಆಧಾರ. ಆದರೆ ಈ ಬಾರಿ ಅಂದುಕೊ೦ಡ ರೀತಿ ಮುಂಗಾರು ಮೋಡಗಳು ಎಂಟ್ರಿ ಕೊಟ್ಟಿಲ್ಲ. ಮುಂಗಾರು ಮಳೆ ತಡವಾದರೆ ಅನ್ನದಾತ ರೈತ ಚಡಪಡಿಸುತ್ತಾನೆ. ಬಿತ್ತನೆ ಕಾರ್ಯದಿಂದ ಹಿಡಿದು, ಕೃಷಿ ಚಟುವಟಿಕೆಯ ಪ್ರತಿಯೊಂದು ಕೆಲಸ ಕೂಡ ಇದರ ಮೇಲೆ ಅವಲಂಬಿತ. ಹೀಗಾಗಿಯೇ ಮುಂಗಾರು ಮಳೆ ತಡವಾಗುತ್ತಿರುವುದು ಆತಂಕ ಮೂಡಿಸಿದ್ದು; ಈ ಬಾರಿ ‘ಬರ’ದ ಪರಿಸ್ಥಿತಿಯ ಭಯ ಹುಟ್ಟಿಸಿದೆ.

ಜೂನ್ ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಎಂಟ್ರಿ ಕೊಟ್ಟು ಬಿತ್ತನೆಯೂ ಆರಂಭವಾಗುತ್ತದೆ. ಜೂನ್ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುವುದು ವಾಡಿಕೆ. ಈ ಬಾರಿ 7 ದಿನ ಲೇಟ್ ಆಗಿ ಮುಂಗಾರು ಮಾರುತಗಳು ಎಂಟ್ರಿ ಕೊಡುತ್ತಿವೆ. ಕೆಲವು ಸಂದರ್ಭದಲ್ಲಿ ಇದೇ ರೀತಿ ಮಳೆ ಮಾರುತ ಆಗಮನ ತಡವಾಗಿ ಬರದ ಪರಿಸ್ಥಿತಿ ಎದುರಾಗಿತ್ತು. ಈಗಲೂ ಮುಂಗಾರು ಮಳೆ ಮಾರುತಗಳು ಎಂಟ್ರಿ ಕೊಡುತ್ತಿರುವುದು ತಡವಾಗಿದೆ. ಹೀಗಾಗಿ ಮತ್ತೆ ರಾಜ್ಯಕ್ಕೆ ಬರ ಬಂತಾ? ಅನ್ನೋ ಪ್ರಶ್ನೆ ಮೂಡಿತ್ತು. ಆದರೆ ಮಳೆ ತಡವಾದರೂ ಚೆನ್ನಾಗಿ ಬೀಳುತ್ತದೆ ಅಂತಾ ಹವಾಮಾನ ತಜ್ಞರು ಹೇಳುತ್ತಿದ್ದಾರೆ.

ಪ್ರಮುಖ ಲಿಂಕ್‌ಗಳು

 

 

 

 

 

ಉದ್ಯೋಗ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ಸರಕಾರಿ ಯೋಜನೆಇಲ್ಲಿ ಕ್ಲಿಕ್ ಮಾಡಿ
ಕೃಷಿ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರುಪ್ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!