ಪಶುಪಾಲನೆ

Poultry Farming : ನಾಟಿಕೋಳಿ ಸಾಕಣೆಯಲ್ಲಿ ಈ ಸೂತ್ರ ಪಾಲಿಸಿದರೆ ಗೆಲುವು ಗ್ಯಾರಂಟಿ

WhatsApp Group Join Now
Telegram Group Join Now

ನಾಟಿ ಕೋಳಿ ಸಾಕಣೆಯಲ್ಲಿ ಯಶಸ್ಸುಅಧಿಕ ಲಾಭ ಗಳಿಕೆಗೆ ಯುವ ರೈತರು ಅನುಸರಿಸಬೇಕಾದ ಕ್ರಮಗಳೇನು? ಆರಂಭದ ಕಷ್ಟ-ನಷ್ಟಗಳಿಂದ ಪಾರಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಾಟಿಕೋಳಿ ಸಾಕಣೆ ಇತ್ತೀಚೆಗೆ ಭಾರೀ ಜನಪ್ರಿಯವಾಗುತ್ತಿದೆ. ಇದರಿಂದ ಉತ್ತೇಜಿತರಾದ ಹಲವು ಯುವ ರೈತರು ನಾಟಿಕೋಳಿ ಸಾಕಾಣಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಂತಹ ಯುವ ರೈತರಲ್ಲಿ ಬಹುತೇಕರು ನಾಟಿಕೋಳಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಸಾಕಾಣಿಕೆ ಮಾಡುತ್ತಿದ್ದಾರಾದ್ದರಿಂದ ಸಹಜವಾಗಿಯೇ ನಷ್ಟ ಅನುಭವಿಸುತ್ತಿದ್ದಾರೆ. ಯಾಕೆಂದರೆ ಅವರ ಆರಂಭಿಕ ಯೋಜನೆ, ಯೋಚನೆಯಲ್ಲಿಯೇ ಲೋಪದೋಷವಿರುತ್ತದೆ.

ಅವರ ಯೋಚನೆ ಹೇಗಿರುತ್ತದೆ ಎಂದರೆ, 100 ನಾಟಿಕೋಳಿ ಸಾಕಣೆ ಮಾಡಿದರು ಒಬ್ಬ ಕೆಲಸಗಾರ ಬೇಕು, 500-1000 ಸಾಕಣೆ ಮಾಡಲು ಕೂಡ ಒಬ್ಬ ಕೆಲಸಗಾರನೇ ಬೇಕು ಎಂದು ನಿರ್ಧಾರ ಮಾಡುತ್ತಾನೆ. ಆಗ ಬ್ರೈಲರ್ ಕೋಳಿ ಸಾಕಣೆ ಮಾಡುವ ಕೋಳಿ ಮನೆಯನ್ನು ಬಾಡಿಗೆ ಪಡೆದು ಸಾಕಣೆಗೆ ಮುಂದಾಗುತ್ತಾರೆ. ಅದರಲ್ಲಿ 100 ಕೋಳಿ ಬಿಟ್ಟರೂ, 1000 ಬಿಟ್ಟರೂ ಬಾಡಿಗೆ ಮಾತ್ರ ಅಷ್ಟೆ ಕಟ್ಟಬೇಕು ಎಂದು 1000 ನಾಟಿಕೋಳಿ ಬಿಡಲು ಮುಂದಾಗುತ್ತಾರೆ. ಅನಂತರ ನಷ್ಟ ಅನುಭವಿಸಿ ಹತಾಶೆಗೀಡಾಗುತ್ತಾರೆ.

