ಶಿಕ್ಷಣ ಸುದ್ದಿಸರಕಾರಿ ಯೋಜನೆ

Karnataka Yuva Nidhi Scheme : ನಿರುದ್ಯೋಗಿಗಳಿಗೆ ‘ಯುವನಿಧಿ’ ಭತ್ಯೆಗೆ ನೋಂದಣಿ ಆರಂಭ | ಪದವೀಧರರಿಗೆ ಪ್ರತಿ ತಿಂಗಳು ₹3000 ಸಹಾಯಧನ | ನೋಂದಣಿ ಹೇಗೆ?

WhatsApp Group Join Now
Telegram Group Join Now

ಡಿಸೆಂಬರ್  26ರಿಂದ ಪದವಿ ಹಾಗೂ ಡಿಪ್ಲೊಮ ಪಾಸಾಗಿರುವ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ‘ಯುವನಿಧಿ’ ಯೋಜನೆಯ ನೋಂದಣಿ ಆರಂಭವಾಗಲಿದೆ. ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ…

Karnataka Yuva Nidhi Scheme : ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪದವೀಧರ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮ ಪಾಸಾಗಿರುವ ನಿರುದ್ಯೋಗಿಗಳಿಗೆ ‘ಯುವನಿಧಿ’ ಯೋಜನೆ ಘೋಷಣೆ ಮಾಡಿತ್ತು. ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟೀ ಘೋಷಣೆಗಳಲ್ಲಿ ಇದು ಕೂಡ ಒಂದಾಗಿದ್ದು; ಇದೀಗ ‘ಯುವನಿಧಿ’ ಯೋಜನೆಯನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ.

ಕಾಂಗ್ರೆಸ್ ಪಕ್ಷದ ಐದನೇ ‘ಗ್ಯಾರಂಟಿ’ಯಾದ ‘ಯುವ ನಿಧಿ’ ಯೋಜನೆ ಇದೇ ಡಿಸೆಂಬರ್ 26ರಿಂದ ನೋಂದಣಿ ಆರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. 2024ರ ಜನವರಿ 1ರಿಂದ ಯೋಜನೆ ಆರಂಭವಾಗಲಿದೆ’ ಎಂದು ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

ಭತ್ಯೆ ಪಡೆಯಲು ಯಾರೆಲ್ಲ ಅರ್ಹರು?

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಾಸ್ ಮಾಡಿದವರು ಮಾತ್ರ ‘ಯುವನಿಧಿ’ ಯೋಜನೆಯ ಮಾಸಿಕ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ 2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು. ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ.

ಗಮನಾರ್ಹವೆಂದರೆ 24 ತಿಂಗಳು ಅಂದರೆ ಎರಡು ವರ್ಷಗಳ ವರೆಗೆ ಮಾತ್ರ ಈ ಯುವನಿಧಿಯನ್ನು ಡಿಪ್ಲೊಮ ಹಾಗೂ ಪದವಿ ಪಾಸಾಗಿ ಪ್ರಸ್ತುತ ನಿರುದ್ಯೋಗಿಗಳಾಗಿರುವ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಈ ಮಧ್ಯೆಯೇ ಯಾವುದೇ ಅಭ್ಯರ್ಥಿಗಳು ಸರ್ಕಾರಿ ಕೆಲಸ, ಖಾಸಗಿ ಕಂಪನಿ ಕೆಲಸಕ್ಕೆ ಸೇರಿದಲ್ಲಿ ಅಂತಹ ಅಭ್ಯರ್ಥಿಗಳಿಗೆ ಯುವನಿಧಿ ಕಡಿತಗೊಳಿಸಲಾಗುತ್ತದೆ ಎಂದು ಯೋಜನೆ ಘೋಷಣೆ ಮಾಡಿದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದರು.

ಇದನ್ನೂ ಓದಿ: Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

ಯಾರಿಗೆ ಎಷ್ಟು ಸಹಾಯಧನ?

ಪದವಿ, ಡಿಪ್ಲೊಮಾ ಪಡೆದು ನಿರುದ್ಯೋಗಿ ಆಗಿರುವವರಿಗೆ ಯುವನಿಧಿ ಭತ್ಯೆ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯ ಅಂಕಿ-ಅAಶಗಳ ಪ್ರಕಾರ, ಅಂದಾಜು 5 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದ್ದು; ಯೋಜನೆ ಅನುಷ್ಠಾನಕ್ಕೆ ವಾರ್ಷಿಕ 2,500 ಕೋಟಿ ರೂಪಾಯಿ ವಿನಿಯೋಗವಾಗಲಿದೆ ಎನ್ನಲಾಗುತ್ತಿದೆ. ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಈ ಕೆಳಗಿನಂತೆ ಮಾಸಿಕ ಭತ್ಯೆ ಸಿಗಲಿದೆ:

  • ಡಿಪ್ಲೊಮ ಪಾಸಾಗಿ, ನಿರುದ್ಯೋಗಿಗಳಾಗಿರುವವರಿಗೆ ಮಾಸಿಕ 1,500 ರೂಪಾಯಿ
  • ಪದವಿ ಪಾಸಾಗಿ ನಿರುದ್ಯೋಗಿಗಳಾಗಿರುವವರಿಗೆ ಮಾಸಿಕ 3,000 ರೂಪಾಯಿ

ನೋಂದಣಿಗೆ ಬೇಕಾಗುವ ದಾಖಲೆಗಳು

ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಯುವನಿಧಿ ಫಲಾನುಭವಿಗಳು ಕೂಡ ಇದೇ ಡಿಸೆಂಬರ್ 26ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಈ ಕೆಳಕಂಡ ದಾಖಲಾತಿಗಳು ಬೇಕಾಗುತ್ತದೆ:

  • ಆಧಾರ್ ಕಾರ್ಡ್
  • SSLC ಮಾರ್ಕ್ಸ್ ಕಾರ್ಡ್
  • ಪದವಿ, ಡಿಪ್ಲೋಮಾ ಪ್ರಮಾಣ ಪತ್ರ
  • ನಿರುದ್ಯೋಗಿ ಎಂದು ಘೋಷಿಸಿದ ಸ್ವಯಂ ದೃಢೀಕೃತ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿ

ಪ್ರಮುಖ ಮಾಹಿತಿ

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

Monthly Allowance for Unemployed, Karnataka Yuva Nidhi Scheme

Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

WhatsApp Group Join Now
Telegram Group Join Now

Related Posts

error: Content is protected !!