ಸರಕಾರಿ ಯೋಜನೆಸುದ್ದಿಗಳು

ಮಕ್ಕಳ ಮದುವೆ ಮಾಡಲು 50,000 ರೂಪಾಯಿ ಸಹಾಯಧನ | ಮುತ್ತೂಟ್ ವಿವಾಹ ಸನ್ಮಾನಂ ಯೋಜನೆಗೆ ಅರ್ಜಿ ಆಹ್ವಾನ | Muthoot Vivaha Sammanam Project

WhatsApp Group Join Now
Telegram Group Join Now

ಮಕ್ಕಳ ಮದುವೆಗೆ ಹಣ ಸಹಾಯ ನೀಡುವ ಮುತ್ತೂಟ್ ವಿವಾಹ ಸನ್ಮಾನಂ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ…

Muthoot Vivaha Sammanam Project : ಪ್ರಸಿದ್ಧ ಹಣಕಾಸು ಸಂಸ್ಥೆಯಾದ ಮುತ್ತೂಟ್ ಫೈನಾನ್ಸ್ ಕಂಪನಿಯವರು ‘ಮುತ್ತೂಟ್ ವಿವಾಹ ಸನ್ಮಾನಂ ಯೋಜನೆ’ಯಡಿ ಅರ್ಹ ಅಭ್ಯರ್ಥಿಗಳಿಗೆ ತಮ್ಮ ಮಕ್ಕಳ ಮದುವೆ ಮಾಡಲು ಆರ್ಥಿಕ ಸಹಾಯಕ ಒದಗಿಸಿಕೊಡಲು ಅರ್ಜಿ ಆಹ್ವಾನಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಆರ್ಥಿಕ ಸಹಾಯ ಪಡೆಯುವಂತೆ ಪ್ರಕಟಣೆಯಲ್ಲಿ ಕೋರಲಾಗಿದ್ದಾರೆ.

ಇದನ್ನೂ ಓದಿ: Labor Board Facilities : ಇವರಿಗೆ ಸಿಗಲಿದೆ ಮದುವೆ, ಹೆರಿಗೆ, ಆರೋಗ್ಯ, ಶಿಕ್ಷಣ, ಅಂತ್ಯ ಸಂಸ್ಕಾರಕ್ಕೂ ಸರಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ… 

ಯೋಜನೆಯ ವಿವರ ಮತ್ತು ಅರ್ಹತೆ

ಮುತ್ತೂಟ್ ಫೈನಾನ್ಸ್ (Muthoot finance) ಕಂಪನಿ ‘ಸಿಎಸ್‌ರ್’ ನಿಧಿಯಡಿ ಮಕ್ಕಳ ಮದುವೆ ಮಾಡಲು 50,000 ರೂಪಾಯಿ ಹಣ ಸಹಾಯ ಒದಗಿಸುತ್ತಿದೆ. ಈ ಯೋಜನೆಗಾಗಿ ಕಂಪನಿಯು ಈಗಾಗಲೇ 40 ಲಕ್ಷ ರೂಪಾಯಿಯನ್ನು ಮೀಸಲಿಟ್ಟಿದೆ. ಫೈನಾನ್ಸ್ ಕೇಂದ್ರಗಳಿರುವ 8 ಸ್ಥಳಗಳಿಂದ ಗರಿಷ್ಠ 10 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿಧವೆ ಮಹಿಳೆಯರು (Widows) ಅರ್ಹರಿರುತ್ತಾರೆ.

ಗಂಡನನ್ನು ಕಳೆದುಕೊಂಡ ಮಹಿಳೆಯರಿಗೆ ತಮ್ಮ ಮಕ್ಕಳ ಮದುವೆ ಮಾಡಲು ಆರ್ಥಿಕ ಸಹಾಯ ಒದಗಿಸುತ್ತಿದ್ದು; ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಮಾಸಿಕ ಆದಾಯವು (Monthly income) 10,000 ರೂಪಾಯಿ ಒಳಗಿರಬೇಕು. ಇಂತಹ ಅರ್ಹ ಅಭ್ಯರ್ಥಿಗಳಿಗೆ 50,000 ರೂಪಾಯಿ ಉಚಿತ ಸಹಾಯಧನ ನೀಡುತ್ತೇವೆ ಎಂದು ಮುತ್ತೂಟ್ ಕಂಪನಿಯ ಫೈನಾನ್ಸ್ ವಕ್ತಾರ, ಸಿಎಸ್‌ರ್ ಮುಖ್ಯಸ್ಥ ಬಾಬು ಜಾನ್ ಮಲಯಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Mangalya Bhagya Vivah Yojana : ಮಾಂಗಲ್ಯ ಭಾಗ್ಯ ಯೋಜನೆ | ಮದುವೆಗೆ 60,000 ರೂಪಾಯಿ ಸಹಾಯಧನ | ಈಗಲೇ ಹೆಸರು ನೋಂದಾಯಿಸಿ