ಇದನ್ನೂ ಓದಿ: ಜೇನು ಸಾಕಣೆಗೆ ಸರ್ಕಾರದ ಸವಲತ್ತುಗಳು: ಸಣ್ಣ ರೈತರಿಗೆ ಶೇ.90ರಷ್ಟು ಸಹಾಯಧನ

ಮಾರುಕಟ್ಟೆ ಜಾಲ ತಿಳಿಯಿರಿ

ಗಮನಾರ್ಹವೆಂದರೆ ನಮ್ಮಲ್ಲಿ ಸಾವಿರಗಟ್ಟಲೆ ನಾಟಿಕೋಳಿ ಸಾಕಾಣಿಕೆ ಮಾಡಿದರೆ ಮಾರುಕಟ್ಟೆಯ ಸಮಸ್ಯೆ. ಇದು ಮುಖ್ಯವಾಗಿ ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಆದ್ದರಿಂದ ರೈತರು ಹಂತ ಹಂತವಾಗಿ ಪ್ರತಿ ತಿಂಗಳು 100-120 ಕೋಳಿ ಮರಿಗಳನ್ನು ಬಿಟ್ಟು ಸಾಕಣೆ ಮಾಡಲು ಮುಂದಾಗಬೇಕು. ಹೀಗೆ ಮಾಡುವುದರಿಂದ ಪ್ರತಿ ತಿಂಗಳು ಮಾಂಸದ ನಾಟಿಕೋಳಿ ಲಭ್ಯವಿರುತ್ತವೆ. ತಿಂಗಳು ಪೂರ್ತಿ ಕೋಳಿ ಮಾರಾಟಕ್ಕೆ ಲಭ್ಯವಿದ್ದರೆ ಕೋಳಿ ಪಡೆಯುವ ಗ್ರಾಹಕರು ಖಾಯಮ್ಮಾಗಿ ಕಚ್ಚಿಕೊಳ್ಳುತ್ತಾರೆ.

ವಿಶೇಷವೆಂದರೆ, ರೈತರಿಗೆ ಉತ್ತಮವಾದ ನಾಟಿಕೋಳಿ ಮರಿ ದೊರಕುತ್ತಿಲ್ಲ. ಹೀಗಾಗಿ ಮೊದಲ ಬಾರಿಗೆ ಸಾಕಾಣಿಕೆ ಮಾಡುತ್ತಿರುವವರು ಸಾಕಾಣಿಕೆ ಮಾಡುವವರ ಬಳಿ ನೇರವಾಗಿ ಹೋಗಿ ಅವರ ತಾಯಿ ಕೋಳಿಯನ್ನು ಕಂಡು, ನಂತರ ಮರಿಯನ್ನು ಪಡೆದು ಸಾಕಾಣಿಕೆ ಮಾಡಿ ನಂತರ ತಾವೇ ಮರಿ ಮಾಡಿಕೊಳ್ಳುವುದರಿಂದ ಈ ಕೋಳಿಮರಿ ಸಮಸ್ಯೆಯನ್ನು ಎದರಿಸಬಹುದು. ನಮ್ಮಲ್ಲಿ ಕೋಳಿಯ ಮರಿಗಳು ಸಿಗುತ್ತವೆ. 50-150 ಮರಿಯ ತನಕ ಮಾತ್ರ ನೀಡುತ್ತಿದ್ದೇವೆ. ಸಾವಯವ ಪದ್ಧತಿಯಲ್ಲಿ ಸಾಕಾಣಿಕೆ ಮಾಡುತ್ತಿದ್ದು ಬಂದAತಹ ಮೊಟ್ಟೆಯಲ್ಲಿ ಮರಿ ಮಾಡಿಸಿ ಕೊಡುತ್ತಿದ್ದೇವೆ.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ ಸಿಗಲಿದೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ 3 ಲಕ್ಷ ಸಾಲ | ಈ ಕಾರ್ಡ್ ಪಡೆಯುವುದು ಹೇಗೆ?

