ಸರಕಾರಿ ಯೋಜನೆ

Horticulture Subsidy: ರೈತರೇ ಆಗಸ್ಟ್ 10ರೊಳಗೆ ಅರ್ಜಿ ಸಲ್ಲಿಸಿ ತೋಟಗಾರಿಕೆ ಸಹಾಯಧನ ಪಡೆಯಿರಿ

WhatsApp Group Join Now
Telegram Group Join Now

2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ವಿವಿಧ ಕೃಷಿ ಉತ್ಪನ್ನ ಘಟಕಗಳ ಸ್ಥಾಪನೆಗೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಉತ್ತೇಜಿಸುವ ಯೋಜನೆ

ತೋಟಗಾರಿಕೆಯನ್ನು ಉತ್ತೇಜಿಸುವ ಸದುದ್ದೇಶದಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅನ್ನು 2005-2006ರಲ್ಲಿ 10ನೇ ಪಂಚವಾರ್ಷಿಕ ಯೋಜನೆಯಡಿ ಆರಂಭಿಸಲಾಯಿತು. ಕೇಂದ್ರ ಸರ್ಕಾರದ ಈ ಯೋಜನೆಯಡಿ ದೇಶದ ರೈತರು ತರಕಾರಿ, ಹಣ್ಣು, ಹೂವು ಮತ್ತು ಸಾಂಬಾರ ಪದಾರ್ಥಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಸಹಾಯಧನ ನೀಡಲಾಗುತ್ತದೆ.

ದೇಶದ ಈಶಾನ್ಯದ 8 ರಾಜ್ಯಗಳನ್ನು ಹೊರತುಪಡಿಸಿ ಕೇಂದ್ರಾಡಳಿತ ಪ್ರದೇಶಗಳಾದ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಉಳಿದ ಎಲ್ಲ ರಾಜ್ಯಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ರೈತರಿಗೆ ನೀಡುವ ಆರ್ಥಿಕ ಸಹಾಯಕ್ಕಾಗಿ ರಾಜ್ಯ ಸರ್ಕಾರದ ವಂತಿಕೆಯಲ್ಲಿ ಶೇ.35 ರಿಂದ 50ರಷ್ಟನ್ನು ನೀಡಲಾಗಿದ್ದು, ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಇದನ್ನೂ ಓದಿ: ರೈತರಿಗೆ ₹5 ಲಕ್ಷ ಬಡ್ಡಿ ಇಲ್ಲದ ಸಾಲ

ಇವುಗಳಿಗೆ ಸಿಗಲಿದೆ ಸಹಾಯಧನ

ಹೊಸಪ್ರದೇಶ ವಿಸ್ತರಣೆಯಡಿ ಹಣ್ಣುಗಳಾದ ಬಾಳೆ, ಮಾವು, ಡ್ರಾಗನ್, ಸ್ಟ್ರಾಬೆರಿ ಮತ್ತು ಹೂವುಗಳಾದ ಗುಲಾಬಿ, ಸುಗಂಧರಾಜ, ಗ್ಲಾಡಿಯೋಲಸ್, ಆಸ್ಟರ್, ಚೆಂಡು ಹೂ, ಸೇವಂತಿಗೆ, ತರಕಾರಿಗಳ ಪ್ರದೇಶ ವಿಸ್ತರಣೆ, ಗೋಡಂಬಿ ಪ್ರದೇಶ ವಿಸ್ತರಣೆ, ಮಾವು ಪನಶ್ವೇತನ.

ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ ಹಸಿರುಮನೆ, ನೆರಳುಪರದೆ, ಪ್ಲಾಸ್ಟಿಕ ಮಲ್ಟಿಂಗ್, ಕೊಲ್ಲೋತ್ತರ ನಿರ್ವಹಣೆ ಅಡಿ ಪ್ಯಾಕ್ ಹೌಸ್, ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಘಟಕ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗಾಗಿ ತಳ್ಳುವ ಗಾಡಿ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲಾಗುವುದು.

ಇದನ್ನೂ ಓದಿ: ಗೋಡಂಬಿ-ತಾಳೆ ಬೆಳೆಯಲು ಸಹಾಯಧನಕ್ಕೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಕೊನೆ ದಿನ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು; ಅನುದಾನ ಲಭ್ಯತೆಯ ಆಧಾರದ ಮೇಲೆ ಸಹಾಯಧನ ಸೌಲಭ್ಯ ಒದಗಿಸಲಾಗುತ್ತದೆ.

ಸದ್ಯ ಧಾರವಾಡ ಜಿಲ್ಲೆಯ ರೈತರು ಅರ್ಜಿಗಳನ್ನು ಆಗಸ್ಟ್ 10 ರೊಳಗಾಗಿ ಸಲ್ಲಿಸಬೇಕು. ಉಳಿದ ಜಿಲ್ಲೆಗಳ ರೈತರು ತಮ್ಮ ಜಿಲ್ಲೆಯ ಅನುದಾನ ಲಭ್ಯತೆಯ ಆಧಾರದ ಮೇಲೆ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಿಬಹುದು. ಅಧಿಕೃತ ವೆಬ್‌ಸೈಟ್:  https://nhb.gov.in/

ಇದನ್ನೂ ಓದಿ:  ಮೊಬೈಲ್ ನಲ್ಲೇ ಖರೀದಿಸಿ ಕೃಷಿ ಉಪಕರಣ

WhatsApp Group Join Now
Telegram Group Join Now

Related Posts

error: Content is protected !!