ಅರ್ಜಿ ಸಲ್ಲಿಕೆ ದಿನಾಂಕ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಡಿಸೆಂಬರ್ 25, 2023 ಕೊನೆಯ ದಿನಾಂಕವಾಗಿದೆ. ನೀವು ಅರ್ಹರಿದ್ದರೆ ಈ ಕೂಡಲೇ ಕೆಳ ಕೆಳಗೆ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಮದುವೆ ಕೊಡುಗೆಗೆ ಅರ್ಜಿ (ಮ್ಯಾರೇಜ್ ಗಿಫ್ಟ್) ಎಂದು ಅರ್ಜಿಯ ಮೇಲೆ ಸ್ಪಷ್ಟವಾಗಿ ಬರೆದು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಅಂಚೆ ವಿಳಾಸ

ಜಿ.ಆರ್. ಮಹೇಶ್, ಸಿಎಸ್‌ಆರ್ ಮ್ಯಾನೇಜರ್, ಕಾರ್ಪೊರೇಟ್ ಕಚೇರಿ, ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ನಂ-90, ಯುಸಿಎಫ್ ಸೆಂಟರ್ ಎದುರು, ಹೆಣ್ಣೂರು ಮುಖ್ಯರಸ್ತೆ, ಸೇಂಟ್ ಥಾಮಸ್ ಟೌನ್ ಪೋಸ್ಟ್, ಲಿಂಗರಾಜಪುರ, ಬೆಂಗಳೂರು- 84

ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಸಂಪರ್ಕಿಸಿ

  • ದೂರವಾಣಿ ಸಂಖ್ಯೆ : 92880 03604
  • ಇಮೇಲ್ : [email protected]

Muthoot Vivaha Sammanam Project


PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ದೇಶದಲ್ಲಿಯೇ ಪ್ರಸಿದ್ಧ ಯುಪಿಐ ಪ್ಲಾಟ್ ಫಾರ್ಮ್ ಆದ ಫೋನ್ ಪೇ (PhonePe) ಶೀಘ್ರದಲ್ಲಿಯೇ ತನ್ನ ಎಲ್ಲಾ ಬಳಕೆದಾರರಿಗೂ ಸಾಲ ಸೌಲಭ್ಯ ನೀಡಲು ತಯಾರಿ ನಡೆಸುತ್ತಿದೆ. ಈ ಸಾಲ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

PhonePe Loan : ಡಿಜಿಟಲ್ ಪಾವತಿಯಲ್ಲಿ ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಫೋನ್ ಪೇ ತನ್ನ ಎಲ್ಲಾ ಅರ್ಹ ಗ್ರಾಹಕರಿಗೂ ಸಾಲ ಸೌಲಭ್ಯ ನೀಡಲು ಮುಂದಾಗುತ್ತಿದೆ. ಸರಿ ಸುಮಾರು 50 ಕೋಟಿಗೆ ಹೆಚ್ಚು ಬಳಕೆದಾರರು ಮತ್ತು 3.7 ಕೋಟಿ ಗ್ರಾಹಕರನ್ನು ಹೊಂದಿರುವ ಫೋನ್ ಪೇ ಪ್ಲಾಟ್ ಫಾರ್ಮ್’ನಲ್ಲಿ ಬಳಕೆದಾರರಿಗೆ ಕಡಿಮೆ ಅವಧಿಯಲ್ಲಿ ಸಾಲ ಸೌಲಭ್ಯ ಸಿಗಲು ಅನುಕೂಲವಾಗುವಂತೆ ಸಾಲ ನೀಡಲು, ಫೋನ್ ಪೇ ಸಾಲ ಸೌಲಭ್ಯ (PhonePe loan service) ಆರಂಭಿಸುತ್ತಿದೆ. ಇದರ ಅನ್ವಯ ಈಗಾಗಲೇ ಬ್ಯಾಂಕ್‌ಗಳು ಮತ್ತು ಬ್ಯಾಂಕಿ೦ಗ್ ಅಲ್ಲದ ಹಣಕಾಸು ಕಂಪನಿಗಳೊ೦ದಿಗೆ NFBC (Non Banking Financial Company)) ಮಾತುಕತೆ ಮಾಡಿಕೊಂಡಿದೆ.