ಸಣ್ಣ ಪ್ರಮಾಣದ ಸಾಕಣೆಯೇ ಬೆಸ್ಟ್

ಇನ್ನು ಕರ್ನಾಟಕದಲ್ಲಿ ನಾಟಿಕೋಳಿ ಮಾರುಕಟ್ಟೆ ಇಲ್ಲದ ಕಾರಣ ಮಧ್ಯವರ್ತಿಗಳ ಸಮಸ್ಯೆ ಎದರಿಸಬೇಕಾಗಿದೆ. ನಾಟಿಕೋಳಿ ಸಾವಿರಗಟ್ಟಲೆ ಒಂದೇ ಬಾರಿಗೆ ಪಡೆಯುವ ಮಧ್ಯವರ್ತಿಗಳಿಲ್ಲ. ಮಧ್ಯವರ್ತಿಗಳು ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಷ್ಟು ಮಾತ್ರ ಕೋಳಿ ಪಡೆಯುತ್ತಾರೆಯೇ ಹೊರತು ಒಮ್ಮಲೇ ಸಾವಿರಾರು ಕೋಳಿಯನ್ನು ಪಡೆಯುವುದಿಲ್ಲ. ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಷ್ಟು ಮಾತ್ರ ಕೋಳಿ ಪಡೆಯುತ್ತಾರೆ. ಇನ್ನುಳಿದ ಕೋಳಿಗಳನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಬಂದಾಗ ಪಡೆಯುತ್ತಾರೆ.

ಸಾವಿರಗಟ್ಟಲೆ ನಾಟಿಕೋಳಿ ಸಾಕಾಣಿಕೆ ಮಾಡಿದರೆ ಕೋಳಿಗಳಿಗೆ ಚುಂಚು (ಕೊಕ್ಕು) ಕತ್ತರಿಸಬೇಕು. ಸಮಸ್ಯೆ ಎಂದರೆ ಹೀಗೆ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ಅಲ್ಲದೆ ಇದು ಫಾರಂ ನಾಟಿ ಎಂದು ಅನುಮಾನಿಸುತ್ತಾರೆ. ಇನ್ನು ಸಾವಿರಗಟ್ಟಲೆ ನಾಟಿಕೋಳಿ ಸಾಕಾಣಿಕೆ ಮಾಡಿ ಚುಂಚೂ ಕತ್ತರಿಸಿಲ್ಲ ಅಂದರೆ ಕೋಳಿಗಳು ಜಗಳವಾಡಿ ಪುಕ್ಕ ಉದುರಿ ಹೋಯಿತು ಅಂದರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತು ಬೇಡಿಕೆ ಎರಡೂ ಇಲ್ಲದಂತಾಗುತ್ತದೆ. ಅಂತಹ ಕೋಳಿಗಳಿಗೆ ಯಾವುದೋ ರೋಗವಿರಬಹುದೆಂದು ಊಹಿಸಿ ಗ್ರಾಹಕರು ಕೋಳಿಗಳನ್ನು ಪಡೆಯುವುದಿಲ್ಲ. ಹೀಗೆ ಮಾರುಕಟ್ಟೆ, ಕೋಳಿಗಳ ಗುಣಮಟ್ಟ, ಮರಿಕೋಳಿಗಳ ಬೇಡಿಕೆ ಇತ್ಯಾದಿ ಸಮಸ್ಯೆಗಳನ್ನು ಅರಿತು ಶ್ರದ್ಧೆಯಿಂದ ಸಾಕಾಣಿಕೆ ಮಾಡಿದರೆ ನಾಟಿಕೋಳಿ ಸಾಕಾಣಿಕೆ ಖಂಡಿತ ರೈತರ ಕೈ ಬಿಡುವುದಿಲ್ಲ.

| ಸಂಜಯ್‌ಕುಮಾರ್ ಡಿ., ನಾಟಿಕೋಳಿ ಸಾಕಣೆ ಯಶಸ್ವಿ ರೈತ, ಶಿವಮೊಗ್ಗ

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

WhatsApp Group Join Now
Telegram Group Join Now

Related Posts

error: Content is protected !!