ಇದನ್ನೂ ಓದಿ: ಜನವರಿಯಿಂದ ಪದವೀಧರರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? | Karnataka Yuva Nidhi Scheme

ಈ ಸೌಲಭ್ಯ ಯಾವಾಗಿನಿಂದ ಆರಂಭವಾಗಲಿದೆ? : Phonepe loan service ಸುಮಾರು 6 ತಿಂಗಳಿನಲ್ಲಿ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಉತ್ಪನ್ನಗಳೊಂದಿಗೆ ಜನರಿಗೆ ಅನುಕೂಲವಾಗುವಂತೆ ಅನೇಕ ಪ್ರಾಡಕ್ಟ್ಗಳನ್ನು ಸಿದ್ಧ ಮಾಡುತ್ತಿದೆ. ಸದ್ಯ ಫೋನ್ ಪೇ ಕಂಪನಿಯವರು ತಮ್ಮಲ್ಲಿರುವ ಡೇಟಾಬೇಸ್’ನಿಂದ ಸಾಲ ಸೌಲಭ್ಯಕ್ಕೆ ಅರ್ಹರಿರುವ ಗ್ರಾಹಕರನ್ನು ಹುಡುಕುತ್ತಿದೆ. ಈ ಅರ್ಹ ಗ್ರಾಹಕರಿಗೆ ಮೊಬೈಲ್’ನಲ್ಲಿಯೆ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಪ್ರಾಡಕ್ಟ್’ಗಳನ್ನು ನೀಡಲು ಮುಂದಾಗಿದೆ.

ಸಾಲ ಸೌಲಭ್ಯಕ್ಕೆ ಯಾರು ಅರ್ಹರು? : ಒಬ್ಬ ವ್ಯಕ್ತಿ ಯಾವುದೇ ಸಾಲ ಸೌಲಭ್ಯ ಪಡೆಯಲು ಅವನ ಅಥವಾ ಅವಳ ಸಿಬಿಲ್ ಸ್ಕೋರ್ (Cibil score) 750ರ ಮೇಲಿರಬೇಕು. ಹೀಗೆ ಉತ್ತಮ ಸ್ಕೋರ್ ಹೊಂದಿರುವ ಯಾರು ಬೇಕಾದರು ಸರಳವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ನಿಮ್ಮ ವೈಯಕ್ತಿಕ ಸಿಬಿಲ್ ಸ್ಕೋರನ್ನು ಪರೀಕ್ಷಿಸಲು ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನೀಡಿ ಚೆಕ್ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಗೂಗಲ್ ಪೇ ಸಾಲ ಸೌಲಭ್ಯ (Google pay loan) : ಇದೆ ರೀತಿ ಈಗಾಗಲೇ ಗೂಗಲ್ ಪೇ ಸಾಲ ಸೌಲಭ್ಯವನ್ನು ಆರಂಭಿಸಿದ್ದು, ಸಣ್ಣ ವ್ಯಾಪಾರಿಗಳಿಗೆ ತಕ್ಷಣವೇ 15,000 ರೂಪಾಯಿ ವರೆಗೂ ಸಾಲವನ್ನು ಪಡೆಯಲು ವ್ಯವಸ್ಥೆ ಮಾಡಿದೆ. 15,000 ರೂಪಾಯಿ ಸಾಲ ಪಡೆದ ಮೇಲೆ ಅದನ್ನು ₹111ಕ್ಕಿಂತ ಕಡಿಮೆ ಮರುಪಾವತಿ ಮಾಡಬಹುದು. ಗೂಗಲ್ ಪೇ ಈ ಸಾಲ ಸೌಲಭ್ಯವನ್ನು ಒದಗಿಸಲು ಟೆಕ್ ದೈತ್ಯ (Tech giant) DMI Financeನೊಂದಿಗೆ ಪಾಲುದಾರಿಕೆ ಹೊಂದಿದೆ. ಹಲವಾರು ವ್ಯಾಪಾರಿಗಳಿಗೆ ಕಾರ್ಯನಿರತ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು epaylater ಸಹಭಾಗಿತ್ವದಲ್ಲಿ ಗೂಗಲ್ ಪೇ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ.

ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜನರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಈ ಡಿಜಿಟಲ್ ಸಾಲ ಸೌಲಭ್ಯಗಳು ಅನೇಕ ಜನರಿಗೆ ಬಹಳ ಉಪಯುಕ್ತವಾಗಿದ್ದು, ತುರ್ತು ಸಮಯದಲ್ಲಿ ತಮ್ಮ ಮೊಬೈಲ್’ನಲ್ಲಿಯೇ ಕಡಿಮೆ ಅವಧಿಯಲ್ಲಿ ಸರಳ ಸಾಲ ಪಡೆಯಲು ಉಪಕಾರಿಯಾಗಿದೆ. ಫೋನ್ ಪೇ ಸಾಲ ಸೌಲಭ್ಯ ಆರಂಭವಾದ ಮೇಲೆ ಅದರ ವಹಿವಾಟು ವಿವರಗಳು ಮತ್ತಷ್ಟು ತಿಳಿಯಲಿವೆ.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

WhatsApp Group Join Now
Telegram Group Join Now

Related Posts

error: Content is protected !!